2024ಕ್ಕೆ ಆ್ಯಪಲ್‌ನ ‘ಕ್ರಾಂತಿಕಾರಿ ಎಲೆಕ್ಟ್ರಿಕ್‌ ಕಾರ್‌’!

By Kannadaprabha News  |  First Published Dec 23, 2020, 9:40 AM IST

2024ಕ್ಕೆ ಆ್ಯಪಲ್‌ನ ‘ಕ್ರಾಂತಿಕಾರಿ ಎಲೆಕ್ಟ್ರಿಕ್‌ ಕಾರ್‌’| ಕಡಿಮೆ ವೆಚ್ಚದ, ಸಣ್ಣ ಗಾತ್ರದ, ಹೆಚ್ಚು ದೂರ ಚಲಿಸುವ ಶಕ್ತಿಯ ಬ್ಯಾಟರಿ| ಐಫೋನ್‌ನಲ್ಲಿ ಮಾಡಿದ ಕ್ರಾಂತಿ ‘ಐಕಾರ್‌’ನಲ್ಲೂ ಮಾಡಲಿದ್ಯಾ ಆ್ಯಪಲ್‌?


 

ನವದೆಹಲಿ(ಡಿ.23): ಐಫೋನ್‌ ಮೂಲಕ ಮೊಬೈಲ್‌ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿರುವ ಆ್ಯಪಲ್‌ ಕಂಪನಿ 2024ರೊಳಗೆ ಜಗತ್ತಿನಾದ್ಯಂತ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲಿರುವ ವಿಶಿಷ್ಟಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

Tap to resize

Latest Videos

ಸ್ವಯಂಚಾಲಿತ ಕಾರು ತಯಾರಿಸಬೇಕೋ, ಎಲೆಕ್ಟ್ರಿಕ್‌ ಕಾರು ತಯಾರಿಸಬೇಕೋ ಅಥವಾ ಬರೀ ಎಲೆಕ್ಟ್ರಿಕ್‌ ಕಾರಿನ ಬ್ಯಾಟರಿ ತಯಾರಿಸಬೇಕೋ ಎಂಬ ಗೊಂದಲಗಳಿಂದ ಕೊನೆಗೂ ಹೊರಬಂದಿರುವ ಆ್ಯಪಲ್‌ ಕಂಪನಿ, ವಿಭಿನ್ನ ಹಾಗೂ ವಿಶಿಷ್ಟವಾದ ಬ್ಯಾಟರಿಚಾಲಿತ ಎಲೆಕ್ಟ್ರಿಕ್‌ ಕಾರನ್ನೇ ತಯಾರಿಸಲು ನಿರ್ಧರಿಸಿದೆ. ಈ ಕಾರಿನಲ್ಲಿರುವ ಬ್ಯಾಟರಿಯು ಸಣ್ಣ ಗಾತ್ರದ್ದೂ, ಕಡಿಮೆ ವೆಚ್ಚದ್ದೂ ಹಾಗೂ ಹೆಚ್ಚು ಮೈಲೇಜ್‌ ನೀಡುವಂಥದ್ದೂ ಆಗಿರುತ್ತದೆ ಎಂದು ಹೇಳಲಾಗಿದೆ.

ಜಗತ್ತಿನಾದ್ಯಂತ ಸದ್ಯ ಎಲೆಕ್ಟ್ರಿಕ್‌ ಕಾರುಗಳು ಬಹಳ ದುಬಾರಿ ದರ ಹೊಂದಿವೆ. ಅವುಗಳ ಬ್ಯಾಟರಿಗೇ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಆ್ಯಪಲ್‌ ಕಂಪನಿ ಕಡಿಮೆ ದರದಲ್ಲಿ ಹೆಚ್ಚು ಶಕ್ತಿ ನೀಡುವ ಹೊಸ ತಂತ್ರಜ್ಞಾನದ ಬ್ಯಾಟರಿ ಅಭಿವೃದ್ಧಿಪಡಿಸುತ್ತದೆ. ಈ ಬ್ಯಾಟರಿಯನ್ನು ಹೊಂದಿರುವ ಕಾರುಗಳು ಬ್ಯಾಟರಿಚಾಲಿತ ಕಾರುಗಳ ತಂತ್ರಜ್ಞಾನದಲ್ಲಿ ಕ್ರಾಂತಿ ಉಂಟುಮಾಡಲಿವೆ. ಇವು ‘ನೆಕ್ಸ್ಟ್‌ಲೆವಲ್‌’ ಕಾರುಗಳಾಗಿರುತ್ತವೆ ಎಂದು ಹೇಳಲಾಗುತ್ತಿದೆ.

click me!