ಹಬ್ಬದ ಸೀಸನ್‌ಗೆ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ ಕಾರ್ ಬಿಡುಗಡೆ?

By Suvarna NewsFirst Published Jul 5, 2021, 3:56 PM IST
Highlights

ದೇಶದ ಬಹು ದೊಡ್ಡ ಕಾರ್ ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ, ತನ್ನ ಹೊಸ ಸೆಲೆರಿಯೋ ಹ್ಯಾಚ್‌ಬ್ಯಾಕ್ ಕಾರನ್ನು ಹಬ್ಬದ ಸೀಸನ್‌ಗೆ ಅಂದರೆ ಮುಂಬರುವ ಸೆಪ್ಟೆಂಬರ್‌ನಲ್ಲಿ ಲಾಂಚ್ ಮಾಡುವ ಸಾಧ್ಯತೆ ಇದೆ ನ್ನಲಾಗುತ್ತಿದೆ. ಈಗಾಗಲೇ ಈ ಕಾರಿನ ವಿನ್ಯಾಸಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ಗಮನ ಸೆಳೆದಿವೆ. ಈ ಕಾರು ಟಿಯಾಗೋ, ಸ್ಯಾಂಟ್ರೋಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

2014ರಲ್ಲಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸೆಲೆರಿಯೋ ಅಲ್ಲಿಂದ ಇಲ್ಲಿಯವರೆಗೂ ಅಂಥ ಗಮನ ಸೆಳೆಯುವ ಅಪ್‌ಡೇಟ್‌ಗಳನ್ನ ಪಡೆದುಕೊಂಡಿಲ್ಲ. ಆದರೆ, ಕಂಪನಿ ಈಗ ಎರಡನೇ ತಲೆಮಾರಿನ, ಹೊಚ್ಚ ಹೊಸ ಸೆಲೆರಿಯೋ ಹ್ಯಾಚ್ ಬ್ಯಾಕ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. 

2030ರ ಹೊತ್ತಿಗೆ ಫಿಯೆಟ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ

ಈ ಹೊಸ ಸೆಲೆರಿಯೋ ಇದೀಗ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅನೇಕ ಸುದ್ದಿ ವೆಬ್‌ತಾಣಗಳು ವರದಿ ಮಾಡಿದ್ದು, ಈ ಬಾರಿಯ ಹಬ್ಬದ  ಸೀಸನ್‌ಗೆ ಸೆಲೆರಿಯೋ ರಸ್ತೆಗಿಳಿಯಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಮಾರುತಿ ಸುಜುಕಿ ಕಂಪನಿಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.  ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಹೊಸ ಸೆಲೆರಿಯೋ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ. 

ಎರಡನೇ ತಲೆಮಾರಿನ ಹೊಸ ಸೆಲೆರಿಯೋ ಹ್ಯಾಚ್‌ಬ್ಯಾಕ್ ಬಿಡುಗಡೆಯು ಮಾರುತಿ ಕಂಪನಿಯ ಈ ವರ್ಷದ ಅತಿ ದೊಡ್ಡ ಕಾರ್ ಲಾಂಚ್ ಆಗುವ ಸಾಧ್ಯತೆ ಇದೆ. ದೇಶದಲ್ಲಿ ಹಬ್ಬದ ಋತು ಆರಂಭವಾಗುವ ಮುಂಚೆಯೇ ಈ ಹೊಸ ಸೆಲೆರಿಯೋ ಕಾರು ಶೋರೂಮ್‌ಗಳನ್ನು ಸೇರಲಿದೆ.

ವಾಸ್ತವದಲ್ಲಿ ಈ ಕಾರು ಹಿಂದೆಯೇ ಭಾರತೀಯ ರಸ್ತೆಗಳಿಗೆ ಇಳಿಯಬೇಕಿತ್ತು. ಆದರೆ, ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದ ಅದರ ಲಾಂಚ್ ಮುಂದಕ್ಕೆ ಹೋಗುತ್ತಲೇ ಹೋಯಿತು. ಇದೀಗ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗುವ ಬಗ್ಗೆ ಹೇಳಲಾಗುತ್ತಿದೆಯಾದರೂ ಕಂಪನಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.  ಏತನ್ಮಧ್ಯೆ, ಹೊಸ ಸೆಲೆರಿಯೋ ಹ್ಯಾಚ್‌ಬ್ಯಾಕ್‌ ಕಾರಿನ ಅನೇಕ ಮಾಹಿತಿಗಳು ಸೋರಿಕೆಯಾಗುತ್ತಲೇ ಇವೆ. ಇತ್ತೀಚೆಗಷ್ಟೇ ಸೆಲೆರಿಯೋ ಕಾರಿನ ಡಿಸೈನ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಆ ಮೂಲಕ ಸೆಲೆರಿಯೋ ಕಾರಿನ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. 

ಎಲೆಕ್ಟ್ರಿಕ್ ವಾಹನ ಖರೀದಿಸಬೇಕಾ? ಈ ಸಂಗತಿಗಳ ಬಗ್ಗೆ ತಿಳಿದಿರಿ

ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಟಾಟಾ ಕಂಪನಿಯ ಟಿಯಾಗೋ, ಹುಂಡೈನ ಸ್ಯಾಂಟ್ರೋ, ಡಾಟ್ಸನ್ ಗೋ  ಹ್ಯಾಚ್‌ಬ್ಯಾಕ್ ಕಾರುಗಳಿಗೆ ಈ ಮಾರುತಿ ಸುಜುಕಿ ಸೆಲೆರಿಯೋ ಹೊಸ ಕಾರು ತೀವ್ರ ಸ್ಪರ್ಧೆಯನ್ನು ಒಡ್ಡುವ ಸಾಧ್ಯತೆ ಇದೆ. ವಿಶೇಷವಾಗಿ ಟಾಟಾ ಟಿಯಾಗೋಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತದೆ. 

ಹೊಸ ತಲೆಮಾರಿನ ಸೆಲೆರಿಯೋ ಕಾರಿನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಲಿದ್ದು, ಅದು ಆಂಡ್ರಾಯ್ಡ್ ಕಾರ್ ಮತ್ತು ಆಪಲ್ ಕಾರ್‌ಪ್ಲೇಗೆ ಸಪೋರ್ಟ್ ಮಾಡಲಿದೆ. ಕಾರಿನ ಚಾಲಕ ಹಾಗೂ ಕೋ ಪ್ಯಾಸೆಂಜರ್ ರಕ್ಷಣೆಗಾಗಿ ಎರಡು ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಸ್ಟೀರಿಂಗ್‌ನಲ್ಲೇ ಆಡಿಯೋ ನಿಯಂತ್ರಣಗಳಿರಲಿವೆ. ಒಂದು ರೀತಿಯಲ್ಲಿ ವ್ಯಾಗನ್ ಆರ್‌ ಹೊಂದಿರುವ  ಬಹುತೇಕ ಫೀಚರ್‌ಗಳ ಇದರಲ್ಲೂ ಇರಲಿವೆ. ಆದರೆ, ಸ್ವಿಫ್ಟ್‌ನ ಕಾರಿನ ಕೆಲವೇ ಫೀಚರ್‌ಗಳನ್ನು ನಾವು ಇದರಲ್ಲಿ ಕಾಣಬಹುದು ಎನ್ನಲಾಗುತ್ತಿದೆ. ಅಂದರೆ, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ ಪಾರ್ಕಿಂಗ್‌ನಂಥ ಕ್ಯಾಮೆರಾ ಫೀಚರ್‌ಗಳನ್ನು ಹೆಸರಿಸಬಹುದು.

ಹೊಸ ಸೆಲೆರಿಯೋ, 67ಪಿಎಸ್ ಮತ್ತು 91 ಎನ್ಎಂ ಟಾರ್ಕ್‌ ಶಕ್ತಿ ಉತ್ಪಾದಿಸುವ 1.0 ಲೀ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆ ಇದೆ. ಜೊತೆಗೆ ಇದು 5  ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಇಷ್ಟು ಮಾತ್ರವಲ್ಲದೇ ವ್ಯಾಗನ್ ಆರ್‌ ಹೊಂದಿರುವ 1.2 ಎಂಜಿನ್ ಲೀಟರ್‌ ಎಂಜಿನ್ ಕೂಡ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲೂ 17,800 ರೂ.ವರೆಗೆ ಕಡಿತ!

ಈ ಹೊಸ ತಲೆಮಾರಿನ ಸೆಲೆರಿಯೋ ಬೆಲೆ ಬಗ್ಗೆಯೂ ಹಲವು ನಿರೀಕ್ಷೆಗಳಿವೆ. ಕೆಲವು ಸೋರಿಕೆ ಮಾಹಿತಿಗಳ ಪ್ರಕಾರ, ಸುಮಾರು 4.66 ಲಕ್ಷ ರೂ.ನಿಂದ 5.91 ಲಕ್ಷ ರೂ.(ಶೋ ರೂಮ್ ಬೆಲೆ)ವರೆಗೂ ಈ ಕಾರು ದೊರೆಯಲಿದೆ ಎನ್ನಲಾಗುತ್ತಿದೆ. 

click me!