ಸೆಲೆಬ್ರೆಟಿಗಳ ನೆಚ್ಚಿನ ಟೊಯೋಟಾ, ಎಂಜಿ ಸೇರಿ ಲಕ್ಷುರಿ ಕಾರಿಗೆ ಆತಂಕ, ಬರುತ್ತಿದೆ BYD ಡೆಂಜಾ ಡಿ9

Published : Aug 05, 2026, 10:27 PM IST
BYD Denza D9 Coming Soon

ಸಾರಾಂಶ

ಸಲೆಬ್ರೆಟಿಗಳ ಟೋಯೋಟಾ ವೆಲ್‌ಫೈರ್, ಎಂಜಿ ಎಂ9, ಮರ್ಸಿಡೀಸ್ ಸೇರಿದಂತೆ ಪ್ರಮುಖ ಕಾರುಗಳಿಗೆ ನಡುಕು ಶುರುವಾಗಿದೆ. ಕಾರಣ ಈ ಎಲ್ಲಾ ಕಾರುಗಳ ಬೆಲೆಗಿಂತ ಕಡಿಮೆ ಹಾಗೂ ಅದಕ್ಕಿಂತ ಐಷಾರಾಮಿತನ, ಫೀಚರ್ಸ್‌ನೊಂದಿಗೆ ಬಿವೈಡಿ ಭಾರತದಲ್ಲಿ ಡೆಂಜಾ ಡಿ9 ಕಾರು ಲಾಂಚ್ ಮಾಡುತ್ತಿದೆ.

ನವದೆಹಲಿ (ಆ.05) ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ತಮ್ಮ ಪ್ರಯಾಣಕ್ಕಾಗಿ ಟೊಯೋಟಾ ವೆಲ್‌ಫೈರ್, ಎಂಜಿ ಎಂ9 ಸೇರಿದಂತೆ ಕೆಲ ಮರ್ಸಿಡೀಸ್ ಬೆಂಜ್ ವಿ ಕ್ಲಾಸ್ ಕಾರು ಬಳಸುತ್ತಾರೆ. ವಿಶೇಷವಾಗಿ ಸೆಲೆಬ್ರೆಟಿಗಳು ಕ್ಯಾರವಾನ್ ರೀತಿಯಲ್ಲೂ ಬಳಕೆ ಮಾಡುತ್ತಾರೆ. ಇದೀಗ ಎಲ್ಲಾ ಕಾರುಗಳಿಗೆ ಸೆಡ್ಡು ಹೊಡೆಯಲು ಬಿವೈಡಿ ಎಲೆಕ್ಟ್ರಿಕ್ ಕಾರು ಕಂಪನಿ ಭಾರತದಲ್ಲಿ ಬಿವೈಡಿ ಡೆಂಜಾ 9 ಕಾರು ಬಿಡುಗಡೆ ಮಾಡುತ್ತಿದೆ. ಡೆಂಜಾ ಡಿ9 ತೀವ್ರ ಪೈಪೋಟಿ ನೀಡಲಿದೆ. ಕಾರಣ ಅತ್ಯಂತ ಐಷಾರಾಮಿತನ, ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ಜೊತೆಗೆ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಹೊಸ ಕಾರಿನ ಬೆಲೆ

ಬಿವೈಡಿ ಭಾರತದಲ್ಲಿ ಬಿಡುಗಡೆ ಮಾಡಲಿರುವ ಡೆಂಜಾ ಡಿ9 ಕಾರು ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆ ಹೊಂದಿದೆ. 80 ಲಕ್ಷ ರೂಪಾಯಿಯಿಂದ 1 ಲಕ್ಷ ರೂಪಾಯಿ ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಂಜ್ ವಿ ಕ್ಲಾಸ್ ಹಾಗೂ 1.2 ಕೋಟಿಯ ವೆಲ್‌ಫೈರ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಡೆಂಜಾ ಡಿ9 ಕಾರು ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಎಂಜಿ ಎಂ9 ಕಾರು 79.95 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

ಡೆಂಜಾ ಡಿ9 ಕಾರಿನ ಮೈಲೇಜ್

ಡೆಂಜಾ ಡಿ9 ಕಾರು 5250 ಮೀಮಿ ಉದ್ದ, 1960 ಮಿಮಿ ಅಗಲ, 1920 ಮಿಮಿ ಎತ್ತರ ಹಾಗೂ 3110 ಮಿಮಿ ವ್ಹೀಲ್‌ಬೇಸ್ ಹೊಂದಿದೆ. ಕಾರಿನಲ್ಲಿ 410 ಲೀಟರ್ ಬೂಟ್ ಸ್ಪೇಸ್, ಹಿಂಬಾಗದ ಸೀಟು ಫೋಲ್ಡ್ ಮಾಡಿದರೆ 2310 ಲೀಟರ್ ವರಗೆ ವಿಸ್ತರಣೆ ಪಡೆದುಕೊಳ್ಳಲಿದೆ. ಹೀಗಾಗಿ ಅತ್ಯಂತ ಆರಾಮದಾಯಕ ಪ್ರಯಾಣ ನೀಡಲಿದೆ. ಪ್ರಮಾಗಿ 103.36 kWh ಬ್ಯಾಟರಿ ಬ್ಯಾಕ್ ಬಳಕೆ ಮಾಡುವ ಸಾಧ್ಯತೆ ಇದೆ. ಒಂದು ಬಾರಿ ಚಾರ್ಜ್ ಮಾಡಿದರೆ 600 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.

ನೂತನ ಬಿವೈಡಿ ಡೆಂಜಾ ಡಿ9 ಕಾರು 2026ರ ದೀಪಾವಳಿ ಅಥವಾ 2027ರ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನೂತನ ಕಾರು ಮರ್ಸಿಡೀಸ್ ಬೆಂಜ್ ವಿ ಕ್ಲಾಸ್, ಟೋಯೋಟಾ ವೆಲ್‌ಫೈರ್, ಲೆಕ್ಸಸ್ ಎಲ್ಎಂ , ಎಂಜಿ ಎಂ9 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಗರಿಷ್ಠ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಲೆವೆಲ್ 2 ಅಡಾಸ್ ಫೀಚರ್, 8 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮರಾ ಸಿಸ್ಟಮ್ ಸೇರಿದಂತೆ ಇತರ ಕಡ್ಡಾಯ ಸುರಕ್ಷತಾ ಫೀಚರ್ಸ್ ಇದರಲ್ಲಿದೆ. ಇನ್ಫೊಟೈನ್ಮೆಂಟ್ ಸಿಸ್ಟಮ್ ಹಾಗೂ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ , ಹೆಡ್ಅಪ್ ಡಿಸ್‌ಪ್ಲೇ ದೊಡ್ಡ ಹಾಗೂ ವಿಶಾಲವಾಗಿ ನೀಡಲಾಗಿದೆ. ಡ್ಯುಯೆಲ್ ಸನ್‌ರೂಫ್, ಕ್ಲೈಮೇಟ್ ಕಂಟ್ರೋಲ್, ವೈಯರ್‌ಲೆಸ್ ಚಾರ್ಜರ್ ಸೇರಿದಂತೆ ಇತರ ಫೀಚರ್ ಈ ಕಾರಿನಲ್ಲಿದೆ.

PREV
Read more Articles on
click me!

Recommended Stories

ಕನ್ನಡ ಸೇರಿ 6 ಭಾರತದ ಭಾಷೆಗಳಲ್ಲಿ ಮಾತನಾಡಲಿದೆ ಟೆಸ್ಲಾ ಕಾರು, Y ಮಾಡೆಲ್ ಬೆಲೆ ಎಷ್ಟು?
ಕಾರುಗಳಲ್ಲಿ ಚೀನಾ ಬ್ಯಾಟರಿ ಬಳಸೋದಿಲ್ಲ ಎಂದ ಟಾಟಾ, ಸ್ವದೇಶಿ LFP ತಂತ್ರಜ್ಞಾನ ಅಭಿವೃದ್ಧಿಗೆ ಬಿಗ್ ಪ್ಲಾನ್, ಬೆಂಗಳೂರಲ್ಲಿ R&D ಕೇಂದ್ರ!