ಸಿಗ್ನಲ್ ಹಾರಲು ಹೋಗಿ ಅವಾಂತರ: ಕಾರಿಗೆ ಡಿಕ್ಕಿ ಹೊಡೆದ 4 ಪಲ್ಟಿ ಹೊಡೆದ ಕಾರು: ಸಿಸಿಟಿವಿ ದೃಶ್ಯ ವೈರಲ್‌

Published : Jun 07, 2024, 08:46 AM IST
ಸಿಗ್ನಲ್ ಹಾರಲು ಹೋಗಿ ಅವಾಂತರ: ಕಾರಿಗೆ ಡಿಕ್ಕಿ ಹೊಡೆದ 4 ಪಲ್ಟಿ ಹೊಡೆದ ಕಾರು: ಸಿಸಿಟಿವಿ ದೃಶ್ಯ ವೈರಲ್‌

ಸಾರಾಂಶ

ಸಿಗ್ನಲ್ ಜಂಪ್ ಮಾಡಿದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು 4 ಬಾರಿ ಪಲ್ಟಿ ಹೊಡೆದ ಘಟನೆ ಹೈದಾರಾಬಾದ್‌ನಲ್ಲಿ ನಡೆದಿದ್ದು, ಈ ಅಪಘಾತದ  ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌: ಸಿಗ್ನಲ್ ಜಂಪ್ ಮಾಡಿದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು 4 ಬಾರಿ ಪಲ್ಟಿ ಹೊಡೆದ ಘಟನೆ ಹೈದಾರಾಬಾದ್‌ನಲ್ಲಿ ನಡೆದಿದ್ದು, ಈ ಅಪಘಾತದ  ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಏನಾದರೂ ಹಾನಿಯಾಗಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.

ವೀಡಿಯೋದಲ್ಲಿ ಕಾಣಿಸುವಂತೆ ವೇಗವಾಗಿ ಬಂದ ಕಪ್ಪು ಬಣ್ಣದ ಕಿಯಾ ಕರೆನ್ಸ್ ಕಾರು ಸಿಗ್ನಲ್ ಜಂಪ್ ಮಾಡಲು ಮುಂದಾಗಿದೆ. ಇದೇ ವೇಳೆ ಬಿಳಿ ಬಣ್ಣದ ಟೊಯೋಟಾ ಇನ್ನೊವಾ ಹೈಕ್ರೂಸ್ ಕಾರಿಗೆ ಡಿಕ್ಕಿ ಹೊಡೆದು 3 ರಿಂದ 4 ಬಾರಿ ಡಿಕ್ಕಿ ಹೊಡೆದಿದೆ. ಈ ವೀಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಯಾ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟೊಯೋಟಾ ಕಾರಿನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. 

ಕಾರು ಚಾಲನೆ ವೇಳೆಯೇ ಚಾಲಕನಿಗೆ ತಲೆ ಚಕ್ಕರ್: ಹಲವು ಬೈಕ್‌ಗಳಿಗೆ ಡಿಕ್ಕಿ: ಮೂವರು ಬಲಿ: ವೀಡಿಯೋ

ಹೈದರಾಬಾದ್‌ನ ಸಿಕಂದರಬಾದ್ ಕ್ಲಬ್ ಬಳಿ ಈ ಘಟನೆ ನಡೆದಿದೆ. Priyathosh Agnihamsa ಎಂಬುವವರು ಈ 40 ಸೆಕೆಂಡ್‌ಗಳ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಬೇರೆ ವಾಹನಗಳೆಲ್ಲಾ ಸಿಗ್ನಲ್ ಬಿದ್ದಿದೆ ಎಂದು ನಿಂತಿದ್ದರೆ, ಈ ಕಿಯಾ ಕಾರ್ ಸಿಗ್ನಲ್ ಬಿದ್ದ ನಂತರವೂ ಸಿಗ್ನಲ್ ಹಾರಲು ಹೋಗಿ ಈ ಅವಾಂತರವಾಗಿದೆ. 

ಸಿಗ್ನಲ್ ಜಂಪ್ ವೇಳೆ ಎಡಭಾಗದ ರಸ್ತೆಯಿಂದ ಬಿಳಿ ಬಣ್ಣದ ಟೊಯೊಟಾ ಕಾರು ಬಂದಿದ್ದು, ಅದು ಡಿಕ್ಕಿ ಹೊಡೆಯಬಾರದೆಂದು ವೇಗವಾಗಿ ತಪ್ಪಿಸಿಕೊಳ್ಳಲು ಹೋಗಿ ಕಾರು 3 ರಿಂದ 4 ಬಾರಿ ಮಗುಚಿ ಬಿದ್ದಿದ್ದು, ನಜ್ಜುಗುಜ್ಜಾಗಿದೆ. ಅಪಘಾತ ನಡೆದ ಕೂಡಲೇ ಇತರ ವಾಹನ ಸವಾರರು ಕಾರಿನ ಬಳಿ ರಕ್ಷಣೆಗಾಗಿ ಓಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.  ಕೆಲ ಮೂಲಗಳ ಪ್ರಕಾರ ಕಾರಿನಲ್ಲಿ ಸಿಲುಕಿದ್ದವರನ್ನು ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ಹೊರ ತಂದಿದ್ದಾರೆ. ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರಿಗೆ ಕೆಲ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

ಕೇಸಿಂದ ಮಗನ ಬಚಾವ್‌ ಮಾಡಲು ತನ್ನ ರಕ್ತವನ್ನೇ ನೀಡಿದ್ದ ಪುಣೆ ಬಾಲಕನ ತಾಯಿ!
 

 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ