Mukesh Ambani luxury Car: ಅಪರೂಪದ ಕ್ಯಾಡಿಲಾಕ್ ಎಸ್ಕಲೇಟ್ ಎಸ್‌ಯುವಿ ಖರೀದಿಸಿದ ಅಂಬಾನಿ!

By Suvarna News  |  First Published Feb 4, 2022, 11:40 AM IST

*ಜಿಯೋ ಗ್ಯಾರೇಜ್‌ಗೆ ಹೊಸ ಸೇರ್ಪಡೆ
*ಕ್ಯಾಡಿಲಾಕ್‌ ಎಸ್ಕಲೇಡ್‌ ಎಸ್‌ಯುವಿ ಖರೀದಿ
*ಅಂತರ್ಜಾಲದಲ್ಲಿ ಕೇವಲ ಒಂದು ಚಿತ್ರ ಲಭ್ಯ


Auto Desk: ದೇಶದ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ (Mukesh Ambani) ಅವರು ತಮ್ಮ ಕಾರಿನ ಕ್ರೇಜ್ನಿಂದ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ.  ಅಂಬಾನಿ ಸಾಕಷ್ಟು ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದು, ಅವರ ಕಾರುಗಳ ಸಂಗ್ರಹವನ್ನು ಈಗ’ ಜಿಯೋ ಗ್ಯಾರೇಜ್ ‘ ಎಂದೇ ಕರೆಯಲಾಗುತ್ತದೆ. ಈ ಗ್ಯಾರೇಜ್ ಈಗಾಗಲೇ ಅನೇಕ ಐಷಾರಾಮಿ ಮತ್ತು ಅಪರೂಪದ ಎಸ್ಯುವಿಗಳನ್ನು (SUV )ಗಳನ್ನು ಒಳಗೊಂಡಿದೆ. ಇದೀಗ, ಮುಕೇಶ್ ಅಂಬಾನಿ ತಮ್ಮ ಸಂಗ್ರಹಕ್ಕೆ ಕ್ಯಾಡಿಲಾಕ್ ಎಸ್ಕಲೇಡ್ (Cadillac Escalade) ಎಸ್ಯುವಿಯನ್ನು (SUV) ಸೇರಿಸಿದ್ದಾರೆ.

ಸದ್ಯಕ್ಕೆ, ಕ್ಯಾಡಿಲಾಖ್ ಕಾರು ದೇಶಕ್ಕೆ ಹೊಸದಾಗಿ ಪರಿಚಿತವಾಗಿಧ್ದು, ಅಂತರ್ಜಾಲದಲ್ಲಿ  ಒಂದೇ ಒಂದು ಚಿತ್ರವು ಲಭ್ಯವಿದೆ. ಕಾರ್ ಕ್ರೇಜಿ ಇಂಡಿಯಾ ತನ್ನ ಇನ್ಸ್ಟಾಗ್ರಾಮ್ನಲ್ಲಿ  ಈ ಚಿತ್ರವನ್ನು ಹಂಚಿಕೊಂಡಿದೆ. ಅಂಬಾನಿಯ ಎಸ್ಕಲೇಡ್ ಸಿಲ್ವರ್ ಫಿನಿಷ್  (Silver finish)ಹೊಂದಿದೆ. ಕ್ಯಾಡಿಲಾಕ್ ತನ್ನ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಮಾರಾಟ ಮಾಡುವುದಿಲ್ಲ.ಹೀಗಾಗಿ, ಮುಖೇಶ್ ಅಂಬಾನಿ ಇದನ್ನು ಖಾಸಗಿಯಾಗಿ ಆಮದು ಮಾಡಿಕೊಂಡಿರುವ ಸಾಧ್ಯತೆಗಳಿವೆ.

Tap to resize

Latest Videos

ಇದನ್ನೂ ಓದಿ: Mukesh Ambani: 984 ಕೋಟಿಗೆ ಅಂಬಾನಿಯಿಂದ ರೋಬೋಟ್‌ ಸ್ಟಾರ್ಟಪ್‌ ಖರೀದಿ

ಎಸ್ಕಲೇಡ್ ವಿಶ್ವದ ಅತಿ ದೊಡ್ಡ ಮತ್ತು ಅತಿ ವಿಶೇಷ ವಿನ್ಯಾಸ ಹೊಂದಿರುವ ಎಸ್ಯುವಿ ಎಂದೇ ಗುರುತಿಸಿಕೊಂಡಿದೆ.  ಇದನ್ನು ಇದರ ಗಾತ್ರ, ವಿನ್ಯಾಸಗಳು ಸಾರಿ ಹೇಳುತ್ತದೆ. ಈ ಎಸ್ಯುವಿ  ಅತ್ಯಂತ ದೊಡ್ಡದಾಗಿದ್ದು, ರಸ್ತೆಯಲ್ಲಿ ಸಂಚರಿಸುವಾಗ ಸಾಕಷ್ಟು ಸ್ಥಳ ಪಡೆದುಕೊಳ್ಳುತ್ತದೆ. ಈ SUVಯ ಗ್ರಿಲ್ನ ಗಾತ್ರ ಮತ್ತು LED ಹೆಡ್ಲ್ಯಾಂಪ್ಗಳು ಕೂಡ ಸಾಕಷ್ಟು ದೊಡ್ಡದಾಗಿವೆ. ಇವುಗಳಲ್ಲಿ ಹೊಳಪು ಮೂಢಿಸಲು ಇಡೀ ಕಾರಿನಲ್ಲಿ ಕ್ರೋಮ್ ಬಳಸಲಾಗಿದೆ. 

ಅನೇಕ ಪ್ರಸಿದ್ಧ ಹಾಲಿವುಡ್ ಸೆಲೆಬ್ರಿಟಿಗಳು ಕ್ಯಾಡಿಲಾಕ್ ಎಸ್ಕಲೇಡ್ ಅನ್ನು ಬಳಸುತ್ತಾರೆ. ಇದಲ್ಲದೆ, ಅಮೆರಿಕ ಅಧ್ಯಕ್ಷರು ಕೂಡ ಈ ಎಸ್ಯುವಿಯನ್ನು ಬಳಸುತ್ತಾರೆ. ಭಾರತದಲ್ಲಿ ಎಸ್ಕಲೇಡ್ ಅನ್ನು ಹೊಂದಿರುವವರು ಅಂಬಾನಿ ಮಾತ್ರ ಅಲ್ಲ, ಇನ್ನೂ ಕೆಲವರು ಇದ್ದಾರೆ. ಈ ಬೃಹತ್ ಎಸ್ಯುವಿ ಬೃಹತ್ ಎಂಜಿನ್ ಹೊಂದಿದ್ದು, 6.2-ಲೀಟರ್ V8 ಎಂಜಿನ್ ಅನ್ನು ಬಳಸುತ್ತದೆ ಅದು 420 ಬಿಎಚ್ಪಿ (bhp) ಗರಿಷ್ಠ ಶಕ್ತಿಯನ್ನು ಮತ್ತು 624 ಎನ್ಎಂ (Nm) ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

 

 

ಇದನ್ನೂ ಓದಿ: Mukesh Ambani: ಅಮೆರಿಕದಲ್ಲಿ ಅಂಬಾನಿ ಸಾಮ್ರಾಜ್ಯ, ಐಷಾರಾಮಿ ಹೋಟೆಲ್ ತೆಕ್ಕೆಗೆ!

ಅಂಬಾನಿಯವರ ಗ್ಯಾರೇಜ್ ಲ್ಯಾಂಡ್ ರೋವರ್ ಡಿಫೆಂಡರ್ 110 ಅನ್ನು ಸಹ ಒಳಗೊಂಡಿದೆ. 110 ಡಿಫೆಂಡರ್ನ ಐದು-ಬಾಗಿಲಿನ ಆವೃತ್ತಿಯಾಗಿದೆ. ಇದು ಪ್ರಸ್ತುತ ಮಾರಾಟದಲ್ಲಿರುವ ಅತ್ಯಂತ ಸಮರ್ಥ SUV ಗಳಲ್ಲಿ ಒಂದಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡುತ್ತದೆ.

2.0-ಲೀಟರ್ ಟರ್ಬೊ ಪೆಟ್ರೋಲ್, 3.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್ ಇದೆ. ವಿದೇಶಿ ಮಾರುಕಟ್ಟೆಯಲ್ಲಿ, ಆಫರ್ನಲ್ಲಿ ಸೂಪರ್ಚಾರ್ಜ್ಡ್ ವಿ8 ಸಹ ಇದೆ. ಭಾರತದಲ್ಲಿ ಇದರ ಶೋರೂಂ ಬೆಲೆ 80.72 ಲಕ್ಷ ರೂ. ಮತ್ತು  1.22 ಕೋಟಿ ರೂ.ಗಳಾಗಿವೆ.

ಕಳೆದ ವರ್ಷ, ಮುಖೇಶ್ ಅಂಬಾನಿ ಎರಡು ಲೆಕ್ಸಸ್ ಎಲ್ಎಕ್ಸ್570( LX570) SUV ಖರೀಧಿಸಿದ್ದರು. ಇದರಲ್ಲಿ ಒಂದು ಸಿಲ್ವರ್ ಹಾಗೂ ಬಿಳಿ ಕ್ರೋಮ್ ಫಿನಿಷ್ ಹೊಂದಿದೆ. ಈ ಎಸ್ಯುವಿಗಳು ದೊಡ್ಡ ಗಾತ್ರದಲ್ಲಿವೆ ಮತ್ತು LX570 ಪ್ರಸ್ತುತ ಲೆಕ್ಸಸ್ನ ಪ್ರಮುಖ ಎಸ್ಯುವಿಯಾಗಿದೆ. ಇದು 5.7-ಲೀಟರ್ ನ ವಿ8 ನಿಂದ ಚಾಲಿತವಾಗಿದ್ದು ಅದು 362 ಬಿಎಚ್ಪಿ ಗರಿಷ್ಠ ಶಕ್ತಿ ಮತ್ತು 530 ಎನ್ಪಿ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬೆಂಟ್ಲಿ ಬೆಂಟೈಗಾವನ್ನು ಖರೀದಿಸಿದ ಮೊದಲ ವ್ಯಕ್ತಿಗಳಲ್ಲಿ ಅಂಬಾನಿ ಕುಟುಂಬವೂ ಒಬ್ಬರು. ಇದು ರೇಸಿಂಗ್ ಗ್ರೀನ್ ಬಣ್ಣ ಹೊಂದಿದೆ. ಇದು ಬೆಂಟೈಗಾ ಡಬ್ಲ್ಯು 12 (W12) ಮಾದರಿಯಾಗಿದೆ.  ಅಂಬಾನಿ ಗ್ಯಾರೇಜ್ನಲ್ಲಿ ಎರಡನೇ ಬೆಂಟೈಗಾ  ವಿ8 1 ಇದ್ದು, ಅನಂತ್ ಅಂಬಾನಿ ಈ ಎಸ್ಯುವಿ ಅನ್ನು ಹೆಚ್ಚಾಗಿ ಬಳಸುತ್ತಾರೆ.

ಜಿಯೋ ಗ್ಯಾರೇಜ್ನಲ್ಲಿ ಇನ್ನೂ ಕೆಲವು ಎಸ್ಯುವಿಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್, ಲ್ಯಾಂಡ್ ರೋವರ್ ರೇಂಜ್ ರೋವರ್, ಲಂಬೋರ್ಘಿನಿ ಉರಸ್, ಮರ್ಸಿಡಿಸ್ ಬೆಂಝ್ ಎಎಂಜಿ ಜಿ63, ಲ್ಯಾಂಡ್ ರೋವರ್ ಡಿಸ್ಕವರಿ ಮತ್ತು ಇನ್ನೂ ಹೆಚ್ಚಿನವುಗಳಿವೆ.

click me!