Kia Carens ಗೆ ಭಾರಿ ಬೇಡಿಕೆ: 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

By Suvarna News  |  First Published Mar 11, 2022, 4:55 PM IST

ಜನವರಿ 14ರಿಂದಲೇ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ಕೂಡ ಬುಕಿಂಗ್‌ ತೆರೆದಿತ್ತು. ಈ ಎರಡು ಹಂತದ ನಗರಗಳಲ್ಲಿಯೇ ಶೇ.60ರಷ್ಟು ಕಾರುಗಳು ಮಾರಾಟವಾಗಿವೆ ಎಂದು ಕಿಯಾ ತಿಳಿಸಿದೆ.


ಈ ವರ್ಷದ ಆರಂಭದಲ್ಲಿ ಕಿಯಾ ಮೋಟಾರ್ಸ್(Kia Motors) ಭಾರತದಲ್ಲಿ ಬಿಡುಗಡೆಗೊಳಿಸಿದ ಕಿಯಾ ಕ್ಯಾರೆನ್ಸ್ಗೆ (Kia Carens) ಬೇಡಿಕೆ ಹೆಚ್ಚುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಅದನ್ನು ಬುಕ್ ಮಾಡುತ್ತಿದ್ದಾರೆ. ದಕ್ಷಿಣ ಕೊರಿಯಾ ಮೂಲದ ಕಿಯಾ, 2022ರ ಜನವರಿಯಲ್ಲಿ ಆರು ಹಾಗೂ ಏಳು ಸೀಟುಗಳ ಕಿಯಾ ಕ್ಯಾರೆನ್ಸ್ ಎಸ್ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದು ಕೇವಲ ಎಂಪಿವಿ ಅಥವಾ ಎಸ್ಯುವಿ ಅಲ್ಲ, ಬದಲಿಗೆ, ಇದೊಂದು ರಿಕ್ರಿಯೇಷನಲ್ ವಾಹನ (Recreational vehicle) ಎಂದಿರುವ ಕಿಯಾ, ಜನವರಿ 14ರಿಂದಲೇ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ಕೂಡ ಬುಕಿಂಗ್ ತೆರೆದಿತ್ತು. ಈ ಎರಡು ಹಂತದ ನಗರಗಳಲ್ಲಿಯೇ ಶೇ.60ರಷ್ಟು ಕಾರುಗಳು ಮಾರಾಟವಾಗಿವೆ ಎಂದು ಕಿಯಾ ತಿಳಿಸಿದೆ. ಕ್ಯಾರೆನ್ಸ್ನ ಬೆಲೆ ಘೋಷಣೆಗೂ ಮುನ್ನವೇ, 19,000ಕ್ಕೂ ಹೆಚ್ಚು ಮುಂಗಡ-ಬುಕಿಂಗ್ ಮಾಡಲಾಗಿದೆ ಎಂದು ಕಿಯಾ ತಿಳಿಸಿತ್ತು. ಕಾರು ಬಿಡುಗಡೆಯಾದ ಒಂದು ತಿಂಗಳೊಳಗೆ ಬುಕಿಂಗ್ ಸಂಖ್ಯೆ 50 ಸಾವಿರ ದಾಟಿದೆ ಎಂದು ಕಂಪನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಇದರಲ್ಲಿ ಶೇ.45ರಷ್ಟು ಕೊಡುಗೆ ಕ್ಯಾರೆನ್ಸ್ ಲಕ್ಸುರಿ ಹಾಗೂ ಲಕ್ಸುರಿ ಪ್ಲಸ್ ವೇರಿಯಂಟ್ಗಳದ್ದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿಯಾ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಮ್ಯೂಂಗ್೦ಸಿಕ್ ಸೋನ್, “ಕ್ಯಾರೆನ್ಸ್ಗೆ ದೊರೆತಿರುವ ಪ್ರತಿಕ್ರಿಯೆ ಇದುವರೆಗೆ ಬಿಡುಗಡೆಯಾಗಿರುವ ಇತರ ಎಲ್ಲಾ ಎಸ್ಯುವಿಗಳಿಗಿಂತ ಭಿನ್ನವಾಗಿದೆ. ಇದು ತುಂಬಾ ಪ್ರೋತ್ಸಾಹಧಾಯಕವಾಗಿದೆ” ಎಂದಿದ್ದಾರೆ. ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯಂಟ್ಗಳ ಬೇಡಿಕೆ ಸಮತೋಲಿತವಾಗಿದೆ. ಶೇ.50ರಷ್ಟು ಜನರು ಡೀಸೆಲ್ ವೇರಿಯಂಟ್ ಆರಿಸಿದ್ದರೆ, ಶೇ.30ರಷ್ಟು ಗ್ರಾಹಕರು ಮ್ಯಾನ್ಯುವಲ್ ಕಾರುಗಳನ್ನು ಆಯ್ಕೆ ಮಾಡಿದ್ದಾರೆ. ಕಿಯಾ ಕ್ಯಾರೆನ್ಸ್ ಕೌಟುಂಬಿಕ ಕಾರಾಗಿ ಗ್ರಾಹಕರನ್ನು ಆಕರ್ಷಿಸುತ್ತಿದೆ ಮತ್ತು ಇದು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಸುರಕ್ಷೆಯ ವಿಚಾರದಲ್ಲಿ ಕೂಡ ಕಿಯಾ ಕ್ಯಾರೆನ್ಸ್‌ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದು ಈ ವಲಯದಲ್ಲೇ ಅತಿ ಉದ್ದವಾದ ಕಾರಾಗಿದ್ದು, ಇದರ ವಿನ್ಯಸ ಕಿಯಾ ಸೋನೆಟ್‌ಗೆ ಹೋಲಿಕೆಯಾಗುವಂತಿದೆ. 

BMWX4 ಕಾರು ಬಿಡುಗಡೆ

ಫೆಬ್ರವರಿಯಲ್ಲಿ ಕಿಯಾ 5,300 ಕ್ಯಾರೆನ್ಸ್ ಕಾರುಗಳನ್ನು ಮಾರಾಟ ಮಾಡಿದೆ. ಕಾರುಗಳ ಹೆಚ್ಚಿದ  ಬೇಡಿಕೆಯನ್ನು ಪೂರೈಸಲು ಮತ್ತು  ವೇಯ್ಟಿಂಗ್ ಅವಧಿ ಕಡಿಮೆಗೊಳಿಸಲು ಕಿಯಾ< ಆಂಧ್ರಪ್ರದೇಶದ ಅನಂತಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಮೂರನೇ ಹಂತದ ಉತ್ಪಾದನೆ ಆರಂಭಿಸಿದೆ. ಸದ್ಯ ಕ್ಯಾರೆನ್ಸ್ ಪ್ರೆಸ್ಟೀಜ್ ಟ್ರಿಮ್ಗಾಗಿ ಜನರು 48 ವಾರಗಳ ಕಾಲ ಕಾಯಬೇಕಿದೆ. ಇದರ ಬೆಲೆ 8.99 ಲಕ್ಷ  ರೂ.ಗಳಿಂದ 16.99 ಲಕ್ಷ ರೂ.ಗಳವರೆಗೆ ಇದೆ. ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕಿಯಾ ಕನೆಕ್ಟ್, ಸಿಂಗಲ್-ಪೇನ್ ಸನ್ರೂಫ್, ವೈರ್ಲೆಸ್ ಚಾರ್ಜರ್, ಡಿಜಿಟಲ್ ಕ್ಲಸ್ಟರ್, ಒನ್-ಟಚ್ ಟಂಬಲ್ ಮಿಡಲ್ ರೋ, ರೂಫ್-ಮೌಂಟೆಡ್ ರಿಯರ್ ಎಸಿ ವೆಂಟ್ಗಳು ಮುಂತಾದ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ಕಿಯಾ ಕ್ಯಾರೆನ್ಸ್ನ 1.5-ಲೀಟರ್ ಪೆಟ್ರೋಲ್ ಎಂಜಿನ್ 115 ಪಿಎಸ್ ಮತ್ತು 144 ಎನ್ ಎಂ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ 1.4-ಲೀಟರ್ ಟರ್ಬೊ ಪೆಟ್ರೋಲ್ 140 ಪಿಎಸ್ ಮತ್ತು 242 ಎನ್ಎಂ ಪವರ್ ನೀಡುತ್ತದೆ. ಆರು-ವೇಗದ ಮ್ಯಾನ್ಯುಯಲ್, ಆರು-ವೇಗದ ಟಾರ್ಕ್ ಕನ್ವರ್ಟರ್ ಎಟಿ ಮತ್ತು ಏಳು-ವೇಗದ ಡಿಸಿಟಿ, ಚಕ್ರಗಳಿಗೆ ಪವರ್ ಹಾಗೂ ಟಾರ್ಕ್ ತಲುಪಿಸಲು ನೆರವು ನೀಡಿ, ಕಾರಿನ ವೇಗ ಹೆಚ್ಚಿಸಲು ಹಾಗೂ ನಿಯಂತ್ರಿಸಲು ಸಹಾಯ ಮಾಡುತ್ತದೆ.

Tap to resize

Latest Videos

ಕೈಗೆಟುಕುವ ದರದಲ್ಲಿ ಟೋಯೋಟೋ ಗ್ಲಾಂಜಾ

click me!