Upcoming Car ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭ!

By Suvarna News  |  First Published Jan 30, 2022, 4:46 PM IST
  • ಫೆಬ್ರವರಿಯಲ್ಲಿ ಹೊಚ್ಚ ಹೊಸ ಬಲೆನೋ ಫೇಸ್‌ಲಿಫ್ಟ್ ಕಾರು ಲಾಂಚ್
  • ಅಧಿಕೃತ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಬುಕಿಂಗ್ ಆರಂಭ
  • ಬಹುನಿರೀಕ್ಷಿತ ಕಾರಿನಲ್ಲಿದೆ ಹಲವು ವಿಶೇಷತೆ

ನವದೆಹಲಿ(ಜ.30): ಮಾರುತಿ ಸುಜುಕಿ ಹೊಸ ವರ್ಷದಲ್ಲಿ ಹೊಚ್ಚ ಹೊಸ ಮಾರುತಿ ಬಲೆನೋ ಫೇಸ್‌ಲಿಫ್ಟ್(Maruti Suzuki Baleno Facelift) ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಫೆಬ್ರವರಿ ತಿಂಗಳಲ್ಲಿ ಬಲೆನೋ ಕಾರು ಮಾರುಕಟ್ಟೆಗೆ(Indian Market) ಬಿಡುಗಡೆಯಾಗಲಿದೆ. ಸದ್ಯ ನೆಕ್ಸಾ ಅಧಿಕೃತ ಡೀಲರ್‌ಶಿಪ್ ಬಳಿ ನೂತನ ಬಲೆನೋ ಫೇಸ್‌ಲಿಫ್ಟ್ ಕಾರಿನ ಬುಕಿಂಗ್(Bookings) ಆರಂಭಗೊಂಡಿದೆ. 2022ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿರುವ ಮೊದಲ ಕಾರು ಇದಾಗಿದೆ.

ಡೀಲರ್‌ಗಳ ಮಾಹಿತಿ ಪ್ರಕಾರ ನೂತನ ಬಲೆನೋ ಫೇಸ್‌ಲಿಫ್ಟ್ ಕಾರು ಫೆಬ್ರವರಿ 20 ರಂದು ಬಿಡುಗಡೆಯಾಗಲಿದೆ. ಆದರೆ ಮಾರುತಿ ಸುಜುಕಿ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. 2022ರ ನೂತನ ಬಲೆನೋ ಈಗಾಲೇ ಗುಜರಾತ್‌ನಲ್ಲಿರುವ ಮಾರುತಿ ಸುಜುಕಿ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ. ಇದರ ಬೆನ್ನಲ್ಲೇ ಬುಕಿಂಗ್ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Tap to resize

Latest Videos

Upcoming Car ಮಾರುತಿ ಸುಜುಕಿ CNG ಕಾರು ಬಿಡುಗಡೆಗೂ ಮುನ್ನ ಬುಕಿಂಗ್ ಆರಂಭ!

ನೂತನ ಬಲೆನೋ ಫೇಸ್‌ಲಿಫ್ಟ್ ಕಾರು ಹಲವು ಹೊಸತನ ಹಾಗೂ ವಿಶೇಷತೆಗಳಿಂದ ಕೂಡಿದೆ. ಹೊಸ ಬಲೆನೋ ಕಾರು ಹೊಸ ವೇರಿಯೆಂಟ್ ಹಾಗೂ ಹೊಸ ಬಣ್ಣಗಳಲ್ಲಿ ಲಭ್ಯವಿದೆ. ನೂತನ ಕಾರಿನ ವಿನ್ಯಾಸದಲ್ಲಿ ಕೆಲ ಬದಲಾವಣೆ ತರಲಾಗಿದೆ. ಮುಂಭಾಗದ ಶೈಲಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಮೂಲಕ ಬೆಲೆನೋ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಇಷ್ಟೇ ಅಲ್ಲ ಕಾರು ಅಗಲ ಹೆಚ್ಚಾದಂತೆ ಭಾಸವಾಗುತ್ತಿದೆ.

L ಶೇಪ್ ಹೆಡ್‌ಲ್ಯಾಂಪ್ಸ್, LED DRL ವಿನ್ಯಾಸದಲ್ಲೂ ಬದಲಾವಣೆ ಇದೆ. ಇನ್ನು ಮುಂಭಾಗದ ಗ್ರಿಲ್ ಹೊಸದಾಗಿ ಡಿಸೈನ್ ಮಾಡಲಾಗಿದೆ. ಟೈಲ್‌ಗೇಟ್ ಡಿಸೈನ್, ಟೈಲ್ ಲ್ಯಾಂಪ್ ವಿನ್ಯಾಸ, ಹಿಂಭಾಗದ ಬಂಪರ್ ಸೇರಿದಂತೆ ಸೂಕ್ಷ್ಮ ಬದಲಾವಣೆಗಳು ಕಾಣಬಹುದು. ಕಾರಿನ ಒಳಭಾಗದಲ್ಲಿ ಹೆಚ್ಚಿನ ಬದಲಾವಣೆಗಳಿವೆ. ಕಾರಿನ ಡ್ಯಾಶ್‌ಬೋರ್ಡ್ ಸಂಪೂರ್ಣವಾಗಿ ಬದಲಾಗಿದೆ. ಇನ್ಫೋಟೈನ್ಮೆಂಟ್ ಸ್ಕ್ರೀನ್ ಸೇರಿದಂತೆ ಹಲವು ಬದಲಾವಣೆಗಳಿವೆ.

Maruti Suzui Discounts ಅಲ್ಟೋ, ಸ್ಪಿಫ್ಟ್ ಸೇರಿ ಮಾರುತಿ ಕಾರಿನ ಮೇಲೆ ಭರ್ಜರಿ ರಿಯಾಯಿತಿ, ಜನವರಿ ಡಿಸ್ಕೌಂಟ್ ಘೋಷಣೆ

ಟಾಪ್ ಮಾಡೆಲ್ ಬಲೆನೋ ಕಾರಿನಲ್ಲಿ 6 ಏರ್‌ಬ್ಯಾಗ್ಸ್ ನೀಡಲಾಗಿದೆ. ಇನ್ನುಳಿದಂತೆ 2 ಮ್ಯಾಂಡೇಟರಿ ಏರ್‌ಬ್ಯಾಗ್ ಲಭ್ಯವಿದೆ. ಇನ್ನು ಟಾಪ್ ಮಾಡೆಲ್‌ಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್((ESP)ಫೀಚರ್ಸ್ ಕೂಡ ಲಭ್ಯವಿದೆ.

ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರಿನ ಎಂಜಿನ‌್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು,  83hp ಪವರ್ ಹೊಂದಿದೆ. ಇನ್ನು12V ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಎಂಜಿನ್ ಕಾರು 90hp ಪವರ್ ಹೊಂದಿದೆ. ಇನ್ನು ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಜೊತೆಗ ಮಾರುತಿ ಸ್ವಿಫ್ಟ್ ಕಾರಿನಲ್ಲಿರುವಂತೆ AMT ಆಯ್ಕೆ ಲಭ್ಯವಾಗಲಿದೆ. ನೂತನ ಬಲೆನೋ ಕಾರಿನ ಬೆಲೆ ಫೆಬ್ರವರಿ 20 ರಂದು ಬಹಿರಂಗವಾಗುವ ಸಾಧ್ಯತೆ ಇದೆ. ನೂತನ ಬಲೆನೋ ಕಾರು ಟಾಟಾ ಅಲ್ಟ್ರೋಜ್, ಹ್ಯುಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿದೆ.  

ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೋ ಕಾರಿನ ಆರಂಭಿಕ ಬೆಲೆ 6.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಟಾಪ್ ಎಂಡ್ ಮಾಡೆಲ್ ಬೆಲೆ 9.66 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಮಾರುತಿ ಬಲೆನೋ ಕಾರು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು. ಗರಿಷ್ಠ ಮಾರಾಟವಾದ ಟಾಪ್ 5 ಕಾರುಗಳ ಪೈಕಿ ಮಾರುತಿ ಬಲೆನೋ ಕಾರು ಸದಾ ಸ್ಥಾನ ಪಡೆದಿದೆ. ಇದೀಗ ಹೊಸ ಬಲೆನೋ ಫೇಸ್‌ಲಿಫ್ಟ್ ಕಾರು ಮಾರುತಿ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಕೊರೋನಾ, ಚಿಪ್ ಕೊರತೆ ಕಾರಣ ಹಲವು ಆಟೋ ಕಂಪನಿಗಳು ಕಾರು ಬಿಡುಗಡೆ ಮುಂದೂಡಿಕೆ ಮಾಡುತ್ತಿದೆ. ಇನ್ನು ಬಿಡುಗಡೆಯಾಗಿರುವ ಕಾರಣಗಳ ವಿತರಣೆ ಕೂಡ ವಿಳಂಬವಾಗುತ್ತಿದೆ.

click me!