ಥಾರ್‌‌ ಪ್ರಬಲ ಸ್ಪರ್ಧಿ ಹೊಸ ಫೋರ್ಸ್ ಗೂರ್ಖಾ ಆಫ್‍‌ರೋಡ್ SUV ಲಾಂಚ್‌ಗೆ ರೆಡಿ

Suvarna News   | Asianet News
Published : Aug 30, 2021, 03:31 PM IST
ಥಾರ್‌‌ ಪ್ರಬಲ ಸ್ಪರ್ಧಿ ಹೊಸ ಫೋರ್ಸ್ ಗೂರ್ಖಾ ಆಫ್‍‌ರೋಡ್ SUV ಲಾಂಚ್‌ಗೆ ರೆಡಿ

ಸಾರಾಂಶ

ಫೋರ್ಸ್ ಮೋಟರ್ಸ್‌ ಕಂಪನಿಯು ಹೊಸ ಗೂರ್ಖಾ ಆಫ್ ರೋಡ್ ಎಸ್‌ಯುವಿಯನ್ನು ಶೀಘ್ರವೇ ಲಾಂಚ್ ಮಾಡಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಹಂಚಿಕೊಂಡಿದ್ದು, ಗೂರ್ಖಾ ಬಿಡುಗಡೆಯನ್ನು ಖಚಿತಪಡಿಸಿದೆ. ಈ ಗೂರ್ಖಾ ಎಸ್‌ಯುವಿ ಮಹಿಂದ್ರಾ ಕಂಪನಿಯ ಥಾರ್‌ಗೆ ಪ್ರಬಲ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ.

ಮಹಿಂದ್ರಾ ಕಂಪನಿಯ ಥಾರ್‌ಗೆ ಪ್ರತಿಸ್ಪರ್ಧಿಯೇ ಎಂದು ಬಿಂಬಿತವಾಗಿರುವ ಫೋರ್ಸ್ ಮೋಟರ್ಸ್‌ನ ಆಫ್ ರೋಡ್ ಎಸ್‌ಯುವಿ ಗೂರ್ಖಾ ಲಾಂಚ್‌ಗೆ ಸಿದ್ಧವಾಗಿದೆ. ಹಲವು ದಿನಗಳಿಂದ ಈ ಗೂರ್ಖಾ ಎಸ್‌ಯುವಿ ರೋಡ್‌ಗಿಳಿಯುವ ಸುದ್ದಿಗಳ ಬರುತ್ತಲೇ ಇವೆ. ಈಗ ಕಂಪನಿಯು ಟೀಸರ್ ಬಿಡುಗಡೆ ಮಾಡಿರುವುದರಿಂದ ಜನರಲ್ಲಿ ಕುತೂಹಲ ಹೆಚ್ಚಾಗಿದೆ.

ಹಬ್ಬಕ್ಕೆ ‘ಪಂಚ್’ ನೀಡಲು ಟಾಟಾ ರೆಡಿ, ಹೊಸ ಮೈಕ್ರೋ ಎಸ್‌ಯುವಿ ಅನಾವರಣ

2021 ಗೂರ್ಖಾ 4X4 ಎಸ್‌ಯುವಿ ಲಾಂಚ್‌ ಸಂಬಂಧ ಫೋರ್ಸ್ ಮೋಟಾರ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ಬಿಡುಗಡೆ ಮಾಡಿದೆ. ಹಾಗಾಗಿ, ಶೀಘ್ರವೇ ಈ ಆಫ್ ರೋಡ್ ಎಸ್‌ಯುವಿ ರಸ್ತೆಗಿಳಿಯಬಹುದು. ಬಹುಶಃ ಹಬ್ಬದ ಸಂದರ್ಭಲ್ಲಿ ಈ ಎಸ್‌ಯುವಿ ಲಾಂಚ್ ಆಗುವ ಸಾಧ್ಯತೆ ಇದೆ. 

ಮುಂಬರುವ ಹಬ್ಬದ ಸೀಸನ್‌ಗೆ ಫೋರ್ಸ್ ಗೂರ್ಖಾ ಲಾಂಚ್ ಆಗುವುದನ್ನುಕಂಪನಿಖಚಿತಪಡಿಸಿದೆ. ಅಂದರೆ, ಮುಂದಿನ ತಿಂಗಳು ಅಧಿಕೃತವಾಗಿ ಫೋರ್ಸ್ ಗೂರ್ಖಾ ಆಫ್‌ರೋಡ್ ಎಸ್‌ಯುವಿ ಲಾಂಚ್ ಆಗಬಹುದು. ಆದರೆ, ಇದಕ್ಕೂ ಮೊದಲು ಕಂಪನಿಯ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈ ಆಫ್‌ರೋಡ್ ಎಸ್‌ಯುವಿ ಲಾಂಚ್ ಆಗಬಹುದು ಎಂದು ಹೇಳಿಕೊಂಡಿತ್ತು. ಇಷ್ಟೆಲ್ಲ ಆದರೂ ಕಂಪನಿಯು  ಮುಂದಿನ ತಿಂಗಳು ಯಾವಾಗ ಬಿಡುಗಡೆ ಮಾಡಲಿದೆ ಎಂಬ ಮಾಹಿತಿಯನ್ನು ನೀಡಿಲ್ಲ. 

 

 

ಕಳೆದ ವರ್ಷ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್‌ಫೋದಲ್ಲಿ ಫೋರ್ಸ್ ಮೋಟಾರ್ಸ್  ಕಂಪನಿಯು 2021 ಗೂರ್ಖಾ ಎಸ್‌ಯುವಿಯನ್ನು ಪ್ರದರ್ಶನ ಮಾಡಿತ್ತು.  ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಹೇಳಬಹುದು, ಗೂರ್ಖಾ 4X4 ಆಫ್‌ರೋಡ್ ಎಸ್‌ಯುವಿಯಾಗಿದ್ದು, ಈ ಸೆಗ್ಮೆಂಟ್‌ನಲ್ಲಿ ಮಹೀಂದ್ರಾ ಕಂಪನಿಯ ಜನಪ್ರಿಯ ಆಫ್‌ರೋಡ್ ಎಸ್‌ಯುವಿ ಥಾರ್‌ಗೆ ತೀವ್ರ ಪೈಪೋಟಿ ನೀಡಲಿದೆ. 
 

ಹೊಸ ಮಾದರಿಯ ಫೋರ್ಸ್ ಗೂರ್ಖಾ ಎಸ್‌ಯುವಿಯನ್ನು ಕಂಪನಿಯು ಥ್ರೀ ಡೋರ್ ಮತ್ತು ಫೈವ್ ಡೋರ್‌ ಆವೃತ್ತಿಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.  2021 ಗೂರ್ಖಾ ಹೊಸ ವಿನ್ಯಾಸವನ್ನು ಹೊಂದಿರುವುದನ್ನು ಗಮನಿಸಬಹುದು. ಬಹಳಷ್ಟು ವಿನ್ಯಾಸಗಳನ್ನು ಪರಿಷ್ಕರಿಸಲಾಗಿದ್ದು, ಇಡೀ ವಾಹನಕ್ಕೆ ಹೊಸ ಲುಕ್ ನೀಡಲಾಗಿದೆ.

ಹೊಸ ಟಿಗೋರ್ ಇವಿ ಅನಾವರಣ, 21000 ರೂ. ಕೊಟ್ಟು ಬುಕ್ ಮಾಡ್ಕೊಳ್ಳಿ

ಫೋರ್ಸ್ ಗೂರ್ಖಾ ಎಸ್‌ಯುವಿಯ ಫ್ರಂಟ್  ಫೆಂಡರ್‌ಗಳ ಮೇಲೆ ನೀವು ಎಲ್‌ಇಡಿ ಡಿಆರ್‌ಎಲ್‌ಗಳು, ಹೊಸ ಲುಕ್ ಗ್ರಿಲ್ ಮತ್ತು ಫ್ರಂಟ್ ಬಂಪರ್, ಸ್ನಾರ್ಕೆಲ್, ಟರ್ನ್ ಇಂಡಿಕೇಟರ್‌ಗಳನ್ನು ಕಾಣಬಹುದು. ಮರುವಿನ್ಯಾಸಗೊಳಿಸಿದ ಟೇಲ್ ಲೈಟ್‌ಗಳು, ಹೊಸದಾಗಿ ವಿನ್ಯಾಸಗೊಳಿಸಿದ ಚಕ್ರಗಳು ವಿಶೇಷವಾಗಿವೆ. ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮಾದರಿ ತುಸು ಒರಟಾಗಿ ಕಾಣುತ್ತದೆ. ಉತ್ಪಾದನಾ ಆವೃತ್ತಿಯಲ್ಲಿ ಅದು ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದು ಕಾದು ನೋಡಬೇಕು.

ಇನ್ನು ಗೂರ್ಖಾ ಆಫ್ ರೋಡ್ ಎಸ್‌ಯುವಿ ಒಳಾಂಗಣ ವಿನ್ಯಾಸದಲ್ಲೂ ಸಾಕಷ್ಟು ಪರಿಷ್ಕರಣೆಗಳನ್ನು ನಿರೀಕ್ಷಿಸಬಹುದಾಗಿದೆ. ಹೊಸ ತಲೆಮಾರಿನ ಫೋರ್ಸ್ ಗೂರ್ಖಾ ಎರಡನೇ ಸಾಲಿಗೆ ಕ್ಯಾಪ್ಟನ್ ಸೀಟುಗಳನ್ನು ಮತ್ತು ಹಿಂಭಾಗದಲ್ಲಿ ಸೈಡ್ ಫೇಸಿಂಗ್ ಜಂಪ್ ಸೀಟುಗಳನ್ನು ಪಡೆಯುವ ಸಾಧ್ಯತೆಯಿದೆ. ಕ್ಯಾಬಿನ್ ಸಂಪೂರ್ಣ ಕಪ್ಪು ಡ್ಯಾಶ್‌ಬೋರ್ಡ್, ಹೊಸ ಟಚ್‌ಸ್ಕ್ರೀನ್ ವ್ಯವಸ್ಥೆ, ಕಪ್ಪು ಸುತ್ತುವರಿದ ವೃತ್ತಾಕಾರದ ಏರ್ ವೆಂಟ್‌ಗಳು ಮತ್ತು ಮೂರು ಸ್ಪೋಕ್ ಸ್ಟೀರಿಂಗ್ ವೀಲ್  ಇರುವ ಸಾಧ್ಯತೆ ಇದೆ. ಎ-ಪಿಲ್ಲರ್ ಫಿಟೆಡ್ ಗ್ರಾಬ್ ರೇಲ್, ಚೌಕಾಕಾರದ ಮತ್ತು ಗ್ಲೋವ್ ಬಾಕ್ಸ್ ಹೊಸ ಫೋರ್ಸ್ ಗೂರ್ಖಾದಲ್ಲಿ ನಿರೀಕ್ಷಿಸಲಾಗಿರುವ ಇತರ ಕೆಲವು ವೈಶಿಷ್ಟ್ಯಗಳಾಗಿವೆ.

2021 ಫೋರ್ಸ್ ಗೂರ್ಖಾ ಎಸ್‌ಯುವಿಯು ಬಿಎಸ್ 6-ಕಂಪ್ಲೈಂಟ್ 2.6-ಲೀಟರ್ ಡೀಸೆಲ್ ಎಂಜಿನ್ ಬೊಂದಿರುವ ಸಾಧ್ಯತೆ ಇದೆ. ಇದನ್ನು 5-ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸುವ ನಿರೀಕ್ಷೆಯಿದೆ. ಎಂಜಿನ್ 89 ಬಿಹೆಚ್‌ಪಿ ಮತ್ತು 260 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಾಹಸ ಉತ್ಸಾಹಿಗಳನ್ನು ಉತ್ತೇಜಿಸಲು ಆಲ್-ವೀಲ್-ಡ್ರೈವ್ ವ್ಯವಸ್ಥೆಯನ್ನು ಪಡೆಯಲಿದೆ. ಎಸ್‌ಯುವಿಯ ಪ್ರಮುಖ ಫೀಚರ್‌ಗಳ ಪೈಕಿ ಮುಂಭಾಗದಲ್ಲಿ ನೀಡಲಾಗಿರುವ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಗಟ್ಟಿಯಾದ ಆಕ್ಸಲ್ ಹೆಚ್ಚು ಗಮನ ಸೆಳೆಯುತ್ತವೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋರ್ಸ್  ಗೂರ್ಖಾ ಎಸ್‌ಯುವಿ ಜನರಲ್ಲಿ ಕುತೂಹಲ ಮೂಡಿಸಿದ್ದಂತೂ ಸುಳ್ಳಲ್ಲ.

ಹೊಸ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಕಾರ್ ಲಾಂಚ್

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್