ಭಾರತದಲ್ಲೇ ತಯಾರಾಗಲಿದೆ ಓಲಾ ಎಲೆಕ್ಟ್ರಿಕ್ ಕಾರು, ಟೀಸರ್ ಬಿಡುಗಡೆ ಮಾಡಿದ ಸಿಇಓ!

By Suvarna News  |  First Published Jul 19, 2022, 8:12 PM IST

ಓಲಾ ಸಿಇಒ (CEO) ಭವಿಶ್ ಅಗರ್ವಾಲ್ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ (twitter handle) ಬ್ರ್ಯಾಂಡ್ ಮುಂಬರುವ ಎಲೆಕ್ಟ್ರಿಕ್ ಕಾರಿನ ಹೊಸ ವೀಡಿಯೊ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.  


ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಬಿಡುಗಡೆಯಿಂದ ಭಾರಿ ಸದ್ದು ಮಾಡಿದ್ದ ಓಲಾ ಎಲೆಕ್ಟ್ರಿಕ್(Ola electric), ಈಗ ಎಲೆಕ್ಟ್ರಿಕ್ ಕಾರು ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಓಲಾ ಸಿಇಒ (CEO) ಭವಿಶ್ ಅಗರ್ವಾಲ್ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ (twitter handle) ಬ್ರ್ಯಾಂಡ್ನ ಮುಂಬರುವ ಎಲೆಕ್ಟ್ರಿಕ್ ಕಾರಿನ ಹೊಸ ವೀಡಿಯೊ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.  ಇದು ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ಸ್ಪೋರ್ಟಿ ಕಾರು (sporty car) ಎಂದು ಹೇಳಿಕೊಂಡಿದ್ದಾರೆ. ಕಾರಿನ ಟೀಸರ್ನಲ್ಲಿ ಅದರ ಕುರಿತು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಟೀಸರ್ ವೀಡಿಯೊದಲ್ಲಿ (Teaser video) ಮುಂಬರುವ ಓಲಾ ಎಲೆಕ್ಟ್ರಿಕ್ ಕಾರಿನ ಸಿಲೂಯೆಟ್ ಅನ್ನು ತೋರಿಸಲಾಗಿದೆ. ಇದು ಹೊಸ ವಾಹನದ ವಿನ್ಯಾಸದ ಝಲಕ್ ಅನ್ನು ಬಹಿರಂಗಪಡಿಸಿದೆ. ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ನಲ್ಲಿ, ಅದರಲ್ಲಿ ಸಾಲಾಗಿ ಇರಿಸುವ ಎಲ್ಇಡಿ (LED) ದೀಪಗಳನ್ನು ಅಳವಡಿಸಿರುವುದು ಕೂಡ ಕಂಡುಬರುತ್ತಿದೆ. ಇದು ಸೆಡಾನ್  (Sedan)ಕಾರು ಆಗಿರಲಿದ್ದು, ಆಗಸ್ಟ್ 15ರಂದು ಈ ಕುರಿತು ಹೆಚ್ಚಿನ ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ. ಹಾಗೂ, ಮುಂದಿನ ವರ್ಷ ಮಾರುಕಟ್ಟೆ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

 ಓಲಾ (Ola) ಈ ಕಾರನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲು ಯೋಜಿಸುತ್ತಿದೆ. ಇದು ಭಾರತದಲ್ಲಿ ಸ್ಟಾರ್ಟ್-ಅಪ್ (Strat-up) ಕಂಪನಿನಿಂದ ಬರುವ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರಲಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಓಲಾ, ಬ್ಯಾಟರಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ. ಬೆಂಗಳೂರಿನಲ್ಲಿ ಅತಿದೊಡ್ಡ ಬ್ಯಾಟರಿ ಇನ್ನೋವೇಶನ್ ಸೆಂಟರ್ (ಬಿಐಸಿ) ಸ್ಥಾಪಿಸಲು ಕಂಪನಿಯು  500 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಭವಿಶ್ ಅಗರ್ವಾಲ್ ಸೋಮವಾರ ಹೇಳಿದ್ದಾರೆ. ಹೊಸ ಬಿಐಸಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಮತ್ತು ಇದು 165 ಕ್ಕೂ ಹೆಚ್ಚು ವಿಶಿಷ್ಟ ಮತ್ತು ಅತ್ಯಾಧುನಿಕ ಪ್ರಯೋಗಾಲಯ ಸಾಧನಗಳೊಂದಿಗೆ ಏಷ್ಯಾದ ಅತ್ಯಾಧುನಿಕ ಕೋಶ ಸಂಶೋಧನೆ ಮತ್ತು ಅಭಿವೃದ್ಧಿ (Research & Development) ಸೌಲಭ್ಯಗಳಲ್ಲಿ ಒಂದಾಗಿದೆ ಎಂದು ಭವಿಷ್ ಮಾಹಿತಿ ನೀಡಿದ್ದರು.

Tap to resize

Latest Videos

ಪಶ್ಚಿಮಕ್ಕೆ ಟೆಸ್ಲಾ: ಇತರ ಭಾಗಕ್ಕೆ ಓಲಾ- ಸಿಇಓ ಭವೀಶ್ ಅಗರ್ವಾಲ್

ಕೆಲವು ದಿನಗಳ ಹಿಂದೆ, ಭವಿಶ್ ಅಗರ್ವಾಲ್  ಲಿಥಿಯಂ-ಐಯಾನ್ (Lithium ion) ಕೋಶದ ಚಿತ್ರವನ್ನು ಕೂಡ ಹಂಚಿಕೊಂಡಿದ್ದರು. ಇದು ಬ್ರ್ಯಾಂಡ್ನ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಿಯಾನ್ ( Li-ion) ಬ್ಯಾಟರಿ ಸೆಲ್ ಆಗಿರಲಿದೆ ಎಂದಿದ್ದರು. ಆದರೆ, ಅವರು ಹೊಸ ಉತ್ಪನ್ನದ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ನಮ್ಮದೇ ಆದ ತಂತ್ರಜ್ಞಾನ ಹೊಂದುವುದರಿಂದ ವೇಗ ಮತ್ತು ಹೊಸತನ ಪಡೆಯಲು ಸಾಧ್ಯ ಎಂದಿರುವ ಅವರು, ಕಂಪನಿಯ ಪೈಪ್ಲೈನ್ನಲ್ಲಿ ಹೆಚ್ಚಿನ ಉತ್ಪನ್ನಗಳಿವೆ ಎಂದು ಅವರು ಸುಳಿವು ನೀಡಿದ್ದಾರೆ.

ಓಲಾ, ಇತರ ಅನೇಕ ಎಲೆಕ್ಟ್ರಿಕ್ ವಾಹನ ತಯಾರಕರಂತೆ, ಲಿ-ಐಯಾನ್ ಬ್ಯಾಟರಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತದೆ. ಭವಿಷ್ಯದಲ್ಲಿ ಅನೇಕ ಭಾರತೀಯ ಕಂಪನಿಗಳು ಭಾರತದಲ್ಲಿ ತಯಾರಿಸಿದ ಬ್ಯಾಟರಿ ಸೆಲ್ಗಳಲ್ಲಿ ಕೆಲಸ ಮಾಡುವುದರಿಂದ ಭವಿಷ್ಯದಲ್ಲಿ ಬದಲಾಗುವ ನಿರೀಕ್ಷೆಯಿದೆ..

 

ಬಿಜ್ಲಿ ಬಿಜ್ಲಿ ಹಾಡಿಗೆ ಡಾನ್ಸ್‌ ಮಾಡಿದ ಓಲಾ ಬಾಸ್‌: ವಿಡಿಯೋ ವೈರಲ್

ಇತ್ತೀಚಿಗೆ ಎಲೆಕ್ಟ್ರಿಕ್ ಸ್ಕೂಟರ್ ತಾಂತ್ರಿಕ ದೋಷಗಳಿಂದಲೂ ಸುದ್ದಿಯಲ್ಲಿದೆ. ಪುಣೆಯಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಓಲಾ ಎಸ್1 ಪ್ರೋ (Ola S1 Pro) ಸ್ಕೂಟರ್  ಸುಟ್ಟು ಕರಕಲಾಗಿದೆ. ಓಲಾ ಹೊರತುಪಡಿಸಿ ಇತರ ಹಲವು ಎಲೆಕ್ಟ್ರಿಕ್ ಸ್ಕೂಟರ್ಗಳು ಇತ್ತೀಚೆಗೆ ಬೆಂಕಿಗೆ ಆಹುತಿಯಾಗಿವೆ. ಇಂತಹ ಘಟನೆಗಳ ಹೆಚ್ಚಳದಿಂದಾಗಿ, ಭಾರತ ಸರ್ಕಾರವು ಘಟನೆಗಳ ಬಗ್ಗೆ ತನಿಖೆಗೆ ಕೂಡ ಆದೇಶಿಸಿದೆ. ಬೆಂಕಿಯ ಹಿಂದಿನ ನಿಖರವಾದ ಕಾರಣಗಳನ್ನು ಕಂಡುಹಿಡಿಯಲು ಡಿಆರ್ಡಿಓ (DRDO)ದ ಅಂಗವು ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದೆ.
 

click me!