ಮಾರುತಿ ಬ್ರೆಜಾಗೆ ಪೈಪೋಟಿ, ಕಿಯಾ ಸೊನೆಟ್ ಕಾರು ಸೇರಿ ಕೆಲ ಕಾರುಗಳು 1 ಲಕ್ಷ ರೂ ಡಿಸ್ಕೌಂಟ್ ಆಫರ್

Published : Aug 07, 2026, 05:26 PM IST
Kia Sonet

ಸಾರಾಂಶ

ಕಿಯಾ ಸೊನೆಟ್, ಸೆಲ್ಟೋಸ್, ಕ್ಯಾರೆನ್ಸ್ ಸೇರಿದಂತೆ ಕಿಯಾ ಕಾರುಗಳಿಗೆ 1 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಆಗಸ್ಟ್ ತಿಂಗಳ ಅಂತ್ಯದವರೆಗ ಈ ಡಿಸ್ಕೌಂಟ್ ಆಫರ್ ಇರಲಿದೆ. ಯಾವ ಕಾರಿಗೆ ಎಷ್ಟು ಡಿಸ್ಕೌಂಟ್

ದೆಹಲಿ (ಆ.07) ಭಾರತದಲ್ಲಿ ಕಿಯಾ ಕಾರು ಮಾರುಕಟ್ಟೆ ವಿಸ್ತರಣೆ ಮಾಡುತ್ತಿದೆ. ಇದೀಗ ಸೊರೆಂಟೋ ಕಾರು ಬಿಡುಗಡೆಗೆ ತಯಾರಿ ನಡೆಸಿದೆ.ಇದರ ನಡುವೆ ಕಿಯಾ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಕಿಯಾ ಡಿಸ್ಕೌಂಟ್‌ನಿಂದ ಇದೀಗ ಮಾರುತಿ ಬ್ರೆಜಾಗೆ ತೀವ್ರ ಪೈಪೋಟಿ ಎದುರಾಗಿದೆ. ಇತ್ತೀಚೆಗೆ ಮಾರುತಿ ಬ್ರೆಜಾ 1.0 ಲೀಟರ್ ಟರ್ಬೋ ಎಂಜಿನ್ ಕಾರು 7.40 ಲಕ್ಷ ರೂ ಬೆಲೆಯಲ್ಲಿ ಬಿಡುಗಡೆಯಾಗಿದೆ. ಬ್ರೆಜಾ ಸೇರಿದಂತೆ ಇತರ ಕಾರುಗಳಿಗೆ ಪೈಪೋಟಿ ನೀಡಲು ಕಿಯಾ ತನ್ನ ಕಾರುಗಳಿಗೆ 1 ಲಕ್ಷ ರೂವರೆಗೆ ಡಿಸ್ಕೌಂಟ್ ನೀಡಿದೆ.

ಆಗಸ್ಟ್ 31ರ ವರೆಗೆ ಆಫರ್ ಲಭ್ಯ

ಕಿಯಾ ಸೊನೆಟ್, ಕಿಯಾ ಸೆಲ್ಟೋಸ್, ಕಿಯಾ ಕ್ಯಾರೆನ್ಸ್, ಸೈರೋಸ್ ಇವಿ, ಕ್ಯಾರೆನ್ಸ್ ಇವಿ, ಕಾರ್ನಿವಲ್ ಕಾರುಗಳಿಗೆ 1 ಲಕ್ಷ ರೂಪಾಯಿ ವರೆಗೆ ವಿನಾಯಿತಿ ಘೋಷಿಸಿದೆ. ಈ ಆಫರ್ ಆಗಸ್ಟ್ ತಿಂಗಳಿಗೆ ಮಾತ್ರ. ಸದ್ಯ ಆಫರ್ ಆರಂಭಗೊಂಡಿದೆ. ಆಗಸ್ಟ್ 31ರ ವರೆಗೆ ಈ ಆಫರ್ ಇರಲಿದೆ. ಇದರೊಳಗೆ ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ ಆಫರ್ ಲಭ್ಯವಾಗಲಿದೆ.

ಕಿಯಾ ಸೊನೆಟ್ ಬಿಗ್ ಆಫರ್

ಕಿಯಾ ಸೊನೆಟ್ ಕಾರು ಮಾರುತಿ ಬ್ರೆಜಾ, ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಇದೀಗ ಸೊನೆಟ್ ಕಾರಿಗೆ 10 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್, 20,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 15,000 ರೂಪಾಯಿ ಸ್ಕ್ರಾಪ್ ಬೋನಸ್, 15 ಸಾವಿರ ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ.

ಕಿಯಾ ಕಾರುಗಳ ಡಿಸ್ಕೌಂಟ್ ಡಿಟೇಲ್

ಕಿಯಾ ಸೈರೋಸ್ ಕಾರಿಗೆ 10 ಸಾವಿರ ರೂಪಾಯಿ ನಗದು ಡಿಸ್ಕೌಂಟ್, 20 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಬೋನಸ್, 20 ಸಾವಿರ ರೂಪಾಯಿ ಸ್ಕ್ರಾಪೇಜ್ ಬೋನಸ್, 15,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ. ಇನ್ನು ಸೆಲ್ಟೋಸ್ ಕಾರಿಗೆ 20 ಸಾವಿರ ರೂಪಾಯಿ ಲಾಯಲ್ಟಿ ಬೋನಸ್, 20,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ. ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಟರ್ಬೋ ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 30,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 15,000 ರೂಪಾಯಿ ಕಾರ್ಪೋರೇಟ್ ಬೋನಸ್, 20,000 ರೂಪಾಯಿ ಸ್ಕ್ರಾಪ್ ಬೋನಸ್ ನೀಡಲಾಗಿದೆ. ಕಿಯಾ ಕಾರ್ನಿವಲ್ ಕಾರಿಗೆ 1 ಲಕ್ಷ ರೂಪಾಯಿ ಎಕ್ಸ್‌ಚೇಂಜ್ ಬೋನಸ್, 50,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ.

ಕಿಯಾ ಇವಿ ಕಾರುಗಳ ಡಿಸೌಂಟ್ ಆಫರ್

ಕಿಯಾ ಕ್ಯಾರೆನ್ಸ್ ಇವಿ ಕಾರಿಗೆ 20,000 ರೂಪಾಯಿ ನಗದು ಡಿಸ್ಕೌಂಟ್, 20,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 15000 ರೂಪಾಯಿ ಕಾರ್ಪೋರೇಟ್ ಬೋನಸ್, 20,000 ರೂಪಾಯಿ ಲಾಯಲ್ಟಿ ಬೋನಸ್, 20,000 ರೂಪಾಯಿ ಸ್ಕ್ರಾಪ್ ಇನ್ಸೆಂಟೀವ್ ನೀಡಲಾಗಿದೆ.

PREV
Read more Articles on
click me!

Recommended Stories

Maruti Suzuki Ertiga ಹೊಸ ಸಂಚಲನ.. ದೊಡ್ಡ ದೊಡ್ಡ ದೈತ್ಯ ಕಂಪನಿಗಳಿಗೆ ಬಿತ್ತು ಕೊಡಲಿ ಪೆಟ್ಟು
Mahindra Thar Facelift: ಥಾರ್‌ ರಾಕ್ಸ್‌ ಲುಕ್‌ನಲ್ಲಿ ಹೊಸ ಥಾರ್‌; ಬರಲಿವೆ ಭರ್ಜರಿ ಫೀಚರ್ಸ್‌!