80 ವರ್ಷದ ಹುಟ್ಟುಹಬ್ಬಕ್ಕೆ 80ನೇ ಪೊರ್ಶೆ ಕಾರು ಖರೀದಿ; ಕಾರು ಕ್ರೇಜ್‌‌ಗೆ ಸರಿಸಾಟಿ ಇಲ್ಲ!

By Chethan Kumar  |  First Published Dec 23, 2020, 2:33 PM IST

ವಯಸ್ಸು 80..ಅದೆಷ್ಟೇ ಶ್ರೀಮಂತನಾದರೂ ಹೆಚ್ಚೆಂದೆರೆ 10 ರಿಂದ 15 ಕಾರುಗಳು ಖರೀದಿಸಿರಬಹುದು, ಅಥವಾ ಬದಲಾಯಿಸರಬಹುದು. ಆದರೆ ಇಲ್ಲೊಬ್ಬರು 80ನೇ ಹುಟ್ಟು ಹಬ್ಬಕ್ಕೆ 80ನೇ ದುಬಾರಿ ಪೋರ್ಶೆ ಕಾರು ಖರೀದಿಸಿದ್ದಾರೆ. ಈ ತಾತನ ರೋಚಕ ಸ್ಟೋರಿ ಇಲ್ಲಿದೆ.


ವಿಯೆನ್ನ(ಡಿ.23): ವಯಸ್ಸು ಕೇವಲ ನಂಬರ್ ಅಷ್ಟೇ ಅನ್ನೋ ಮಾತಿದೆ. ಇದು ನಿಜ ಕೂಡ ಹೌದು. ಕಾರಣ ಸಾಧಿಸುವ ಛಲ, ಗುರಿ, ಉದ್ದೇಶ, ಪರಿಶ್ರಮ, ಪ್ರಯತ್ನಗಳಿದ್ದರೆ ಯಾವ ವಯಸ್ಸಿನಲ್ಲಿ ಏನೂ ಬೇಕಾದರೂ ಆಗಬಹುದು. ಇಲ್ಲೊಬ್ಬರು ಚಿಕ್ಕಂದಿನಿಂದ ಹುಟ್ಟಿಕೊಂಡ ಕಾರು ಕ್ರೇಜ್ ಇದೀಗ 80ನೇ ವಯಸ್ಸಿನಲ್ಲೂ ಮುಂದುವರಿದಿದೆ. ಇತ್ತೀಚೆಗಷ್ಟೇ 80ನೇ ಹುಟ್ಟುಹಬ್ಬ ಆಚರಿಸಿಕೊಂಡ ಈ ಜಂಟಲ್‌ಮ್ಯಾನ್, 80ನೇ ಪೊರ್ಶೆ ಕಾರು ಖರೀದಿಸಿದ್ದಾರೆ.

3 ಕೋಟಿ ಬೆಲೆಯ ಪೊರ್ಶೆ 911 ಟರ್ಬೋ S ಕಾರು ಸಂಪೂರ್ಣ ಉಚಿತ; ಒಂದೇ ಕಂಡೀಷನ್!.

Tap to resize

Latest Videos

undefined

ಆಸ್ಟ್ರೀಯಾದ ವಿಯೆನ್ನಾ ನಿವಾಸಿಯಾಗಿರುವ ಒಟ್ಟೊಕಾರ್ ಜೆ, ಇತ್ತೀಚೆಗೆ 80ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಎಂದಿನ ಶೈಲಿಯಲ್ಲೇ ಆಚರಿಸಿದ್ದಾರೆ. ಪ್ರತಿ ಹುಟ್ಟು ಹಬ್ಬಕ್ಕೂ ಒಟ್ಟೊಕಾರ್ ಜೆ ಪೋರ್ಶೆ ಕಾರು ಖರೀದಿಸುತ್ತಾರೆ. ಈ ಬಾರಿ 80ನೇ ಹುಟ್ಟುಹಬ್ಬಕ್ಕೆ 80ನೇ ಪೋರ್ಶೆ ಕಾರು ಖರೀದಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಒಟ್ಟೊಕಾರ್ ಜೆಗೆ 25 ವರ್ಷವಿದ್ದಾಗ ಪೋರ್ಶೆ ಕಾರು ಮೇಲೆ ವಿಶೇಷ ವ್ಯಾಮೋಹ ಬೆಳೆಯಿತು.  ದುಡಿಮೆಯಲ್ಲಿ ಒಂದಿಷ್ಟು ಹಣ ಕೂಡಿಟ್ಟು 30ನೇ ವಯಸ್ಸಿಗೆ ಮೊದಲ ಪೋರ್ಶೆ ಕಾರು ಖರೀದಿಸಿದರು. 50 ವರ್ಷಗಳ ಹಿಂದೆ ಆರಂಭಗೊಂಡ ಈ ಪೋರ್ಶೆ ಕಾರಿನ ವ್ಯಾಮೋಹ ಇದೀಗ 80ನೇ ಪೋರ್ಶೆ ಕಾರು ಖರೀದಿಸುವಷ್ಟರ ಮಟ್ಟಿಗೆ ತಲುಪಿದೆ.

ಕೊಹ್ಲಿಗಿಂತ ದುಬಾರಿ ಕಾರು ಖರೀದಿಸಿದ ಸಹೋದರ ವಿಕಾಶ್ ಕೊಹ್ಲಿ!..

80ನೇ ಹುಟ್ಟುಹಬ್ಬಕ್ಕೆ ಪೋರ್ಶೆ ಬಾಕ್ಸರ್ ಸ್ಪೈಡರ್ ಬ್ಲೂ ಕಲರ್ ಕಾರನ್ನು  ಒಟ್ಟೊಕಾರ್ ಜೆ ಖರೀದಿಸಿದ್ದಾರೆ.  ಪೋರ್ಶೆ ವಿಂಟೇಜ್ ಕಾರಿನಿಂದ ಹಿಡಿದು ಅತ್ಯಾಧುನಿಕ ಮಾಡೆಲ್ ಕಾರುಗಳು ಓಟ್ಟೊಕಾರ್ ಜೆ ಬಳಿ ಇದೆ. ಕಾರಿಗಾಗಿ ಹೊಸ ಮನೆ ಕಟ್ಟಿದ್ದಾರೆ. ಕೇವಲ ಕಾರು ನಿಲ್ಲಿಸಲು ದೊಡ್ಡ ಬಿಲ್ಡಿಂಗ್ ಕಟ್ಟಬೇಕಾಗಿ ಬಂದಿದೆ.

ಪೋರ್ಶೆ ಕಾರಿನ ಪ್ರತಿ ಮಾಡೆಲ್ ಒಟ್ಟೊಕಾರ್ ಜೆ ಬಳಿ ಲಭ್ಯವಿದೆ. ಕೆಲ ವರ್ಷಗಳಲ್ಲಿ ಒಟ್ಟೊ 3 ರಿಂದ 4 ಪೋರ್ಶೆ ಕಾರುಗಳನ್ನು ಖರೀದಿಸಿದ್ದಾರೆ. ಅಪ್‌ಗ್ರೇಡ್ ವರ್ಶನ್, ಫೇಸ್‌ಲಿಫ್ಟ್, ಸ್ಪೋರ್ಟ್ಸ್ ವರ್ಶನ್ ಕಾರುಗಳು ಬಿಡುಗಡೆಯಾದಾಗ ಖರೀದಿಸಿದ್ದಾರೆ. ಬಳಿಕ ಒಂದೇ ಮಾಡಲ್ ಕೆಲ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಇದೀಗ ಒಟ್ಟೊಕಾರ್ ಜೆ ಬಳಿ 38 ಪೋರ್ಶೆ ಕಾರುಗಳಿವೆ. ಉಳಿದ ಕಾರುಗಳನ್ನು ಒಟ್ಟೊ ಮಾರಾಟ ಮಾಡಿದ್ದಾರೆ.

ಒಟ್ಟೊಕಾರ್ ಜೆ ಹೇಳುವಂತೆ ಪ್ರತಿ ತಿಂಗಳ ಪ್ರತಿ ದಿನ ಬೇರೆ ಬೇರೆ ಕಾರಿನಲ್ಲಿ ಪ್ರಯಾಣ ಮಾಡುತ್ತೇನೆ. ವಾರಾಂತ್ಯದಲ್ಲಿ ಒಂದೇ ದಿನ ಎರಡು ಕಾರುಗಳನ್ನು ಬಳಸುತ್ತೇನೆ ಎಂದಿದ್ದಾರೆ. ನಾವೆಲ್ಲ ಕನಿಷ್ಠ ಒಂದು ಪೋರ್ಶೆ ಕಾರು ಖರೀದಿಸುವ ಸಾಮರ್ಥ್ಯ ಬರಲಿ ಎಂದು ಆಶಿಸುತ್ತೇವೆ. ಆದರೆ ಪ್ರೋರ್ಶೆ ಕಾರು ಕ್ರೇಝರ್ ಒಟ್ಟೊ 80 ದುಬಾರಿ ಪೋರ್ಶೆ ಕಾರು ಖರೀದಿಸಿ ದಾಖಲೆ ಬರೆದಿದ್ದಾರೆ.
 

click me!