ಭಾರಿ ವಿರೋಧದ ನಡುವೆ ಟೆಸ್ಲಾಗೆ ಆಮದು ಸುಂಕ ವಿನಾಯಿತಿ ನೀಡಲು ಮುಂದಾದ ಕೇಂದ್ರ!

By Suvarna News  |  First Published Aug 30, 2021, 4:06 PM IST
  • ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕ ಹಾಗೂ ಮಾರಾಟಕ್ಕೆ ತಯಾರಿ
  • ಬಿಡಿ ಭಾಗ, ಬ್ಯಾಟರಿ ಮೇಲಿನ ಆಮದು ಸುಂಕ ಕಡಿತಕ್ಕೆ ಟೆಸ್ಲಾ ಮನವಿ
  • ಟೆಸ್ಲಾ ಮನವಿಗೆ ಭಾರತೀಯ ಟಾಟಾ, ಮಹೀಂದ್ರ ಸೇರಿದಂತೆ ಹಲವು ಕಂಪನಿಗಳ ವಿರೋಧ
  • ಅಮೆರಿಕ ಬ್ರ್ಯಾಂಡ್ ಭಾರತದಲ್ಲಿ ಆರಂಭಿಸಲು ಟೆಸ್ಲಾ ಮನವಿ ಪುರಸ್ಕರಿಸಲು ಮುಂದಾದ ಕೇಂದ್ರ 

ನವದೆಹಲಿ(ಆ.30): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಭಾರತ ಪ್ರವೇಶಕ್ಕೆ ಭರ್ಜರಿ ತಯಾರಿ ನಡೆಯತ್ತಿದೆ. ಇದರ ನಡುವೆ ಟೆಸ್ಲಾ ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿತ್ತು. ಭಾರತದಲ್ಲಿ ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಆಮದು ಸುಂಕ ಕಡಿತಗೊಳಿಸಬೇಕು ಎಂದಿತ್ತು. ಈ ಮನವಿಗೆ ಭಾರತೀಯ ಕಂಪನಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಕೇಂದ್ರ ಸರ್ಕಾರ ಅಮೆರಿಕ ಬ್ರ್ಯಾಂಡ್ ಭಾರತದಲ್ಲಿ ಆರಂಭಕ್ಕೆ ಟೆಸ್ಲಾ ಮನವಿ ಪುರಸ್ಕರಿಸುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು!

Latest Videos

undefined

ಆಮದು ಸಂಕ ಕಡಿತದ ಟೆಸ್ಲಾ ಮನವಿಯನ್ನು ರಸ್ತೆ ಸಾರಿಗೆ ಸಚಿವಾಲಯ, ಆಂತರಿಕ ಉದ್ಯಮ, ವ್ಯಾಪಾರ ಉತ್ತೇಜನ ಇಲಾಖೆ, ನೀತಿ ಆಯೋಗ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಟೆಸ್ಲಾ ಮನವಿಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶೀಘ್ರದಲ್ಲೇ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಟೆಸ್ಲಾ ಸುಂಕ ಕಡಿತಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ಕಾರಿಗೆ ಬೇಕಾದ ಮೂಲ ಸೌಕರ್ಯಗಳಾದ ಚಾರ್ಜಿಂಗ್ ಸ್ಟೇಶನ್ ಸೇರಿದಂತೆ ಇತರ ಸೌಕರ್ಯಗಳ ನಿರ್ಮಾಣ, ಭಾರತದ ಘಟಕಗಳಿಂದ ಕೆಲ ವಸ್ತುಗಳ ಖರೀದಿ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲು ಕೇಂದ್ರ ಮುಂದಾಗಿದೆ.

ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನೆ: ಘೋಷಣೆ ಮಾಡಿದ್ದ ಬಿಎಸ್‌ವೈ  

ಸದ್ಯ ಟೆಸ್ಲಾಗೆ ಶೇಕಡಾ 60 ರಷ್ಟು ಆಮದು ಸುಂಕ ವಿಧಿಸಲಾಗಿದೆ. ಆದರೆ ಈ ಸುಂಕವನ್ನು ಶೇಕಡಾ 40ಕ್ಕೆ ಇಳಿಸಲು ಟೆಸ್ಲಾ ವರದಿ ಮಾಡಿದೆ. ಆದರೆ ಈ ಮನವಿಗೆ ಭಾರತೀಯ ಎಲೆಕ್ಟ್ರಿಕ್ ವಾಹನ ಕಂಪನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈಗಾಗಲೇ ಭಾರತೀಯ ಎಲೆಕ್ಟ್ರಿಕ್ ಕಂಪನಿಗಳು ಶೇಕಡಾ 60 ರಷ್ಟು ಆಮದು ಸುಂಕ ನೀಡಿ ಎಲೆಕ್ಟ್ರಿಕ್ ವಾಹನ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಕಾರು ವಿತರಣೆ ಮಾಡುತ್ತಿದೆ. ಇದೀಗ ಅಮೆರಿಕ ಕಂಪನಿಗೆ ಶೇಕಡಾ 40ಕ್ಕೆ ಸುಂಕ ಇಳಿಸುವುದು ಎಷ್ಟು ಸರಿ. ನಿಯಮ ಬದಲಾಯಿಸಿದರೆ ಎಲ್ಲರಿಗೂ ಅನ್ವಯವಾಗಬೇಕು ಎಂದು ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಆಕ್ಷೇಪ ಸಲ್ಲಿಸಿತ್ತು.

ಆತ್ಮನಿರ್ಭರ್ ಭಾರತ, ಮೇಕ್ ಇನ್ ಇಂಡಿಯಾ ಅಭಿಯಾನದಡಿ ಭಾರತೀಯ ಕಂಪನಿಗಳಿಗೆ ಉತ್ತೇಜನ ನೀಡುವ ಕೆಲಸವಾಗಬೇಕು. ಇದರ ಬದಲಾಗಿದೆ. ಅಮೆರಿಕ ಬ್ರ್ಯಾಂಡ್ ಭಾರತದಲ್ಲಿ ಆರಂಭಿಸಲು ಟೆಸ್ಲಾಗೆ ಮಾತ್ರ ಸುಂಕ ಇಳಿಸುವಿಕೆ ನಿರ್ಧಾರ ಸರಿಯಲ್ಲ. ಕೇಂದ್ರ ಸರ್ಕಾರ ಸ್ಥಳೀಯ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನಮ್ಮ ಮೇಲಿನ ಸುಂಕ ಇಳಿಸಿದರೆ ಮತ್ತಷ್ಟು ಕಡಿಮೆ  ಬೆಲೆಯಲ್ಲಿ ಅತ್ಯುತ್ತಮ ಕಾರು ನೀಡಲು ಸಾಧ್ಯ ಎಂದು ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಹೇಳಿತ್ತು. 

ಪ್ರತಿಷ್ಠಿತ ಟೆಸ್ಲಾ ಕಂಪನಿಯಲ್ಲಿ ಕೆಲಸಬೇಕಾ? ಭಾರತದಲ್ಲಿ ನೇಮಕಾತಿ ಆರಂಭ!

ಭಾರಿ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಇದೀಗ ಕೆಲ ಕಂಡೀಷನ್‌ಗಳೊಂದಿಗೆ ಟೆಸ್ಲಾ ಕಂಪನಿಗೆ ಸುಂಕ ವಿನಾಯಿತಿ ನೀಡಲು ಮುಂದಾಗಿದೆ. ಈ ನಿರ್ಧಾರ ಭಾರತದ ಎಲೆಕ್ಟ್ರಿಕ್ ಕಂಪನಿಗಳ ಮೇಲೆ ಯಾವ ಪರಿಣಾಮ ಬೀರಲಿದೆ ಅನ್ನೋ ಆತಂಕ ಶುರುವಾಗಿದೆ

click me!