
ಬೆಂಗಳೂರು (ಸೆ.20) ಪೆಟ್ರೋಲ್ ದುಬಾರಿಯಾಗಿದೆ. ಎಲೆಕ್ಟ್ರಿಕ್ ಕಾರುಗಳು ಆರಂಭಿಕ ಮೊತ್ತ ದುಬಾರಿ. ಹೀಗಾಗಿ ಬಹುತೇಕರು ಪರಿಸರಕ್ಕೆ ಪೂರಕ, ಕಡಿಮೆ ನಿರ್ವಹಣೆ ವೆಚ್ಚದ ಸಿಎನ್‌ಜಿ ಕಾರುಗಳತ್ತ ಆಸಕ್ತಿ ತೋರುತ್ತಿದ್ದಾರೆ. ಇದೀಗ ಸಿಎನ್‌ಜಿ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಫೀಚರ್ ಲಭ್ಯವಿದೆ. ಮಾರುತಿ ಸುಜುಕಿ ಇದೀಗ ತನ್ನ ಸಿಎನ್‌ಡಿ ವೇರಿಯೆಂಟ್ ಸ್ವಿಫ್ಟ್, ಬಲೆನೋ ಹಾಗೂ ಡಿಸೈರ್ ಕಾರುಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ನೀಡಿದೆ.
ಮಾರುತಿ ಸುಜುಕಿ ಸ್ವಿಫ್ಟ್, ಬಲೆನೋ ಹಾಗೂ ಡಿಸೈರ್ ಕಾರಿನ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಕಾರಿನ ಆರಂಭಿಕ ಬೆಲೆ 7.92 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮೂರು ಸಿಎನ್‌ಜಿ ವೇರಿಯೆಂಟ್ ಕಾರಿನ ಬೆಲೆ
ಹಲವು ಬ್ರ್ಯಾಂಡ್‌ಗಳ ಸಿಎನ್‌ಜಿ ವೇರಿಯೆಂಟ್ ಕಾರುಗಳಿವೆ. ಆದರೆ ಬಹುತೇಕ ಸಿಎನ್‌ಜಿ ಕಾರುಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ನೀಡುತ್ತಿಲ್ಲ. ಇದೀಗ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ವೇರಿಯೆಂಟ್‌ನಲ್ಲೂ ಆಟೋಮ್ಯಾಟಿಕ್ ಕಾರು ನೀಡುತ್ತಿದೆ. ಈ ಮೂಲಕ ಗ್ರಾಹಕರ ಸುಲಭ ಹಾಗೂ ಆರಾಮದಾಯಕ ಡ್ರೈವಿಂಗ್‌ಗೆ ನೆರವಾಗಿದೆ. ನಗರಗಳಲ್ಲಿ ಡ್ರೈವಿಂಗ್ ಮಾಡುವಾಗ ಕ್ಲಚ್ ಹಿಡಿದು ಸುಸ್ತಾಗಬೇಕಿಲ್ಲ. ಸಿಎನ್‌ಜಿ ವೇರಿಯೆಂಟ್ ಕೂಡ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ನೀಡುತ್ತಿದೆ.
ಮೂರು ಕಾರುಗಳಲ್ಲಿ 1197ಸಿಸಿ ಎಂಜಿನ್ ಬಳಸಲಾಗಿದೆ. ಡ್ಯುಯೆಲ್ ವಿವಿಟಿ ಟೆಕ್ನಾಲಜಿ ಇದೆ. 5 ಸ್ಪೀಡ್ ಎಂಎಂಟಿ ಆಯ್ಕೆ ನೀಡಲಾಗಿದೆ. ಸಿಎನ್‌ಜಿ ವೇರಿಯೆಂಟ್ ಕಾರು 68.8hp ಪವರ್ ಹಾಗೂ 101.8Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಸ್ವಿಫ್ಟ್ ಸಿಎನ್‌ಜಿ ಕಾರು ಪ್ರತಿ ಕೆಜಿಗೆ 35.34 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಬಲೆನೋ ಸಿಎನ್‌ಜದಿ ಕಾರು ಪ್ರತಿ ಕೆಜಿಗೆ 34.47 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇತ್ತ ಡಿಸೈರ್ ಕಾರು 36.47 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಸಿಎನ್‌ಜಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಮಾರುತಿ ಸುಜುಕಿ ಮಾರಾಟದಲ್ಲಿ ಶೇಕಡಾ 58ರಷ್ಟು ಪ್ರಗತಿ ಸಾಧಿಸಿದೆ. ಜುಲೈ 2026ರಲ್ಲಿ ಒಂದೇ ತಿಂಗಳು 83000 ಸಿಎನ್‌ಜಿ ವೇರಿಯೆಂಟ್ ಮಾರುತಿ ಕಾರುಗಳು ಮಾರಾಟವಾಗಿದೆ. ಸಿಎನ್‌ಜಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾರುತಿ ಸುಜುಕಿ ಸಿಎನ್‌ಜಿ ಆಯ್ಕೆಯಲ್ಲಿ ಎಎಂಟಿ ನೀಡುತ್ತಿದೆ.