ಕನ್ನಡ ಸೇರಿ 6 ಭಾರತದ ಭಾಷೆಗಳಲ್ಲಿ ಮಾತನಾಡಲಿದೆ ಟೆಸ್ಲಾ ಕಾರು, Y ಮಾಡೆಲ್ ಬೆಲೆ ಎಷ್ಟು?

Published : Aug 05, 2026, 05:48 PM IST
tesla bengaluru

ಸಾರಾಂಶ

ಭಾರತದಲ್ಲಿ ಅಮೆರಿಕನ್ ಟೆಸ್ಲಾ ಕಾರು ಈಗಾಗಲೇ ಮಾರಾಟ ಆರಂಭಿಸಿದೆ. ವಿಶೇಷ ಅಂದರೆ ಇದೀಗ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಟೆಸ್ಲಾ ಕಾರು ಮಾತನಾಡಲಿದೆ. 500 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರಿನ ಬೆಲೆ ಹಾಗೂ ಗ್ರೂಕ್ ಎಐ ವಿಶೇಷತೆ ಇಲ್ಲಿದೆ.

ಬೆಂಗಳೂರು (ಆ.05) ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಟೆಸ್ಲಾ ಭಾರತದಲ್ಲಿ ಲಭ್ಯವಿದೆ. ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ಈಗಾಗಲೇ ಭಾರತದಲ್ಲಿ ಮಾರಾಟ ಆರಂಭಿಸಿದೆ. ಟೆಸ್ಲಾ ವೈ ಮಾಡೆಲ್ ಕಾರು ಬೆಂಗಳೂರು ಸೇರಿದಂತೆ ಎಲ್ಲೆಡೆ ಲಭ್ಯವಿದೆ. ವಿಶೇಷ ಅಂದರೆ ಟೆಸ್ಲಾ ವೈ ಮಾಡೆಲ್ ಕಾರು ಇದೀಗ ಕನ್ನಡ ಸೇರಿದಂತೆ ಭಾರತದ 6 ಭಾಷೆಗಳಲ್ಲಿ ಮಾತನಾಡಲಿದೆ. ಕಾರಿನಲ್ಲಿ ಕನೆಕ್ಟೆಡ್ ಫೀಚರ್ಸ್ ಮೂಲಕ ಕಮಾಂಡ್ ನೀಡಲು ಸಾಮಾನ್ಯವಾಗಿ ಇಂಗ್ಲೀಷ್ ಭಾಷೆಯಲ್ಲೇ ನೀಡಬೇಕು. ಆದರೆ ಟೆಸ್ಲಾದಲ್ಲಿ ಇದೀಗ ಕನ್ನಡ ಸೇರಿದಂತೆ 6 ಭಾಷೆಯಲ್ಲಿ ಕಮಾಂಡ್ ನೀಡಲು ಸಾಧ್ಯವಿದೆ. ಇಷ್ಟೇ ಅಲ್ಲ ನಿಮ್ಮ ಸ್ಥಳೀಯ ಭಾಷೆಗಳಲ್ಲೇ ಉತ್ತರ ನೀಡಲಿದೆ.

ಟೆಸ್ಲಾ ವೈ ಮಾಡೆಲ್‌ಗೆ ಗ್ರೋಕ್ AI ಲಿಂಕ್

ಭಾರತದಲ್ಲಿ ಟೆಸ್ಲಾ ಕಾರುಗಳ ಪೈಕಿ ವೈ ಮಾಡೆಲ್ ಮಾತ್ರ ಲಭ್ಯವಿದೆ. ಇದೀಗ ವೈ ಮಾಡೆಲ್ ಕಾರಿಗೆ ಗ್ರೂಕ್ ಎಐ ಲಿಂಕ್ ಮಾಡಲಾಗಿದೆ. ಪರಿಣಾಮ ಕನ್ನಡ ಸೇರಿದಂತೆ ಭಾರತದ ಪ್ರಮುಖ 6 ಭಾಷೆಗಳಲ್ಲಿ ಕಮಾಂಡ್ ಸ್ವೀಕರಿಸಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ವೈ ಮಾಡೆಲ್ ಕಾರು ಅತ್ಯಂತ ವಿಶೇಷ ಎನಿಸಿಕೊಂಡಿದೆ.

ಭಾರತದ ಮೊದಲ ಪ್ರೀಮಿಯಂ ಕಾರು

ಭಾರತದ ಸ್ಥಳೀಯ 6 ಭಾಷೆಗಳಲ್ಲಿ ವಾಯ್ಸ್ ಅಸಿಸ್ಟೆನ್ಸ್ ಪಡೆದ ಮೊಜದಲ ಪ್ರೀಮಿಯಂ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಟೆಸ್ಲಾ ವೈ ಮಾಡೆಲ್ ಕಾರಿಗೆ ಗ್ರೂಕ್ ಎಐ ಲಿಂಕ್ ಮಾಡಲಾಗಿದೆ. ಇದರಿಂದ ಟೆಸ್ಲಾ ಕಾರು ಕನ್ನಡ, ಹಿಂದಿ, ತೆಲುಗು, ಮರಾಠಿ, ಬೆಂಗಾಲಿ ಹಾಗೂ ತಮಿಳು ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಹೀಗಾಗಿ ಚಾಲಕರು ತಮ್ಮ ಭಾಷೆಗಳಲ್ಲೇ ಕಮಾಂಡ್ ನೀಡಬಹುದು. ಇನ್ನು ಟೆಸ್ಲಾ ಕೂಡ ಸ್ಥಳೀಯ ಭಾಷೆಗಳಲ್ಲಿ ಉತ್ತರಿಸಲಿದೆ ಹಾಗೂ ಕಾರ್ಯನಿರ್ವಹಿಸಲಿದೆ.

ಗ್ರೂಗ್ ಎಐನಿಂದ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುವಾಗ ರಿಯಲ್ ಟೈಮ್ ಟ್ರಾಫಿಕ್ ಮಾಹಿತಿ, ಇವಿ ಚಾರ್ಜಿಂಗ್ ಸ್ಟೇಶನ್, ರೂಟ್ ಮ್ಯಾಪ್ ಸೇರಿದಂತೆ ಹಲವು ಮಾಹಿತಿಗಳನ್ನು ಸ್ಥಳೀಯ ಬಾಷೆಯಲ್ಲೇ ನೀಡಲಿದೆ. ಈಗಾಗಲೇ ವೈ ಮಾಡೆಲ್ ಕಾರು ಖರೀದಿಸಿರುವ ಗ್ರಾಹಕರು OTA ಅಪ್‌ಡೇಟ್ ಮೂಲಕ ಸ್ಥಳೀಯ ಭಾಷೆ ಅಸಿಸ್ಟೆನ್ಸ್ ಸೌಲಭ್ಯ ಪಡೆಯಬಹುದು.ಇದೇ ವೇಳೆ ಚಾಲಕನ ಪ್ರಶ್ನೆಗಳಿಗೂ ಉತ್ತರ ನೀಡಲಿದೆ.

ಕಾರಿನ ಬೆಲೆ ಎಷ್ಟು?

ಟೆಸ್ಲಾ ವೈ ಮಾಡೆಲ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಾರಿನ ಆರಂಭಿಕ ಬೆಲೆ 50.89 ಲಕ್ಷ ರೂಪಾಯಿ.

PREV
Read more Articles on
click me!

Recommended Stories

ಕಾರುಗಳಲ್ಲಿ ಚೀನಾ ಬ್ಯಾಟರಿ ಬಳಸೋದಿಲ್ಲ ಎಂದ ಟಾಟಾ, ಸ್ವದೇಶಿ LFP ತಂತ್ರಜ್ಞಾನ ಅಭಿವೃದ್ಧಿಗೆ ಬಿಗ್ ಪ್ಲಾನ್, ಬೆಂಗಳೂರಲ್ಲಿ R&D ಕೇಂದ್ರ!
ಆಗಸ್ಟ್ 28ಕ್ಕೆ MG ನೂತನ SUV ರಿಲೀಸ್‌: ಮಹೀಂದ್ರಾ XUV 7XO, ಟಾಟಾ ಸಫಾರಿಗೆ ಶುರುವಾಯ್ತು ನಡುಕ!