Tiago CNG Test Drive ಟಾಟಾ ಟಿಯಾಗೋ CNG ಕಾರಿನ ಪರ್ಫಾಮೆನ್ಸ್ ಟೆಸ್ಟ್ ಡ್ರೈವ್, ಒಂದೇ ಸ್ವಿಚ್‌ಲ್ಲಿ ಇಂಧನ ಮೋಡ್ ಬದಲು!

Suvarna News   | Asianet News
Published : Jan 29, 2022, 09:25 PM IST
Tiago CNG Test Drive ಟಾಟಾ ಟಿಯಾಗೋ CNG ಕಾರಿನ ಪರ್ಫಾಮೆನ್ಸ್  ಟೆಸ್ಟ್ ಡ್ರೈವ್, ಒಂದೇ ಸ್ವಿಚ್‌ಲ್ಲಿ ಇಂಧನ ಮೋಡ್ ಬದಲು!

ಸಾರಾಂಶ

ಟಾಟಾ ಐಸ್‌ ವಾಹನದ ವಿನ್ಯಾಸಗಳಲ್ಲೇ ಬಂದಿರುವ ಟಾಟಾ ಟಿಯಾಗೋ ಸಿಎನ್‌ಜಿ, ಒಂದೇ ಸಿಎನ್‌ಜಿ ಬಟನ್‌ ಹೊಂದಿದ್ದು, ಇದು ಪೆಟ್ರೋಲ್‌ ಇಂದ ಸಿಎನ್‌ಜಿಗೆ ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

ಬೆಂಗಳೂರು(ಜ.29): 2022ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಮೊದಲ CNG ವಾಹನವೆಂದರೆ ಟಾಟಾ ಟಿಯಾಗೋ CNG. ಸಿಎನ್‌ಜಿ ಹಾಗೂ ಪೆಟ್ರೋಲ್‌ ಬದಲಾವಣೆಗೆ ಒಂದೇ ಐಸಿಯು ಇರುವ ಪ್ರಪ್ರಥಮ ಕಾರು ಈ ಐ-ಸಿಎನ್‌ಜಿ. ಇದರ ಚಾಲನಾ ಅನುಭವದ ವಿವರ ಇಲ್ಲಿದೆ..

ಟಾಟಾ ಐಸ್‌ ವಾಹನದ ವಿನ್ಯಾಸಗಳಲ್ಲೇ ಬಂದಿರುವ ಟಾಟಾ ಟಿಯಾಗೋ ಸಿಎನ್‌ಜಿ, ಒಂದೇ ಸಿಎನ್‌ಜಿ ಬಟನ್‌ ಹೊಂದಿದ್ದು, ಇದು ಪೆಟ್ರೋಲ್‌ ಇಂದ ಸಿಎನ್‌ಜಿಗೆ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿಯೇ ಇದನ್ನು ವಿಶೇಷವಾಗಿ ಐ-ಸಿಎನ್‌ಜಿ (I-CNG) ಎಂದು ಹೆಸರಿಲಾಗಿದೆ. ಐ ಎಂದರೆ ಇಂಪ್ರೆಸೀವ್‌ ಫರ್ಪಾಮೆನ್ಸ್‌ ಎಂದು ಕಂಪನಿ ವ್ಯಾಖ್ಯಾನಿಸಿದೆ.

Car Delivery ಕಾರು ಡೆಲಿವರಿ ವೇಳೆ ಎಡವಟ್ಟು, ಶೋ ರೂಂನಲ್ಲಿ ನಿಂತಿದ್ದ ಮಹಿಳೆ, ಕೂತಿದ್ದ ವ್ಯಕ್ತಿಗೆ ಡಿಕ್ಕಿ!

ಇದರ ಎದುರಿಗೆ ದೊಡ್ಡ ಗ್ರಿಲ್‌, ಟಾಟಾಲೋಗೋ,ಕ್ರೋಮ್‌ ಸ್ಟ್ರೈಪ್‌ ಇದೆ. ಸಾಮಾನ್ಯವಾಗಿ ಇತರ ವಾಹನಗಳಲ್ಲಿ ಪೆಟ್ರೋಲ್ ಹಾಗೂ ಸಿಎನ್‌ಜಿಗಳಿಗೆ ಬೇರೆ ಬೇರೆ ಇಸಿಯು ಬಳಸಲಾಗುತ್ತದೆ. ಇದನ್ನು ಒಂದರಿಂದ ಇನ್ನೊಂದಕ್ಕೆ ಬದಲಾಯಿಸಿದಾಗ ಪರ್ಫಾಮೆನ್ಸ್ನಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಆದರೆ, ಇದರಲ್ಲಿ ಇದರಲ್ಲಿ ಈ ಸಮಸ್ಯೆ ಕಂಡುಬರುವುದಿಲ್ಲ.

ಟಿಯಾಗೋದಲ್ಲಿ ಪ್ರೊಜೆಕ್ಟರ್ ಲೈಟ್‌ಗಳು, ಹಾಲೋಜೆನ್‌ ಹಾಗೂ ರೆಗ್ಯುಲರ್ ಬಲ್ಬ್‌, ಎಲ್ಇಡಿ ಡಿಆರ್‌ಎಲ್‌ಗಳಿವೆ. 3765 ಎಂಎಂ ಉದ್ದದ ಹ್ಯಾಚ್‌ಬ್ಯಾಕ್‌, 14 ಇಂಚುಗಳ ಹೈಪರ್ ಸ್ಟೈಲ್ ಚಕ್ರಗಳು ಹಾಗೂ ಕಾರಿನ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ಗಳಲ್ಲಿ ಬರಲಿವೆ.

Tata Electric Car ವರ್ಷದಲ್ಲಿ 50,000 ಎಲೆಕ್ಟ್ರಿಕ್ ಕಾರು ಮಾರಾಟ ಗುರಿ, ಆಟೋ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಟಾ ನಿರ್ಧಾರ!

ಟಾಟಾ ಟಿಯೋಗಾ ಸಿಎನ್‌ಜಿಯಲ್ಲಿ ಹಲವು ಸುರಕ್ಷತಾ ಅಂಶಗಳಿವೆ. ಇದರಲ್ಲಿ ಒಂದೆಂದರೆ ಫ್ಯುಯಲ್‌ ಲಿಡ್‌. ಇದರ ಬಾಗಿಲು ತೆರೆದಿದ್ದರೆ, ಕಾರು ಮುಂದಕ್ಕೆ ಚಲಿಸುವುದಿಲ್ಲ. ಇದು 35 ಲೀಟರ್ ಫ್ಯುಯಲ್ ಟ್ಯಾಂಕ್ ಕೆಪ್ಯಾಟಿಸಿ ಹೊಂದಿದೆ.

ಕಾರಿನ ಹಿಂಭಾಗದಲ್ಲಿ ಈಗ ಟಾಟಾ ಮೋಟಾರ್ಸ್ ಎಲ್ಲಾ ಕಾರುಗಳಲ್ಲಿ ಬಳಸುತ್ತಿರುವ ವೋಕಲ್ ಫಾರ್ ಲೋಕಲ್ ಹಾಗೂ ಸಿಎನ್ಜಿ ಬ್ಯಾಡ್ಜ್ಗಳನ್ನು ಕಾಣಬಹುದು. ಹಾಗೆಯೇ  ಟಾಟಾ ಟಿಯಾಗೋ ಹಾಗೂ ಐ-ಸಿಎನ್ಜಿ ಲೋಗೊಗಳನ್ನು ಕೂಡ ಕಾಣಬಹುದು. ಕಾರಿನ  ಹಿಂಭಾಗದಲ್ಲಿ ಸಿಂಪಲ್ ಟೈಲ್ ಲೈಟ್ಗಳಿವೆ. ರಿಯರ್ ಬಂಪರ್ನಲ್ಲಿ ಡ್ಯುಯಲ್ ಟೋನ್ ಇದೆ.

Upcoming Cars 6 ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾದ ಟಾಟಾ ಮೋಟಾರ್ಸ್, ಆಟೋ ಕ್ಷೇತ್ರದಲ್ಲಿ ಸಂಚಲನ!

ಇದರ ಬೂಟ್‌ ಸ್ಪೇಸ್‌ನಲ್ಲಿ 60 ಲೀಟರ್ ನ ಸಿಎನ್ಜಿ ಇದೆ. ಇದರ ಗರಿಷ್ಠ 12 ಕೆಜಿ ಸಾಮರ್ಥ್ಯ ಹೊಂದಿದ್ದು, ಒಂದು ಕೆಜಿ ಸಿಎನ್‌ಜಿಗೆ 30 ಕಿಮೀವರೆಗೆ ಮೈಲೇಜ್ ನೀಡಲಿದೆ. ಇಂಟೀರಿಯರ್‌ನಲ್ಲಿ, ಏಳು ಇಂಚಿನ ಹರ್ಮನ್ ಮ್ಯೂಸಿಕ್ ಸಿಸ್ಟಮ್,  ಆ್ಯಂಡ್ರಾಯ್ಡ್ ಆಟೋ, ಆ್ಯಪಲ್ ಪ್ಲೇ ಇದೆ. ಸಿಎನ್ಜಿ ಕಂಟ್ರೋಲ್ ಆಗಿದೆ. ಲಾಕ್, ಅನ್ಲಾಕ್ ಹಾಗೂ ಫಾಗ್ಲ್ಯಾಂಪ್‌ ಕಂಟ್ರೋಲ್‌ಗಳಿವೆ.

ಸೀಟುಗಳು ಟಾಟಾದ ಸಿಂಬಲ್‌ ಆದ ಟ್ರೈಆ್ಯರೋ ಚಿಹ್ನೆಗಳನ್ನು ಹೊಂದಿದೆ. ಡಿ ಕಟ್‌ನ ಸ್ಟೀರಿಂಗ್‌ ಹಾಗೂ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಇದ್ದು, ಇದರಲ್ಲಿ ಸಿಎನ್‌ಜಿ ಹಾಗೂ ಪೆಟ್ರೋಲ್‌ ಗೇಜ್‌ ಮೀಟರ್‌ ಕಾಣಿಸುತ್ತದೆ.

ಸಾಮಾನ್ಯವಾಗಿ ಕಾರನ್ನು ಪೆಟ್ರೋಲ್‌ನಲ್ಲಿ ಸ್ಟಾರ್ಟ್‌ ಮಾಡಿ ನಂತರ ಸಿಎನ್‌ಜಿ ಬದಲಿಸಬೇಕಿರುತ್ತದೆ. ಆದರೆ,ಇದರಲ್ಲಿ ನೇರವಾಗಿ ಸಿಎನ್‌ಜಿಯಲ್ಲಿಯೇ ಆರಂಭಿಸುವ ಸೌಲಭ್ಯ ಇದೆ. ಇದು ಸಿಎನ್ಜಿ ಕಾರುಗಳಲ್ಲಿ ಕಂಡುಬಂದಿರುವ ಮೊದಲ ತಂತ್ರಜ್ಞಾನವಾಗಿದೆ.

Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!

ಇದರಲ್ಲಿ ಆಟೋ ಸ್ವಿಚ್ ಇದೆ. ಅದು ಸಹಜವಾಗಿಯೇ ಸಿಎನ್ಜಿ ಹಾಗೂ ಪೆಟ್ರೋಲ್ ಆಗಿ ಬದಲಾವಣೆ ಹೊಂದಲಿದೆ. ಸಿಎನ್ಜಿಯ ಪ್ರೆಷರ್ 10 ಬಾರ್ಗಿಂತ ಕಡಿಮೆಯಾದರೆ ಇದು ಅಟೊಮೆಟಿಕ್ ಆಗಿ ಪೆಟ್ರೋಲ್ಗೆ ಸ್ವಿಚ್ ಆಗುತ್ತದೆ.ಹಾಗೆ ಪೆಟ್ರೋಲ್ 9%ಗಿಂತ ಕಡಿಮೆ ಇದ್ರೆ ಅದು ಸಿಎನ್ಜಿಗೆ ಬದಲಾಗುತ್ತದೆ.

ಅಪಾಯದ ಸಂದರ್ಭಗಳಲ್ಲಿ ಇದರಲ್ಲಿನ ಥರ್ಮಲ್ ಇನ್ಸಿಡೆಂಟ್ ಪ್ರೊಟೆಕ್ಷನ್ ವ್ಯವಸ್ತೆ, ಇಂಜಿನ್ಗೆ ಸಿಎನ್ಜಿ ಪೂರೈಕೆಯನ್ನು ಸ್ಥಗಿತಗೊಳಿಸುತ್ತೆ. ಇದು ಗ್ಯಾಸ್ ಸೋರಿಕೆಯಂತಹ ಸಂದರ್ಭಗಳಲ್ಲಿ ಸ್ವಯಂಚಾಲಿತವಾಗಿ ಸಿಎನ್ಜಿ ಇಂದ ಪೆಟ್ರೋಲ್ಗೆ ಪರಿವರ್ತನೆಯಾಗುವ ಸೌಲಭ್ಯಗಳನ್ನು ಕೂಡ ಹೊಂದಿದೆ.

'ಟಾಟಾ ಟಿಯಾಗೋ CNG ಕಾರಿ ಟೆಸ್ಟ್ ಡ್ರೈವ್ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ