ಬಡತನದಲ್ಲಿ ಕಡಲೆ ಮಾರಿ ಬೆಳೆಸಿದ ಅಪ್ಪನಿಗೆ 3 ಕೋಟಿ ರೂ ಕಾರು ಕೊಡಿಸಿ ಭಾವುಕರಾದ ನಟ

Published : Aug 09, 2026, 03:20 PM IST
Khesari Lal Yadav Buys Rs 3 Crore Car for Father

ಸಾರಾಂಶ

ಕಡು ಬಡತನದಲ್ಲಿ ಬೆಳೆದು ಬಂದು ಇದೀಗ ಸೂಪರ್ ಸ್ಟಾರ್ ಆಗಿರುವ ನಟ ತನ್ನ ಅಪ್ಪನಿಗೆ 3 ಕೋಟಿ ರೂಪಾಯಿ ರೇಂಜ್ ರೋವರ್ ಕಾರು ಗಿಫ್ಟ್ ಮಾಡಿದ್ದಾರೆ. ಕಾರು ನೀಡಿ ಭಾವುಕರಾದ ನಟ, ತಂದೆಯ ತ್ಯಾಗ, ಪರಿಶ್ರಮ ಕುರಿತು ಹೇಳಿಕೊಂಡಿದ್ದಾರೆ.

ನವದೆಹಲಿ (ಆ.09) ಬಡತನದಲ್ಲಿ ಬೆಳೆದ ಸಾಮಾನ್ಯ ಹುಡುಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಇದೀಗ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಭೋಜಪುರಿ ಸಿನಿಮಾ ಕ್ಷೇತ್ರದಲ್ಲಿ ನಟ ಹಾಗೂ ಗಾಯಕನಾಗಿ ಗುರುತಿಸಿಕೊಂಡಿರುವ ಖೇಸರಿ ಲಾಲ್ ಯಾದವ್ ಅಭಿಮಾನಿಗಳ ನೆಚ್ಚಿನ ಹೀರೋ. ಭೋಜುಪುರಿ ಸಿನಿಮಾದಲ್ಲಿ ಸತತ ಯಶಸ್ಸುಗಳು ಮೂಲಕ ಮುನ್ನುಗ್ಗುತ್ತಿರುವ ಖೇಸರಿ ಲಾಲ್ ಯಾದವ್ ಇದೀಗ ತಂದೆಗೆ 3 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ತನ್ನ ತಂದೆ ಬಡತನದಲ್ಲಿ ಬೆಳೆಸಿದ ರೀತಿ, ಮಾಡಿದ ತ್ಯಾಗ ನೆನೆದು ಭಾವುಕರಾಗಿದ್ದಾರೆ.

ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಗಿಫ್ಟ್

ಖೇಸಲಿ ಲಾಲ್ ಯಾದವ್ ತನ್ನ ತಂದೆ ರೇಂಜ್ ರೋವರ್‌ನ ಆಟೋಬಯೋಗ್ರಫಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಅಪ್ಪನ ಇಷ್ಟದ ಬಳಿ ಬಣ್ಣದ ಕಾರನ್ನೇ ಗಿಫ್ಟ್ ನೀಡಿದ್ದಾರೆ. ವಿಶೇಷ ಅಂದರೆ ತನ್ನ ತಂದೆಗೆ ಕೇವಲ ಕಾರು ಮಾತ್ರ ಕೊಡಿಸಿಲ್ಲ. ತಂದೆ ಈ ಕಾರಿನಲ್ಲಿ ವಿಐಪಿಎಯಾಗಿ ಪ್ರಯಾಣಮಾಡಬೇಕು ಎಂದು ಹರಾಜಿನ ಮೂಲಕ ಕಾರಿನ ನಂಬರ್ ಖರೀದಿಸಿದ್ದಾರೆ. ದುಬಾರಿ ಹಣ ನೀಡಿ 0555 ನಂಬರ್ ಖರೀದಿಸಿದ್ದಾರೆ. ತನ್ನ ತಂದೆ ಕೇವಲ ರೇಂಜ್ ರೋವರ್ ಮಾತ್ರವಲ್ಲ, ಕಾರಿನ ನಂಬರ್ ಮೂಲಕವೂ ವಿಐಪಿಯಾಗಿರಬೇಕು ಎಂದು ಖೇಸರಿ ಲಾಲ್ ಯಾದವ್ ಬಯಸಿದ್ದಾರೆ.

ನನ್ನ ಸುಂದರ ಜೀವನದ ಹಿಂದೆ ತಂದೆಯ ಪರಿಶ್ರಮ

ಭೋಜಪುರಿ ಸಿನಿಮಾ ಕ್ಷೇತ್ರದಲ್ಲಿ ಖ್ಯಾತ ಗಾಯಕನಾಗಿ ಗುರುಸಿಕೊಂಡಿರುವ ಖೇಸರಿ ಲಾಲ್, ಹೀರೋ ಆಗಿಯೂ ಮಿಂಚಿದ್ದಾರೆ. ತಂದೆಗೆ ಕಾರು ಉಡುಗೊರೆ ನೀಡಿ ಖೇಸರಿ ಲಾಲ್ ಯಾದವ್ ಭಾವುಕರಾಗಿದ್ದಾರೆ. ನನ್ನ ಜೀವನದ ಪ್ರತಿ ಸಂಗೀತ, ತಾಳ, ಈ ಜೀವನ ನನ್ನ ತಂದೆಯ ಪರಿಶ್ರಮ. ತಂದೆ ಬೀದಿಯಲ್ಲಿ ಕಡಲೆ ಮಾರಿ ನನ್ನನ್ನು ಬೆಳೆಸಿದರು. ನನ್ನ ಎಲ್ಲಾ ಗೆಲುವು ಅಪ್ಪನಿಗೆ ಸೇರಿದೆ. ನನ್ನ ಜೀವನ ಸುಂದರಗೊಳಿಸಿದ್ದಕ್ಕೆ ಥಾಂಕ್ಯು. ಜನರು ನನ್ನ ಯಶಸ್ಸು ನೋಡುತ್ತಿದ್ದಾರೆ. ಆದರೆ ಅದರ ಹಿಂದೆ ಇರುವ ನಿಮ್ಮ ತ್ಯಾಗ, ಪರಿಶ್ರಮವನ್ನು ನಾನು ಕಾಣುತ್ತೇನೆ ಎಂದು ಖೇಸರಿ ಲಾಲ್ ಯಾದವ್ ಹೇಳಿಕೊಂಡಿದ್ದಾರೆ.

ತಂದೆಗೆ ಕೊಡಿಸಿರುವ ರೇಂಜ್ ರೋವರ್ ಆಟೋಬಯೋಗ್ರಫಿ ಐಷಾರಾಮಿ ಹಾಗೂ ದುಬಾರಿ ಕಾರು. ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ಮಸಾಜ್ ಸೀಟುಗಳು, ಇನ್ಫೋಟೈನ್ಮೆಂಟ್, ಮಲ್ಟಿಮಿಡಿಯಾ ಸ್ಕ್ರೀನ್, ಪ್ರೈವೇಟ್ ಜೆಟ್ ರೀತಿ ಇರುವ ಐಷಾರಾಮಿ ಕ್ಯಾಬಿನ್ ಸೌಲಭ್ಯವಿದೆ.

ಖೇಸರಿ ಲಾಲ್ ಬಳಿ ಇದೆ ಹಲವು ಕಾರು

ಖೇಸರಿ ಲಾಲ್ ಯಾದವ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ಲ್ಯಾಂಡ್ ರೋವರ್ ಡಿಫೆಂಡರ್, ಟೋಯೋಟಾ ಫಾರ್ಚುನರ್, ಲಿಜೆಂಡರ್ ಸೇರಿದಂತೆ ಹಲವು ದುಬಾರಿ ಕಾರುಗಳಿವೆ. ಖೇಸರಿ ಲಾಲ್ ಯಾದವ್ ಸಾಧನೆಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

30,000 ಸಂಬಳ! ನೀವೂ ಕಾರು ಖರೀದಿಸಬಹುದು.. 20-4-10 ಸೂತ್ರ ಫಾಲೋ ಮಾಡಿ..!
MG ಹೆಕ್ಟರ್ ಟೋಮಹಾಕ್ EV ಲಾಂಚ್‌ಗೆ ದಿನಾಂಕ ಫಿಕ್ಸ್: ಹೊಸ SUVಯ ವಿಶೇಷತೆಗಳೇನು?