ಭಾರತಕ್ಕೆ ಗುಡ್ ಬೈ; ನಷ್ಟ ತಾಳಲಾರದೆ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಫೋರ್ಡ್!

By Suvarna News  |  First Published Sep 10, 2021, 7:51 PM IST
  • ಬರೋಬ್ಬರಿ 2 ಬಿಲಿಯನ್ ಡಾಲರ್ ನಷ್ಟ, ಭಾರತದಲ್ಲಿ ಫೋರ್ಡ್ ಕಾರಿಗೆ ಸಂಕಷ್ಟ
  • ನಷ್ಟದ ಕಾರಣ 2 ಉತ್ಪಾದನಾ ಘಟಕ ಮುಚ್ಚಿದ ಫೋರ್ಡ್ ಇಂಡಿಯಾ
  • 4,000 ಉದ್ಯೋಗಿಗಳು ಅತಂತ್ರ, ಕಾರು ಖರೀದಿಸಿದವರಲ್ಲಿ ಆತಂಕ

ನವದೆಹಲಿ(ಸೆ.10): ಕೊರೋನಾ ಕಾರಣ ಹಲವು ಉದ್ಯಮಗಳು ನಷ್ಟದಲ್ಲಿದೆ. ಹಲವು ಕ್ಷೇತ್ರಗಳು ಹೊಡೆತದಿಂದ ಚೇತರಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಇದರಲ್ಲಿ ಆಟೋಮೊಬೈಲ್ ಕ್ಷೇತ್ರ ಕೂಡ ಒಂದಾಗಿದೆ. ಇದೀಗ ಆಟೋ ಕ್ಷೇತ್ರದಲ್ಲಿ ಶಾಕಿಂಗ್ ಬೆಳವಣಿಗೆ ನಡೆದಿದೆ. ಭಾರತದಲ್ಲಿ ಫೋರ್ಡ್ ಇಂಡಿಯಾ ಕಾರು ಉತ್ಪಾದನೆ ಸ್ಥಗಿತಗೊಳಿಸಿದೆ. ಈ ಮೂಲಕ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ.

ಹೊಸ ವರ್ಷದ ಮೊದಲ ದಿನವೇ ಬ್ರೇಕ್ ಅಪ್; ಮಹೀಂದ್ರ-ಫೋರ್ಡ್ ಪಾಲುದಾರಿಕೆ ಇಲ್ಲ!

Tap to resize

Latest Videos

undefined

ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ.  ಅಂದರೆ ಭಾರತೀಯ ರೂಪಾಯಿಗಳಲ್ಲಿ 1,46,87,39,00,000. ಭಾರತದಲ್ಲಿ ಫೋರ್ಡ್ ನಷ್ಟದಲ್ಲಿದೆ. ಹೀಗಾಗಿ ಭಾರತದಲ್ಲಿರುವ ಎರಡು ಫೋರ್ಡ್ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸುವುದಾಗಿ ಫೋರ್ಡ್ ಇಂಡಿಯಾ ಘೋಷಿಸಿದೆ. 

4,000 ಉದ್ಯೋಗಿಗಳು ಅತಂತ್ರ:
ಅಮೆರಿಕ ಮೂಲದ ಫೋರ್ಡ್ ಕಾರು ಇದೀಗ ಭಾರತದಲ್ಲಿ ಕಾರು ಉತ್ಪಾದನೆ ಮಾಡುವುದಿಲ್ಲ ಎಂದು ಘೋಷಿಸಿದೆ. ಎರಡು ಉತ್ಪಾದನಾ ಘಟಕ ಸ್ಥಗಿತಗೊಳ್ಳುತ್ತಿರುವ ಕಾರಣ 4,000 ಖಾಯಂ ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಇನ್ನು ಪರೋಕ್ಷವಾಗಿ ಫೋರ್ಡ್ ಜೊತೆ ಕೆಲಸ ಮಾಡುತ್ತಿದ್ದ ಹಾಗೂ ಒಪ್ಪಂದ ಮಾಡಿಕೊಂಡಿದ್ದ ಹಲವು ಉದ್ಯೋಗಿಗಳು ಅತಂತ್ರರಾಗಿದ್ದಾರೆ.

ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!

ಉತ್ಪದನಾ ಘಟಕ ಸಂಪೂರ್ಣ ಮುಚ್ಚಲು ಇನ್ನು ಒಂದು ವರ್ಷ ತೆಗೆದುಕೊಳ್ಳಲಿದೆ. ಹಂತ ಹಂತವಾಗಿ ಕಾರು ಉತ್ಪಾದನೆ ಸ್ಥಗಿತಗೊಳ್ಳಲಿದೆ. ಆದರೆ ಕಾರು ಖರೀದಿಸಿದವರು ಆತಂಕ ಪಡಬೇಕಿಲ್ಲ. ಫೋರ್ಡ್ ಗ್ರಾಹಕರಿಗೆ ನಿರಂತರ ಸೇವೆ ಲಭ್ಯವಾಗಲಿದೆ ಎಂದು ಫೋರ್ಡ್ ಇಂಡಿಯಾ ಭರವಸೆ ನೀಡಿದೆ. ಗ್ರಾಹಕರಿಗೆ ಸೇವೆ ಒದಗಿಸಲು ಡೀಲರ್‌ಗಳಿಗೆ ಬೆಂಬಲ ನೀಡಲಾಗುವುದು ಎಂದು ಫೋರ್ಡ್ ಇಂಡಿಯಾ ಸ್ಪಷ್ಟಪಡಿಸಿದೆ.

ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಎರಡು ಕಾರು ಉತ್ಪಾದನಾ ಘಟಕ ಮುಚ್ಚಲಾಗುತ್ತಿದೆ. ಹೈಎಂಡ್ ಕಾರುಗಳಾದದ ಫೋರ್ಡ್ ಮಸ್ತಾಂಗ್ ಹಾಗೂ ಫೋರ್ಡ್ ಎಂಡೇವರ್ ವಿದೇಶದಿಂದ ಆಮದು ಮಾಡಿ ಭಾರತದಲ್ಲಿ ಮಾರಾಟ ಮಾಡಲು ಫೋರ್ಡ್ ನಿರ್ಧರಿಸಿದೆ. 

ಫೋರ್ಡ್ ಫ್ರೀಸ್ಟೈಲ್ ಫ್ಲೇರ್ t0 ನಿಸಾನ್ ಎ ಪ್ರೊಟೊ: ಭಾರತದಲ್ಲಿ ಹೊಸ 'ಕಾರು ಬಾರು'!

1984ರಲ್ಲಿ ಭಾರತಕ್ಕೆ ಎಂಟ್ರಿ:
1994ರಲ್ಲಿ ಭಾರತದಲ್ಲಿ ಫೋರ್ಡ್ ವಹಿವಾಟು ಆರಂಭಿಸಿತು. ಸದ್ಯ ಭಾರತದಲ್ಲಿ ಫೋರ್ಡ್ ಇಕೋಸ್ಪೋರ್ಡ್ SUV, ಪೋರ್ಡ್ ಫಿಗೋ, ಫಿಗೋ ಫ್ರೀ ಸ್ಟೈಲ್, ಫೋರ್ಡ್ ಆಸ್ಪೈರ್, ಫೋರ್ಡ್ ಮಸ್ತಾಂಗ್, ಫೋರ್ಡ್ ಎಂಡೇವರ್ ಕಾರುಗಳನ್ನು ಮಾರಾಟ ಮಾಡುತ್ತಿದೆ. 

ಉತ್ಪಾದನೆ ಘಟಕ ಸ್ಥಗಿತವಾಗುತ್ತಿದೆ ನಿಜ. ಆದರೆ ಫೋರ್ಡ್ ಭಾರತದಲ್ಲಿ ಕಾರು ವಹಿವಾಟು ನಿಲ್ಲಿಸುತ್ತಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದೆ. ಹೈಎಂಡ್ ಕಾರುಗಳ ಜೊತೆಗೆ ಫೋರ್ಡ್ ಬಿಸಿನೆಸ್ ಸೆಂಟರ್, ಜಾಗತಿಕ ಉತ್ಪನ್ನ ಅಭಿ ವೃದ್ಧಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಫೋರ್ಡ್ ಹೇಳಿದೆ.

ನ್ಯೂ ಎಂಡವರ್‌! 10 ಸ್ಪೀಡ್ ಆಟೋ ಮತ್ತು ಸೆಲೆಕ್ಟ್ ಶಿಫ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರ್

ಭಾರತಕ್ಕೆ ಗುಡ್ ಬೈ ಹೇಳುತ್ತಿರುವ 2ನೇ ಅಮೆರಿಕನ್ ಕಂಪನಿ:
ಭಾರತದಲ್ಲಿ ಕಾರು ವಹಿವಾಟು ಅಮೆರಿಕ ಕಂಪನಿಗಳಿಗೆ ಕಬ್ಬಿಣದ ಕಡೆಯಲೆಯಾಗುತ್ತಿದೆ. ಕಾರಣ 1928ರಲ್ಲಿ ಭಾರತಕ್ಕೆ ಎಂಟ್ರಿಕೊಟ್ಟ ಜನರಲ್ ಮೋಟಾರ್ಸ್, ಚೆವರ್ಲೆಟ್ ಕಾರು, ಟ್ರಕ್ ವಹಿವಾಟು ಆರಂಭಿಸಿತ್ತು. ಭಾರತದ ಹಿಂದುಸ್ಥಾನ್ ಮೋಟಾರ್ಸ್ ಜೊತೆ ಸೇರಿ ಅಮೆರಿಕ ಜನರಲ್ ಮೋಟಾರ್ಸ್ ವಹಿವಾಟು ವಿಸ್ತರಿಸಿತ್ತು. 2008ರ ವರೆಗೆ ಸಾಮ್ರಾಜ್ಯ ವಿಸ್ತರಿಸಿದ ಜನರಲ್ ಮೋಟಾರ್ಸ್, 2009ರ ವೇಳೆ ಚೀನಾದ ಶಾಂಘೈ ಅಟೋಮೇಟಿವ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ವಹಿವಾಟು ಮುಂದುವರಿಸಿತು.

ನಷ್ಟದಲ್ಲಿ ಮುಳುಗಿದ ಜನರಲ್ ಮೋಟಾರ್ಸ್,  2017ರಲ್ಲಿ ಜನರಲ್ ಮೋಟಾರ್ಸ್ ಭಾರತಕ್ಕೆ ಗುಡ್ ಬೈ ಹೇಳಿತು. ಅಮೆರಿಕದ ಜನರಲ್ ಮೋಟಾರ್ಸ್ ಉತ್ಪಾದನೆ ಸ್ಥಗಿತಗೊಳಿಸಿ ಭಾರತದಿಂದ ವಾಪಸ್ ಆದ ಬಳಿಕ ಇದೀಗ ಮತ್ತೊಂದು ಅಮೆರಿಕನ್ ಬ್ರ್ಯಾಂಡ್ ಫೋರ್ಡ್ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ.
 

click me!