ಪದಕ ಮಿಸ್ ಮಾಡಿಕೊಂಡ ಒಲಿಂಪಿಕ್ ಪಟುಗಳಿಗೆ ಟಾಟಾ ಅಲ್ಟ್ರೋಜ್ ಕಾರು ಗಿಫ್ಟ್!

Published : Aug 27, 2021, 09:53 PM ISTUpdated : Aug 27, 2021, 10:16 PM IST
ಪದಕ ಮಿಸ್ ಮಾಡಿಕೊಂಡ ಒಲಿಂಪಿಕ್ ಪಟುಗಳಿಗೆ ಟಾಟಾ ಅಲ್ಟ್ರೋಜ್ ಕಾರು ಗಿಫ್ಟ್!

ಸಾರಾಂಶ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಂಚಿತರಿಗೆ ಟಾಟಾ ಮೋಟಾರ್ಸ್ ಗಿಫ್ಟ್ ಸ್ವಲ್ಪದರಲ್ಲಿ ಗೆಲುವಿನಿಂದ ವಂಚಿತರಾದ ಆದರೆ ಶತಕೋಟಿ ಜನರಿಗೆ ಸ್ಫೂರ್ತಿ ಟಾಟಾ ಅಲ್ಟ್ರೋಜ್ ಕಾರು ಉಡುಗೊರೆಯಾಗಿ ನೀಡಿದ ಟಾಟಾ ಮೋಟಾರ್ಸ್

ಬೆಂಗಳೂರು(ಆ.27):  ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಕ್ರೀಡಾಪಟುಗಳಿಗೆ ಟಾಟಾ ಮೋಟಾರ್ಸ್ ಭರ್ಜರಿ ಗಿಫ್ಟ್ ನೀಡಿದೆ. ಟಾಟಾದ ಅತ್ಯುತ್ತಮ ಹಾಗೂ 5 ಸ್ಟಾರ್ ಸುರಕ್ಷತೆಯ ಟಾಟಾ ಅಲ್ಟ್ರೋಜ್ ಕಾರು ಉಡುಗೊರೆಯಾಗಿ ನೀಡಿದೆ.  

ಚಿನ್ನದ ಹುಡುಗನಿಗೆ ರಕ್ಷಣಾ ಸಚಿವರಿಂದ ಸನ್ಮಾನ; ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು!

ಭಾರತೀಯ ಕ್ರೀಡಾಪಟುಗಳ ಪದಕವನ್ನು ಕೂದಲೆಳೆಯುವ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ.  ಅವರು ಪದಕ ಗೆಲ್ಲದೇ ಇರಬಹುದು ಆದರೆ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಅತ್ಯುತ್ತಮ ಪ್ರದರ್ಶನಗಳ ಮೂಲಕ ಶತಕೋಟಿ ಜನರನ್ನು ಪ್ರೇರೇಪಿಸಿದ್ದಾರೆ. ಈ ಕ್ರೀಡಾಪಟುಗಳನ್ನು ಹುರಿದುಂಬಿಸಲು ಟಾಟಾ ಮೋಟಾರ್ಸ್ ಹೈ ಸ್ಟ್ರೀಟ್ ಗೋಲ್ಡ್ ಬಣ್ಣದ ಆಲ್ಟ್ರೋಜ್ ಅನ್ನು ಪ್ರತಿಯೊಬ್ಬ ಆಟಗಾರರಿಗೂ ಹಸ್ತಾಂತರಿಸಲಾಯಿತು. 

ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಅವರು ತೋರಿಸಿದ ಬದ್ಧತೆ ಮತ್ತು ಅದಮ್ಯ ಉತ್ಸಾಹಗಳಿಂದಾಗಿ ನಮ್ಮ ಕ್ರೀಡಾಪಟುಗಳ ಬಗ್ಗೆ ನಮಗೆ ಬಹಳಷ್ಟು ಹೆಮ್ಮೆ ಇದೆ ಮತ್ತು ಇಂದು ಅವರೊಂದಿಗೆ ಒಂದೇ ವೇದಿಕೆಯನ್ನು ಹಂಚಿಕೊಳ್ಳುವುದು ನನಗೆ ಬಹಳ ಗೌರವವೆನಿಸುತ್ತಿದೆ. ಅವರ ಉತ್ಸಾಹವನ್ನು ಪ್ರತಿಧ್ವನಿಸುವುದು ಮತ್ತು ಅವರ ಕಠಿಣ ಪರಿಶ್ರಮವನ್ನು ಗುರುತಿಸುವುದಕ್ಕಾಗಿ ನಾವು ಅವರಿಗೆ ಪ್ರೀಮಿಯಂ ಹ್ಯಾಚ್‍ಬ್ಯಾಕ್‍ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಟಾಟಾ ಆಲ್ಟ್ರೋಜ್ ಅನ್ನು ಉಡುಗೊರೆಯಾಗಿ ನೀಡಲು ಸಂತೋಷಪಡುತ್ತೇವೆ. ಅವರು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿ ಮುಂದುವರಿಯುತ್ತಿದ್ದಂತೆ, ಅವರ ಭವಿಷ್ಯಕ್ಕಾಗಿ ನಾವು ಅವರಿಗೆ ಶುಭ ಹಾರೈಸುತ್ತೇವೆ ಮತ್ತು ಮುಂದಿನ ವರ್ಷಗಳಲ್ಲಿ ಅವರು ನಮ್ಮ ದೇಶಕ್ಕೆ ಯಶಸ್ಸನ್ನು ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ಟಾಟಾ ಮೋಟಾರ್ಸ್‍ನ ಪ್ಯಾಸೆಂಜರ್ ವೆಹಿಕಲ್ ವ್ಯವಹಾರಗಳ ಅಧ್ಯಕ್ಷರಾದ ಶೈಲೇಶ್ ಚಂದ್ರ ಹೇಳಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌ ಹೀರೋಗಳ ಜತೆ ಮನಬಿಚ್ಚಿ ಮಾತನಾಡಿದ ಪ್ರಧಾನಿ ಮೋದಿ

ಅಲ್ಟ್ರೋಜ್ ಕಾರು ಉಡುಗೊರೆಯಾಗಿ ಪಡೆದ ಕ್ರೀಡಾಪಟುಗಳು
1    ನೇಹಾ ಗೋಯಲ್  ( ಹಾಕಿ)         
2    ರಾಣಿ ರಾಂಪಾಲ್   ( ಹಾಕಿ)         
3    ನವನೀತ್ ಕೌರ್  ( ಹಾಕಿ)      
4    ಉದಿತಾ      ( ಹಾಕಿ)   
5    ವಂದನಾ ಕಟಾರಿಯಾ ( ಹಾಕಿ)         
6    ನಿಶಾ ವಾರ್ಸಿ  ( ಹಾಕಿ) 
7    ಸವಿತಾ ಪುನಿಯಾ   ( ಹಾಕಿ)        
8    ಮೋನಿಕಾ ಮಲಿಕ್   ( ಹಾಕಿ)       
9    ದೀಪ್ ಗ್ರೇಸ್ ಎಕ್ಕಾ  ( ಹಾಕಿ)        
10    ಗುರ್‍ಜಿತ್ ಕೌರ್   ( ಹಾಕಿ)        
11    ನವಜೋತ್ ಕೌರ್  ( ಹಾಕಿ)         
12    ಶರ್ಮಿಳಾ ದೇವಿ   ( ಹಾಕಿ)
13    ಲಾಲ್ರೆಮ್ಸಿಯಾಮಿ   ( ಹಾಕಿ)
14    ಸುಶೀಲಾ ಚಾನು  ( ಹಾಕಿ)
15    ಸಲೀಮಾ ಟೆಟೆ   ( ಹಾಕಿ)
16    ನಿಕ್ಕಿ ಪ್ರಧಾನ್   ( ಹಾಕಿ)
17    ರಜನಿ ಎತಿಮರ್ಪು   ( ಹಾಕಿ)
18    ರೀನಾ ಖೋಕರ್   ( ಹಾಕಿ)
19    ನಮಿತಾ ತೋಪ್ಪೋ   ( ಹಾಕಿ)
20    ಅದಿತಿ ಅಶೋಕ್   ( ಗಾಲ್ಫ್)
21    ದೀಪಕ್ ಪುನಿಯಾ    (ಕುಸ್ತಿ 86 ಕೆಜಿ)
22    ಕಮಲ್‍ಪ್ರೀತ್ ಕೌರ್   ( ಡಿಸ್ಕಸ್ ಥ್ರೋ)
23    ಸತೀಶ್ ಕುಮಾರ್    (ಬಾಕ್ಸಿಂಗ್ 91 ಕೆಜಿ)
24    ಪೂಜಾ ರಾಣಿ    (ಬಾಕ್ಸಿಂಗ್ 75 ಕೆಜಿ)

ಆಲ್ಟ್ರೋಜ್ ಪ್ರೇಕ್ಷಕರಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿದೆ.  ಯಶಸ್ಸಿನ ಹೊಸ ಎತ್ತರವನ್ನು ತಲುಪುತ್ತಿದೆ. ಆಲ್ಟ್ರೋಜ್ ಆಧುನಿಕ ವಿನ್ಯಾಸ, 5 ಸ್ಟಾರ್ ಗ್ಲೋಬಲ್ NCAP ಸುರಕ್ಷತೆ ಮತ್ತು ಟಚ್‍ಸ್ಕ್ರೀನ್ ಇನ್ಫೋಟೈನ್‍ಮೆಂಟ್, ಲೆದರ್ ಸೀಟ್‍ಗಳು, iRA ಸಂಪರ್ಕಿತ ಕಾರ್ ತಂತ್ರಜ್ಞಾನ, ಸ್ವಯಂಚಾಲಿತ ಹೆಡ್‍ಲ್ಯಾಂಪ್‍ಗಳು, ಹಿಂಭಾಗದ ಎಸಿ ವೆಂಟ್‍ಗಳು ಮತ್ತು ಇನ್ನೂ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.
 

 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ