Tax Reduction ಎಲಾನ್ ಮಸ್ಕ್ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ, ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಸದ್ಯಕ್ಕಿಲ್ಲ!

By Suvarna News  |  First Published Feb 4, 2022, 7:52 PM IST
  • ಭಾರತದಲ್ಲಿ ಅಮೆರಿಕ ಎಲೆಕ್ಟ್ರಿಕ್ ಕಾರು ಬಿಡುಗಡೆ ಮತ್ತಷ್ಟು ವಿಳಂಬ
  • ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ್ದ ಎಲಾನ್ ಮಸ್ಕ್
  • ಆಮದು ಸುಂಕ ಕಡಿತ ಸಾಧ್ಯವಿಲ್ಲ, ಟೆಸ್ಲಾ ಮನವಿ ರಿಜೆಕ್ಟ್

ನವದೆಹಲಿ(ಫೆ.04): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ(Electric Vehicle) ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಮಾಲಿನ್ಯ ಮುಕ್ತವಾಗಿಸುವ ಪಣತೊಟ್ಟಿದೆ. ಇದಕ್ಕಾಗಿ ಹೊಸ ಹೊಸ ಎಲೆಕ್ಟ್ರಿಕ್ ವಾಹನ ಕಂಪನಿಗಳು ಭಾರತದಲ್ಲಿ ಕಾರ್ಯಾರಂಭ ಮಾಡಿದೆ. ಅಮೆರಿಕದ(America) ಅತೀ ದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ಟೆಸ್ಲಾ ಭಾರತದಲ್ಲಿ ಕಾರು ಬಿಡುಗಡೆಗೆ ಕಳೆದ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಟ್ವಿಟರ್ ಮೂಲಕ ಕೆಲ ಘರ್ಷಣೆಗಳು ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ಈ ಮಾಹಿತಿ ಪ್ರಕಾರ ಟೆಸ್ಲಾ ಮಾಡಿದ ಮನವಿಯನ್ನು ಕೇಂದ್ರ ಸರ್ಕಾರ(Indian Government) ತಿರಸ್ಕರಿಸಿದೆ.

ಟೆಸ್ಲಾ ಹಾಗೂ ಕೇಂದ್ರ ಸರ್ಕಾರದ ನಡುವೆ ಕಳೆದ ಕೆಲ ವರ್ಷಗಳಿಂದಲೇ ತೆರಿಗೆ ನೀತಿ ಕುರಿತು ಹಗ್ಗಜಗ್ಗಾಟ ನಡೆಯುತ್ತಿದೆ. ಆಮದು ಸುಂಕ ಹಾಗೂ ಇತರ ತೆರಿಗೆ ಹೆಚ್ಚಿರುವ ಕಾರಣ ಟೆಸ್ಲಾ ಕಾರು ಭಾರತದಲ್ಲಿ ಅತ್ಯಂತ ದುಬಾರಿ ಕಾರಾಗಿ ಮಾರ್ಪಡಲಿದೆ. ಇದರಿಂದ ಟೆಸ್ಲಾ ಭಾರತದಲ್ಲಿ ಮಾರಾಟ ತೀರಾ ಕಳಪೆಯಾಗಲಿದೆ. ಹೀಗಾಗಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಆಮದಿಗೆ ಸುಂಕ ಹಾಗೂ ಇತರ ತೆರಿಗೆ ಕಡಿತಗೊಳಿಸಬೇಕು ಎಂದು ಟೆಸ್ಲಾ ಮನವಿ ಮಾಡಿದೆ. ಇದೀಗ ಟೆಸ್ಲಾ ಮನವಿಯನ್ನು ಕೇಂದ್ರ ಸರ್ಕಾರ ತರಿಸ್ಕರಿಸಿರುವುದಾಗಿ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಹಾಗೂ ಕಸ್ಟಮ್ ಮುಖ್ಯಸ್ಥ ವಿವೇಕ್ ಜೋಹ್ರಿ ಹೇಳಿದ್ದಾರೆ.

Tap to resize

Latest Videos

undefined

Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

ಟೆಸ್ಲಾ ಕಾರುಗಳ ಆಮದು, ಬಿಡಿ ಭಾಗಗಳ ಆಮದಿಗೆ ಸುಂಕ ಕಡಿತಗೊಳಿಸಲು ಟೆಸ್ಲಾ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಾರಣ ಈಗಾಗಲೇ ಹಲವು ವಿದೇಶಿ ಕಂಪನಿಗಳು ಭಾರತದ ತೆರಿಗೆ ನೀತಿ ಮೂಲಕ ವ್ಯವಹಾರ ನಡೆಸುತ್ತಿದೆ. ಬಿಡಿ ಭಾಗಗಳ ಆಮದು ಮಾಡಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ನೀತಿಯನ್ನು ಒಪ್ಪಿಕೊಂಡಿದೆ. ಹೀಗಾಗಿ ಇತರ ಕಂಪನಿಗಳಿಗೆ ನೀಡದ ವಿನಾಯಿತಿ, ಕೇವಲ ಟೆಸ್ಲಾಗೆ ನೀಡಲು ಸಾಧ್ಯವಿಲ್ಲ ಎಂದು ವಿವೇಕ್ ಜೋಹ್ರಿ ಹೇಳಿದ್ದಾರೆ.

ಇತ್ತೀಚೆಗೆ ಎಲಾನ್ ಮಸ್ಕ್ ಭಾರತದಲ್ಲಿ ಅತೀ ಹೆಚ್ಚು ತೆರಿಗೆ ಇದೆ. ವಿಶ್ವದಲ್ಲೂ ಎಲ್ಲೂ ಇಲ್ಲದ ತೆರಿಗೆ ನೀತಿಯಿಂದ ಕಾರು ಬಿಡುಗಡೆ ವಿಳಂಬವಾಗುತ್ತಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರದ ಜೊತೆ ಮಾತುಕತೆ ನಡಯುತ್ತಿದೆ. ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆ ಕುರಿತು ಉತ್ತರ ನೀಡಿದ್ದರು.

Tesla in India ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ, ರಾಜ್ಯದ ಮನವಿಗೆ ಇತರ 5 ರಾಜ್ಯದಲ್ಲಿ ಸಂಚಲನ!

ಸಂದರ್ಶನದಲ್ಲಿ ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ತೊಡಕನ್ನು ಹೇಳಿದ್ದರು. ಅಮೆರಿಕದಲ್ಲಿ ಟೆಸ್ಲಾದ ಮಾಡೆಲ್ 3 ಕಾರಿನ ಬೆಲೆ 30 ಲಕ್ಷ ರೂಪಾಯಿ(ಭಾರತೀಯ ರೂಪಾಯಿಗಳಲ್ಲಿ). ಭಾರತದಲ್ಲಿನ ಈ ಕಾರಿನ ಬೆಲೆ ತೆರಿಗೆ ಕಾರಣದಿಂದ ಸರಿಸುಮಾರು 60 ಲಕ್ಷ ರೂಪಾಯಿ ಆಗಲಿದೆ. ಕಾರಣ ಆಮದು ಸುಂಕ ಹಾಗೂ ಇತರ ತೆರಿಗೆ ಶೇಕಡಾ 100. ಹೀಗಾಗಿ ಕೈಗೆಟುಕುವ ದರದ ಟೆಸ್ಲಾ ಕಾರು ಭಾರತದಲ್ಲಿ ದುಬಾರಿಯಾಗಲಿದೆ. ಹೀಗಾಗಿ ತೆರಿಗೆ ಕಡಿತಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು.

ಎಲಾನ್ ಮಸ್ಕ್ ಟ್ವೀಟ್ ಮಾಡಿದ ಬೆನ್ನಲ್ಲೇ ಪಂಜಾಬ್, ಕರ್ನಾಟಕ, ತಮಿಳುನಾಡು ಸೇರಿದಂತೆ ಭಾರತ 5ಕ್ಕೂ ಹೆಚ್ಚು ರಾಜ್ಯಗಳು ಟ್ವೀಟ್ ಮೂಲಕ ಎಲಾನ್ ಮಸ್ಕ್‌ಗೆ ಮನವಿ ಮಾಡಿತ್ತು. ತಮ್ಮ ತಮ್ಮ ರಾಜ್ಯಗಳಲ್ಲಿ ಘಟಕ ಸ್ಥಾಪಿಸಲು ಮನವಿ ಮಾಡಿತ್ತು. ಆದರೆ ಟೆಸ್ಲಾಗೆ ಅಡ್ಡಿಯಾಗಿರುವುದು ಇಲ್ಲಿನ ರಾಜ್ಯ ಸರ್ಕಾರದ ನೀತಿಗಳಿಂದ, ಕೇಂದ್ರದ ಆಮದು ಸುಂಕ ನೀತಿಯಿಂದ ಅನ್ನೋದು ರಾಜ್ಯಗಳಿಗೂ ತಿಳಿಯದಾಯಿತು.
 

click me!