ನವದೆಹಲಿ(ಡಿ.06): ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ಪ್ರಸಕ್ತ ವರ್ಷವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಹೋಂಡಾ ಇಂಡಿಯಾ(Honda India) ವಿಶೇಷ ಆಫರ್ ಘೋಷಿಸಿದೆ. ಹೋಂಡಾ ಕಾರುಗಳ(Honda cars) ಮೇಲೆ ಭರ್ಜರಿ ಡಿಸ್ಕೌಂಟ್(Discounts) ಘೋಷಲಾಗಿದೆ. ವಿಶೇಷ ಅಂದರೆ ಹೋಂಡಾದ ಬಹುತೇಕ ಎಲ್ಲಾ ಕಾರುಗಳ ಮೇಲೆ ರಿಯಾಯಿತಿ ಆಫರ್ ನೀಡಲಾಗಿದೆ. ಈ ವರ್ಷಾಂತ್ಯದ ಆಫರ್(Year End offers) ಡಿಸೆಂಬರ್ 31, 2021ಕ್ಕೆ ಅಂತ್ಯಗೊಳ್ಳಲಿದೆ.
ಹೋಂಡಾದ ಅಮೇಜ್, ಜಾಝ್, ಹೊಂಡಾ ಸಿಟಿ, 4ನೇ ಜನರೇಶನ್ ಹೋಂಡಾ ಸಿಟಿ ಹಾಗೂ WR-V ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ವರ್ಷಾಂತ್ಯದ ಆಫರ್ ಕ್ಯಾಶ್ ಡಿಸ್ಕೌಂಟ್(Cash Discounts), ಎಕ್ಸ್‌ಚೇಂಜ್ ಬೋನಸ್, ಲೋಯಲ್ಟಿ ಬೋನಸ್, ಕಾರ್ಪೋರೇಟ್ ಡಿಸ್ಕೌಂಟ್ ಒಳಗೊಂಡಿದೆ. ಈ ವಿಶೇಷ ಆಫರ್ ಕಾರಿನಿಂದ ಕಾರಿಗೆ ಬದಲಾಗಲಿದೆ.
Tata discount offers: ಡಿಸೆಂಬರ್ ತಿಂಗಳ ಆಫರ್ ಘೋಷಿಸಿದ ಟಾಟಾ, ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್!
ಹೊಂಡಾ ಅಮೇಜ್
ಹೋಂಡಾ ಅಮೇಜ್ ಕಾರಿನ ಮೇಲೆ ಗರಿಷ್ಠ 15,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರಲ್ಲಿ ಲೋಯಲ್ಟಿ ಬೋನಸ್ 5,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 6,000 ರೂಪಾಯಿ, ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಘೋಷಿಸಲಾಗಿದೆ.
ಹೊಂಡಾ WR-V:
ಹೋಂಡಾ WR-V ಕಾರಿನ ಮೇಲೆ ಗರಿಷ್ಠ 28,000 ರೂಪಾಯಿ ಆಫರ್ ನೀಡಲಾಗಿದೆ. ಇದರಲ್ಲಿ ಎಕ್ಸ್‌ಚೇಂಜ್ ಡಿಸ್ಕೌಂಟ್ 10,000 ರೂಪಾಯಿ, ಲೋಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 9,000 ರೂಪಾಯಿ ಇನ್ನು ಕಾರ್ಪೋರೇಟ್ ಡಿಸ್ಕೌಂಟ್ 4,000 ರೂಪಾಯಿ ಘೋಷಿಲಾಗಿದೆ.
Discount offers: ಹ್ಯುಂಡೈ ವರ್ಷಾಂತ್ಯದ ಆಫರ್ ಘೋಷಣೆ, ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್!
ಹೊಂಡಾ ಸಿಟಿ;
ಹೋಂಡಾ ಸಿಟಿ ಕಾರಿನ ಮೇಲೆ ಗರಿಷ್ಠ 45,108 ರೂಪಾಯಿ ಘೋಷಿಲಾಗಿದೆ. ಹೋಂಡಾ ಸಿಟಿ ಎಲ್ಲಾ ವೇರಿಯೆಂಟ್ ಮೇಲೆ ಈ ಆಫರ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 7,500 ರೂಪಾಯಿ, ಕಾರಿನ ಆಕ್ಸೆಸರಿ ಡಿಸ್ಕೌಂಟ್ 8,108 ರೂಪಾಯಿ, ಎಕ್ಸ್‌ಚೇಂಜ್ ಡಿಸ್ಕೌಂಟ್ 15,000 ರೂಪಾಯಿ, ಹೆಚ್ಚುವರಿಯಾಗಿ ಲೋಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 9,000 ರೂಪಾಯಿ, ಕಾರ್ಪೋರೇಟ್ ಡಿಸ್ಕೌಂಟ್ 8,000 ರೂಪಾಯಿ ನೀಡಲಾಗಿದೆ.
ಹೋಂಡಾ ಜಾಝ್:
ಹೋಂಡಾ ಜಾಝ್ ಕಾರಿನ ಮೇಲೆ 35,147 ರೂಪಾಯಿ ಘೋಷಿಸಲಾಗಿದೆ. 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ. 12,147 ರೂಪಾಯಿ ಮೊತ್ತದ ಆಕ್ಸೆಸರಿ ಡಿಸ್ಕೌಂಟ್ ರೂಪದಲ್ಲಿ ಸಿಗಲಿದೆ. ಕಾರು ಎಕ್ಸ್‌ಚೇಂಜ್ 5,000 ರೂಪಾಯಿ, ಲೋಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 9,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಬೋನಸ್ ಘೋಷಿಸಲಾಗಿದೆ.
ವರ್ಷಾಂತ್ಯದ ಆಫರ್‌ನಿಂದ ಕಾರು ಖರೀದಿಸಲು ಇದು ಸಕಾಲವಾಗಿದೆ. ಸ್ಟಾಕ್ ಕ್ಲೀಯರೆನ್ಸ್‌ಗಾಗಿ ಹಲವು ಕಂಪನಿಗಳು ವರ್ಷಾಂತ್ಯದ ಆಫರ್ ಘೋಷಿಸಿದೆ. ಜನವರಿ 2022ರಿಂದ ಕಾರುಗಳ ಬೆಲೆ ಹೆಚ್ಚಳವಾಗುತ್ತಿದೆ. ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಬೆಲೆ ಏರಿಕೆ ಘೋಷಿಸಿದೆ. ಕಾರು ಉತ್ಪಾದನೆ ವೆಚ್ಚ ಹೆಚ್ಚಾಗಿರುವ ಕಾರಣ ಕಾರಿನ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ 2021ರ ವರ್ಷಾಂತ್ಯದಲ್ಲಿ ಕಾರು ಖರೀದಿಗೆ ಉತ್ತಮ ಕಾಲವಾಗಿದೆ.
ಶೀಘ್ರದಲ್ಲೇ ಎಲ್ಲಾ ಕಾರು ಕಂಪನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಕೊರೋನಾ ವೈರಸ್ ಹಾಗೂ ಚಿಪ್ ಕೊರತೆಯಿಂದ ಭಾರತದಲ್ಲಿ ಆಟೋಮೊಬೈಲ್ ಕಂಪನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಳೆದೆರಡು ವರ್ಷದಿಂದ ಮಾರಾಟದಲ್ಲೂ ಕುಸಿತ ಕಂಡಿದೆ. ಇದೀಗ ಮಾರಾಟ ಚೇತರಿಕೆ ಹಾಗೂ ವರ್ಷಾಂತ್ಯದ ಸ್ಟಾಕ್ ಕ್ಲೀಯರ್ ಮಾಡಲು ಭರ್ಜರಿ ಡಿಸ್ಕೌಂಟ್ ನೀಡಿದೆ.