Retro cassette player: ರೆಟ್ರೋದತ್ತ ಪೋರ್ಷೆ ಒಲವು, ಐಷಾರಾಮಿ ಕಾರಿನಲ್ಲಿ ಕ್ಯಾಸೆಟ್‌ ಮೂಲಕ ಕೇಳಿ ಹಾಡು!

By Suvarna News  |  First Published Dec 7, 2021, 8:11 PM IST
  • ಭಾರತದ ಐಷಾರಾಮಿ ಹಾಗೂ ಸ್ಪೋರ್ಟ್ಸ್‌ ಕಾರು ಪೋರ್ಶೆ
  • ಹಳೆಯ ಕಾಲದ ಆಡಿಯೋ ಟೇಪ್‌ ಪರಿಚಯಿಸಲು ಮುಂದಾದ ಪೊರ್ಶೆ
  • ರೆಟ್ರೋ ಹಾಡುಗಳನ್ನು ಆಲಿಸುವ ಸೌಲಭ್ಯ ಒದಗಿಸಲಿದೆ ಪೋರ್ಶೆ

ನವದೆಹಲಿ(ಡಿ.07): ಭಾರತದ ಐಷಾರಾಮಿ ಹಾಗೂ ಸ್ಪೋರ್ಟ್ಸ್‌ ಕಾರುಗಳ (Sports car)  ವಲಯದಲ್ಲಿ ಮುಂಚೂಣಿಯಲ್ಲಿರುವ  ಪೋರ್ಶೆ(Porshe)! ಐಷಾರಾಮಿ (Laxury) ಕಾರು ಕಂಪನಿ ಪೋರ್ಶೆ, ತನ್ನ ಕಾರುಗಳಲ್ಲಿ ಹಳೆಯ ಕಾಲದ ಆಡಿಯೋ ಟೇಪ್‌ಗಳಲ್ಲಿ, ರೆಟ್ರೋ ಹಾಡುಗಳನ್ನು ಆಲಿಸುವ ಸೌಲಭ್ಯ ಒದಗಿಸಲಿದೆ. ಈ ಮೂಲಕ ಯುವಜನತೆಯ ಜೊತೆಜೊತೆಗೆ, 70 ಹಾಗೂ 80ನೇ ದಶಕದ ಜನರನ್ನು ಕೂಡ ಆಕರ್ಷಿಸಲು ಮುಂದಾಗಿದೆ.

ಇದಕ್ಕಾಗಿ ಪೋರ್ಶೆ, ಸಂಗೀತಗಾರ ನಿಕೋ ಬಾಕ್ಸ್‌ಪಿನ್‌ (Niko Bakspin) ಎಂಬ ವ್ಯಕ್ತಿಯೊಂದಿಗೆ ಕೈಜೋಡಿಸಿದೆ. ‘ಬ್ಯಾಕ್‌ 2 ಟೇಪ್‌’ (Back2Tape) ಎನ್ನುವ ಈ ಹೊಸ ಪ್ರಯತ್ನ ನಿಮ್ಮೆಲ್ಲರ ಬಾಲ್ಯದ ನೆನಪುಗಳನ್ನು ತಾಜಾಗೊಳಿಸುವ ಕ್ಯಾಸೆಟ್‌ಗಳನ್ನು ಒಳಗೊಂಡಿರಲಿದೆ. ಇದಷ್ಟೇ ಅಲ್ಲ, ಇದು ಆಡಿಯೋ ಟೇಪ್‌, ಕೈಯಿಂದ ಪೇಯಿಂಟ್‌(hand-painted) ಮಾಡಲಾದ ಮತ್ತು ಸಹಿ ಇರುವಂತಹ ಟೇಪ್‌ ಪ್ಲೇಯರ್‌ ಹಾಗೂ ಒಂದು ರಸ್ತೆಯ ನಕಾಶೆಯನ್ನು ಕೂಡ ಒಳಗೊಂಡಿರಲಿದೆ.

Latest Videos

undefined

80 ವರ್ಷದ ಹುಟ್ಟುಹಬ್ಬಕ್ಕೆ 80ನೇ ಪೊರ್ಶೆ ಕಾರು ಖರೀದಿ; ಕಾರು ಕ್ರೇಜ್‌‌ಗೆ ಸರಿಸಾಟಿ ಇಲ್ಲ!

70 ಹಾಗೂ 80ನೇ ದಶಕದ ರೆಟ್ರೋ ಮಾದರಿಯ ಮ್ಯೂಸಿಕ್‌ ಪ್ಲೇಯರ್‌ ಮಾದರಿಯನ್ನು ಮರುಸೃಷ್ಟಿಸಲು ಪೋರ್ಶೆ ಮತ್ತು ನಿಕೊ ಬಾಕ್ಸ್‌ಪಿನ್‌ ಕೈಜೋಡಿಸಿದ್ದು, ಇದು ಸೀಮಿತ ಕಾರುಗಳಲ್ಲಿ ಮಾತ್ರ ಲಭ್ಯವಿರಲಿದೆ. ಇದಕ್ಕಾಗಿ ಈ ವರ್ಷದ ಏಪ್ರಿಲ್‌ನಲ್ಲಿ, ಪೋರ್ಶೆ, ತಾವು ಬ್ಯಾಕ್‌ಸ್ಪಿನ್‌ ಅವರೊಂದಿಗೆ ಹಿಂದಿನ ದಶಕಗಳಲ್ಲಿ ಯೂರೋಪ್‌ಗಳಲ್ಲಿ ಪ್ರಸಿದ್ಧವಾಗಿದ್ದ ಹಿಪ್‌-ಹಾಪ್‌ ಸಂಸ್ಕೃತಿ ಕುರಿತು ಅರಿಯಲು ಆ ದೇಶಗಳಿಗೆ ಪಯಣ ಕೈಗೊಳ್ಳುವುದಾಗಿ ಘೋಷಿಸಿತ್ತು.

ಈ ಹೊಸ ಉಪಕ್ರಮದ ಬಗ್ಗೆ  ವಿಶ್ವಾಸ ವ್ಯಕ್ತಪಡಿಸಿರುವ ಬ್ಯಾಕ್‌ಸ್ಪಿನ್‌, “ಹಿಪ್‌-ಹಾಪ್‌ ಎಂಬುದು ಒಂದು ಬತ್ತದ ಉತ್ಸಾಹದಂತೆ. ನೀವು ಯಾವುದೇ ಪ್ರದೇಶಕ್ಕೆ ಸೇರಿದ್ದರೂ, ನಿಮ್ಮ ಸಂಗೀತ ಆಸಕ್ತಿ ಏನೇ ಇದ್ದರೂ, ಹಿಪ್‌-ಹಾಪ್‌ ನಿಮಗೆ ಹೊಸ ಕ್ರಿಯಾತ್ಮಕ ಕೆಲಸಗಳಿಗೆ ಪ್ರೇರಣೆ ನೀಡುತ್ತದೆ” ಎಂದಿದ್ದಾರೆ.

3 ಕೋಟಿ ಬೆಲೆಯ ಪೊರ್ಶೆ 911 ಟರ್ಬೋ S ಕಾರು ಸಂಪೂರ್ಣ ಉಚಿತ; ಒಂದೇ ಕಂಡೀಷನ್!

ಈ ಆಡಿಯೋ ಪ್ಲೇಯರ್‌ ಅನ್ನು ಕೂಡ ಹಿಪ್‌-ಹಾಪ್‌ ಸಂಗೀತ ವಲಯದ ಆಯ್ದ ಸೃಜನಾತ್ಮಕ ಕಲಾವಿದರ ವಿನ್ಯಾಸಗೊಳಿಸುತ್ತಿದ್ದಾರೆ. ಇದರೊಂದಿಗೆ ಬರಲಿರುವ ನಕಾಶೆಯ ಪುಸ್ತಕ ಕೂಡ ಹಿಪ್‌-ಹಾಪ್‌ ಸಂಸ್ಕೃತಿಯ ಚಿತ್ರಣ ಅನಾವರಣಗೊಳಿಸಲಿದೆ. ಇದು ಸದ್ಯ ಕೇವಲ 50 ಪ್ರತಿಗಳಷ್ಟೇ ಮುದ್ರಣವಾಗಲಿದೆ.

ಈ ವಿನೂತನ ಅಳವಡಿಕೆಗಾಗಿ ಪೋರ್ಶೆ, ಕ್ಯಾಸೆಟ್‌ ಹಾಗೂ ಆಡಿಯೋ ಟೇಪ್‌ ಸಾಗಿ ಬಂದ ಪಯಣ, 70 ಹಾಗೂ 80ರ ದಶಕಗಳಲ್ಲಿ ಜಗತ್ತಿನಾದ್ಯಂತ ಹಬ್ಬಿದ್ದ ಕ್ಯಾಸೆಟ್‌ ಸಂಸ್ಕೃತಿ, (Casette Culture) ಜೀವನದ ಭಾಗವೇ ಆಗಿದ್ದ ಕ್ಯಾಸೆಟ್‌ ನಿಧಾನವಾಗಿ ಕಣ್ಮರೆಯಾದ ಕುರಿತು ವಿಡಿಯೋ ತುಣುಕುಗಳನ್ನು ಕೂಡ ಇದರೊಂದಿಗೆ ಬಿಡುಗಡೆಗೊಳಿಸಲಿದೆ.

ಕ್ಯಾಸೆಟ್‌ ಯುಗವನ್ನು ಮರುಕಳಿಸುವ ಅನುಭವವನ್ನು ಜನರಿಗೆ ಅದರಲ್ಲೂ ಯುವಜನತೆಗೆ ತಲುಪಿಸಲು ಪೋರ್ಶೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇದನ್ನು ಸಾಮಾನ್ಯ ಡೀಲರ್‌ಗಳನ್ನು ಬಿಟ್ಟು, ಪ್ರಚಾರಕ್ಕಾಗಿ ಹೊಸ ಮಾರ್ಗ ಅರಸಿಕೊಂಡಿದೆ.ಏಷಿಯಾ ಮತ್ತು ಯೂರೋಪ್‌ನಲ್ಲಿ ಇದರ ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗಳನ್ನು ತೆರೆಯಲಿದ್ದು, ಜನರಿಗೆ ಕ್ಯಾಸೆಟ್‌ ಹಾಡುಗಳ ಅನುಭವ ಒದಗಿಸಲಿದೆ. ಮುಂದಿನ ವರ್ಷದ ವೇಳೆ ಅಮೆರಿಕದಲ್ಲಿ ಕೂಡ ತನ್ನ ಮೊದಲ ಸ್ಟುಡಿಯೋ ಆರಂಭಿಸುವುದಾಗಿ ಕಂಪನಿ ತಿಳಿಸಿದೆ.

ಜರ್ಮನಿ (Germany) ಮೂಲದ ಪೋರ್ಶೆ, ಐಷಾರಾಮಿ ಕಾರುಗಳು ಹಾಗೂ ಸ್ಪೋರ್ಟ್ಸ್‌ ಕಾರುಗಳು, ಎಸ್‌ಯುವಿ(SUV) ಹಾಗೂ ಸೆಡಾನ್‌ (Sedan) ಕಾರುಗಳನ್ನು ತಯಾರಿಸುತ್ತದೆ.

click me!