1,100 ಕಿ.ಮಿ ಮೈಲೇಜ್, JSW ಎಂಜಿ ಟೊಮಾಹಾಕ್ ಪ್ಲಗ್ ಇನ್ ಹೈಬ್ರಿಡ್ ಕಾರು ಭಾರತದಲ್ಲಿ ಲಾಂಚ್

Published : Aug 26, 2026, 03:14 PM IST
JSW MG Tomahawk Plug in Hybrid

ಸಾರಾಂಶ

ಬರೋಬ್ಬರಿ 1,100 ಕಿಲೋಮೀಟರ್ ಮೈಲೇಜ್, ಪ್ಲಗ್ ಇನ್ ಹೈಬ್ರಿಡ್ ಎಂಜಿ ಟೋಮಾಹಾಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಬ್ಯಾಟರಿ ಸಬ್‌ಸ್ಕ್ರಿಪ್ಶನ್ ಮೂಲಕ ಖರೀದಿಸಿದರೆ ಕೇವಲ 13.99 ಲಕ್ಷ ರೂಗೆ ಕಾರು ಲಭ್ಯವಿದೆ.

ನವದೆಹಲಿ (ಆ.26) JSW ಎಂಜಿ ಮೋಟಾರ್ ಹೊಚ್ಚ ಹೊಸ ಎಂಜಿ ಟೊಮಾಹಾಕ್ ಕಾರು ಭಾರತದಲ್ಲಿ ಲಾಂಚ್ ಮಾಡಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ನೂತನ ಕಾರು ಭಾರತದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಪ್ಲಗ್ ಇನ್ ಹೈಬ್ರಿಡ್ ಕಾರಾಗಿದೆ. ವಿಶೇಷ ಇಂದರೆ ಒಂದು ಫುಲ್ ಟ್ಯಾಂಕ್‌ಗೆ ಈ ಕಾರು ಬರೋಬ್ಬರಿ 1,100 ಕಿಲೋಮೀಟರ್ ಮೈಲೇಜ್ ನೀಡಲಿದೆ. ಪವರ್‌ಫುಲ್ ಇಂಧನ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ಹೊಚ್ಚ ಹೊಸ ಕಾರಿನ ಬೆಲೆ

ಟೊಮಾಹಾಕ್ PHEV ಕಾರಿನ ಆರಂಭಿಕ ಬೆಲೆ 21.79 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದು ಬ್ಯಾಟರಿ ಸಬ್‌ಸ್ಕ್ರಿಪ್ಶನ್ ಮೂಲಕ ಈ ಕಾರು ಖರೀದಿಸಿದರೆ ಈ ಬೆಲೆಗೆ ಲಭ್ಯವಾಗಲಿದೆ. ಬ್ಯಾಟರಿ ಆಸ್ ಎ ಸರ್ವಿಸ್ (BaaS) ಯೋಜನೆಯಡಿ, ಬ್ಯಾಟರಿ ಸಬ್‌ಸ್ಕ್ರಿಪ್ಷನ್ ವೆಚ್ಚ ₹3.2 ಪ್ರತಿ ಕಿಲೋಮೀಟರ್ ಆಗಿದೆ. ಖಾಯಂ ಬ್ಯಾಟರಿ ಇರೋ ಖಾರು ಖರೀದಿಸಿದರೆ 25.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ವಿಶೇಷ ಅಂದರೆ JSW ಎಂಜಿ ಇದರಲ್ಲಿ BEV ಎಡಿಶನ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ಆರಂಭಿಕ ಬೆಲೆ 13.99 ಲಕ್ಷ ರೂಪಾಯಿ (ಬ್ಯಾಟರಿ ಸಬ್‌ಸ್ಕ್ರಿಪ್ಶನ್),ಈ ಕಾರು 69.2 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಎಡಿಶನ್ ಕಾರು 517 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.

PHEV ಹಲವು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಪ್ಲಗ್ ಇನ್ ಹೈಬ್ರಿಡ್ ಕಾರಿನಲ್ಲಿ ಗ್ಲಾಸಿ ಗ್ರಿಲ್ ನೀಡಲಾಗಿದೆ. ಟೊಮಾಹಾಕ್ ಐದು ಸೀಟರ್ ಹಾಗೂ 7 ಸೀಟರ್ ಆಯ್ಕೆ ಲಭ್ಯವಿದೆ. 5 ಸೀಟರ್ 610 ಲೀಟರ್ ಬೂಟ್ ಸ್ಪೇಸ್ ನೀಡಲಿದೆ. ಇನ್ನು 7 ಸೀಟರ್ ಕಾರಿನ ಬೂಟ್ ಸ್ಪೇಸ್ 192 ಲೀಟರ್. ಮೂರನೇ ರೋ ಸೀಟು ಮಡಟಿದರೆ 528 ಲೀಟರ್ ಬೂಟ್ ಸ್ಪೇಸ್ ಲಭ್ಯವಿದೆ. ಟೊಮಾಹಾಕ್ PHEVಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಡೆಡಿಕೇಟೆಡ್ ಹೈಬ್ರಿಡ್ ಟ್ರಾನ್ಸ್‌ಮಿಷನ್ (DHT) ಮತ್ತು 20.5 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಹೀಗಾಗಿ ಎಲೆಕ್ಟ್ರಿಕ್ ಮೋಟಾರ್ ಮೂಲಕ 115 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಫುಲ್ ಟ್ಯಾಂಕ್ ಇಂಧನ ಹಾಗೂ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದ್ದರೆ 1100 ಕಿಲೋಮೀಟರ್ ಮೈಲೇಜ್ ನೀಡಲಿದೆ. 0-100 ಕಿ.ಮೀ ವೇಗವನ್ನು 9 ಸೆಕೆಂಡ್‌ಗಳಲ್ಲಿ ತಲುಪಲಿದೆ.

ಪೂರ್ಣ ಚಾರ್ಜ್ ಮತ್ತು ಪೂರ್ಣ ಟ್ಯಾಂಕ್‌ನಲ್ಲಿ ಸಿಸ್ಟಮ್‌ನ ಒಟ್ಟು ರೇಂಜ್ 1100 ಕಿ.ಮೀ. ಎಂದು ಕಂಪನಿ ಹೇಳಿಕೊಂಡಿದೆ. ಈ ಸಂಯೋಜನೆಯು 148 kW ಎಲೆಕ್ಟ್ರಿಕ್ ಮೋಟಾರ್‌ನಿಂದ ಬೆಂಬಲಿತವಾಗಿದೆ. ಇದರೊಂದಿಗೆ, ಕಾರು 0 ರಿಂದ 100 ಕಿ.ಮೀ.ಪ್ರತಿ ಗಂಟೆ ವೇಗವನ್ನು ಸುಮಾರು 9 ಸೆಕೆಂಡ್‌ಗಳಲ್ಲಿ ತಲುಪುತ್ತದೆ.

15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್‌ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಎಂಜಿ ಮೋಟಾರ್ಸ್‌ನ i-SMART ಕನೆಕ್ಟೆಡ್ ಸಿಸ್ಟಮ್ ಹೊಂದಿದೆ. ಈ ಮೂಲಕ 90ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ನೀಡಲಿದೆ. ಪ್ಯಾನರೋಮಿಕ್ ಸನ್‌ಸೂಫ್, ವೆಂಟಿಲೇಟರ್ ಸನ್‌ರೂಫ್ ಸೇರಿದಂತೆ ಹಲವು ವಿಶೇಷತೆಗಳಿವೆ.

PREV
Read more Articles on
click me!

Recommended Stories

ಇಲ್ಲಿ ಎಲ್ಲವೂ ಫ್ರೀ, ಫ್ರೀ: ಕಾರನ್ನೇ ಉಚಿತ ಸೂಪರ್ ಮಾರ್ಕೆಟ್ ಮಾಡಿದ ಟ್ಯಾಕ್ಸಿ ಡ್ರೈವರ್
30,000 ಸಂಬಳ! ನೀವೂ ಕಾರು ಖರೀದಿಸಬಹುದು.. 20-4-10 ಸೂತ್ರ ಫಾಲೋ ಮಾಡಿ..!