Tesla Cars ಕೈಗೆಟುಕುವ ದರದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ನೀಡುವ ಮಸ್ಕ್ ಕನಸಿಗೆ ರಷ್ಯಾ ಉಕ್ರೇನ್ ಯುದ್ಧ ಅಡ್ಡಿ!

By Suvarna News  |  First Published Mar 11, 2022, 5:12 PM IST

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಹದಗೆಟ್ಟ ಕಚ್ಚಾ ವಸ್ತುಗಳ ಬೆಲೆಗಳು, ಟೆಸ್ಲಾ ಅನ್ನು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ತಲುಪಿಸುವ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರ ಕನಸಿಗೆ ಭಾರಿ ಹಿನ್ನೆಡೆಯಾಗಿದೆ.


ರಷ್ಯಾ-ಉಕ್ರೇನ್ (Russia-ukraine) ನಡುವಿನ ಯುದ್ಧ ಪರಿಸ್ಥಿತಿಯಿಂದ ಎಲ್ಲಾ ದೇಶಗಳಲ್ಲಿನ ಆಮದು ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಇದು ಅಮೆರಿಕದ ಎಲೆಕ್ಟ್ರಿಕ್ ವಾಹನ ಟೆಸ್ಲಾ (Tesla) ಕಾರಿನ ಉತ್ಪಾದನೆಯ ಮೇಲೆ ಕೂಡ ಪರಿಣಾಮ ಬೀರಿದೆ. ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದಿಂದ ಏರಿಕೆಯಗಿರುವ ಕಚ್ಚಾ ವಸ್ತುಗಳ ಬೆಲೆಗಳು, ಟೆಸ್ಲಾ ಕಾರುಗಳನ್ನು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ತಲುಪಿಸುವ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರ ಕನಸಿಗೆ ಭಾರಿ ಹಿನ್ನೆಡೆಯಾಗಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಅತಿ ದುಬಾರಿಯಾದ ವಾಹನಗಳೆಂದರೆ ಬ್ಯಾಟರಿಗಳು. ಯುದ್ಧ ಪೀಡಿತ ವಾತಾವರಣದಿಂದ ಬ್ಯಾಟರಿ ಬೆಲೆ (battery charge) ಇನ್ನಷ್ಟು ತುಟ್ಟಿಯಾಗುತ್ತದೆ. 

ಜೊತೆಗೆ, ನಿಕಲ್, ಲಿಥಿಯಂ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯು ಇವಿಗಳ ಅತ್ಯಂತ ದುಬಾರಿ ಭಾಗವಾದ ಬ್ಯಾಟರಿಗಳ ಬೆಲೆ ಕುಸಿಯುವ ದೀರ್ಘಾವಧಿಯ ಪ್ರವೃತ್ತಿಯನ್ನು ನಿಧಾನಗೊಳಿಸುತ್ತದೆ ಮತ್ತು ತಾತ್ಕಾಲಿಕವಾಗಿ ಹಿಮ್ಮೆಟ್ಟಿಸುತ್ತದೆ. ಇದು ತಂತ್ರಜ್ಞಾನದ ವ್ಯಾಪಕ ಅಳವಡಿಕೆಗೆ ಅಡ್ಡಿಯಾಗುತ್ತದೆ ಎಂದು ಉದ್ಯಮದ ಮುನ್ಸೂಚಕ ಬೆಂಚ್ಮಾರ್ಕ್ ಮಿನರಲ್ ಇಂಟೆಲಿಜೆನ್ಸ್ನ  ವಿಶ್ಲೇಷಕ ಗ್ರೆಗೊರಿ ಮಿಲ್ಲರ್ ಹೇಳಿದ್ದಾರೆ.
ಈಗಾಗಲೇ COVID-19 ಸಾಂಕ್ರಾಮಿಕ ಮತ್ತು ಜಾಗತಿಕ ಚಿಪ್ ಕೊರತೆಯಿಂದ ಆಟೊಮೊಬೈಲ್ ವಲಯದ ಪೂರೈಕೆ ಸರಪಳಿಯಲ್ಲಿ ದೊಡ್ಡ ಅಡೆತಡೆ ಎದುರಾಗಿದೆ. ಏರುತ್ತಿರುವ ಕಚ್ಚಾ ವಸ್ತುಗಳ ಬೆಲೆಗಳು EV ಮತ್ತು ICE ವಾಹನಗಳ ನಡುವಿನ ವೆಚ್ಚದ ವ್ಯತ್ಯಾಸವನ್ನು ಇನ್ನಷ್ಟು ಹೆಚ್ಚಿಸಲಿದೆ. ಇದು ಇವಿಗಳ ವ್ಯಾಪಕ ಅಳವಡಿಕೆಗೆ ಅಡ್ಡಿಯಾಗಬಹುದು ಎಂದು ಮಿಲ್ಲರ್ ಅಭಿಪ್ರಾಯಪಟ್ಟಿದ್ದಾರೆ.

Tap to resize

Latest Videos

Russia Ukraine war ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ನಲ್ಲಿ ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ ಚಾಲನೆ!

ಈ ವರ್ಷವು ಲಿಥಿಯಂ-ಐಯಾನ್ ಬ್ಯಾಟರಿ ಸೆಲ್ಗಳ ಸರಾಸರಿ ಬೆಲೆಯಲ್ಲಿ ವರ್ಷ-ವರ್ಷದ ಹೆಚ್ಚಳವನ್ನು ಗುರುತಿಸಬಹುದು ಎಂದು ಅವರು ಹೇಳಿದರು. ಉಕ್ರೇನ್ನಲ್ಲಿನ ಸಂಘರ್ಷದ ಪರಿಣಾಂ ಸೋಮವಾರ ನಿಕಲ್ ಮತ್ತು ಅಲ್ಯೂಮಿನಿಯಂ ಬೆಲೆಗಳನ್ನು ದಾಖಲೆಯ ಗರಿಷ್ಠಕ್ಕೆ ಏರಿದೆ. ಲಿಥಿಯಂ ಬೆಲೆಗಳು ಸಹ ಏರಿಕೆಯಾಗಿದ್ದು, ವರ್ಷಾಂತ್ಯದಲ್ಲಿದ್ದ ದರಕ್ಕಿಂತ ದ್ವಿಗುಣಗೊಂಡಿದೆ.ಹೆಚ್ಚುತ್ತಿರುವ ಬೇಡಿಕೆಯಿಂದ ಪೂರೈಕೆ ಕಡಿಮೆಯಾಗಿದೆ.
ಬೆಂಚ್ಮಾರ್ಕ್ ಮಿನರಲ್ ಇಂಟೆಲಿಜೆನ್ಸ್ ಪ್ರಕಾರ, ರಷ್ಯಾದ ಅತಿದೊಡ್ಡ ಮೈನರ್ಸ್ ನಾರ್ನಿಕಲ್ ಪ್ರಪಂಚದ 20% ರಷ್ಟು ಹೆಚ್ಚಿನ ಶುದ್ಧ  ನಿಕಲ್ ಅನ್ನು ಉತ್ಪಾದಿಸುತ್ತದೆ. ಇದನ್ನು EV ಬ್ಯಾಟರಿಗಳಲ್ಲಿ ಬಳಸಲಾಗುತ್ತದೆ. ರಷ್ಯಾ ಕೂಡ ಅಲ್ಯೂಮಿನಿಯಂನ ದೊಡ್ಡ ಪೂರೈಕೆದಾರರಾಗಿದ್ದು, ಇದನ್ನು ಬ್ಯಾಟರಿಗಳಲ್ಲಿ ಬಳಸಲಾಗುತ್ತದೆ.

ಟೆಸ್ಲಾ ಈಗಾಗಲೇ ಉಕ್ರೇನ್ನಲ್ಲಿನ ಎಲೆಕ್ಟ್ರಿಕ್ ವಾಹನಗಳ ತಯಾರಿಕರಿಗೆ ನೆರವು ಒದಗಿಸಲು ಪವರ್ ವಾಲ್ಗಳನ್ನು ಕಳುಹಿಸಲು ಆರಂಭಿಸಿದೆ. ಇದು ಕಾರು ತಯಾರಕರು ಯುದ್ಧ ಪೀಡಿತ ದೇಶಕ್ಕೆ ಒದಗಿಸುತ್ತಿರುವ ನೆರವಿನ ಭಾಗವಾಗಿದೆ. ಇದರೊಂದಿಗೆ, ಟೆಸ್ಲಾ, ತನ್ನ ನೆರೆ ರಾಷ್ಟ್ರಗಳಲ್ಲಿ ಉಚಿತ ಸೂಪರ್ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸುವುದಾಗಿ ಕೂಡ ತಿಳಿಸಿದೆ. ಜೊತೆಗೆ, ಉಕ್ರೇನ್ನಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿರುವ ಟೆಸ್ಲಾ ಉದ್ಯೋಗಿಗಳಿಗೆ 3 ತಿಂಗಳ ಕಾಲ ವೇತನ ಪಾವತಿಸುವುದಾಗಿ ಕೂಡ ಟೆಸ್ಲಾ ತಿಳಿಸಿದೆ. ಮೂರು ತಿಂಗಳ ನಂತರ ಪರಿಸ್ಥಿತಿ ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಪ್ರಕಟಣೆ ಹೇಳಿದೆ.

500 ಮಿಲಿಯನ್‌ ಡಾಲರ್‌ ಮೌಲ್ಯದ ಆಟೋ ಘಟಕ ಖರೀದಿಸುವಂತೆ ಟೆಸ್ಲಾಗೆ ಸರ್ಕಾರದ ಷರತ್ತು

ಸಂಕಷ್ಟದಲ್ಲಿರುವವರಿಗೆ ಟೆಸ್ಲಾ ನೆರವು ಒದಗಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದಕ್ಷಿಣ ಅಮೆರಿಕದಲ್ಲಿ ಹುರಿಕೇನ್ ಸುನಾಮಿ ಅಪ್ಪಳಿಸಿದಾಗ ಟೆಸ್ಲಾ, ಉಚಿತ ಸೂಪರ್ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಿತ್ತು. ಕಳೆದ ತಿಂಗಳಷ್ಟೇ ಕಂಪನಿ, ಪೋಲ್ಯಾಂಡ್, ಸ್ಲೋವಾಕಿಯಾ ಮತ್ತು ಹಂಗೇರಿಯಲ್ಲಿ ಕೂಡ ಉಚಿತ ಚಾರ್ಜಿಂಗ್ ಸೌಲಭ್ಯ ಒದಗಿಸುವ ಮೂಲಕ, ಅವರಿಗೆ ಕಲಹ ಪ್ರದೇಶದಿಂದ ದೂರ ಸಾಗಲು ನೆರವಾಗಿತ್ತು. ಈಗ ಅದನ್ನು ಪೋಲ್ಯಾಂಡ್ ಮತ್ತು ಸ್ಲೊವಾಕಿಯಾದ ಎಲ್ಲಾ ಸ್ಟೇಷನ್ಗಳಿಗೆ ವಿಸ್ತರಿಸಲು ಟೆಸ್ಲಾ ನಿರ್ಧರಿಸಿದೆ
 

click me!