Tata Sierra Legend Series ಲಾಂಚ್: ಲಕ್ಷುರಿ ಫೀಚರ್ಸ್‌, ಪೈಸಾ ವಸೂಲ್‌ ಕಾರು ಅಂದ್ರೆ ಇದೇ, ಬೆಲೆ ಕೂಡ ಜಾಸ್ತಿ ಇಲ್ಲ

Published : Sep 18, 2026, 05:36 PM IST
Tata Sierra Legend Series launched

ಸಾರಾಂಶ

ನೀವು ಕಾರು ಖರೀದಿ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇಲ್ಲೊಂದು ಗುಡ್‌ನ್ಯೂಸ್‌ ಇದೆ. ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹೈಲೇವೆಲ್‌ ಫೀಚರ್ಸ್‌ ಹೊಂದಿರೋ ಕಾರನ್ನು ಟಾಟಾ ತನ್ನ ಸಿಯೆರಾ ಲೆಜೆಂಡ್‌ ಸಿರೀಸ್‌ನಲ್ಲಿ ಅತ್ಯದ್ಭುತ ಕಾರುಗಳನ್ನ ನೀಡಿದೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ.

ಕಾರು ಪ್ರಿಯರಿಗೆ, ಹೊಸ ಕಾರು ಖರೀದಿಸುತ್ತಿರೋರಿಗೆ, ಕಾರಿನ ಮೇಲೆ ಹೇವಿ ಕ್ರೇಜ್‌ ಇರೋರಿಗೆ ಟಾಟಾ ಮೋಟರ್ಸ್‌ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. Tata Sierra ಎಸ್‌ಯುವಿಯಲ್ಲಿ ಕಂಪನಿಯು Legend Series ಸಿರೀಸ್‌ ಲಾಂಚ್‌ ಮಾಡಿದೆ. ಲಾಂಚ್‌ ಬೆನ್ನಲ್ಲೇ ಈ ಕಾರಿನ ಮೇಲಿನ ಕ್ರೇಜ್‌ ಜಾಸ್ತಿಯಾಗಿದೆ.

ಯಾಕೆಂದರೆ ಲೆಜೆಂಡ್‌ ಸಿರೀಸ್‌ನ ಫೀಚರ್ಸ್‌ ಭಾರೀ ದೊಡ್ಡ ಮೊಟ್ಟದಲ್ಲಿ ಸೌಂಡ್‌ ಮಾಡ್ತಿದೆ. ನಿಮಗೆ ವೆಂಟಿಲೇಟೆಡ್ ಸೀಟ್, ಸನ್‌ರೂಫ್, 360 ಡಿಗ್ರಿ ಕ್ಯಾಮೆರಾದಂತಹ ಪ್ರೀಮಿಯಂ ಫೀಚರ್ಸ್‌ ಬೇಕು ಅಂದರೆ ಹೈಲೇವೆಲ್‌ ಕಾರನ್ನು ಖರೀದಿಸಬೇಕು. ಅದನ್ನು ನಿಮ್ಮ ಮನೆಗೆ ತರಲು ಕನಿಷ್ಠ ಅಂದರೂ 20 ಲಕ್ಷ ರೂಪಾಯಿ ಬೇಕಾಗುತ್ತದೆ. ಇದೀಗ ಟಾಟಾ ಮಧ್ಯಮ ವರ್ಗದ ಬಜೆಟ್ ಗಮನದಲ್ಲಿಟ್ಟು ಮಿಡ್ ಮತ್ತು ಬೇಸ್ ಮಾಡೆಲ್‌ಗಳಲ್ಲೇ ಈ ಲಕ್ಸುರಿ ಫೀಚರ್‌ಗಳನ್ನು ಪರಿಚಯಿಸಿದೆ. ಹೊಸ ಲೆಜೆಂಡ್ ಸರಣಿಯ ಆರಂಭಿಕ ಬೆಲೆ ಕೇವಲ ₹11.99 ಲಕ್ಷ ರೂಪಾಯಿ.

ಲೆಜೆಂಡ್‌ ಸರಣಿ ಎಂದರೆ ಏನು?

ಸಿಯೆರಾದ ಸಾಮಾನ್ಯ ಮಾಡೆಲ್‌ಗಳಿಗೆ ಹೋಲಿಸಿದರೆ ಕೇವಲ ₹50,000 ದಿಂದ ₹70,000 ಹೆಚ್ಚುವರಿ ಬೆಲೆಯಲ್ಲಿ ಲೆಜೆಂಡ್‌ ಸಿರೀಸ್‌ ಗ್ರಾಹಕರಿಗೆ ಲಭ್ಯವಿದೆ. ಈ ಹೊಸ ಸಿರೀಸ್‌ನಲ್ಲಿ ಒಟ್ಟು 5 ಪ್ರಮುಖ ವೇರಿಯೆಂಟ್‌ಗಳನ್ನು ಪರಿಚಯಿಸಿದೆ.

ಐದು ವೇರಿಯೆಂಟ್‌ಗಳು

  • ಸ್ಮಾರ್ಟ್+ ಎಲ್ (Smart+ L)
  • ಪ್ಯೂರ್ ಎಲ್ (Pure L)
  • ಪ್ಯೂರ್ ಎಲ್(ಒ) [Pure L(O)]
  • ಪ್ಯೂರ್+ ಎಲ್ (Pure+ L)
  • ಅಡ್ವೆಂಚರ್+ ಎಲ್ (Adventure+ L)

ಈ ವೇರಿಯೆಂಟ್‌ನ ವಿಶೇಷತೆಗಳು ಏನೇನು?

Smart+ L : 

  • ಇದು ಲೆಜೆಂಡ್ ಸರಣಿಯ ಎಂಟ್ರಿ ಲೆವೆಲ್ ಕಾರ್
  • ಇದರಲ್ಲಿ ಪ್ರೀಮಿಯಂ ಲೆದರೆಟ್ ಸೀಟ್‌ಗಳು
  • ಆಟೋ-ಫೋಲ್ಡಿಂಗ್ ರಿಯರ್‌ವ್ಯೂ ಮಿರರ್
  • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
  • ರೂಫ್ ರೈಲ್ಸ್‌ಗಳು ಸಿಗಲಿವೆ.

Pure L: 

  • ಇದರಲ್ಲಿ 10.25 ಇಂಚಿನ ದೊಡ್ಡ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್
  • ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ
  • ರಿಯರ್ ಪಾರ್ಕಿಂಗ್ ಕ್ಯಾಮೆರಾ
  • 8-ಸ್ಪೀಕರ್ ಸೌಂಡ್ ಸಿಸ್ಟಮ್
  • ಕ್ರೂಸ್ ಕಂಟ್ರೋಲ್
  • 17 ಇಂಚಿನ ಅಲಾಯ್ ವೀಲ್‌ಗಳು

Pure L(O): 

  • ಸನ್‌ರೂಫ್ ಪ್ರಿಯರಿಗೆ ಇದು ಹೇಳಿಮಾಡಿಸಿದ ಮಾಡೆಲ್
  • ಪ್ಯೂರ್ ಎಲ್ ಫೀಚರ್ಸ್‌ ಜೊತೆಗೆ ಇದರಲ್ಲಿ ವಿಶಾಲವಾದ ಪನೋರಮಿಕ್ ಸನ್‌ರೂಫ್
  • ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್
  • ರೇನ್-ಸೆನ್ಸಿಂಗ್ ವೈಪರ್‌

Pure+ L:

  • ಇದು ಈ ಸರಣಿಯ ಅತಿ ದೊಡ್ಡ ಹೈಲೈಟ್
  • ದುಬಾರಿ ಕಾರುಗಳಲ್ಲಿ ಮಾತ್ರ ಸಿಗುತ್ತಿದ್ದ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು
  • 6-ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಪವರ್ಡ್ ಡ್ರೈವರ್ ಸೀಟ್
  • ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಎಸಿ
  • ಬಾಸ್ ಮೋಡ್ ಈ ವೇರಿಯೆಂಟ್‌
  • 160hp ಸಾಮರ್ಥ್ಯದ ಟರ್ಬೋ-ಪೆಟ್ರೋಲ್ ಎಂಜಿನ್ ಆಯ್ಕೆಯೂ ಸಿಗಲಿದೆ.

Adventure+ L:

  • ಇದು ಪಕ್ಕಾ ಟೆಕ್-ಪ್ರಿಯರ ಆಯ್ಕೆ
  • 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ
  • ಡ್ಯುಯಲ್ 12.3 ಇಂಚಿನ ಸ್ಕ್ರೀನ್‌ಗಳು
  • ಆಂಬಿಯೆಂಟ್ ಲೈಟಿಂಗ್
  • ವೈರ್‌ಲೆಸ್ ಚಾರ್ಜರ್
  • ಕೂಲ್ಡ್ ಗ್ಲವ್ ಬಾಕ್ಸ್
  • ಟೆರೈನ್ ಮೋಡ್‌ಗಳಿವೆ

ಬೆಲೆ ಪಟ್ಟಿ (ಲಕ್ಷ ರೂಪಾಯಿಗಳಲ್ಲಿ)

ವೇರಿಯೆಂಟ್ಪೆಟ್ರೋಲ್ (MTಪೆಟ್ರೋಲ್ (DCT)ಡೀಸೆಲ್ (MT)ಡೀಸೆಲ್ (AT)ಟರ್ಬೋ ಪೆಟ್ರೋಲ್
Smart+ L₹11.99 ₹13.49  
Pure L₹13.79₹14.99₹15.24  
Pure L(O)₹14.29₹15.59₹15.74₹16.99 
Pure+ L₹14.99₹16.29₹16.44₹17.74 
Adventure+ L₹16.99₹18.29₹18.19₹19.49₹18.99

ಕಾರು ಖರೀದಿಸುವಾಗ ತುಂಬಾ ಅಳುಕು ಇರುತ್ತದೆ. ಬಜೆಟ್‌ ಸಾಕಾಗುತ್ತಿಲ್ಲ. ಸನ್‌ರೂಫ್‌ ಅಥವಾ ವೆಂಟಿಲೇಡೆಟ್‌ ಸೀಟು ಬಿಟ್ಟು ಕೊಡಬೇಕಲ್ವಾ ಎಂದು ಕೊರಗುವವರೂ ಇದ್ದಾರೆ. ಇದೀಗ ಟಾಟಾ ಇಂಥ ಕೊರಗಿಗೆ ಬೆಸ್ಟ್‌ ಗಿಫ್ಟ್‌ ನೀಡಿದೆ. ಕೇವಲ 50 ರಿಂದ 70 ಸಾವಿರ ರೂಪಾಯಿ ವ್ಯತ್ಯಾಸದಲ್ಲಿ ಟಾಪ್-ಎಂಡ್ ಕಾರಿನ ಅನುಭವ ಸಿಗಲಿದೆ. ಮಧ್ಯಮ ವರ್ಗದ ಬಜೆಟ್‌ನಲ್ಲಿ ಸಿಯೆರಾ ಖರೀದಿಸಲು ಪ್ಲಾನ್ ಮಾಡ್ತಿರೋರಿಗೆ ಲೆಜೆಂಡ್ ಸರಣಿ ಅತ್ಯುತ್ತಮ ಆಯ್ಕೆ ಆಗಿದೆ.

PREV
Read more Articles on
click me!

Recommended Stories

ಎತ್ತಿನ ಬಂಡಿಗಳಿಂದ ತುಂಬಿದ್ದ ಬೆಂಗಳೂರಿನ ರಸ್ತೆಗೆ ಇಳಿದ ಮೊದಲ ಕಾರಿನ ಕಥೆ ಗೊತ್ತೇ? ಯಾರಾಗಿದ್ರು ಫಸ್ಟ್ ಓನರ್?
Car Modification: ಹೊಸ ಕಾರಿಗೆ Music System, Lights ಹಾಕಿಸುವ ಮುನ್ನ ಈ ಸುದ್ದಿ ನೋಡಿ; Warrantyಗೆ ಕುತ್ತು ಬರಬಹುದು!