Honda Cars India: 20 ಲಕ್ಷ ವಾಹನ ಉತ್ಪಾದನೆ: ಮೈಲಿಗಲ್ಲು ಸಾಧಿಸಿದ ಹೋಂಡಾ ಇಂಡಿಯಾ

By Supreetha Hebbar  |  First Published Nov 8, 2022, 3:18 PM IST

Honda Cars India reaches production milestone: ಹೋಂಡಾ ಕಾರ್ಸ್ ಇಂಡಿಯಾ (Honda cars India) ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 20 ಲಕ್ಷ ವಾಹನಗಳನ್ನು ಉತ್ಪಾದಿಸಿದ್ದು, ಹೊಸ ಮೈಲಿಗಲ್ಲು ಸಾಧಿಸಿದೆ.


ಹೋಂಡಾ ಕಾರ್ಸ್ ಇಂಡಿಯಾ (Honda cars India) ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 20 ಲಕ್ಷ ವಾಹನಗಳನ್ನು ಉತ್ಪಾದಿಸಿದ್ದು, ಹೊಸ ಮೈಲಿಗಲ್ಲು ಸಾಧಿಸಿದೆ. ಇತ್ತೀಚೆಗಷ್ಟೇ ಕಂಪನಿ ಈ ಮೈಲಿಗಲ್ಲನ್ನು ತಲುಪುವ ಕೊನೆಯ ಕಾರು ಹೊಂಡಾ ಸಿಟಿ ಸೆಡಾನ್ (Honda city Sedan) ಕಾರನ್ನು ರಾಜಸ್ಥಾನದ ತಪುಕರಾ ಘಟಕದಲ್ಲಿ ತಯಾರಿಸಲಾಗಿದೆ. ಹೊಂಡಾ ಮೋಟಾರ್ಸ್ 1997ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಕಾರು ಉತ್ಪಾದನೆಯನ್ನು ಆರಂಭಿಸಿತ್ತು. ಅಂದಿನಿಂದ ಇಂದಿನಿವರೆಗೆ ವಾಹನಗಳ ಉತ್ಪಾದನೆಗಾಗಿ ಕಂಪನಿ ಒಟ್ಟು ಒಟ್ಟು 10,000 ಕೋಟಿ ರೂ.ಹೂಡಿಕೆ ಮಾಡಿದೆ.

ಹೋಂಡಾ ಕಾರ್ಸ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ (CEO) ಟಕುಯಾ ತ್ಸುಮುರಾ ಈ ಕುರಿತು ಹೇಳಿಕೆ ನೀಡಿದ್ದು, 'ಭಾರತದಲ್ಲಿ ಕಳೆದ 25 ವರ್ಷಗಳ ಅವಧಿಯಲ್ಲಿ 2 ಮಿಲಿಯನ್ ಉತ್ಪಾದನೆಯ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವುದು ಕಂಪನಿಯ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಹೋಂಡಾದ ಬದ್ಧತೆಗೆ ಸಾಕ್ಷಿಯಾಗಿದೆ,' ಎಂದಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಜೊತೆಗೆ, ಕಂಪನಿಯು ಹೊಂಡಾ ಸಿಟಿ (Honda City) ಮತ್ತು ಅಮೇಜ್ (Amaze) ಸೆಡಾನ್‌ಗಳನ್ನು ಜಗತ್ತಿನಾದ್ಯಂತ 15ಕ್ಕೂ ಹೆಚ್ಚು ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ. ಹೋಂಡಾ ಕಾರ್ಸ್ ಇಂಡಿಯಾದ ತಪುಕರ ಮೂಲದ ಸ್ಥಾವರ ವರ್ಷಕ್ಕೆ 1.80 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇತ್ತೀಚೆಗೆ, ಶಾಂಘೈನಲ್ಲಿ ನಡೆದ ಚೀನಾ ಇಂಟರ್‌ನ್ಯಾಷನಲ್‌ ಆಮದು ಎಕ್ಸ್ಪೋದಲ್ಲಿ ಕಂಪನಿಯು ಹೊಸ ಇ:ಎನ್2 (E:N2)  ವಾಹನವನ್ನು ಅನಾವರಣಗೊಳಿಸಿದೆ. ಈ ಕಾರು ಒಂದು ವರ್ಷದ ನಂತರ ಮಾರುಕಟ್ಟೆಗೆ ಆಗಮಿಸಲಿದೆ. HR-V ಆಧಾರಿತ ಇ:ಎನ್ಎಸ್1 (e:NS1) ಮತ್ತು ಇ-ಎನ್ಪಿ1 (e:NP1) ಎಲೆಕ್ಟ್ರಿಕ್ ಎಸ್ಯುವಿ (SUV)ಗಳನ್ನು ಹೋಂಡಾ ಈಗಾಗಲೇ ಅನಾವರಣಗೊಳಿಸಿದೆ. ಮುಂದಿನ ಐದು ವರ್ಷಗಳಲ್ಲಿ ಚೀನಾದಲ್ಲಿ ಕನಿಷ್ಠ 10 ಎಲೆಕ್ಟ್ರಿಕ್ ಕಾರುಗಳನ್ನು (Electric Cars) ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ. 2030 ರ ವೇಳೆಗೆ ಜಾಗತಿಕವಾಗಿ 30 EV ಮಾದರಿಗಳನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ.
e:N2 ವಾಹನ ಸಂಪೂರ್ಣ ಸ್ಟಾಕ್ ನಿಯಂತ್ರಣ ವ್ಯವಸ್ಥೆ ಹೊಂದಿದ್ದು, ಡಿಜಿಟಲ್ ಕಾಕ್ಪಿಟ್ ಅನ್ನು ಅಳವಡಿಸಲಾಗಿದೆ. ಇದರಲ್ಲಿನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ (Artificial Intelligence Technology) ಚಾಲನೆಯನ್ನು ಸುಲಭವಾಗಿಸುತ್ತದೆ.ಇ:ಎನ್ (e:N) ಸರಣಿಯ ಎರಡು ಎಲೆಕ್ಟ್ರಿಕ್ ಕಾರುಗಳು ಜೆನರಲ್ ಮೋಟಾರ್ಸ್ (GM) ನ ಶೈಲಿಯನ್ನು ಆಧರಿಸಿವೆ. ಇವುಗಳ ವಿವರಗಳು ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಅವುಗಳು ದೊಡ್ಡ ಬ್ಯಾಟರಿ ಪ್ಯಾಕಿನೊಂದಿಗೆ ಬರುತ್ತವೆ ಎಂದು ಹೇಳಲಾಗುತ್ತಿದೆ. ಇವು ಒಂದೇ ಚಾರ್ಜಿನಲ್ಲಿ 510 ಕಿಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರಲಿವೆ. ಎರಡೂ SUV ಗಳ ವಿನ್ಯಾಸವು ಇತ್ತೀಚಿನ ಎಚ್ಆರ್-ವಿ (HR-V) ಯಂತೆಯೇ ಇರಲಿವೆ. 
 

 

Tap to resize

Latest Videos

ದ್ವಿಚಕ್ರ ವಾಹನಗಳಲ್ಲೂ ಬರಲಿದೆ Air Bag: ಪೇಟೆಂಟ್ ಪಡೆದ ಹೊಂಡಾ

ಭಾರಿ ರಿಯಾಯಿತಿ:
2022ರ ನವೆಂಬರ್ ಅಂತ್ಯದ ವೇಳೆಗೆ ಕಾರನ್ನು ಬುಕ್ ಮಾಡುವ ಗ್ರಾಹಕರಿಗೆ ಹೋಂಡಾ ಕಾರ್ಸ್ ಇಂಡಿಯಾ 63,000 ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಹೋಂಡಾ ಇಂಡಿಯಾದ 5 ನೇ ಪೀಳಿಗೆಯ ಹೊಂಡಾ ಸಿಟಿ (Honda City) ಮತ್ತು 2 ನೇ ಪೀಳಿಗೆಯ ಅಮೇಜ್ (Amaze) ಸೆಡಾನ್ಗಳು,ಡಬ್ಲ್ಯುಆರ್-ವಿ (WR-V) ಮತ್ತು ಜಾಝ್ (Jazz) ಹ್ಯಾಚ್ಬ್ಯಾಕ್ ಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಇದು ನವೆಂಬರ್ 30, 2022 ರವರೆಗೆ ಅನ್ವಯವಾಗಲಿದೆ.

ಜಾಝ್ ದೇಶದಲ್ಲಿ ಹೋಂಡಾದ ದೀರ್ಘಾವಧಿಯ ಮಾದರಿಗಳಲ್ಲಿ ಒಂದಾಗಿದ್ದು, ಗ್ರಾಹಕರು ತಮ್ಮ ಹಳೆಯ ಹೋಂಡಾ-ಅಲ್ಲದ ಕಾರಿನ ಮೇಲೆ ರೂ 10,000 ವಿನಿಮಯ ಬೋನಸ್ ಪಡೆಯಬಹುದಾಗಿದೆ. ಗ್ರಾಹಕರು ಹೊಸ ಹೋಂಡಾ ಕಾರಿಗೆ ಬದಲಾಯಿಸಿಕೊಂಡರೆ 17,000 ರೂ. ಹಾಗೂ ಹೆಚ್ಚುವರಿಯಾಗಿ 3,000 ರೂ. ಮೌಲ್ಯದ ಕಾರ್ಪೊರೇಟ್ ರಿಯಾಯಿತಿ (Corporate Concession) ಮತ್ತು ರೂ 5,000 ಮೌಲ್ಯದ ಲಾಯಲ್ಟಿ ಬೋನಸ್ ಅನ್ನು ಕೂಡ ಪಡೆಯಲಿದ್ದಾರೆ.

ಸ್ಪೋರ್ಟಿ, ಅಗ್ರೆಸ್ಸೀವ್ ಹೋಂಡಾ CB300F ಬೈಕ್ ಬಿಡುಗಡೆ!

click me!