Auto Sales January 2022: ಮಹೀಂದ್ರಾ ಕಾರುಗಳ ಮಾರಾಟ ಶೇ.20ರಷ್ಟು ಹೆಚ್ಚಳ!

Suvarna News   | Asianet News
Published : Feb 04, 2022, 11:23 AM IST
Auto Sales January 2022: ಮಹೀಂದ್ರಾ ಕಾರುಗಳ ಮಾರಾಟ ಶೇ.20ರಷ್ಟು ಹೆಚ್ಚಳ!

ಸಾರಾಂಶ

*ಜನವರಿಯಲ್ಲಿ ಶೇ.20ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದ ಮಹೀಂದ್ರಾ *ಕಳೆದ ತಿಂಗಳು ಒಟ್ಟು  46804 ವಾಹನಗಳ ಮಾರಾಟ  *ಎಕ್ಸ್‌ಯುವಿ 700 ಕೊಡುಗೆಯೇ ಹೆಚ್ಚು

Auto Desk: 2022ರ ಜನವರಿಯಲ್ಲಿ ಮಹೀಂದ್ರಾ & ಮಹೀಂದ್ರಾ (ಎಂ ಆ್ಯಂಡ್ ಎಂ) (Mahindra & Mahindra- M&M)  ಕಂಪನಿಯ ಒಟ್ಟು ಮಾರಾಟ 46,804ಕ್ಕೇರಿಕೆಯಾಗಿದ್ದು, ಶೇ. 19.55 ಕ್ಕೆ ಏರಿಕೆಯಾಗಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.2021ರ ಜನವರಿಯಲ್ಲಿ ಕಂಪನಿಯ ಒಟ್ಟು ಮಾರಾಟ 39,149 ವಾಹನಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಮಹೀಂದ್ರ ವಾಹನಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.ಮುಂಬೈ ಮೂಲದ ಆಟೋ ಮೇಜರ್ ದೇಶಿಯ ಮಾರುಕಟ್ಟೆಯಲ್ಲಿ  ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಕೊಂಚ ಇಳಿಕೆ ಕಂಡಿದೆ. ಕಳೆದ ತಿಂಗಳು ಒಟ್ಟು 19,964 ವಾಹನಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಕಳೆದ ವರ್ಷ ಜನವರಿಯಲ್ಲಿ 20,634  ವಾಹನಗಳ ಮಾರಾಟ ದಾಖಲಾಗಿತ್ತು.

2021ರ ಜನವರಿಯಲ್ಲಿ ಮಾರಾಟವಾದ 16,229 ವಾಣಿಜ್ಯ ವಾಹನಗಳಿಗೆ ಹೋಲಿಸಿದರೆ ಈ ವರ್ಷ ಅದು 23,979 ವಾಹನಗಳಿಗೆ ಹೆಚ್ಚಾಗಿದೆ. ಕಳೆದ ತಿಂಗಳು  2,861 ವಾಹನಗಳು ರಫ್ತಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 2,286 ವಾಹನಗಳು ರಫ್ತಾಗಿದ್ದವು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹೀಂದ್ರ ಆಟೋಮೋಟಿವ್ ವಿಭಾಗದ ಸಿಇಒ ವೀಜಯ್ ನಕ್ರಾ, "ನಾವು 2022 ರ ಜನವರಿಯಲ್ಲಿ ಒಟ್ಟಾರೆ ಶೇ. 20ರಷ್ಟು ಬೆಳವಣಿಗೆಯೊಂದಿಗೆ ಉತ್ತಮ ಪ್ರಗತಿ ದಾಖಲಿಸಿದ್ದೇವೆ. ಇದರೊಂದಿಗೆ ನಾವು  ಸೆಮಿ ಕಂಡಕ್ಟರ್ ಸಂಬಂಧಿತ  ಸಮಸ್ಯೆಗಳ ನಿಕಟ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.

ಇದನ್ನೂ ಓದಿ: Auto Sales January 2022: ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಮಾರಾಟ ಶೇ. 7.88ರಷ್ಟು ಕುಸಿತ!

ಮಹೀಂದ್ರಾ ಇತ್ತೀಚೆಗೆ ತನ್ನ ಮಹತ್ವಾಂಕ್ಷೆಯ ಮತ್ತು ಬಹುಬೇಡಿಕೆಯ ಎಕ್ಸ್ಯುವಿ 700 ( XUV700) ಎಸ್ಯುವಿ SUV ಸುಮಾರು ಒಂದು ಲಕ್ಷ ಬುಕಿಂಗ್ಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.. ಮಹೀಂದ್ರಾ ಕಳೆದ ವರ್ಷ XUV700 SUV ಅನ್ನು ಬಿಡುಗಡೆ ಮಾಡಿತು ಮತ್ತು ಇದು MX ಸರಣಿಯಲ್ಲಿ ಬರುತ್ತದೆ. ಇದು 2.0-ಲೀಟರ್ ಟರ್ಬೊ GDi ಸ್ಟಾಲಿಯನ್ ಪೆಟ್ರೋಲ್ ಎಂಜಿನ್ನಿಂದ ಚಾಲಿತವಾಗಿದ್ದು ಅದು 195 bhp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 2.2-ಲೀಟರ್ ಕಾಮನ್ರೈಲ್ ಟರ್ಬೊ ಡೀಸೆಲ್ mHawk ಎಂಜಿನ್ನೊಂದಿಗೆ ಬರುವ ವೇರಿಯಂಟ್ಗಳನ್ನು ಹೊಂದಿದೆ, ಇದು 153 bhp ಮತ್ತು 360 Nm ಟಾರ್ಕ್ನ ಪವರ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ.

ಇದರೊಂದಿಗೆ ಮಹೀಂದ್ರಾ ಥಾರ್ ಹಾಗೂ ಬೊಲೆರೋ ನಿಯೋ ಕೂಡ ಮಹೀಂದ್ರಾದ ಮಾರುಕಟ್ಟೆ ಷೇರು ಹೆಚ್ಚಳಕ್ಕೆ ಕೊಡುಗೆ ನೀಡಿವೆ. ಮಹೀಂದ್ರಾ ಎಕ್ಸ್ಯುವಿ 700 ಒಟ್ಟು 23 ವೇರಿಯಂಟ್ಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಇದರ ಟಾಪ್ ವೇರಿಯಂಟ್ಗಳು ಅಡಾಸ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇವುಗಳಲ್ಲಿ ಸೆನ್ಸಾರ್ ಹಾಗೂ ರೆಡಾರ್ ಸೌಲಭ್ಯಗಳನ್ನು ಕೂಡ ಕಾಣಬಹುದು. ಇದು ಅಲೆಕ್ಸಾ ಸೌಲಭ್ಯ ಹೊಂದಿದ ದೇಶದ ಮೊದಲ ಎಸ್ಯುವಿಯಾಗಿದೆ. ಇದು ವೇರಿಯಂಟ್ಗಳ ಆಧಾರದ ಮೇಲೆ 9ರಿಂದ 12 ಕಿಮೀವರೆಗೆ ಮೈಲೇಜ್ ನೀಡುತ್ತದೆ.

ಇದನ್ನೂ ಓದಿ: January 2022 Auto Sales: ಶೇ.1.4ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಕಿಯಾ ಇಂಡಿಯಾ!

ಈಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗಿರುವ ಮಹೀಂದ್ರ, ಮಹೀಂದ್ರಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹೀರೋ ಎಲೆಕ್ಟ್ರಿಕ್ ಜೊತೆಗೆ ಕೈಜೋಡಿಸಿದೆ.ಹೀರೋ ಎಲೆಕ್ಟ್ರಿಕ್ ಮತ್ತು ಮಹೀಂದ್ರಾ ಗ್ರೂಪ್ ನಡುವಿನ ಪಾಲುದಾರಿಕೆಯು ಸುಮಾರು 150 ಕೋಟಿ ರೂ. ಮೌಲ್ಯದ್ದಾಗಿದೆ ಮತ್ತು ಮುಂದಿನ ಐದು ವರ್ಷಗಳವರೆಗೆ ಮುಂದುವರಿಯುತ್ತದೆಶೀಘ್ರದಲ್ಲೇ ಕಂಪನಿ ಹೊಸ ಪೀಳಿಗೆಯ ಸ್ಕಾರ್ಪಿಯೋ ಹಾಗೂ ಥಾರ್‌ ಫೇಸ್‌ಲಿಫ್ಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮಹೀಂದ್ರಾ ಎಕ್ಸ್‌ಯುವಿ700 ನಂತರ ಸ್ಕಾರ್ಪಿಯೋ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್