Volkswagen Tiguan Facelift:ಸೆಲ್ಟೋಸ್, ಕಂಪಾಸ್ ಪ್ರತಿಸ್ಪರ್ಧಿ, VW ಟೈಗೂನ್ SUV ಫೇಸ್‌ಲಿಫ್ಟ್ ಕಾರು ಬಿಡುಗಡೆ!

By Suvarna News  |  First Published Dec 7, 2021, 9:43 PM IST
  • ಹಲವು ವಿಶೇಷತೆಗಳ VW ಟೈಗೂನ್ SUV ಫೇಸ್‌ಲಿಫ್ಟ್ ಕಾರು
  • ನೂತನ ಕಾರಿನ ಬೆಲೆ 31.99 ಲಕ್ಷ ರೂಪಾಯಿಂದ ಆರಂಭ
  • ಜನವರಿ 15ರ ನಂತರ ಟೈಗೂನ್ ಕಾರು ಡೆಲಿವರಿ ಆರಂಭ

ಬೆಂಗಳೂರು(ಡಿ.07): ಸುಮಾರು ಒಂದು ವರ್ಷದ ವಿಳಂಬದ ನಂತರ ಈಗ ವೋಕ್ಸ್‌ವ್ಯಾಗನ್‌ನ ಹೊಸ ಪೀಳಿಗೆಯ 2021ರ ಟೈಗೂನ್‌ (Taigun) ಕಾಂಪ್ಯಾಕ್ಟ್‌ ಎಸ್‌ಯುವಿ (SUV) ಫೇಸ್‌ಲಿಫ್ಟ್‌  (Facelift) ಭಾರತದಲ್ಲಿ ಬಿಡುಗಡೆಗೊಳಿಸಿದೆ. 2020ರವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಡೀಸೆಲ್‌ ಕಾರಿನ ಬದಲಾಗಿ ಈ ಬಾರಿ ಟೈಗೂನ್ ಬಿಎಸ್‌6 ಪೆಟ್ರೋಲ್‌  (BS6 Petrol) ಇಂಜಿನ್‌ನೊಂದಿಗೆ ಬಂದಿದೆ. ಇದು ಕಂಪನಿಯ ಎಸ್‌ಯುವಿ ವಿಭಾಗದ ಎರಡನೇ ವಾಹನವಾಗಿದ್ದು, ಇದರ ದರ 31.99 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

ಈಗಾಗಲೇ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿನ ವೋಕ್ಸ್‌ವ್ಯಾಗನ್‌ ಕಾರ್ಖಾನೆಯಲ್ಲಿ ಹೊಸ ಟೈಗೂನ್‌ ಎಸ್‌ಯುವಿಯ ಉತ್ಪಾದನೆ ಆರಂಭಗೊಂಡಿದ್ದು, ಜನವರಿ 15ರ ನಂತರ ವಾಹನದ ವಿತರಣೆ ಆರಂಭಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

Tap to resize

Latest Videos

undefined

ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು-550 ಕೀ.ಮಿ ಮೈಲೇಜ್!

ಜರ್ಮನಿ ಮೂಲದ ಆಟೊಮೊಬೈಲ್‌ ಕಂಪನಿ ತನ್ನ ವೋಕ್ಸ್‌ವ್ಯಾಗನ್ ಟೈಗೂನ್‌ ಆಲ್‌ಸ್ಪೇಸ್‌ (Tigun All Space) ಮತ್ತು ಟಿ-ರಾಕ್‌ ಎಸ್‌ಯುವಿಗಳನ್ನು  (T-Rock SUV) ಮಾರುಕಟ್ಟೆಯಿಂದ ಹಿಂಪಡೆದ ನಂತರ ಈಗ ಟೈಗೂನ್‌ ಫೇಸ್‌ಲಿಫ್ಟ್‌ ಅನ್ನು ಬಿಡುಗಡೆಗೊಳಿಸಿದೆ. 2020ರ ಆಟೊ ಎಕ್ಸ್‌ಪೋದಲ್ಲಿಯೇ (Auto Expo) ಕಂಪನಿ ಈ ಫೇಸ್‌ಲಿಫ್ಟ್‌ ಬಿಡುಗಡೆ ಬಗ್ಗೆ ಘೋಷಿಸಿತ್ತು. ಕಳೆದ ಮಾರ್ಚ್‌ನಲ್ಲಿಯೇ ದೇಶಾದ್ಯಂತ ಇದು ಬಿಡುಗಡೆ ಕಂಡಿವೆ. ಆದರೆ, ಭಾರತದಲ್ಲಿ ಮಾತ್ರ ಕೋವಿಡ್ (COVID) ಸಾಂಕ್ರಾಮಿಕ ಮತ್ತು ಚಿಪ್‌ ಕೊರತೆ ಹಿನ್ನೆಲೆಯಲ್ಲಿ ಇದರ ಬಿಡುಗಡೆ ವಿಳಂಬವಾಗಿತ್ತು.

ಟೈಗೂನ್‌ನ ಫೇಸ್‌ಲಿಫ್ಟ್‌ನ ಹೊರಗಿನ ವಿನ್ಯಾಸಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಕಾಣಬಹುದು. ಇದರ ಮುಂಭಾಗದಲ್ಲಿ ಎಲ್‌ಇಡಿ ಮ್ಯಾಟ್ರಿಕ್ಸ್‌ ಹೆಡ್‌ಲೈಟ್‌ಗಳು, ಹೊಸ ಬಂಪರ್, ಸ್ವಲ್ಪ ತಿರುಗಿಸಲ್ಪಟ್ಟ ಗ್ರಿಲ್‌ಗಳು ವಿಶೇಷವಾಗಿದೆ. 18 ಇಂಚಿನ ಅಲಾಯ್ ಚಕ್ರಗಳು, ಹಿಂಭಾಗದ ಎಲ್‌ಇಡಿ ಟೈಲ್‌ ಲೈಟ್‌ಗಳು ಹೊಸದಾಗಿ ಸೇರ್ಪಡೆಗೊಂಡಿವೆ.

VW ಸಂಸ್ಥೆಯಿಂದ ಸ್ಪೋರ್ಟ್ಸ್ ಕಾರು ಬಿಡುಗಡೆ

ಈ ಎಸ್‌ಯುವಿ ನೀಲಿ, ಬಿಳಿ, ಕಪ್ಪು, ಬೂದು, ಸಿಲ್ವರ್‌, ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ, ಇದರಲ್ಲಿ ಬಹಳಷ್ಟು ಬದಲಾವಣೆಗಳಿಲ್ಲವಾದರೂ, ಹಿಂದಿನ ಎಸ್‌ಯುವಿಗಿಂತ ಹೆಚ್ಚು ಬೋಲ್ಡ್‌ ಆಗಿದೆ ಎನ್ನಬಹುದಾಗಿದೆ.

ಒಳಾಂಗಣದಲ್ಲಿ ಕೂಡ ಮೂರು-ವಲಯದ ಟಚ್‌ಸ್ಕ್ರೀನ್‌ ಕ್ಲೈಮೇಟ್‌ ಕಂಟ್ರೋಲರ್ ಇದಕ್ಕೆ ಉತ್ತಮ ಲುಕ್ ನೀಡುತ್ತದೆ. ವೋಕ್ಸ್‌ವ್ಯಾಗನ್‌ ಟೈಗೂನ್‌ನಲ್ಲಿ ಕಂಡುಬಂದಿದ್ದ ಹೊಸ ಸ್ಟೀರಿಂಗ್‌ ವ್ಹೀಲ್‌ ಇದರಲ್ಲಿಯೂ ಕಾಣಬಹುದು. ಕಾರಿನ ಮಧ್ಯದಲ್ಲಿ ಬ್ರ್ಯಾಂಡ್‌ನ ಹೊಸ ಲೋಗೋ (LOGO) ಇನ್ನಷ್ಟು ಆಕರ್ಷಕವಾಗಿದೆ.

ಇದರಲ್ಲಿ 2.0 ಲೀಟರ್‌ ನಾಲ್ಕು ಸಿಲಿಂಡರ್‌ ಟರ್ಬೋ ಪೆಟ್ರೋಲ್‌ ಮೋಟಾರ್‌ ಅನ್ನು ಒಳಗೊಂಡಿದೆ. 7 ಸ್ಪೀಡ್‌ನ ಡ್ಯುಯಲ್‌ ಕ್ಲಚ್‌ ಅಟೊಮೆಟಿಕ್‌ ಗೇರ್‌ಬಾಕ್ಸ್‌ ಹೊಂದಿರುವ ಇಂಜಿನ್‌ ಗರಿಷ್ಠ 190 ಎಚ್‌ಪಿ ಪವರ್ ಮತ್ತು 320 ಎನ್‌ಎಂ ಪೀಕ್‌ ಟಾರ್ಕ್ ನೀಡಲಿದೆ. ಹೊಸ ಎಸ್‌ಯುವಿಯಲ್ಲಿ ಕೂಡ ವೋಕ್ಸ್‌ವ್ಯಾಗನ್‌ 4x4  ಅಂದರೆ 4 ಮೋಷನ್‌ ಆಲ್‌ ವ್ಹೀಲ್‌ ಡ್ರೈವ್ ಸೌಲಭ್ಯವನ್ನು ಮುಂದುವರಿಸಲಿದೆ.

ಹಿಂದಿನ ಮಾದರಿಗಿಂತ ದೊಡ್ಡದು ಅಂದರೆ 10 ಇಂಚಿನ ಇನ್ಫೊಟೈನ್‌ಮೆಂಟ್‌ ವ್ಯವಸ್ಥೆ, ಪ್ಯಾನರೋಮಿಕ್‌ ಸನ್‌ರೂಫ್‌, ಆ್ಯಂಡ್ರಾಯ್ಡ್‌ ಆಟೋ ಮತ್ತು ಆ್ಯಪಲ್‌ ಕಾರ್‌ ಪ್ಲೇ, ಐಸೋಫಿಕ್ಸ್‌ (ISOFIX) ಆ್ಯಂಕರ್‌ಗಳು, ಟೈರ್‌ ಪ್ರೆಷರ್‌ ಮಾನಿಟರ್‌, ಹಿಲ್‌ ಸ್ಟಾರ್ಟ್‌ ಮತ್ತು ಡಿಸೆಂಟ್‌ ಅಸಿಸ್ಟ್‌ ಮತ್ತು ಡ್ರೈವರ್‌ ಅಲರ್ಟ್‌ ಸಿಸ್ಟಮ್‌ಗಳು, , 6 ಏರ್‌ಬ್ಯಾಗ್‌ಗಳು, ಎಬಿಎಸ್‌, ಇಎಸ್‌ಪಿ, ರೇರ್‌ ವ್ಯೂ ಕ್ಯಾಮೆರಾ ಮತ್ತು ಚಾಲಕರ ಅಲರ್ಟ್‌ ವ್ಯವಸ್ಥೆಯಂತಹ ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಹೊಂದಿದೆ.

ಇದು ಮಾರುಕಟ್ಟೆಯಲ್ಲಿ ಎದುರಾಳಿಗಳಾದ ಹ್ಯುಂಡೈ ಟಕ್ಸನ್‌, ಸಿಟ್ರೋನ್ ಸಿ5, ಕಿಯಾ ಸೆಲ್ಟೋಸ್‌, ಸ್ಕೋಡಾ ಕುಷಾಕ್ ಮತ್ತು ಜೀಪ್‌ ಕಂಪಾಸ್‌ಗೆ ಸ್ಪರ್ಧೆ ನೀಡಲಿದೆ.

click me!