ಬೆಂಗಳೂರಿನಲ್ಲಿ ಹೊಚ್ಚ ಹೊಸ ಆಡಿ ಕ್ಯೂ3 ಕಾರು ಅನಾವರಣ ಜೊತೆ ಎಕ್ಸ್‌ಪೀರಿಯೆನ್ಸ್‌ಗಾಗಿ ಸೆಂಟರ್ ಉದ್ಘಾಟನೆ

Published : Aug 26, 2026, 05:43 PM IST
Audi Unveils New Q3 in Bengaluru

ಸಾರಾಂಶ

ಹೊಸ ಆಡಿ ಕ್ಯೂ3 ಕಾರು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರದರ್ಶನ ಗೊಂಡಿದೆ. ವಿಶೇಷ ಅಂದರೆ ಬೆಂಗಳೂರಿನಲ್ಲಿ ಹೊಸದಾಗಿ ತೆರೆದ ಎಕ್ಸ್‌ಪಿರಿಯೆನ್ಸ್ ಸೆಂಟರ್‌ನಲ್ಲಿ ಈ ಕಾರು ಪ್ರದರ್ಶನಗೊಂಡಿದೆ. ಕಾರು ಹಾಗೂ ಸೆಂಟರ್ ವಿಶೇಷತೆ ಇಲ್ಲಿದೆ.

ಬೆಂಗಳೂರು (ಆ.26) ಬೆಂಗಳೂರಿನ ಪ್ರತಿಷ್ಠಿತ ಲಾವೆಲ್ಲೆ ರಸ್ತೆಯಲ್ಲಿರುವ ಆಡಿ ಬೆಂಗಳೂರು ಸೆಂಟ್ರಲ್ ಇದೀಗ ಹೊಸ ಎಕ್ಸ್‌ಪೀರಿಯೆನ್ಸ್ ಸೆಂಟರ್ ಉದ್ಘಾಟನೆ ಮಾಡಿದೆ. ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡಲು ಈ ಸೆಂಟರ್ ಆರಂಭಗೊಂಡಿದೆ. ಇದೇ ಸೆಂಟರ್‌ನಲ್ಲಿ ಹೊಚ್ಚ ಹೊಸ ಆಡಿ ಕ್ಯೂ3 ಕಾರು ಅನಾವರಣಗೊಂಡಿದೆ. ಭಾರತದಲ್ಲೇ ಮೊದಲ ಬಾರಿಗೆ ಈ ಹೊಸ ಐಷಾರಾಮಿ ಎಸ್‌ಯುವಿಯನ್ನು ಪ್ರದರ್ಶಿಸುವ ಮೊದಲ ಶೋರೂಮ್ ಎಂಬ ಹೆಗ್ಗಳಿಕೆಗೆ ಆಡಿ ಬೆಂಗಳೂರು ಸೆಂಟ್ರಲ್ ಪಾತ್ರವಾಗಿದೆ.

ಆಲ್-ನ್ಯೂ ಆಡಿ ಕ್ಯೂ3 ವಿಶೇಷತೆಗಳು

ಆಲ್-ನ್ಯೂ ಆಡಿ ಕ್ಯೂ3 ಆಡಿ ಸಂಸ್ಥೆಯ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‌ಯುವಿಯ ಮುಂದಿನ ಜನರೇಶನ್ ಪ್ರತಿನಿಧಿಸುತ್ತಿದೆ. ಹೊಸ ಡಿಸೈನ್, ಸುಧಾರಿತ ತಂತ್ರಜ್ಞಾನ, ಅತ್ಯುತ್ಕೃಷ್ಟ ಇಂಟಿರಿಯರ್ ಹಾಗೂ ಆಡಿ ಬ್ರಾಂಡ್‌ನ ವಿಶಿಷ್ಟ ಶೈಲಿಯನ್ನು ಒಂದೆಡೆ ತಂದಿದೆ. ಹೊಸತ ಆಡಿ ಬೆಂಗಳೂರು ಸೆಂಟ್ರಲ್ ಶೋರೂಮ್‌ನಲ್ಲೇ ಈ ಹೊಸ ಕಾರು ಪ್ರದರ್ಶನಗೊಳ್ಳುವ ಮೂಲಕ ಕಾರು ಪ್ರಿಯರ ಕುತೂಹಲ ತಣಿಸಿದೆ.

ಅತ್ಯಾಧುನಿಕ ಎಕ್ಸ್‌ಪೀರಿಯೆನ್ಸ್ ಸೆಂಟರ್

ಲಾವೆಲ್ಲೆ ರಸ್ತೆಯಲ್ಲಿರುವ ನವೀಕೃತ ಶೋರೂಮ್ ಗ್ರಾಹಕರಿಗೆ ಅತ್ಯಂತ ಆಕರ್ಷಕ ಮತ್ತು ಅತ್ಯಾಧುನಿಕ ಆಡಿ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸುಸಜ್ಜಿತ ಕೇಂದ್ರವು ಆಡಿಯ ಪ್ರಗತಿಪರ ರೀಟೇಲ್ ಮಾರಾಟ ಪರಿಕಲ್ಪನೆ, ಆಧುನಿಕ ಗ್ರಾಹಕ ಸಂವಹನ ಸ್ಥಳಗಳು, ಪ್ರೀಮಿಯಂ ವಾಹನ ಪ್ರದರ್ಶನ ಪರಿಸರ ಮತ್ತು ಐಷಾರಾಮಿ ವಾಹನ ಪ್ರಿಯರಿಗೆ ಅತ್ಯುತ್ತಮ ಅನುಭವ ನೀಡುವ ವ್ಯವಸ್ಥೆಯನ್ನು ಒಳಗೊಂಡಿದೆ.

ಕರ್ನಾಟಕದಲ್ಲೇ ಜುಬಿಲೆಂಟ್ ಮೋಟಾರ್ ವರ್ಕ್ಸ್ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಏಕೈಕ ಆಡಿ ಶೋರೂಮ್ ಆಗಿದೆ. ಈ ಡೀಲರ್‌ಶಿಪ್ ಪ್ರೀಮಿಯಂ ವಾಹನ ಮಾರಾಟ, ಗ್ರಾಹಕರ ಅನುಭವ ಮತ್ತು ಉತ್ಪನ್ನದ ನಾವೀನ್ಯತೆಯನ್ನು ಒಂದೇ ಸೂರಿನಡಿ ತರುವ ಮೂಲಕ ಬೆಂಗಳೂರಿನಲ್ಲಿ ಆಡಿ ಬ್ರಾಂಡ್ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತಿದೆ.ನವೀಕರಿಸಿದ ಆಡಿ ಬೆಂಗಳೂರು ಸೆಂಟ್ರಲ್‌ನ ಉದ್ಘಾಟನೆಯು ನಮಗೆ ಅತ್ಯಂತ ಸಂತಸದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ. ಬೆಂಗಳೂರು ಪ್ರಗತಿಪರ ವಿನ್ಯಾಸ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಸದಾ ಪ್ರೋತ್ಸಾಹಿಸುವ ನಗರವಾಗಿದ್ದು, ನಮ್ಮ ಹೊಸ ಎಕ್ಸ್‌ಪೀರಿಯೆನ್ಸ್ ಸೆಂಟರ್ ಅನ್ನು ಸಹ ಅದನ್ನೇ ಬಿಂಬಿಸುವಂತೆ ರೂಪಿಸಲಾಗಿದೆ ಎಂದು ಜುಬಿಲೆಂಟ್ ಮೋಟಾರ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಿಇಒ ಸುನಿಲ್ ಪೈ ಹೇಳಿದ್ದಾರೆ.

PREV
Read more Articles on
click me!

Recommended Stories

1,100 ಕಿ.ಮಿ ಮೈಲೇಜ್, JSW ಎಂಜಿ ಟೊಮಾಹಾಕ್ ಪ್ಲಗ್ ಇನ್ ಹೈಬ್ರಿಡ್ ಕಾರು ಭಾರತದಲ್ಲಿ ಲಾಂಚ್
ಇಲ್ಲಿ ಎಲ್ಲವೂ ಫ್ರೀ, ಫ್ರೀ: ಕಾರನ್ನೇ ಉಚಿತ ಸೂಪರ್ ಮಾರ್ಕೆಟ್ ಮಾಡಿದ ಟ್ಯಾಕ್ಸಿ ಡ್ರೈವರ್