ಆಟೋಮೋಟಿವ್ ತಯಾರಕರ ಪರಿಶ್ರಮ, ಪ್ರಯತ್ನಗಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಐಸಿಓಟಿವೈ (ICOTY) ಯಿಂದ ಗ್ರೀನ್ ಕಾರ್ ಪ್ರಶಸ್ತಿಯನ್ನು ಕಳೆದ ವರ್ಷ ಪರಿಚಯಿಸಲಾಯಿತು.
ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾದ ಆಡಿಯ ಮೊದಲ ಎಲೆಕ್ಟ್ರಿಕ್ ಕಾರು ಆಡಿ ಇ-ಟ್ರಾನ್ (Audi E-tron), ಗ್ರೀನ್ ಕಾರ್ ಅವಾರ್ಡ್ 2022 ಗೌರವ ಪಡೆದುಕೊಂಡಿದೆ. ಗುರುವಾರ ಇಂಡಿಯನ್ ಕಾರ್ ಆಫ್ ದಿ ಇಯರ್ 2022 ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಗಿದೆ. ಆಟೋಮೋಟಿವ್ ತಯಾರಕರ ಪರಿಶ್ರಮ, ಪ್ರಯತ್ನಗಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಐಸಿಓಟಿವೈ (ICOTY) ಯಿಂದ ಗ್ರೀನ್ ಕಾರ್ ಪ್ರಶಸ್ತಿಯನ್ನು ಕಳೆದ ವರ್ಷ ಪರಿಚಯಿಸಲಾಯಿತು. ಗ್ರೀನ್ ಕಾರು ಪ್ರಶಸ್ತಿಯಲ್ಲಿ ಆಡಿ, ಜಾಗ್ವಾರ್ ಐ-ಪೇಸ್, ಪೋರ್ಷೆ ಟೇಕಾನ್, ಟಾಟಾ ಟಿಗೊರ್ ಇವಿಗಳ ವಿರುದ್ಧ ಮುನ್ನಡೆ ಸಾಧಿಸಿದೆ.
ಆಡಿ ಇ-ಟ್ರಾನ್ 104 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿತ್ತು. ಆಡಿ ಇ-ಟ್ರಾನ್ ಜಿಟಿ (Audi E-tron GT) ಎರಡನೇ ಸ್ಥಾನದಲ್ಲಿದೆ ಮತ್ತು ಜಾಗ್ವಾರ್ ಐ-ಪೇಸ್ ಮೂರನೇ ಸ್ಥಾನ ಗಳಿಸಿತು. ICOTY ತೀರ್ಪುಗಾರ ತಂಡ 17 ಆಟೋಮೋಟಿವ್ ಪತ್ರಕರ್ತರನ್ನು ಒಳಗೊಂಡಿದೆ. ಆಟೋ ಟುಡೆಯ ಸಂಪಾದಕ ಯೋಗೇಂದ್ರ ಪ್ರತಾಫರ್ ಅದರ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾರೆ. ಪ್ರತಿ ತೀರ್ಪುಗಾರರು 25 ಅಂಕಗಳನ್ನು ಹೊಂದಿದ್ದು, ಅದನ್ನು ಕನಿಷ್ಠ ಐದು ವಾಹನಗಳ ನಡುವೆ ವಿತರಿಸುತ್ತಾರೆ. ವಿವಿಧ ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಾಗುವ, ಭಾರತೀಯ ಮಾರುಕಟ್ಟೆಗೆ ಪ್ರಸ್ತುತವಾಗುವ, ನೈಜ-ಪ್ರಪಂಚದ ಕಾರ್ಯಕ್ಷಮತೆ, ಸುಲಭ ಚಾರ್ಜಿಂಗ್, ವಿಶ್ವಾಸಾರ್ಹತೆ ಮತ್ತು ವಿನ್ಯಾಸದ ಆಧಾರದ ಮೇಲೆ ಕಾರುಗಳಿಗೆ ತೀರ್ಪು ನೀಡಲಾಯಿತು.
undefined
5 ಲಕ್ಷ ರೂ ನೀಡಿ ಬುಕ್ ಮಾಡಿ Audi ಇ ಟ್ರಾನ್ ಎಲೆಕ್ಟ್ರಿಕ್ ಕಾರು !
ICOTY ಯಿಂದ ಗ್ರೀನ್ ಕಾರ್ ಅವಾರ್ಡ್ 2022 ಪ್ರಶಸ್ತಿ ಸ್ವೀಕರಿಸಿದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್, " ಇದು ಭಾರತೀಯ ವಾಹನೋದ್ಯಮ ಉದ್ಯಮದಲ್ಲಿ ಅತ್ಯುತ್ತಮ ಬೆಳವಣಿಗೆ. ಭಾರತದಲ್ಲಿ ಆಡಿ 5 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ಉತ್ತಮ ಮಾರುಕಟ್ಟೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಇ-ಟ್ರಾನ್ ಈ ಪ್ರಶಸ್ತಿ ಗೆದ್ದಿರುವುದರಿಂದ ಸಂತೋಷವಾಗಿದೆ. ಮತ್ತು ಇ-ಟ್ರಾನ್ ಜಿಟಿ ರನ್ನರ್ ಅಪ್ ಆಗಿ ಬಂದಿದೆ” ಎಂದಿದ್ದಾರೆ.
ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್ಯುವಿ ಎರಡು ವೇರಿಯಂಟ್ಗಳಲ್ಲಿ ಲಭ್ಯವಿದೆ, ಆಡಿ ಇ-ಟ್ರಾನ್ 50 ಮತ್ತು ಆಡಿ ಇ-ಟ್ರಾನ್ 55, ಕ್ರಮವಾಗಿ 1.01 ಕೋಟಿ ರೂ. ಮತ್ತು ರೂ. 1.17 ಕೋಟಿ ರೂ. (ಶೋರೂಂ ದರ) ದರ ಹೊಂದಿದೆ. ಆಡಿ ಇ-ಟ್ರಾನ್ ಸ್ಪೋರ್ಟ್ಬ್ಯಾಕ್ ಎಂಬ ಎಸ್ಯುವಿ ಕೂಪ್ ವೇರಿಯಂಟ್ ಕೂಡ ಭಾರತದಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ 1.19 ಕೋಟಿ ರೂ. (ಶೋ ರೂಂ ದರ). ಆಡಿ ಇ-ಟ್ರಾನ್ 50 ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟಾರ್ಗಳಿಂದ 313bhp ಪವರ್ ಉತ್ಪಾದಿಸುತ್ತದೆ. ಇವುಗಳು ಕಾರನ್ನು 6.8 ಸೆಕೆಂಡ್ಗಳಲ್ಲಿ ಶೂನ್ಯದಿಂದ ನೂರು ಕಿಮೀ ವರೆಗೆ ವೇಗ ಹಾಗು 190 ಕಿಮೀ ವೇಗ ಚಲನೆಯ ವಿಸ್ತರಿಸುವ ಸಾಮರ್ಥ್ಯ ಹೊಂದಿವೆ. ಇದು 71kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಚಾರ್ಜ್ಗೆ ಇದು 264-379km ಚಲಿಸಬಲ್ಲದು. ಆಡಿ ಇ-ಟ್ರಾನ್ (Audi e-Tron) 55 408bhp ಯ ಹೆಚ್ಚು ಶಕ್ತಿಶಾಲಿ ಉತ್ಪಾದನೆಯೊಂದಿಗೆ ಬರುತ್ತದೆ, ದೊಡ್ಡ 95kWh ಬ್ಯಾಟರಿಯೊಂದಿಗೆ 359-484km ವ್ಯಾಪ್ತಿಯನ್ನು ಒದಗಿಸುತ್ತದೆ. ಈ ಕಾರು 5.7 ಸೆಕೆಂಡ್ಗಳಲ್ಲಿ 0-100kmph ವೇಗ ಹೆಚ್ಚಿಸಬಲ್ಲದು.
Upcoming Car 5 ಲಕ್ಷ ರೂಗೆ ಬುಕ್ ಮಾಡಿ ಹೊಚ್ಚ ಹೊಸ Audi Q7 ಫೇಸ್‌ಲಿಫ್ಟ್ ಕಾರು!
ಇದರೊಂದಿಗೆ, ಮರ್ಸಿಡೀಸ್ ಬೆನ್ಸ್ ಎಸ್ ಕ್ಲಾಸ್ (Mercedes-Benz S-Class) ICOTY ಯ ಪ್ರೀಮಿಯಂ ಕಾರ್ (premium car award) ಅವಾರ್ಡ್ 2022 ಪ್ರಶಸ್ತಿ ಗೆದ್ದುಕೊಂಡಿದೆ. ಇದು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗಿರುವ ಕಾರಾಗಿದ್ದು, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ