
ನವದೆಹಲಿ (ಆ.26): ರಾತ್ರಿ ವೇಳೆಯಲ್ಲಿ ವಾಹನಗಳ ಹೈ ಬೀಮ್ ಹೆಡ್‌ಲೈಟ್‌ನಿಂದ (High Beam Headlight) ಎದುರಿಗೆ ಬರುವ ಚಾಲಕರ ಕಣ್ಣುಗಳು ಮಂಜಾಗುವುದನ್ನು ತಡೆಗಟ್ಟಲು ಹಾಗೂ ಸಂಭವಿಸುವ ಭೀಕರ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೆಡ್‌ಲೈಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಹೆಡ್‌ಲೈಟ್ ಬೆಳಕಿನ ತೀವ್ರತೆ ಮತ್ತು ಕಲರ್ ಟೆಂಪರೇಚರ್‌ಗೆ ಮಿತಿ ಹೇರಲು ಹೊಸ ಕಾನೂನು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ.
ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಮಾಲೋಚನೆಗಾಗಿ 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಏಪ್ರಿಲ್‌ನಿಂದ ಈ ನೂತನ ನಿಯಮಗಳು ಜಾರಿಗೆ ಬರಲಿವೆ. ಆಟೋ ಮೊಬೈಲ್ ತಜ್ಞ ಟೂಟೂ ಧವನ್ ಮತ್ತು ಹಿರಿಯ ಕಣ್ಣಿನ ತಜ್ಞ ಡಾ. (ಬ್ರಿಗೇಡಿಯರ್) ವಿಜಯ್ ಮಾಥುರ್ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಇದು ಕಣ್ಣಿನ ಸುರಕ್ಷತೆ ಹಾಗೂ ಅಪಘಾತ ತಡೆಗೆ ಅತ್ಯಂತ ಅಗತ್ಯ ಹೆಜ್ಜೆ ಎಂದಿದ್ದಾರೆ.
ಗಾಡಿ ಸ್ಟಾರ್ಟ್ ಆಗುತ್ತಿದ್ದಂತೆ ಲೋ ಬೀಮ್: ಇನ್ಮುಂದೆ ಹೊಸದಾಗಿ ತಯಾರಾಗುವ ವಾಹನಗಳು (ವಿಶೇಷವಾಗಿ ದ್ವಿಚಕ್ರ ವಾಹನಗಳು) ಸ್ಟಾರ್ಟ್ ಆಗುತ್ತಿದ್ದಂತೆಯೇ ಹೆಡ್‌ಲೈಟ್ ಕೇವಲ 'ಲೋ ಬೀಮ್' (Low Beam) ಮೋಡ್‌ನಲ್ಲಿ ಮಾತ್ರ ಬೆಳಗಲಿದೆ. ಅಗತ್ಯಬಿದ್ದರೆ ಮಾತ್ರ ಚಾಲಕ ಅದನ್ನು 'ಹೈ ಬೀಮ್'ಗೆ ಬದಲಾಯಿಸಿಕೊಳ್ಳಬಹುದು. (ಈ ನಿಯಮ ಕೇವಲ ಹೊಸ ವಾಹನಗಳಿಗೆ ಅನ್ವಯಿಸಲಿದ್ದು, ಹಳೆಯ ವಾಹನಗಳಿಗೆ ಸದ್ಯಕ್ಕಿದ್ದ ವ್ಯವಸ್ಥೆಯೇ ಮುಂದುವರಿಯಲಿದೆ).
60 ಕಿ.ಮೀ ವೇಗದ ಮಿತಿಗೆ ಅಲಾರಾಂ ಬಿಪ್: ವಾಹನವು ಗಂಟೆಗೆ 60 ಕಿಲೋಮೀಟರ್‌ಗಿಂತ ಕಡಿಮೆ ವೇಗದಲ್ಲಿದ್ದಾಗ ಚಾಲಕ ಹೈ ಬೀಮ್ ಬಳಸಿದರೆ, ವಾಹನದಲ್ಲಿ ಸ್ಪೀಡ್ ವಾರ್ನಿಂಗ್ ಮಾದರಿಯಲ್ಲೇ ಅಲಾರಾಂ ಬಾರಿಸಲು ಶುರುವಾಗುತ್ತದೆ. ಆದರೆ, ಗಂಟೆಗೆ 60 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ (ಹೆದ್ದಾರಿಗಳಲ್ಲಿ) ಈ ಅಲಾರಾಂ ನಿಯಮ ಅನ್ವಯಿಸುವುದಿಲ್ಲ.
ದ್ವಿಚಕ್ರ ವಾಹನಗಳ ಗರಿಷ್ಠ ಬೆಳಕಿನ ತೀವ್ರತೆಯನ್ನು 1.5 ಲಕ್ಷ ಕ್ಯಾಂಡಿಲಾದಿಂದ (Candela) 1 ಲಕ್ಷ ಕ್ಯಾಂಡಿಲಾಗೆ ಇಳಿಸಲು ಪ್ರಸ್ತಾಪಿಸಲಾಗಿದೆ. ಕಾರ್‌ಗಳ ತೀವ್ರತೆಯನ್ನು 2.25 ಲಕ್ಷ ಕ್ಯಾಂಡಿಲಾದಿಂದ 1.5 ಲಕ್ಷ ಕ್ಯಾಂಡಿಲಾಗೆ ಇಳಿಸಲು ಉದ್ದೇಶಿಸಲಾಗಿದೆ.
ಕಲರ್ ಟೆಂಪರೇಚರ್ ಮಿತಿ: ಅತಿಯಾದ ನೀಲಿ-ಬಿಳಿ ಬೆಳಕಿನಿಂದ ಕಣ್ಣು ಕೊರೈಸುವುದನ್ನು ತಡೆಯಲು ಹೆಡ್‌ಲೈಟ್ ಕಲರ್ ಟೆಂಪರೇಚರ್ ಅನ್ನು ಗರಿಷ್ಠ 6,500 ಕೆಲ್ವಿನ್ (Kelvin) ಗೆ ಸೀಮಿತಗೊಳಿಸಲಾಗುವುದು.
ಟ್ರಕ್-ಬಸ್‌ಗಳಿಗೆ ರಿಫ್ಲೆಕ್ಟಿವ್ ಟೇಪ್ ಕಡ್ಡಾಯ: ರಾತ್ರಿ ವಾತಾವರಣದಲ್ಲಿ ರಸ್ತೆಯಲ್ಲಿ ಸಾಗುವ ಬಸ್ ಮತ್ತು ಭಾರಿ ಸರಕು ಟ್ರಕ್‌ಗಳನ್ನು ಸ್ಪಷ್ಟವಾಗಿ ಗುರುತಿಸಲು ರಿಫ್ಲೆಕ್ಟಿವ್ ಸೇಫ್ಟಿ ಟೇಪ್ (Reflective Safety Tape) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು.
ಸಾರ್ವಜನಿಕ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಅನಗತ್ಯವಾಗಿ ಹೈ ಬೀಮ್ ಹೆಡ್‌ಲೈಟ್ ಬಳಸಿ ಚಾಲನೆ ಮಾಡುವುದು ಕಂಡುಬಂದರೆ ಟ್ರಾಫಿಕ್ ಪೊಲೀಸರು ₹500 ರಿಂದ ₹1,500 ವರೆಗೆ ದಂಡ ವಿಧಿಸಲಿದ್ದಾರೆ. ಮೊದಲ ಬಾರಿಯ ಉಲ್ಲಂಘನೆ ₹500 ದಂಡ ವಿಧಿಸಲಾಗುತ್ತದೆ. ಮರುಕಳಿಸಿದರೆ, ₹1,500 ವರೆಗೆ ದಂಡ ವಿಧಿಸಲಾಗುತ್ತದೆ. ಪದೇ ಪದೇ ನಿಯಮ ಮುರಿಯುವುದು ಅಥವಾ ಹೈ ಬೀಮ್‌ನಿಂದಾಗಿ ರಸ್ತೆ ಅಪಘಾತ ಸಂಭವಿಸಿದರೆ ಚಾಲನಾ ಪರವಾನಗಿಯನ್ನು (Driving License) ಅಮಾನತುಗೊಳಿಸಲಾಗುತ್ತದೆ.
ಯಾವಾಗ ಬಳಸಬಹುದು?:
ಯಾವಾಗ ಬಳಸಬಾರದು?