ತೆರಿಗೆ ಹೆಚ್ಚಳದಿಂದ ಐಷಾರಾಮಿ ಕಾರು ಮಾರುಕಟ್ಟೆಗೆ ಹಿನ್ನಡೆ: ಲ್ಯಾಂಬೋರ್ಗಿನಿ ಸಿಇಓ

By Suvarna News  |  First Published Nov 9, 2022, 3:13 PM IST

ದೇಶದಲ್ಲಿ ಕಾರುಗಳ ಮೇಲಿನ ತೆರಿಗೆ ಹೆಚ್ಚಳ ಐಷಾರಾಮಿ ಕಾರುಗಳ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ದೇಶದ ಐಷಾರಾಮಿ ಕಾರುಗಳಲ್ಲಿ ಒಂದಾದ ಲ್ಯಾಂಬೋರ್ಗಿನಿಯ ಅಧ್ಯಕ್ಷ ಮತ್ತು ಸಿಇಒ(CEO) ಸ್ಟೀಫನ್ ವಿಂಕೆಲ್ಮನ್ ಅಭಿಪ್ರಾಯಪಟ್ಟಿದ್ದಾರೆ.


ದೇಶದಲ್ಲಿ ಕಾರುಗಳ ಮೇಲಿನ ತೆರಿಗೆ ಹೆಚ್ಚಳ ಐಷಾರಾಮಿ ಕಾರುಗಳ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ದೇಶದ ಐಷಾರಾಮಿ ಕಾರುಗಳಲ್ಲಿ ಒಂದಾದ ಲ್ಯಾಂಬೋರ್ಗಿನಿಯ (Lamborghini) ಅಧ್ಯಕ್ಷ ಮತ್ತು ಸಿಇಒ(CEO) ಸ್ಟೀಫನ್ ವಿಂಕೆಲ್ಮನ್ ಅಭಿಪ್ರಾಯಪಟ್ಟಿದ್ದಾರೆ. ವಿಂಕೆಲ್ಮನ್ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು ದೇಶದಲ್ಲಿ ಲ್ಯಾಂಬೋರ್ಗಿನಿ ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಆದರೆ, ಅದಕ್ಕೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆಗಳಿಂದ ಭಾರತದಲ್ಲಿನ ಸೂಪರ್ ಐಷಾರಾಮಿ ಕಾರು ಮಾರುಕಟ್ಟೆಯ ವಿಸ್ತರಣೆಯನ್ನು ಸೀಮಿತಗೊಳಿಸುತ್ತಿದೆ. ಭಾರತ ನಮಗೆ ಉತ್ತಮ ಮಾರುಕಟ್ಟೆಯಾಗಿದ್ದು, ಇತರ ಮಾರುಕಟ್ಟೆಗಳಂತೆಯೇ ಇಲ್ಲಿ ಕೂಡ ನಾವು ಬೆಳವಣಿಗೆಯ ಹಾದಿಯಲ್ಲಿದ್ದೇವೆ,' ಎಂದರು.

ದೇಶದಲ್ಲಿ ಸೂಪರ್ ಐಷಾರಾಮಿ ಕಾರು ಮಾರಾಟದ ಬೆಳವಣಿಗೆಗೆ ಇರುವ ಮಿತಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, 'ಭಾರತೀಯ ಮಾರುಕಟ್ಟೆಯ (Indian Merket) ವಿಷಯಕ್ಕೆ ಬಂದರೆ, ಇತರ ತೆರಿಗೆ ಮಾರುಕಟ್ಟೆಗಳಿಗಿಂತ ಹೆಚ್ಚಿನ ತೆರಿಗೆ ಮಿತಿಯನ್ನು (Tax exception) ಹೊಂದಿರುವುದು ಕಂಡುಬರುತ್ತದೆ. ಇದರಿಂದ ಹಲವು ವಿದೇಶಿ ತಯಾರಕರು, ಐಷಾರಾಮಿ ತಯಾರಕರು ತಮ್ಮ ಉತ್ಪನ್ನಗಳನ್ನು ಭಾರತಕ್ಕೆ ತರಲು ಇಲ್ಲವೇ ಇಲ್ಲಿ ಮಾರಲು ಸಮಸ್ಯೆ ಎದುರಿಸುತ್ತಿದ್ದಾರೆ. ಈ ತೆರಿಗೆ ಹಾಗೂ ಆಮದು ಸುಂಕವನ್ನು (Import Duty) ಕಡಿತಗೊಳಿಸುವಂತೆ ಪ್ರತಿ ವರ್ಷ ಬಜೆಟ್ ವೇಳೆಯಲ್ಲಿ ಹಲವು ಕಾರು ತಯಾರಕರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಇದಕ್ಕೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ. ಈ ಕುರಿತು ಸರ್ಕಾರ ತಮ್ಮ ನೀತಿಯನ್ನು ಸಡಿಲಗೊಳಿಸಿದರೆ ಅನುಕೂಲಕರವಾಗಲಿದೆ” ಎಂದರು.

ದುಬೈ ಸೇರಿದ ಪುನೀತ್ ರಾಜ್‌ಕುಮಾರ್ ಫೇವರಿಟ್ ಲ್ಯಾಂಬೋರ್ಘಿನಿ ಕಾರು

ಭಾರತದಲ್ಲಿ ಲ್ಯಾಂಬೋರ್ಗಿನಿ  ದರ 3.16 ಕೋಟಿ ರೂ.ಗಳಿಂದ ಆರಂಭವಾಗುತ್ತದೆ. ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯು 2021 ರಲ್ಲಿ 69 ವಾಹನಗಳ ಮಾರಾಟದೊಂದಿಗೆ ದೇಶದಲ್ಲಿ ತನ್ನ ಅತ್ಯುತ್ತಮ ಮಾರಾಟವನ್ನು ದಾಖಲಿಸಿದೆ. ಇದು 2019 ರಲ್ಲಿ ಮಾರಾಟ ಮಾಡಿದ ಒಟ್ಟು 52 ವಾಹನಗಳ ದಾಖಲೆಯನ್ನು ಮೀರಿಸಿದೆ. ಪ್ರಸ್ತುತ, ಆಟೋಮೊಬೈಲ್ಗಳಿಗೆ ಶೇ. 28ರಷ್ಟು ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ ಮತ್ತು ವಾಹನದ ಪ್ರಕಾರವನ್ನು ಅವಲಂಬಿಸಿ ಶೇ. 1 ರಿಂದ ಶೇ.22 ರವರೆಗೆ ಹೆಚ್ಚುವರಿ ಸೆಸ್ (Additional Cess) ವಿಧಿಸಲಾಗುತ್ತದೆ. ಇಂಜಿನ್ ಗಾತ್ರ ಮತ್ತು ವೆಚ್ಚ, ವಿಮೆ (Insurance) ಮತ್ತು ಸರಕು ಸಾಗಣೆ (CIF) ಮೌಲ್ಯವು 40,000 ಅಮೆರಿಕನ್ ಡಾಲರ್ (USD) ಗಿಂತ ಕಡಿಮೆ ಅಥವಾ ಹೆಚ್ಚಿಗೆ ಇದೆ ಎಂಬುದನ್ನು ಪರಿಗಣಿಸಲಾಗುತ್ತಿದೆ. ಇದಕ್ಕೆ  ಅನುಗುಣವಾಗಿ ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (CBUs) ಆಮದು ಮಾಡಿಕೊಳ್ಳುವ ಕಾರುಗಳಿಗೆ ಶೇ.60ರಷ್ಟು ಮತ್ತು ಶೇ.100ರಷ್ಟು ಕಸ್ಟಮ್ ಸುಂಕವನ್ನು ಪಾವತಿಸಬೇಕಾಗುತ್ತದೆ.

ಜಾಗತಿಕ ಆರ್ಥಿಕ ಕುಸಿತದ ಪ್ರಭಾವದ ಕುರಿತು ಪ್ರತಿಕ್ರಿಯಿಸಿದ ಅವರು, "ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ, ಭಾರತವು ಬೃಹತ್ ಮಾರುಕಟ್ಟೆಯಾಗಿದೆ. ಲ್ಯಾಂಬೋರ್ಗಿನಿ ವರ್ಷಕ್ಕೆ 100 ಕ್ಕಿಂತ ಕಡಿಮೆ ಕಾರುಗಳನ್ನು ಮಾರಾಟ ಮಾಡುತ್ತಿದೆ. ಆದ್ದರಿಂದ ಭಾರತದಲ್ಲಿ ಆರ್ಥಿಕತೆಯು ನಿಧಾನವಾಗಿದ್ದರೂ ಸಹ ಇದು ನಿಜವಾಗಿಯೂ ದೊಡ್ಡ ಬದಲಾವಣೆಯಲ್ಲ. ಮುಂದಿನ ಬೆಳವಣಿಗೆಯನ್ನು ಕಾದು ನೋಡಲಿದ್ದೇವೆ. ಆದರೆ, ಪ್ರಸ್ತುತ ನಮಗೆ ಯಾವುದೇ ಋಣಾತ್ಮಕ ಪರಿಣಾಮವನ್ನು ಕಾಣುತ್ತಿಲ್ಲ,' ಎಂದರು.

ಪಾರ್ಕಿಂಗ್ ಸಿಬ್ಬಂದಿಯ ನಿದ್ದೆಗೆಡಿಸಿದ ಲಕಲಕ ಲ್ಯಾಂಬೋರ್ಘಿನಿ: ಆಮೇಲೆ ಏನ್‌ ಮಾಡ್ದ ನೋಡಿ

ಜಾಗತಿಕವಾಗಿ, 2022ರ ಜನವರಿ-ಸೆಪ್ಟೆಂಬರ್ ರ ಅವಧಿಯಲ್ಲಿ, ಲ್ಯಾಂಬೋರ್ಗಿನಿ ತನ್ನ ವಿತರಣೆಯಲ್ಲಿ ಶೇ.8ರಷ್ಟು ಏರಿಕೆ ದಾಖಲಿಸಿದ್ದು, ವರ್ಷದಿಂದ ವರ್ಷಕ್ಕೆ 7,430 ವಾಹನಗಳ ಮಾರಾಟದ ಹೆಚ್ಚಳ ದಾಖಲಿಸಿದೆ. ಲ್ಯಾಂಬೋರ್ಗಿನಿ ಕಾರಿನ ವಿಶೇಷ ಮಾದರಿಯಾದ ಉರುಸ್ ಬೆಲೆ 3.10 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಅತ್ಯಂತ ದುಬಾರಿ ಮಾಡೆಲ್ ಆಗಿರುವ ಹುರಕೇನ್ ಎಸ್ಟಿಓ (Huracan STO) ಬೆಲೆಯು 4.99 ಕೋಟಿ ರೂ. ಗಳಿಂದ ಪ್ರಾರಂಭವಾಗುತ್ತದೆ. 

Latest Videos

click me!