ಟಾಟಾ ಕಾರು ಕೊಳ್ಳಲು ಬಯಸಿದ್ದೀರಾ... ನಾಳೆಯಿಂದ ರೇಟ್ ಜಾಸ್ತಿಯಾಗುತ್ತೆ

By Kannadaprabha NewsFirst Published Nov 6, 2022, 11:49 AM IST
Highlights

ಸೋಮವಾರದಿಂದ ಎಲ್ಲೆಡೆ ತನ್ನ ಕಾರುಗಳ ಬೆಲೆಯನ್ನು ಶೇ.0.9ರಷ್ಟುಅಧಿಕಗೊಳಿಸಲು ಟಾಟಾ ಕಂಪನಿ ನಿರ್ಧರಿಸಿದೆ.

ಮುಂಬೈ: ಸೋಮವಾರದಿಂದ ಎಲ್ಲೆಡೆ ತನ್ನ ಕಾರುಗಳ ಬೆಲೆಯನ್ನು ಶೇ.0.9ರಷ್ಟುಅಧಿಕಗೊಳಿಸಲು ಟಾಟಾ ಕಂಪನಿ ನಿರ್ಧರಿಸಿದೆ. ವಾಹನಗಳ ಉತ್ಪಾದನಾ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚಾಗಿರುವ ಕಂಪನಿಯ ಒಟ್ಟು ವೆಚ್ಚವನ್ನು ಈ ಕನಿಷ್ಠ ಬೆಲೆ ಏರಿಕೆಯಿಂದ ಹೀರಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. 

ದೇಶಾದ್ಯಂತ ಟಿಯಾಗೊ(Tiago), ಪಂಚ್‌ (Punch), ನೆಕ್ಸಾನ್‌ (Nexon), ಹ್ಯಾರಿಯರ್‌(Harrier), ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು (passenger vehicles) ಕಂಪನಿ ಮಾರಾಟ ಮಾಡುತ್ತಿದೆ. ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ (domestic market) ಕಂಪನಿಯ ಎಲೆಕ್ಟ್ರಿಕ್‌ ವಾಹನಗಳು ಸೇರಿದಂತೆ 45,423 ವಾಹನಗಳು ಮಾರಾಟವಾಗಿದ್ದು ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ಬಾರಿ 33% ರಷ್ಟು ಮಾರಾಟ ಪ್ರಮಾಣ ಅಧಿಕವಾಗಿದೆ.

ಹೊಸೂರು ಐಫೋನ್ ಕಾರ್ಖಾನೆಯಲ್ಲಿ 45 ಸಾವಿರ ಕಾರ್ಮಿಕರ ನೇಮಕಕ್ಕೆ Tata Group ತಯಾರಿ

ಭಾರತದಲ್ಲಿ 2.5 ಕೋಟಿಗೂ ಹೆಚ್ಚು ಕಾರು ಉತ್ಪಾದಿಸಲಿದೆ ಮಾರುತಿ ಸುಜುಕಿ

click me!