ಬೆಂಗಳೂರು(ಜೂ.29): ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಆಡಿ ಇಂದು ತನ್ನ ಸಂಪೂರ್ಣ ಎಲೆಕ್ಟ್ರಿಕ್ SUV ಆಡಿ-ಇ ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಸ್‌ಬ್ಯಾಕ್ ಭಾರತದಲ್ಲಿ ಬಿಡುಗಡೆಯಾಗಿದೆ. ದೇಶಾದ್ಯಂತ ಬುಕಿಂಗ್ ಆರಂಭಗೊಂಡಿದೆ. ನೂತನ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಕೊರೋನಾ ಸಂಕಷ್ಟದಲ್ಲಿ ಸರ್ವೀಸ್, ಸ್ಟಾಂಡರ್ಡ್ ವಾರೆಂಟಿ ವಿಸ್ತರಿಸಿದ ಆಡಿ ಇಂಡಿಯಾ!...
undefined
ಆಡಿ ಇ ಟ್ರಾನ್ ವಿನ್ಯಾಸ, ಎಂಜಿನ್ ದಕ್ಷತೆ, ಪರ್ಫಾಮೆನ್ಸ್ ವಿಚಾರದಲ್ಲೂ ರಾಜಿಯಾಗಿಲ್ಲ. ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಆಡಿ ಇ ಟ್ರಾನ್ ಭಾರತದಲ್ಲಿ ಭಾರಿ ಸಂಚಲನ ಮೂಡಿಸಿದೆ. 5 ಲಕ್ಷ ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಬಹುದು.
ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ ಕ್ರೀಡಾ ಎಸ್‌ಯುವಿಯಾಗಿದ್ದು ಸದೃಢ ರೂಫ್‌ಲೈನ್ ಹೊಂದಿದೆ. ಭಾರತದಲ್ಲಿ ಬುಕಿಂಗ್‌ಗಳನ್ನು ಪ್ರಾರಂಭಿಸಲು ನಾವು ಥ್ರಿಲ್ ಆಗಿದ್ದೇವೆ. ಇ-ಟ್ರೊನ್ ಬರೀ ಒಂದು ಉತ್ಪನ್ನವಲ್ಲ ಬದಲಿಗೆ ಅದೇ ಒಂದು ಬ್ರಾಂಡ್ ಆಗಿದೆ ಮತ್ತು ನಾವು ಈ ಬ್ರಾಂಡ್ ಅಡಿಯಲ್ಲಿ ಹಲವಾರು ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಆಡಿ ಇಂಡಿಯಾದ ಮುಖ್ಯಸ್ಥ ಬಲ್‌ಬಿರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಭಾರತದಲ್ಲಿ ಹೊಸ ತಂತ್ರಜ್ಞಾನದ ಆಡಿ A4 ಫೇಸ್‌ಲಿಫ್ಟ್ ಕಾರು ಬಿಡುಗಡೆ!
ಪ್ಲಗ್-ಇನ್ ಮತ್ತು ಫಾಸ್ಟ್-ಚಾರ್ಜಿಂಗ್ ಅನುಕೂಲ, ಚಾಲನೆಯಲ್ಲಿ ಸುಧಾರಿತ ಶಕ್ತಿಯ ಚೇತರಿಕೆ, ರೇಂಜ್ ಮೋಡ್, ಮುಂಬದಿಯಲ್ಲಿ ಹಾಗೂ ಹಿಂಬದಿಯಲ್ಲಿ ಎರಡು ಅಸಾಧಾರಣ ಡೈನಮಿಕ್ ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಸನ್ನದ್ಧವಾದ ಆಡಿ ಇ-ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ ಸಂಪೂರ್ಣ ಹೊಸ ಚಾಲನೆಯ ಅನುಭವ ನೀಡುತ್ತದೆ.