Latest Videos

ರೇಂಜ್ ರೋವರ್ ಬೆಲೆ ಬರೋಬ್ಬರಿ 56 ಲಕ್ಷ ರೂ ಇಳಿಕೆ, ಕೈಗೆಟುಕವ ದರದಲ್ಲಿ ಐಷಾರಾಮಿ ಕಾರು!

By Chethan KumarFirst Published May 30, 2024, 3:24 PM IST
Highlights

ಟಾಟಾ ಮಾಲೀಕತ್ವದ ಬ್ರಿಟಿಷ್ ಕಾರು ಲ್ಯಾಂಡ್ ರೋವರ್ ರೇಂಜ್ ರೋವರ್ ಬಹುಬೇಡಿಕೆಯ ಐಷಾರಾಮಿ ಹಾಗೂ ದುಬಾರಿ ಕಾರು. ಇದೀಗ ಈ ರೇಂಜ್ ರೋವರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಬರೋಬ್ಬರಿ 56 ಲಕ್ಷ ರೂಪಾಯಿ ಇಳಿಕೆಯಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ.
 

ನವದೆಹಲಿ(ಮೇ.30) ದುಬಾರಿ ಹಾಗೂ ಐಷಾರಾಮಿ ಕಾರುಗಳ ಪೈಕಿ ರೇಂಜ್ ರೋವರ್ ಮುಂಚೂಣಿಯಲ್ಲಿದೆ. ಟಾಟಾ ಮಾಲೀಕತ್ವದ ಬ್ರಿಟೀಷ್  ಕಾರಿಗೆ ವಿಶ್ವದಲ್ಲೆಡೆ ಭಾರಿ ಬೇಡಿಕೆ ಇದೆ. ಸೆಲೆಬ್ರೆಟಿಗಳು, ಉದ್ಯಮಿಗಳು, ಶ್ರೀಮಂತರು ಹೆಚ್ಚಾಗಿ ರೇಂಜ್ ರೋವರ್, ಜಾಗ್ವಾರ್ ಕಾರುಗಳ ಮೊರೆ ಹೋಗುತ್ತಾರೆ. ಇದೀಗ ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳ ಬೆಲೆಯಲ್ಲಿ ಬರೋಬ್ಬರಿ 56 ಲಕ್ಷ ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಐಷಾರಾಮಿ ಬ್ರಿಟಿಷ್ ಕಾರು ಇದೀಗ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ. 

ಭಾರತದಲ್ಲಿ ಏಕಾಏಕಿ ಅರ್ಧ ಕೋಟಿ ಬೆಲೆ ಇಳಿಕೆಯಾಗಲು ಕಾರಣವೂ ಇದೆ. ಇಷ್ಟು ದಿನ ಲಂಡನ್‌ನಲ್ಲಿ ಉತ್ಪಾದನೆಯಾಗಿ, ಭಾರತ ಸೇರಿದಂತೆ ಇತರ ಎಲ್ಲಾ ದೇಶಗಳಿಗೆ ಕಾರು ರಫ್ತಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಲಂಡನ್ ಹೊರಗಡೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ಉತ್ಪಾದನೆಯಾಗುತ್ತಿದೆ. ಹೌದು, ಭಾರತದಲ್ಲಿ ಇದೀಗ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಉತ್ಪಾದನೆಯಾಗುತ್ತಿದೆ. ಇದರ ಪರಿಣಾಮ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ನಂಬರ್ ಅಂದ್ರೆ ನಾನು ಎನ್ನೋ ಆರ್ಯವರ್ಧನ್ ಖರೀದಿಸಿದ ಕೋಟಿ ಬೆಲೆ ಕಾರಿನ ನಂಬರ್ ಏನಿರಬಹುದು?

ಪುಣೆಯಲ್ಲಿ ಸುಸಜ್ಜಿತ ಉತ್ಪಾದನೆ ಕೇಂದ್ರ ಸ್ಥಾಪನೆಯಾಗಿದೆ. ಇದೀಗ ಜಾಗ್ವಾರ್ ಲ್ಯಾಂಡ್ ರೋವರ್ ಸಿಕೆಡಿ ಯೂನಿಟ್ ಆಮದು ಮಾಡಿಕೊಂಡು ಪುಣೆ ಘಟಕದಲ್ಲಿ ಜೋಡಣೆ ಮಾಡಲಿದೆ. ಇದರಿಂದ ಶೇಕಡಾ 18 ರಿಂದ 22 ರಷ್ಟು ಆಮದು ಸುಂಕ ಕಡಿತಗೊಳ್ಳುತ್ತಿದೆ. ಇದರ ಲಭಾ ನೇರವಾಗಿ ಗ್ರಾಹಕರಿಗೆ ತಲುಪುತ್ತಿದೆ. ಸದ್ಯ ಭಾರಿ ಬೇಡಿಕೆಯ ಕೋಟಿ ಕೋಟಿ ಬೆಲೆಯ ರೇಂಜ್ ರೋವರ್ ಆಟೋಬಯೋಗ್ರಪಿ ಕಾರು 60 ಲಕ್ಷ ರೂಪಾಯಿಗೆ ಲಭ್ಯವಿದೆ. ರೇಂಜ್ ರೋವರ್ ಸ್ಪೋರ್ಟ್ ಕಾರಿನ ಬೆಲೆಯಲ್ಲಿ 40 ಲಕ್ಷ ರೂಪಾಯಿ ಕಡಿತಗೊಂಡಿದೆ.

ಪುಣೆ ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ರೇಂಜ್ ರೋವರ್ ಕಾರುಗಳು ಈಗಾಗಲೇ ವಿತರಣೆ ಆರಂಭಗೊಂಡಿದೆ. ಹೀಗಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಕೈಗೆಟುಕವ ದರದಲ್ಲಿ ಲಭ್ಯವಾಗುತ್ತಿದೆ. ಸದ್ಯ ಐಷಾರಾಮಿ ಕಾರುಗಳ ಪೈಕಿ ಜೆಎಲ್ಆರ್ ಕಾರುಗಳು ಕೈಗೆಟುಕುವ ದರದ ಕಾರುಗಳಾಗಿ ಹೊರಹೊಮ್ಮಿದೆ. ಇದರ ಪರಿಣಾಮ ಜೆಎಲ್ಆರ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ಈ ಕುರಿತು ಭಾರತದ ಜಾಗ್ವಾರ್ ಲ್ಯಾಂಡ್ ರೋವರ್ ಮ್ಯಾನೇಜರ್ ರಾಜನ್ ಅಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯರಿಗೆ ಹೆಮ್ಮೆಯ ದಿನ ಇದಾಗಿದೆ.ಲಂಡನ್‌ನಿಂದ ಹೊರಗಡೆ ರೇಂಜ್ ರೋವರ್ ಕಾರುಗಳನ್ನು ಉತ್ಪಾದನೆ ಮಾಡುತ್ತಿರುವ ಮೊದಲ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ಅಂತಾರಾಷ್ಟ್ರೀಯ ಮಾನದಂಡ, ಸುರಕ್ಷತೆ, ಗುಣಮಟ್ಟದಲ್ಲೇ ಭಾರತದಲ್ಲಿ ರೋವರ್ ಕಾರುಗಳು ಉತ್ಪಾದನೆಯಾಗುತ್ತಿದೆ ಎಂದು ರಾಜನ್ ಅಂಬಾ ಹೇಳಿದ್ದಾರೆ.

ಪ್ರಧಾನಿ ಮೋದಿ ಬಳಸುವ ಬುಲೆಟ್‌ಫ್ರೂಫ್ ಕಾರಿನ ಬೆಲೆ ಎಷ್ಟು? ಇದರಲ್ಲಿದೆ ಹಲವು ವಿಶೇಷತೆ!

click me!