ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

By Suvarna News  |  First Published Jul 3, 2021, 6:01 PM IST
  • ಕೊರೋನಾ ಮಾರ್ಗಸೂಚಿ ನಡುವೆ ಕಾರು ಡೆಲಿವರಿ ಪಡೆದ ಉದ್ಯಮಿ
  • ಗೋವಾ ಗಡಿ ದಾಟಲು ಬೇಕು ITPCR ವರದಿ, ಹುಬ್ಬಳ್ಳಿಯಲ್ಲಿ ಕಾರಿಲ್ಲ
  • ಗಡಿ ಚೆಕ್ ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ

ಹುಬ್ಭಳ್ಳಿ(ಜು.03): ಕೊರೋನಾ ನಿಯಂತ್ರಣಕ್ಕಾಗಿ ಬಹುತೇಕ ರಾಜ್ಯಗಳಲ್ಲಿ ನಿರ್ಬಂಧ ಜಾರಿಯಲ್ಲಿದೆ. ಹೀಗಾಗಿ ಅಂತರ್ ರಾಜ್ಯ ಪ್ರಯಾಣಕ್ಕೆ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲಿಸಬೇಕಿದೆ. ಆದರೆ ಹುಬ್ಭಳ್ಳಿಯ ಉದ್ಯಮಿ, ಕೊರೋನಾ ಮಾರ್ಗಸೂಚಿ ಉಲ್ಲಂಘಿಸದೆ ಅಂತರ್ ರಾಜ್ಯದಿಂದ ಕಾರು ಖರೀದಿಸಿದ್ದಾರೆ. ಹುಬ್ಭಳ್ಳಿ ಉದ್ಯಮಿ ಹಾಗೂ ಟಾಟಾ ಮೋಟಾರ್ಸ್ ಡೀಲರ್ ಐಡಿಯಾ ಇದೀಗ ವೈರಲ್ ಆಗಿದೆ.

ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!

Latest Videos

ಹುಬ್ಭಳ್ಳಿ ಉದ್ಯಮಿ, ಗೋವಾದ ಡೀಲರ್ ಬಳಿ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ್ದಾರೆ. ಕಾರಣ ಹುಬ್ಭಳ್ಳಿ ಡೀಲರ್ ಬಳಿ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಕೊರತೆ, ಉದ್ಯಮಿಗೆ ಹತ್ತಿರದಲ್ಲಿರುವುದು ಗೋವಾ ಗಡಿಯಲ್ಲಿರುವ  ಡೀಲರ್ ಆಗಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

 

Hubballi Businessman takes delivery of his new Tata Nexon EV at Goa Border as he could not cross to Goa due to RTPCR test report. pic.twitter.com/LtgpuwA8F1

— Hublicity-eGroup (@HubliCityeGroup)

ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಕೆಲ ತಿಂಗಳು ಕಾಯಬೇಕಾಯಿತು. ಬುಕ್ ಮಾಡಿದ ಕಾರು ಬಂದಾಗ ಕೊರೋನಾ ಮಾರ್ಗಸೂಚಿ ಉದ್ಯಮಿಗೆ ತಲೆನೋವಾಗಿ ಪರಿಣಮಿಸಿತು. ಕರ್ನಾಟಕದಿಂದ ಗೋವಾ ಪ್ರವೇಶಿಸಲು ಕೊರೋನಾ ಟೆಸ್ಟ್ ನೆಗಟೀವ್ ವರದಿ ಕಡ್ಡಾಯವಾಗಿತ್ತು. ಇನ್ನು ಕ್ವಾರಂಟೈನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿದೆ.

ಟಾಟಾ ನೆಕ್ಸಾನ್ ಮಾರಾಟ ದ್ವಿಗುಣ, ವಿದೇಶಿ ಕಾರುಗಳಿಗಿಲ್ಲ ಬೇಡಿಕೆ!.

ಕಠಿಣ ನಿಯಮಗಳ ಕಾರಣ ಉದ್ಯಮಿ, ಡೀಲರ್ ಬಳಿ ಚರ್ಚೆ ನಡೆಸಿದ್ದಾರೆ. ಬಳಿಕ ಇಬ್ಬರು ಐಡಿಯಾ ಮಾಡಿದ್ದಾರೆ.  ಕಾರು ಹೋಮ್ ಡೆಲಿವರಿ ಸಾಮಾನ್ಯವಾಗಿದೆ. ಆದರೆ ಉದ್ಯಮಿ ಬಾರ್ಡರ್ ಡೆಲಿವರಿಗೆ ಕೇಳಿದ್ದಾರೆ. ಉದ್ಯಮಿ ಕುಟುಂಬ ಗೋವಾ ಗಡಿ ಬಳಿ ತೆರಳಿದರೆ, ಅತ್ತ ಗೋವಾ ಡೀಲರ್ ಕಾರುನ್ನು ಗಡಿ ಚೆಕ್ ಪೋಸ್ಟ್ ಬಳಿ ತಂದಿದ್ದಾರೆ. ಬಳಿಕ ಉದ್ಯಮಿಗೆ ಕಾರು ಡೆಲಿವರಿ ಮಾಡಿದ್ದಾರೆ.

ಈ ವಿಧಾನದಿಂದ ಹುಬ್ಬಳ್ಳಿ ಉದ್ಯಮಿ ಗೋವಾ ಪ್ರವೇಶಿಸದೆ, ಕೊರೋನಾ ನೆಗಟೀವ್ ವರದಿ ಇಲ್ಲದೆ, ಗೋವಾ ಡೀಲರ್ ಬಳಿಯಿಂದ ಕಾರು ಡೆಲಿವರಿ ಪಡೆದಿದ್ದಾರೆ. ಗಡಿಯಲ್ಲಿ ಡೆಲಿವರಿ ಮಾಡುತ್ತಿರುವ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋದ ಹಿಂದೆ ಗಡಿ ಚೆಕ್ ಪೋಸ್ಟ್ ಇರುವುದನ್ನು ಗಮಿಸಬಹುದು.
 

click me!