ಕೇವಲ ಕಾರಲ್ಲ ಆತನ ಕನಸು, ಜೀವದ ಹಂಗು ತೊರೆದು ಕೊಚ್ಚಿ ಹೋಗ್ತಿದ್ದ ಕಾರು ಉಳಿಸಲು ಮಾಲೀಕನ ಪ್ರಯತ್ನ

Published : Jul 08, 2026, 07:03 PM IST
Man Braves Floodwaters to Save the Car

ಸಾರಾಂಶ

ಮಾಲೀಕನಿಗೆ ಅದು ಕೇವಲ ಕಾರಲ್ಲ, ತನ್ನ ಕಠಿಣ ಪರಿಶ್ರಮದ ಮೂಲಕ ಬೆವರು ಹರಿಸಿ ಖರೀದಿಸಿದ ಕನಸು. ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ ಎಂದಾಗ ಜೀವದ ಹಂಗು ತೊರೆದು ಕಾರು ಉಳಿಸಲು ನಡೆಸುತ್ತಿರುವ ಮಾಲೀಕನ ಪ್ರಯತ್ನ ಹಲವರನ್ನು ಭಾವುಕರನ್ನಾಗಿಸಿದೆ.

ಕರ್ನಾಟಕ ಸೇರಿದಂತೆ ಹಲವೆಡೆ , ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲೆವಡೆ ಬರಗಾಲವಿದ್ದರೆ, ಮತ್ತೆ ಕೆಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭೂಕುಸಿತಗಳು ಸಂಭವಿಸುತ್ತಿದೆ. ಒಂದೇ ಸಮನೆ ದಾಖಲೆ ಮೀರಿ ಮಳೆ ಸುರಿಯುತ್ತಿರುವ ಕಾರಣ ನಗರಗಳು, ರಸ್ತೆಗಳು ಜಾವೃತಗೊಳ್ಳುತ್ತಿದೆ. ಸೇತುವೆಗಳು ಮುಳುಗಡೆಯಾಗುತ್ತಿದೆ. ಇದರ ನಡುವೆ ತಾನು ಒಂದೊಂದು ರೂಪಾಯಿ ಕೂಡಿಟ್ಟು ಖರೀದಿಸಿ ಕನಸಿನ ಕಾರು ನೀರಿನಲ್ಲಿ ಕೊಚ್ಚಿ ಹೋದರೆ ಯಾರು ತಾನೆ ಸಹಿಸಲು ಸಾಧ್ಯ. ಹೀಗೆ ಟಾಟಾ ನೆಕ್ಸಾನ್ ಇವಿ ಮಾಲೀಕ ತನ್ನ ಕಾರು ನೀರಿನಲ್ಲಿ ಕೊಚ್ಚಿ ಹೋಗುವುದ ತಡೆಯಲ್ಲಿ ಎದೆ ಮಟ್ಟಕ್ಕೆ ನೀರಿದ್ದರೂ ಜೀವದ ಹಂಗು ತೊರೆದು ಉಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಎದೆ ಮಟ್ಟ ನೀರಿನಲ್ಲಿ ಕಾರು ಹಿಡಿದು ನಿಂತ ಮಾಲೀಕ

ಭಾರಿ ಮಳೆ ಹಾಗೂ ಒಂದೇ ಸಮನೆ ನೀರು ನುಗ್ಗಿದ ಕಾರಣ ಚಲಿಸುತ್ತಿದ್ದ ಕಾರುಗಳು ನೀರಿನಲ್ಲಿ ತೇಲಾಡಲು ಆರೆಂಭಿಸಿದೆ. ಟೆಟಾ ನೆಕ್ಸಾನ್ ಮಾಲೀಕ ಕಾರಿನಿಂದ ಹೊರಬಂದಿದ್ದಾನೆ. ಇತ್ತ ನಿರೀನ ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿದೆ. ಆದರೆ ಸಾಹಸ ಮಾಡಿದ ಮಾಲೀಕ ತನ್ನ ಎದೆ ಮಟ್ಟಕ್ಕೂ ನೀರಿದ್ದರೂ ಕಾರನ್ನು ಹಿಡಿದು ನಿಂತಿದ್ದಾನೆ. ಕಾರಿನ ಡಿಕ್ಕಿ ಡೋರ್ ತೆರೆದುಕೊಂಡಿದೆ. ವೈಪರ್ ಆನ್‌ನಲ್ಲಿದೆ. ಆದರೂ ಮಾಲೀಕ ಮಾತ್ರ ತಾನು ಕಷ್ಟಪಟ್ಟು ಖರೀದಿಸಿದ ನೆಕ್ಸಾನ್ ಇವಿ ಕಾರು ನೀರಿನಲ್ಲಿ ಕೊಚ್ಚಿ ಹೋಗಲು ಅನುಮತಿಸಿಲ್ಲ.

ಕಾರು ದಡ ಸೇರೋವರಗೆ ನೀರಿನಲ್ಲೇ ನಿಂತ ಮಾಲೀಕ

ನೀರಿನ ಸೆಳೆತದ ನಡುವೆಯೂ ಮಾಲೀಕ ಕಾರಿನ ಡೋರ್ ಹಿಡಿದು ಕೊಚ್ಚಿ ಹೋಗದಂತೆ ತಡೆದಿದ್ದಾನೆ. ಆದರೆ ದೈತ್ಯ ಕಾರನ್ನು ದಡ ಸೇರಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಈ ವೇಳೆ ಹಲವರು ಸೇರಿದ್ದಾರೆ. ಬಳಿಕ ಕ್ರೇನ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕ್ರೇನ್ ಕಾರಿಗೆ ಬೆಲ್ಟ್ ಹಾಕಿ ಎಳೆದಿದೆ. ಕಾರನ್ನು ನೀರಿನಿಂದ ಮೇಲಕ್ಕೆ ಎತ್ತಿ, ದಡ ಸೇರಿಸುವರೆಗೆ ಮಾಲೀಕ ಎದೆ ಮಟ್ಟದ ನೀರಿನಲ್ಲಿ ನಿಂತಿದ್ದಾನೆ. ಕಾರಿನ ಜೊತೆಯಲ್ಲೇ ಸಾಗಿದ್ದಾನೆ. ಕಾರಿಗೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿದ್ದಾನೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಮಾಲೀಕನ ಕಾರಿನ ಬೆಲೆ ಮಾತ್ರ ಗೊತ್ತಿರುವುದಲ್ಲ, ಕಾರು ಆತನ ಪರಿಶ್ರಮದ ಫಲ. ಬಹುದಿನಗಳ ಕನಸು ನನಸು ಮಾಡಿದ ಮಾಲೀಕ, ತನ್ನ ಕನಸನ್ನು ನೀರಿನಲ್ಲಿ ಕೊಚ್ಚಿ ಹೋಗಲು ಬಿಡಲು ಸಾಧ್ಯವೆ. ಹೀಗಾಗಿ ಮಾಲೀಕ ರಿಸ್ಕ್ ತೆಗೆದುಕೊಂಡು ತನ್ನ ಕಾರು ಉಳಿಸಿದ್ದಾನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

 

PREV
Read more Articles on
click me!

Recommended Stories

ಹೊಸ ಕಾರು ಖರೀದಿಗೆ ಒಳ್ಳೆ ಸಮಯ; ಮಾರುತಿ ಸುಜುಕಿ ಕಾರುಗಳಿಗೆ ಜುಲೈ ತಿಂಗಳಲ್ಲಿ ₹90,000 ವರೆಗೆ ಡಿಸ್ಕೌಂಟ್!
ಕ್ರೆಟಾಗೆ ಟಕ್ಕರ್ ನೀಡಲು ಕಾರಿನ ದರ ಇಳಿಸಿದ ಮಾರುತಿ ಸುಜುಕಿ, ವಿಕ್ಟೋರಿಸ್ SUV ಈಗ ಮತ್ತಷ್ಟು ಅಗ್ಗ