ಬೆಂಗಳೂರು(ಆ.27): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಯಡಿಯೂರಪ್ಪ 1 ಕೋಟಿ ರೂಪಾಯಿ ಬೆಲೆಯ ಟೋಯೋಟಾ ವೆಲ್‌ಪೈರ್ ಕಾರು ಖರೀದಿಸಿದ್ದಾರೆ. ಯಡಿಯೂರಪ್ಪ ಖರೀದಿಸಿದ ಈ ದುಬಾರಿ ಕಾರಿನಲ್ಲಿ ಹಲವು ವಿಶೇಷತೆಗಳಿವೆ. ಇಷ್ಟೇ ಅಲ್ಲ ಸೆಲೆಬ್ರೆಟಿಗಳು, ಉದ್ಯಮಿಗಳು, ಇದೀಗ ರಾಜಕೀಯ ನಾಯಕರು ಟೋಯೋಟಾ ವೆಲ್‌ಪೈರ್ ಕಾರಿನತ್ತ ಆಕರ್ಷಿತರಾಗುತ್ತಿದ್ದಾರೆ.
ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!ಬಿಎಸ್ ಯಡಿಯೂರಪ್ಪ ಖರೀದಿಸಿರುವುದು ಬಿಳಿ ಬಣ್ಣದ ಟೋಯೋಟಾ ವೆಲ್‌ಫೈರ್ ಕಾರು. ಜಯನಗರ ಆರ್‌ಟಿಒ ಕಚೇರಿಯಲ್ಲಿ ಈ ಕಾರು ರಿಜಿಸ್ಟ್ರೇಶನ್ ಮಾಡಿಸಲಾಗಿದೆ. ಇನ್ನು ಫ್ಯಾನ್ಸಿ ನಂಬರ್ KA05 ND 4545 ಪಡೆದಿದ್ದಾರೆ.
undefined
ಟೋಯೋಟಾ ವೆಲ್‌ಪೈರ್ ಐಷಾರಾಮಿ ಕಾರಾಗಿದೆ. ದೂರ ಪ್ರಯಾಣ, ಪ್ರಯಾಣದ ನಡುವೆ ವಿಶ್ರಾಂತಿ ಸೇರಿಂತೆ ಹಲವು ಕಾರಣಗಳಿಗೆ ವೆಲ್‌ಫೈರ್ ಹೇಳಿಮಾಡಿಸಿದ ಕಾರು. ಅದೆಷ್ಟೆ ದೂರ ಪ್ರಯಾಣಿಸಿದರೂ ಯಾವುದೇ ಆಯಾಸವಾಗುವುದಿಲ್ಲ. ಇನ್ನು ಗರಿಷ್ಠ ಸುರಕ್ಷತೆ ನೀಡಲಿದೆ. ಜೊತೆಗೆ ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.
ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ರೋಡ್‌ಗಿಳಿದ ಟೋಯೋಟಾ ವೆಲ್‌ಪೈರ್ ಕಾರು ಇದೀಗ ಮಾರುಕಟ್ಟೆಯಲ್ಲಿ ಸೆಲೆಬ್ರೆಟಿಗಳ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ಸಿನಿಮಾ ತಾರೆಯರು ಶೂಟಿಂಗ್ ತೆರಳು, ಮೇಕಪ್ ಸೇರಿಂದಂತೆ ಹಲವು ಉಪಯೋಗಕ್ಕಾಗಿ ವೆಲ್‌ಫೈರ್ ಕಾರನ್ನು ಕ್ಯಾರವಾನ್ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ.
ವೆಲ್‌ಪೈರ್ ಬೆಲೆ:
ಬಿಎಸ್ ಯಡಿಯೂರಪ್ಪ ಖರೀದಿಸಿದ ಟೋಯೋಟಾ ವೆಲ್‌ಫೈರ್ ಕಾರಿನ ಬೆಲೆ 1 ಕೋಟಿ ರೂಪಾಯಿ. ಇದರ ಆರಂಭಿಕ ಬೆಲೆ 89.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಯಿಂದ ಆರಂಭಗೊಳ್ಳುತ್ತದೆ. ಪ್ರತಿಸ್ಪರ್ಧಿ ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಕಾರಿಗಿಂತಲೂ ವೆಲ್‌ಫೈರ್ ದುಬಾರಿಯಾಗಿದೆ. ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಕಾರಿನ ಆರಂಭಿಕ ಬೆಲೆ 71.10 ಲಕ್ಷ ರೂಪಾಯಿಯಿಂದ 1.46 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಗರಿಷ್ಠ ಬೆಲೆಯಾಗಿದೆ.
ನಿಕಟಪೂರ್ವ, ಅತಿ ನಿಕಟಪೂರ್ವ ಮುಖ್ಯಮಂತ್ರಿ, ಸುಡುಗಾಡೇ ಇರಲಿ: ಬಿಎಸ್‌ವೈಗೆ ಯತ್ನಾಳ್ ಟಾಂಗ್
ಟೋಯೋಟಾ ವೆಲ್‌ಫೈರ್ ಕಾರು ಪೆಟ್ರೋಲ್ ಹೈಬ್ರಿಡ್ ಮಾತ್ರ ಲಭ್ಯವಿದೆ. ಆದರೆ ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ. ವಿ ಕ್ಲಾಸ್ ಕಾರಿನಲ್ಲಿ ಪನೋರಮಿಕ್ ಸನ್‌ರೂಫ್ ಲಭ್ಯವಿಲ್ಲ, ಈ ಫೀಚರ್ಸ್ ವೆಲ್‌ಫೈರ್ ಕಾರಿನಲ್ಲಿದೆ.
ಸುರಕ್ಷತೆ:
ಸುರಕ್ಷತೆಯಲ್ಲೂ ಟೋಯೋಟಾ ವೆಲ್‌ಫೈರ್ ಕಾರು ಅಗ್ರಜನಾಗಿದೆ. 9 ಏರ್‌ಬ್ಯಾಗ್, ABS ಹಾಗೂ EBD ಬ್ರೇಕಿಂಗ್ ಸಿಸ್ಟಮ್, ಪಾರ್ಕಿಂಗ್ ಸೆನ್ಸಾರ್ ಹಾಗೂ 360 ಡಿಗ್ರಿ ಕ್ಯಾಮಾರ, ESP ಸೇರಿದಂತ ಅತ್ಯಾಧುನಿಕ ಸೇಫ್ಟಿ ಫೀಚರ್ಸ್ ಲಭ್ಯವಿದೆ.
ಎಂಜಿನ್:
ವೆಲ್‌ಫೈರ್ ಕಾರು 2.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. 180PS ಪವರ್ (@6000rpm) ಹಾಗೂ 235Nm ಟಾರ್ಕ್( @ 4100rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. CVT ಟ್ರಾನ್ಸ್‌ಮಿಶನ್ ಹೊಂದಿರುವ ವೆಲ್‌ಫೈರ್ ಕಾರು ಆಲ್ ವೀಲ್ ಡ್ರೈವಿಂಗ್ ಅನುಭವ ನೀಡಲಿದೆ.