ಬೆಂಗಳೂರು(ಜೂ.28): ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ, ದಕ್ಷ ಎಂಜಿನ್ ಹಾಗೂ ಅತ್ಯಂತ ಆಕರ್ಷಕ ಸ್ಕೋಡಾ ಕುಶಾಕ್ SUV ಕಾರು ಬಿಡುಗಡೆಯಾಗಿದೆ. ಇದು ಮೇಡ್ ಇನ್ ಇಂಡಿಯಾ ಕಾರಾಗಿದೆ. ನೂತನ ಕಾರಿನ ಬೆಲೆ 10.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಕುಶಾಕ್ ಕಾರಿನ ಬುಕಿಂಗ್ ಆರಂಭಗೊಂಡಿದೆ, ಜುಲೈ 12ರಿಂದ ಡೆಲಿವರಿ ಆರಂಭಗೊಳ್ಳಲಿದೆ.
ಸಂಕಷ್ಟದಲ್ಲಿ ಗ್ರಾಹಕರ ನೆರವಿಗೆ ಸ್ಕೋಡಾ; ಸರ್ವೀಸ್, ವಾರೆಂಟಿ ಜುಲೈ 31ರ ವರೆಗೆ ವಿಸ್ತರಣೆ!.
ಸುಸ್ಥಿರ ಮತ್ತು ಗಟ್ಟಿಮುಟ್ಟಾದ ಎಸ್‌ಯುವಿ ಕಾರು, ಅತ್ಯುತ್ತಮ ಇಂಟೀರಿಯರ್ ಸೌಂದರ್ಯ ಮತ್ತು ಆಧುನಿಕತೆಯ ಪರಿಪೂರ್ಣ ಮಿಶ್ರಣವಾಗಿದೆ. ಇದು ಬ್ರಾಂಡ್‌ನ ‘ಸಿಂಪ್ಲೀ ಕ್ಲೆವರ್’ ಸಿದ್ಧಾಂತವನ್ನು ಹೊಂದಿದೆ. ಎಲ್ಲ ಶ್ರೇಣಿಗಳಲ್ಲೂ ESC ಹೊಂದಿದ್ದು, ಹಲವು ಸಕ್ರಿಯ ಮತ್ತು ಪ್ಯಾಸಿವ್ ಸುರಕ್ಷತೆ ಸೌಲಭ್ಯಗಳನ್ನು ಕುಶಾಕ್ ಹೊಂದಿದೆ.
ಕುಶಾಕ್ ಬಿಡುಗಡೆಯ ಮೂಲಕ, 1ನೇ ಮತ್ತು 2ನೇ ಹಂತದ ನಗರಗಳಿಗೆ ವಿಸ್ತರಿಸುವ ಮೂಲಕ ದೇಶಾದ್ಯಂತ ಇನ್ನಷ್ಟು ವ್ಯಾಪಿಸಲಿದೆ. ಸ್ಕೋಡಾ ಅಟೋ ಇಂಡಿಯಾ ಸದ್ಯ 85 ನಗರಗಳಲ್ಲಿ 120 ಸೇಲ್ಸ್ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ. 2021 ರ ಕೊನೆಯ ವೇಳೆಗೆ 150 ಟಚ್‌ಪಾಯಿಂಟ್‌ಗಳಿಗೆ ಇದು ವಿಸ್ತರಿಸುವ ಯೋಜನೆ ಹೊಂದಿದೆ.
ಬೆಂಗಳೂರಿನಲ್ಲಿ ನೂತನ ಸ್ಕೋಡಾ ಅಟೋ ಇಂಡಿಯಾ ಶೋರೂಮ್ ಉದ್ಘಾಟನೆ!
ತನ್ನ ಸೇಲ್ಸ್ ಮತ್ತು ಸರ್ವೀಸ್ ನೆಟ್‌ವರ್ಕ್‌ಗೆ ವಿಸ್ತರಿಸುವುದರ ಜೊತೆಗೆ, ಸ್ಕೋಡಾ ಅಟೋ ಇಂಡಿಯಾ ಹಲವು ಗ್ರಾಹಕ ಕೇಂದ್ರಿತ ಉಪಕ್ರಮಗಳನ್ನು ಘೋಷಿಸಿದೆ. ಪ್ರತಿ ಕುಶಾಕ್ ಕೂಡಾ 4 ವರ್ಷಗಳು / 1,00,000 ಕಿ.ಮೀ ವಾರಂಟಿಯನ್ನು ಹೊಂದಿದೆ. ಇದನ್ನು 6 ವರ್ಷಗಳು / 1,50,000 ಕಿ.ಮೀ ವರೆಗೆ ವಿಸ್ತರಿಸಬಹುದು. ಇದರ ಜೊತೆಗೆ, ಸ್ಕೋಡಾ 2 ವರ್ಷಗಳವರೆಗೆ ಬಿಡಿ ಭಾಗಗಳ ವಾರಂಟಿ, 2 ವರ್ಷಗಳ ಬ್ಯಾಟರಿ ವಾರಂಟಿ, 3 ವರ್ಷಗಳ ಪೇಂಟ್ ವಾರಂಟಿ, 6 ವರ್ಷಗಳ ಸವಕಳಿ ವಾರಂಟಿ ಮತ್ತು 9 ವರ್ಷಗಳವರೆಗೆ ವಿಸ್ತರಿತ ರೋಡ್‌ಸೈಡ್ ಅಸಿಸ್ಟೆನ್ಸ್ ಪ್ರೋಗ್ರಾಮ್ ಅನ್ನು ಇದು ಹೊಂದಿದೆ.
ಕುಶಾಕ್ ಬಿಡುಗಡೆಯು ಸ್ಕೋಡಾ ಅಟೋ ಇಂಡಿಯಾದ ಮಹತ್ವದ ಕ್ಷಣವಾಗಿದ್ದು, ಈ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯ ಅತ್ಯಂತ ಕುತೂಹಲಕರ ವಿಭಾಗಕ್ಕೆ ನಾವು ಕಾಲಿರಿಸಿದ್ದೇವೆ. ನಮ್ಮ ಗ್ರಾಹಕರಿಗೆ ನಿಜವಾಗಿಯೂ ಯಾವುದು ಆಸಕ್ತಿಕರ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕುಶಾಕ್ ಅನ್ನು ರೂಪಿಸಲಾಗಿದೆ ಎಂದು ಸ್ಕೋಡಾ ಅಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಝಾಕ್ ಹಾಲಿಸ್ ಹೇಳಿದೆ.