ಮಾರುತಿ ಸುಜುಕಿ ಜನರಿಗೆ ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುತ್ತಿದೆ. ಇದೀಗ ಮಾರುತಿ ಮಹತ್ವದ ಘೋಷಣೆ ಮಾಡಿದೆ. ಆಯ್ದ ಮಾರುತಿ ಕಾರುಗಳ ಬೆಲೆ ಕಡಿತ ಮಾಡಲಾಗಿದೆ. ಜನಸಾಮಾನ್ಯರ ಕಾರು ಕನಸು ನನಸಾಗಿಸಲು ಇದು ಸುವರ್ಣಅವಕಾಶ.
ನವದೆಹಲಿ(ಜೂನ್ 01) ಭಾರತದಲ್ಲಿ ಅತೀ ದೊಡ್ಡ ಕಾರು ಮಾರುಕಟ್ಟೆ ಹೊಂದಿರುವ ಮಾರುತಿ ಸುಜುಕಿ ಕೈಗೆಟುಕವ ದರದಲ್ಲಿ ಜನರಿಗೆ ಕಾರುಗಳನ್ನು ನೀಡುತ್ತಿದೆ. ಮಾರುತಿ ಸುಜುಕಿ ಕಾರುಗಳ ಬೆಲೆಯೂ ಕಡಿಮೆ, ನಿರ್ವಹಣೆ ಕೂಡ ಸುಲಭ. ಹೀಗಾಗಿ ಜನಸಾಮಾನ್ಯರ ಮೊದಲ ಆಯ್ಕೆ ಮಾರುತಿ ಸುಜುಕಿ. ಇದೀಗ ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಭರ್ಜರಿ ಬೆಲೆ ಕಡಿತ ಮಾಡಿದೆ. ಹೌದು, ಮಾರುತಿ ಸುಜುಕಿ ಅಟೋ ಗೇರ್ ಶಿಫ್ಟ್ ಮಾಡೆಲ್ ಕಾರುಗಳ ಬೆಲೆ ಇಳಿಕೆಯಾಗಿದೆ.
ಮಾರುತಿ ಸುಜುಕಿ ಬೆಲೆ ಕಡಿತ ಕುರಿತು ಅಧಿಕೃತ ಘೋಷಣೆ ಮಾಡಿದೆ. ಆಟೋ ಗೇರ್ ಶಿಫ್ಟ್ ವಾಹನಗಳನ್ನ ಕೈಗೆಟುಕುವ ದರದಲ್ಲಿ ನೀಡಲು ಮಾರುತಿ ದರ ಕಡಿತ ಮಾಡಿದೆ. ಈ ಮೂಲಕ ಜನಸಾಮಾನ್ಯರು ಎಜಿಎಸ್ ಕಾರು ಕನಸು ನನಸು ಮಾಡಲು ಸಾಧ್ಯವಿದೆ ಅನ್ನೋದು ಮಾರುತಿ ಸುಜುಕಿ ಅಭಿಪ್ರಾಯವಾಗಿದೆ.
ಭಾರತದಲ್ಲಿ ಪೆಟ್ರೋಲ್ ಡೀಸೆಲ್ ವಾಹನ ಇನ್ನು ಇಷ್ಟು ವರ್ಷ ಮಾತ್ರ, ಡೆಡ್‌ಲೈನ್ ಘೋಷಿಸಿದ ಗಡ್ಕರಿ!
ಯಾವ ಮಾಡೆಲ್ ಕಾರುಗಳ ಬೆಲೆ ಕಡಿತ?
ಮಾರುತಿ ಸುಜುಕಿಯ ಬಹುತೇಕ ಎಲ್ಲಾ ಆಟೋ ಗೇರ್ ಶಿಫ್ಟ್(AGS) ಕಾರುಗಳ ಮೇಲೆ ಬೆಲೆ ಕಡಿತ ಮಾಡಲಾಗಿದೆ. ಅಲ್ಟೋ ಕೆ10, ಎಸ್ ಪ್ರೆಸ್ಸೋ, ಸೆಲೆರಿಯೋ, ವ್ಯಾಗನರ್, ಸ್ವಿಫ್ಟ್, ಡಿಸೈರ್, ಬಲೆನೋ, ಫ್ರಾಂಕ್ಸ್ ಹಾಗೂ ಇಗ್ನಿಸ್ ಎಜಿಎಸ್ ಕಾರುಗಳ ಬೆಲೆ ಕಡಿತ ಮಾಡಲಾಗಿದೆ. ಇಂದಿನಿಂದಲೇ(ಜೂನ್ 1) ರಿಂದ ಬೆಲೆ ಕಡಿತ ಅನ್ವಯವಾಗಿದೆ.
ಎಲ್ಲಾ ಎಜಿಎಸ್ ಮಾಡೆಲ್ ಕಾರುಗಳ ಬೆಲೆ 5,000 ರೂಪಾಯಿ ಬೆಲೆ ಕಡಿತ ಮಾಡಲಾಗಿದೆ. ಅಲ್ಟೋ ಸೇರಿದಂತೆ ಫ್ರಾಂಕ್ಸ್ ವರೆಗೂ ಯಾವುದೇ ಎಜಿಎಸ್ ಕಾರು ಇಂದಿನಿಂದ ಬುಕ್ ಮಾಡಿದರೆ 5,000 ರೂಪಾಯಿ ರಿಯಾಯಿತಿ ಸಿಗಲಿದೆ. ಈ ಮೂಲಕ ಜನರಿಗೆ ಮಾರುತಿ ಸುಜುಕಿ ಕೊಂಚ ರಿಲೀಫ್ ನೀಡಿದೆ.
ಕೊಹ್ಲಿ ಮೊದಲ ಕಾರು ಯಾವುದು? SUV ಖರೀದಿಸಿ ಪೆಟ್ರೋಲ್ ಪಂಪ್‌ನಲ್ಲಿ ಎಡವಟ್ಟು ಮಾಡಿದ್ದ ಕಿಂಗ್!
ಸದ್ಯ ಎಜಿಎಸ್ ಕಾರುಗಳಿಗೆ ಭಾರಿ ಬೇಡಿಕೆ. ನಗರ ಪ್ರದೇಶಗಳಲ್ಲಿ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ಹೆಚ್ಚು. ಸುಲಭ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನವರು ಆಟೋಮ್ಯಾಟಿಕ್ ಕಾರುಗಳನ್ನು ಬಳಕೆ ಮಾಡುತ್ತಾರೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಬೆಲೆ ಕೂಡ ಕಡಿತ ಮಾಡಿರುವುದು ಕಾರು ಖರೀದಿಸುವವರ ಸಂತಸ ಹೆಚ್ಚಿಸಿದೆ.ಮಾರುತಿ ಸುಜುಕಿಯ ಎಜಿಎಸ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಕೈಗೆಟುಕುವ ದರದಲ್ಲಿ ಮಾರುತಿ ಸುಜುಕಿ ಆಟೋ ಗೇರ್ ಶಿಫ್ಟ್ ಕಾರುಗಳನ್ನು ನೀಡುತ್ತಿದೆ. ಇದೀಗ ಬೆಲೆ ಕಡಿತದ ಮೂಲಕ ಮಾರಾಟ ಹೆಚ್ಚಿಸಲು ಮುಂದಾಗಿದೆ.