ಹಚ್ಚುವರಿ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ನೆಕ್ಸಾನ್ EV ಪ್ರೈಮ್‍ ಕಾರು ಬಿಡುಗಡೆ!

By Suvarna News  |  First Published Jul 16, 2022, 4:57 PM IST
  • 100 ಸೆಕೆಂಡುಗಳಲ್ಲಿ ಚಾರ್ಜಿಂಗ್ ಟೈಮ್‍ಔಟ್ 
  • ಸ್ಮಾರ್ಟ್‍ವಾಚ್ ಸಂಯೋಜಿತ ಸಂಪರ್ಕತೆಯ ಅಂಶ
  • ಗ್ರಾಹಕರಿಗೆ ಉಚಿತ ಸಾಫ್ಟ್‌ವೇರ್ ಅಪ್‌ಡೇಟ್

ಬೆಂಗಳೂರು(ಜು.16):   ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಪೈಕಿ ಟಾಟಾ ಮೋಟಾರ್ಸ್ ಇವಿ ಅಗ್ರಸ್ಥಾನದಲ್ಲಿದೆ. ಇದೀಗ ಮತ್ತಷ್ಟು ಹೊಸ ಫೀಚರ್ಸ್‌ನೊಂದಿಗೆ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಪ್ರೈಮ್ ಕಾರು ಬಿಡುಗಜೆ ಮಾಡಿದೆ. ಮಲ್ಟಿ-ಮೋಡ್ ರೀಜೆನ್, ಆಟೋಮ್ಯಾಟಿಕ್ ಬ್ರೇಕ್ ಲ್ಯಾಂಪ್ ಆ್ಯಕ್ಟಿವೇಶನ್, ಕ್ರೂಸ್ ಕಂಟ್ರೋಲ್, ಪರೋಕ್ಷ ಟೈರ್ ಒತ್ತಡ ಮೇಲುಸ್ತುವಾರಿ ವ್ಯವಸ್ಥೆ(iTPMS- Indirect Tyre Pressure Monitoring System), ಸ್ಮಾರ್ಟ್‍ವಾಚ್ ಸಂಯೋಜಿತ ಸಂಪರ್ಕತೆಯ ಅಂಶ, ಮತ್ತು 100 ಸೆಕೆಂಡುಗಳಲ್ಲಿ ಚಾರ್ಜಿಂಗ್ ಟೈಮ್‍ಔಟ್ ಮುಂತಾದ ಅತ್ಯಾಧುನಿಕ ಸ್ಮಾರ್ಟ್ ಅಂಶಗಳೊಂದಿಗೆ ನೆಕ್ಸಾನ್ ಇವಿ ಪ್ರೈಮ್‍ ಕಾರು ಮಾರುಕಟ್ಟೆ ಪ್ರವೇಶಿಸಿದೆ.   ಇವಿ ಮಾಲೀಕತ್ವದ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾ, ಸಂಸ್ಥೆಯು ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಸಾಫ್ಟ್‍ವೇರ್ ನವೀಕರಣದ ಮೂಲಕ ಪ್ರಸ್ತುತ ಈಗಿರುವ 22,000ಕ್ಕಿಂತ ಹೆಚ್ಚಿನ ನೆಕ್ಸಾನ್ ಇವಿ ಮಾಲೀಕರಿಗೆ ಈ ಹೊಸ ವಿನೂತನ ಅಂಶಗಳನ್ನು ವಿಸ್ತರಿಸುತ್ತಿದೆ. ಪ್ರಸ್ತುತದ ಮಾಲೀಕರ ಚಾಲನಾ ಅನುಭವ, ಸಂಪರ್ಕತೆ ಹಾಗೂ ಸಾಮರ್ಥ್ಯವನ್ನು ವರ್ಧಿಸುವ ಮೂಲಕ “ಇವಾಲ್ವಿಂಗ್ ಟು ಎಲೆಕ್ಟ್ರಿಕ್’ನೆಡೆಗಿನ ಅವರ ಪಯಣಕ್ಕೆ ಪ್ರಯೋಜನ ಒದಗಿಸಲಿದೆ. 

ಇವಿಗಳ ಈ ಹಿಂದಿನ ರಾಯಭಾರಿಗಳು ತೆಗೆದುಕೊಂಡ ಪರಿಶ್ರಮವನ್ನು ಗುರುತಿಸುತ್ತಾ ಟಾಟಾ ಮೋಟರ್ಸ್,ತನ್ನ ಅಧಿಕೃತ ಸರ್ವಿಸ್ ಸೆಂಟರ್‍ಗಳಲ್ಲಿ ಜುಲೈ 25, 2022ರಿಂದ ತನ್ನ ಪ್ರಸ್ತುತದ ಮಾಲೀಕರಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಈ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಸಾಫ್ಟ್‌ವೇರ್ ನವೀಕರಣವನ್ನು ಒದಗಿಸುತ್ತಿದೆ. ತೊಂದರೆರಹಿತ ಪರಿವರ್ತನೆಯನ್ನು ಖಾತರಿಪಡಿಸುವ ಸಲುವಾಗಿ ಟಾಟಾ ಮೋಟರ್ಸ್ ಇಷ್ಟರಲ್ಲೇ ಗ್ರಾಹಕರಿಗೆ ಒಂದು ಜ್ಞಾನ ಕಾರ್ಯಕ್ರಮವನ್ನು ನಡೆಸಿಕೊಡಲಿದೆ. ತದನಂತರದ ಸಾಫ್ಟ್ ವೇರ್ ನವೀಕರಣಗಳು ಪ್ರಸ್ತುತದ ಎಲ್ಲಾ ಗ್ರಾಹಕರಿಗೆ ಪಾವತಿಯ ಆಧಾರದ ಮೇಲೆ ಲಭ್ಯವಾಗಲಿದೆ.

Tap to resize

Latest Videos

ಇವಿ ವಲಯದಲ್ಲಿ ಅತಿ ಹೆಚ್ಚು ಮಾಸಿಕ ಮಾರಾಟ ದಾಖಲಿಸಿದ ಟಾಟಾ ಮೋಟರ್ಸ್

ನೆಕ್ಸಾನ್ ಇವಿ ಇಡೀ ದೇಶದ ಪರಿಕಲ್ಪನೆಯನ್ನು ಹಿಡಿದಿಟ್ಟಿದ್ದು ತಾನು ಬಿಡುಗಡೆಗೊಂಡಾಗಿನಿಂದಲೂ ವಿದ್ಯುತ್ ವಾಹನ ವರ್ಗದ್‍ಲ್ಲಿ ನಿರಂತರವಾಗಿ ಮಾರ್ಗಮುಂದಾಳುವಾಗಿದೆ. 65%ಗಿಂತ ಹೆಚ್ಚಿನ ಮಾರುಕಟ್ಟೆ ಪಾಲಿನೊಂದಿಗೆ ಅದು ಇವಿ ಇಚ್ಚೀಸುವವರಿಗೆ ಅನಿವಾರ್ಯ ಆಯ್ಕೆಯಾಗಿದೆ. ನೆಕ್ಸಾನ್ ಇವಿ ಪ್ರೈಮ್‍ನೊಂದಿಗೆ ನಮ್ಮ ಉತ್ಪನ್ನ ಕೊಡುಗೆಗಳನ್ನು ಸದಾ ಹೊಸತಾಗಿ(ನ್ಯೂ ಫಾರೆವೆರ್) ಇಡುವ ನಮ್ಮ ತಂತ್ರವನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ. ಅಲ್ಲದೆ, ನಮ್ಮ ಪ್ರಸ್ತುತದ ಗ್ರಾಹಕರಿಗೆ ಈ ಸಾಫ್ಟ್‍ವೇರ್ ನವೀಕರಣದ ಮೂಲಕ, ಟಾಟಾ ಇವಿ ಮಾಲೀಕತ್ವದ ಅನುಭವದ ಭಾಗವಾಗಿ ಗಾಹಕರು ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ಹೊಸ ಮಾನದಂಡ ಸೃಷ್ಟಿಸುತ್ತಿದ್ದೇವೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ  ಮುಖ್ಯಸ್ಥ ಶ್ರೀ ವಿವೇಕ್ ಶ್ರೀವಾಸ್ತವ ಹೇಳಿದ್ದಾರೆ. 

ನೆಕ್ಸಾನ್ ಇವಿ ಪ್ರೈಮ್ ಮಹತ್ವಾಕಾಂಕ್ಷೆಯ ಎಸ್‍ಯುವಿ ಆಗಿದ್ದು ಶೂನ್ಯ ಹೊಗೆಯುಗುಳುವಿಕೆಯೊಂದಿಗೆ ಕೇವಲ ಒಂದು ಚಾರ್ಜಿಂಗ್‍ನಲ್ಲಿ ಆತಂಕ-ರಹಿತ ದೀರ್ಘಶ್ರೇಣಿ(312 ಕಿ.ಮೀ. ಮೈಲೇಜ್ ರೇಂಜ್) ಒದಗಿಸುತ್ತದೆ. ಶಕ್ತಿಶಾಲಿಯಾದ ಮತ್ತು ಅಧಿಕ ಸಾಮರ್ಥ್ಯವಿರುವ 129 PS ಶಾಶ್ವತ ಮ್ಯಾಗ್ನೆಟ್-ಎಸಿ ಮೋಟಾರ್‍ನೊಂದಿಗೆ ಸಜ್ಜುಗೊಂಡಿರುವ ಅದು ಅತ್ಯಧಿಕ ಸಾಮರ್ಥ್ಯದ 30.2 kWh  ಲಿಥಿಯಮ್-ಅಯಾನ್ ಬ್ಯಾಟರಿಯ ಶಕ್ತಿಯನ್ನು ಹೊಂದಿದೆ. ಉದ್ಯಮದಲ್ಲೇ ಅತ್ಯುತ್ತಮವಾದ ಧೂಳು ಮತ್ತು ಜಲನಿರೋಧಕ ಬ್ಯಾಟರಿ ಪ್ಯಾಕ್‍ನೊಂದಿಗೆ ಬರುವ ಕಾರು, IP67 ಮಾನದಂಡಗಳನ್ನು ಪೂರೈಸುತ್ತದೆ. ಜೊತೆಗೆ ಅದು, ಬ್ಯಾಟರಿ ಮತ್ತು ಮೋಟಾರ್ ಮೇಲೆ 8 ವರ್ಷಗಳು ಅಥವಾ 1,60,000 ಕಿ.ಮೀ(ಯಾವುದು ಮೊದಲು ಬರುತ್ತದೋ ಅದು) ವಾರಂಟಿ ಒದಗಿಸುತ್ತದೆ. ಮೇಲಾಗಿ, ರಿಮೋಟ್ ಕಮಾಂಡ್‍ಗಳು, ವೆಹಿಕಲ್ ಟ್ರ್ಯಾಕಿಂಗ್‍ನಿಂದ ಹಿಡಿದು ಚಾಲನ ನಡವಳಿಕೆ ವಿಶ್ಲೇಷಣೆ, ನ್ಯಾವಿಗೇಶನ್ ಮತ್ತು ರಿಮೋಟ್ ಡಯಾಗ್ನೋಸ್ಟಿಕ್ಸ್‍ವರೆಗೆ 35 ಮೊಬೈಲ್ ಆ್ಯಪ್-ಆಧಾರಿತ ಅಂಶಗಳನ್ನೂ ಒದಗಿಸುತ್ತದೆ. ನೆಕ್ಸಾನ್ ಇವಿ ಮೂರು ವರ್ಣಗಳಲ್ಲಿ ಲಭ್ಯವಿದೆ.

Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!

click me!