ಕ್ರೆಟಾಗೆ ಟಕ್ಕರ್ ನೀಡಲು ಕಾರಿನ ದರ ಇಳಿಸಿದ ಮಾರುತಿ ಸುಜುಕಿ, ವಿಕ್ಟೋರಿಸ್ SUV ಈಗ ಮತ್ತಷ್ಟು ಅಗ್ಗ

Published : Jul 07, 2026, 10:25 PM IST
Maruti Suzuki Victoris

ಸಾರಾಂಶ

ಮಾರುತಿ ಸುಜುಕಿ ತನ್ನ ಜನಪ್ರಿಯ ಮಿಡ್-ಸೈಜ್ ಎಸ್‌ಯುವಿ 'ವಿಕ್ಟೋರಿಸ್' ಕಾರಿನ ಆಯ್ದ ಟಾಪ್-ಎಂಡ್ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಯಲ್ಲಿ ₹38,900 ವರೆಗೆ ಕಡಿತಗೊಳಿಸಿದೆ. ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಮತ್ತು ಹಬ್ಬದ ಸೀಸನ್‌ಗೂ ಮುನ್ನ ಗ್ರಾಹಕರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ನವದೆಹಲಿ (ಜು.7): ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಹ್ಯುಂಡೈ ಕ್ರೆಟಾಗೆ ನೇರ ಪೈಪೋಟಿ ನೀಡುವ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೆಮ್ಮೆಯ ಮಿಡ್-ಸೈಜ್ ಎಸ್‌ಯುವಿ ‘ವಿಕ್ಟೋರಿಸ್’ (Victoris) ಕಾರಿನ ಆಯ್ದ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಯಲ್ಲಿ ಭಾರಿ ಡಿಸ್ಕೌಂಟ್‌ ಪ್ರಕಟಿಸಿದೆ. ಆಯ್ದ ಮಾಡೆಲ್‌ಗಳ ಎಕ್ಸ್-ಶೋರೂಮ್ ಬೆಲೆಯಲ್ಲಿ ಗರಿಷ್ಠ ₹38,900 ರವರೆಗೆ ಕಡಿತಗೊಳಿಸಲಾಗಿದ್ದು, ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.

ಯಾವ ವೇರಿಯೆಂಟ್‌ಗಳು ಅಗ್ಗವಾಗಿವೆ?

ಕಂಪನಿಯ ಈ ಬೆಲೆ ಕಡಿತದ ಲಾಭವು ಕೇವಲ ಪೆಟ್ರೋಲ್ ಎಂಜಿನ್ ಹೊಂದಿರುವ ಟಾಪ್-ಎಂಡ್ ವೇರಿಯೆಂಟ್‌ಗಳಾದ ZXi (O) ಮತ್ತು ZXi Plus (O) ಮಾಡೆಲ್‌ಗಳಿಗೆ ಮಾತ್ರ ಅನ್ವಯಿಸಲಿದೆ. ಈ ಎರಡು ವೇರಿಯೆಂಟ್‌ಗಳ ಮ್ಯಾನುಯಲ್ (MT) ಮತ್ತು ಆಟೋಮ್ಯಾಟಿಕ್ (AT) ಗೇರ್‌ಬಾಕ್ಸ್ ಹೊಂದಿರುವ ಒಟ್ಟು ನಾಲ್ಕು ಮಾದರಿಗಳ ಬೆಲೆಯಲ್ಲಿ ಮಾತ್ರ ಇಳಿಕೆ ಮಾಡಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ZXi (O) ಪೆಟ್ರೋಲ್ ಮ್ಯಾನುಯಲ್ ವೇರಿಯೆಂಟ್ ಮೇಲೆ ಅತ್ಯಂತ ಗರಿಷ್ಠ ಅಂದರೆ ಶೇ. 2.76 ರಷ್ಟು ದರ ಕಡಿತವಾಗಿದೆ. ಅದೇ ರೀತಿ, ZXi (O) ಪೆಟ್ರೋಲ್ ಆಟೋಮ್ಯಾಟಿಕ್ ಬೆಲೆಯಲ್ಲಿ ಶೇ. 2.49 ರಷ್ಟು ಹಾಗೂ ZXi Plus (O) ಪೆಟ್ರೋಲ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆಯಲ್ಲಿ ಶೇ. 2.46 ರಷ್ಟು ಇಳಿಕೆ ಮಾಡಲಾಗಿದೆ.

ಯಾವ ಮಾಡೆಲ್‌ಗಳ ದರ ಬದಲಾಗಿಲ್ಲ?

ವಿಕ್ಟೋರಿಸ್ ಕಾರಿನ ಬೇಸ್ ಮತ್ತು ಮಿಡ್ ವೇರಿಯೆಂಟ್‌ಗಳಾದ LXi, VXi, ZXi ಮತ್ತು ZXi Plus ನಾರ್ಮಲ್ (ನ್ಯಾಚುರಲಿ ಆಸ್ಪಿರೇಟೆಡ್) ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರಂಟ್-ವೀಲ್ ಡ್ರೈವ್ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇವೆಲ್ಲವೂ ಹಳೆಯ ದರದಲ್ಲೇ ಮುಂದುವರಿಯಲಿವೆ. ಇದರೊಂದಿಗೆ, ಪರಿಸರ ಸ್ನೇಹಿ ಸಿಎನ್‌ಜಿ (CNG) ಮತ್ತು ಇಂಧನ ದಕ್ಷತೆಯ ಸ್ಟ್ರಾಂಗ್ ಹೈಬ್ರಿಡ್ (Strong Hybrid) ಮಾಡೆಲ್‌ಗಳ ಬೆಲೆಯನ್ನು ಯಥಾಸ್ಥಿತಿಯಲ್ಲಿಡಲಾಗಿದೆ.

ಮಾಡೆಲ್‌ಹೊಸ ಬೆಲೆ (ಲಕ್ಷದಲ್ಲಿ)ಹಳೆ ಬೆಲೆ (ಲಕ್ಷದಲ್ಲಿ)ಅಂತರ
LXi MT10.510.5None
VXi MT11.811.8None
VXi AT13.3613.36None
ZXi MT13.5713.57None
ZXi (O) MT13.6914.0839,000
ZXi AT15.1315.13None
ZXi+ MT15.2415.24None
ZXi (O) AT15.2515.6439,000
ZXi+ (O) MT15.4315.8239,000
ZXI+ AT17.1917.19None
ZXi+ (O) AT17.3817.7739,000
ZXi+ AT AWD18.6418.64None
ZXi+ (O) AT AWD19.2219.22None

 

ಮಾರುತಿ ಸುಜುಕಿ ಈ ನಿರ್ಧಾರ ಕೈಗೊಂಡಿದ್ದೇಕೆ?

ಪ್ರಸ್ತುತ ದಿನಗಳಲ್ಲಿ ದೇಶದ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆಯನ್ನು ಸತತವಾಗಿ ಹೆಚ್ಚಿಸುತ್ತಿರುವಾಗ, ಮಾರುತಿ ಸುಜುಕಿ ತನ್ನ ಸಖತ್ ಡಿಮ್ಯಾಂಡ್‌ನಲ್ಲಿರುವ ಎಸ್‌ಯುವಿ ದರ ಇಳಿಸಿರುವುದು ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ. ಪ್ರಸ್ತುತ ವಿಕ್ಟೋರಿಸ್ ಭಾರತದಲ್ಲಿ ಸಿ-ಸೆಗ್ಮೆಂಟ್ ಮಿಡ್-ಸೈಜ್ ಎಸ್‌ಯುವಿ ವಿಭಾಗದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಕಾರಾಗಿದೆ. ಆದರೂ, ಹಬ್ಬಗಳ ಸೀಸನ್‌ಗೂ ಮುನ್ನ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಲು ಮತ್ತು ಈ ಸೆಗ್ಮೆಂಟ್‌ನಲ್ಲಿ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಕಂಪನಿ ಈ ರಣತಂತ್ರ ಹೂಡಿದೆ ಎನ್ನಲಾಗಿದೆ.

ವಿಕ್ಟೋರಿಯಸ್‌ ಕಾರಿಗೆ ಪ್ರಬಲ ಎದುರಾಳಿಗಳು

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ವಿಕ್ಟೋರಿಸ್ ಕಾರಿಗೆ ಪ್ರಬಲ ಸ್ಪರ್ಧಿಗಳ ದಂಡೇ ಇದೆ. ಇದು ಹ್ಯುಂಡೈ ಕ್ರೆಟಾ (Hyundai Creta), ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Hyryder), ತನ್ನದೇ ಕಂಪನಿಯ ಮಾರುತಿ ಗ್ರಾಂಡ್ ವಿಟಾರಾ (Grand Vitara), ಟಾಟಾ ಸಿಯೆರಾ (Tata Sierra), ರೆನಾಲ್ಟ್ ಡಸ್ಟರ್ (Renault Duster) ಮತ್ತು ಹೋಂಡಾ ಎಲಿವೇಟ್ (Honda Elevate) ಕಾರುಗಳಿಗೆ ನೇರ ಪೈಪೋಟಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ನಿಸ್ಸಾನ್ ಟೆಕ್ಟಾನ್ (Nissan Tekton) ಕೂಡ ಈ ಸೆಗ್ಮೆಂಟ್‌ಗೆ ಎಂಟ್ರಿ ಕೊಡಲಿದ್ದು, ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ.

 

PREV
Read more Articles on
click me!

Recommended Stories

ಎಚ್ಚರ! ಕಾರ್‌ ಸೀಟ್ ಕವರ್ ಹಾಕಿಸುವ ಮುನ್ನ Airbag ಲೋಗೋ ಚೆಕ್ ಮಾಡ್ತೀರಾ? ಖರೀದಿಸುವಾಗ ಈ ಅಂಶಗಳು ನೆನಪಿರಲಿ!
ಚಾರ್ಜಿಂಗ್ ಪೋರ್ಟ್‌ನಿಂದ ಟೈರ್‌ವರೆಗೆ... ಮಳೆಗಾಲದಲ್ಲಿ EV ಕಾಪಾಡಿಕೊಳ್ಳುವ ಸಂಪೂರ್ಣ ಗೈಡ್