10 ತಿಂಗಳಲ್ಲಿ 1.5 ಲಕ್ಷ ಮಹೀಂದ್ರಾ XUV ಬುಕಿಂಗ್!

Published : Jul 26, 2022, 04:22 PM IST
10 ತಿಂಗಳಲ್ಲಿ 1.5 ಲಕ್ಷ ಮಹೀಂದ್ರಾ XUV ಬುಕಿಂಗ್!

ಸಾರಾಂಶ

ಮಹೀಂದ್ರಾ ಮೋಟಾರ್ಸ್‌ ( Mahindra Motors) ನ ಬಹುಬೇಡಿಕೆಯ ಮಹೀಂದ್ರಾ ಎಕ್ಸ್‌ಯುವಿ 700  (Mahindra XUV700) ಬಿಡುಗಡೆಯಾದ ಕೇವಲ 10 ತಿಂಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಮಹೀಂದ್ರಾ ಮೋಟಾರ್ಸ್ ( Mahindra Motors) ನ ಬಹುಬೇಡಿಕೆಯ ಮಹೀಂದ್ರಾ ಎಕ್ಸ್ಯುವಿ 700  (Mahindra XUV700) ಇದುವರೆಗಿನ ಮಹೀಂದ್ರಾ ಕಾರುಗಳಲ್ಲೇ  ಅತಿ ದೊಡ್ಡ ಹಿಟ್ ಆಗಿದೆ. ಇದಕ್ಕೆ ಬಿಡುಗಡೆಯಾದ ಕೇವಲ 10 ತಿಂಗಳಲ್ಲಿ ಪಡೆದುಕೊಂಡಿರುವ1.5 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಗಳೇ ಸಾಕ್ಷಿ. ಜಾಗತಿಕವಾಗಿ ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಸೆಮಿ ಕಂಡಕ್ಟರ್ (semiconductor) ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇನ್ನೂ ತಮ್ಮ XUV700 ಗಳಿಗಾಗಿ ವೇಯ್ಟಿಂಗ್ ಪಿರಿಯಡ್ನಲ್ಲಿದ್ದಾರೆ. ಮಹೀಂದ್ರಾ ಇದುವರೆಗೆ ಕೇವಲ 50,000 ಯುನಿಟ್ಗಳನ್ನು ಮಾತ್ರ ವಿತರಿಸಿದೆ. ಮಹೀಂದ್ರಾ XUV700 ನ ಕೆಲವು ವೇರಿಯಂಟ್ಗಳ ಕಾಯುವ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಿದೆ. 

2021 ರ ಆಗಸ್ಟ್ 15 ರಂದು 11.99 ಲಕ್ಷ ರೂ.ಗಳ ಪ್ರಾರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ700  , (XUV700)ಭಾರಿ ಹಿಟ್ ಆಗಿತ್ತು.. ಬಿಡುಗಡೆಯಾದ ಕಳೆದ 10 ತಿಂಗಳ ಅವಧಿಯಲ್ಲಿ ಸುಮಾರು 2.2 ಲಕ್ಷ ರೂ.ಗಳಷ್ಟು ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಮಹೀಂದ್ರಾ ಎಕ್ಸ್ಯುವಿ700,  ಮೊನೊಕಾಕ್ ಎಸ್ಯುವಿ (Monocoque SUV) ಫ್ರಂಟ್ ವೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ವೇರಿಯಂಟ್ಗಳಲ್ಲಿ ಲಭ್ಯವಿದೆ. XUV700 5 ಮತ್ತು 7 ಸೀಟ್ ಆಯ್ಕೆಗಳು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳು ಮತ್ತು ಸ್ವಯಂಚಾಲಿತ ಮತ್ತು ಮ್ಯಾನುವಲ್ ಗೇರ್ಬಾಕ್ಸ್ಗಳೊಂದಿಗೆ ಬರುತ್ತದೆ. ಇದನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಎರಡು ಪ್ರಮುಖ ಟ್ರಿಮ್ ಹಂತಗಳಿವೆ: MX ಮತ್ತು AX. MX ಟ್ರಿಮ್ 5 ಆಸನ ಮಾದರಿಗಳಿಗೆ ಮೀಸಲಾಗಿದ್ದರೆ, AX ಟ್ರಿಮ್ 7 ಸೀಟ್ ವೇರಿಯಂಟ್ಗಳಲ್ಲಿ ದೊರೆಯಲಿದೆ. AX ಟ್ರಿಮ್ ಖರೀದಿದಾರರು ಹೆಚ್ಚು ವೈಶಿಷ್ಟ್ಯಗಳನ್ನು ಸೇರಿಸುವ ಐಷಾರಾಮಿ ಟ್ರಿಮ್ ಅನ್ನು ಸಹ ಆರಿಸಿಕೊಳ್ಳಬಹುದು.

ಕೈಯಲ್ಲಿ ದುಡ್ಡಿದ್ರು Mahindra XUV 700 ಖರೀದಿ ಮಾಡೋಕಾಗಲ್ಲ: ಯಾಕೆ?

ಮಹೀಂದ್ರಾ XUV700 ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ: 197 Bhp-380 Nm ಜೊತೆಗೆ mFalcon ಎಂಬ 2.0 ಲೀಟರ್-4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್, ಮತ್ತು mHawk ಎಂಬ 2.2 ಲೀಟರ್-34 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಟ್ಯೂನ್ಗಳಲ್ಲಿ ಲಭ್ಯವಿದೆ.  6 ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್ಬಾಕ್ಸ್ಗಳನ್ನು ಎರಡೂ ಎಂಜಿನ್ಗಳೊಂದಿಗೆ ಬರುತ್ತದೆ. ಆದರೆ, ಆಲ್ ವೀಲ್ ಡ್ರೈವ್  (All wheel drive) ವಿನ್ಯಾಸವು ಡೀಸೆಲ್ ಎಂಜಿನ್ನಲ್ಲಿ ಮಾತ್ರ ಲಭ್ಯವಿರುತ್ತದೆ. ಇದು 10.25 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಹೊಂದಿದ್ದು ಅದು ಅರ್ಧದಷ್ಟು ಡ್ಯಾಶ್ಬೋರ್ಡ್ ಅನ್ನು ವ್ಯಾಪಿಸಿದೆ. ಇದರ ಪ್ಯಾನರೋಮಿಕ್ ಸನ್ರೂಫ್ಗಳು ಇದಕ್ಕೆ ಹೊಸ ಆಕರ್ಷಣೆ ನೀಡಿದ್ದು, ಕೈಗೆಟಕುವ ದರದಲ್ಲಿ ಲಕ್ಸುರಿ ಎಸ್ಯುವಿ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ 5 ಸ್ಟಾರ್ ಗ್ಲೋಬಲ್ ಎನ್ಸಿಎಪಿ ರೇಟಿಂಗ್ನೊಂದಿಗೆ ಇದು ಅತ್ಯಂತ ಸುರಕ್ಷಿತ ಕಾರಾಗಿ ಕೂಡ ಹೊರಹೊಮ್ಮಿದೆ.
 

ಪ್ರತಿ ತಿಂಗಳು ಬುಕ್ ಆಗುತ್ತಿವೆ ಸುಮಾರು 10 ಸಾವಿರ ಮಹೀಂದ್ರಾ ಎಕ್ಸ್ಯುವಿ700

XUV700 ನ ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಎಲ್ಲಾ ವೇರಿಯಂಟ್ ಕಾರುಗಳಲ್ಲಿ ಕೂಡ ಕಾಣಬಹುದು. ಜೊತೆಗೆ, ಇದು 7 ಏರ್ಬ್ಯಾಗ್ಗಳು, ಇಎಸ್ಪಿ, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಮತ್ತು ಇತರ ಸುರಕ್ಷತಾ ವೈಶಿಷ್ಟ್ಯಗಳ ಹೋಸ್ಟ್ ಆಕರ್ಷಕ ಕಿಟ್ ಅನ್ನು ಕೊಡುಗೆಯಾಗಿ ನೀಡುತ್ತದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ