ಮುಂಬೈ(ಜ.29): ಭಾರತದ ಎಲೆಕ್ಟ್ರಿಕ್ ಕಾರು(Electric Car market) ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್(Tata Nexon EV) ಕಾರು ಇದೀಗ ಹೊಸ ಫೀಚರ್ಸ್, ಹೆಚ್ಚುವರಿ ಮೈಲೇಜ್ ಸೇರಿದಂತೆ ಹಲವು ಅಪ್‌ಡೇಟ್‌ನೊಂದಿಗೆ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ರೋಡ್ ಟೆಸ್ಟ್ ವೇಳೆ ನೆಕ್ಸಾನ್ ಇವಿ ಕಾಣಿಸಿಕೊಂಡಿದೆ. ಶೀಘ್ರದಲ್ಲೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.
ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು 400ಕ್ಕಿಂತ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ಟಾಟಾ ಮೋಟಾರ್ಸ್(Tata Motors) ಹೇಳಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರು 312 ಕಿ.ಮೀ ಮೈಲೇಜ್ ನೀಡಲಿದೆ. ಹೆಚ್ಚುವರಿ ಮೈಲೇಜ್ ಜೊತೆಗೆ ಹಲವು ಫೀಚರ್ಸ್ ಅಪ್‌ಡೇಟ್ ಮಾಡಲಾಗಿದೆ. ಇದರ ಜೊತೆಗೆ ರೇರ್ ಕೂಡ ಡಿಸ್ಕ್ ಬ್ರೇಕ್ ಬಳಕೆ ಮಾಡಲಾಗಿದೆ. ಈ ಮೂಲಕ ನಾಲ್ಕು ಚಕ್ರಗಳು ಡಿಸ್ಕ್ ಬ್ರೇಕ್ ಹೊಂದಿದೆ.
Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!
ನೂತನ ನೆಕ್ಸಾನ್ ಇವಿ ಕಾರಿನ ಅತೀ ದೊಡ್ಡ ಬದಲಾವಣೆ ಎಂದರೆ 40kWh ಬ್ಯಾಟರಿ ಪ್ಯಾಕ್. ಇದರಿಂದ ನೆಕ್ಸಾನ್ ಇವಿ ಮೈಲೇಜ್ ಹೆಚ್ಚಿಸಲಿದೆ. 312ಕಿ.ಮೀ ಮೈಲೇಜ್‌ನಿಂದ 400ಕ್ಕಿಂತ ಹೆಚ್ಚಿನ ಮೈಲೇಜ್ ಸಿಗಲಿದೆ. ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು 30.2kWh ಬ್ಯಾಟರಿ ಪ್ಯಾಕ್ ಹೊಂದಿದೆ. ARAI ಪ್ರಮಾಣೀಕೃತ 312 ಕಿ.ಮೀ ಮೈಲೇಜ್ ನೀಡುತ್ತಿದೆ.
ಬ್ಯಾಟರಿ ಪ್ಯಾಕ್ ಸಾಮರ್ಥ್ಯ ಹೆಚ್ಚಿಸಿದಂತೆ ಇದರ ಚಾರ್ಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ನೆಕ್ಸಾನ್ ಇವಿ ನೂತನ ಕಾರನ್ನು ಅತೀ ವೇಗದಲ್ಲಿ ಚಾರ್ಜ್ ಮಾಡಲು ಸಾಧ್ಯವಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಆದರೆ ನಿಖರ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!
ಕಾರಿನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ಹೆಚ್ಚುವರಿ ಕೆಲ ಫೀಚರ್ಸ್ ಸೇರಿಸಲಾಗುತ್ತದೆ ಎಂದು ಟಾಟಾ ಮೋಟಾರ್ಸ್ ಈಗಾಗಲೇ ಸ್ಪಷ್ಟಪಡಿಸಿದೆ. LED DRL, ಟ್ರೈ ಏರೋ, ಬಂಪರ್ ಸೇರಿದಂತೆ ಹಲವು ಸೇಮ್ ಫೀಚರ್ಸ್ ಈ ಕಾರಿನಲ್ಲಿದೆ.
ನೆಕ್ಸಾನ್ ಇವಿ 0-100 ಕಿ.ಮೀ ವೇಗವನ್ನು ಕೇವಲ 9.9 ಸೆಕೆಂಡ್‌ಗಳಲ್ಲಿ ಪಡೆಯಲಿದೆ. 0-60 ಕಿ.ಮೀ ವೇಗವನ್ನು 4.6 ಸೆಕೆಂಡ್‌ಗಳಲ್ಲಿ ಪಡೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರು 60 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಆದರೆ ಇದು ಸಮಯ ಫಾಸ್ಟ್ ಚಾರ್ಜಿಂಗ್ ಮೂಲಕ ಚಾರ್ಜ್ ಮಾಡಿದರೆ ಮಾತ್ರ. ಇನ್ನು ಸಾಮಾನ್ಯ 14AMP ಚಾರ್ಜಿಂಗ್ ಸ್ಲಾಟ್ ಮೂಲಕ ಚಾರ್ಜ್ ಮಾಡಿದರೆ 2 ರಿಂದ 3 ಗಂಟೆ ಸಮಯ ತೆಗೆದುಕೊಳ್ಳಲಿದೆ.
ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!
ನೂತನ ನೆಕ್ಸಾನ್ ಇವಿ ಕಾರಿನ ಬೆಲೆ ಕೊಂಚ ದುಬಾರಿಯಾಗಲಿದೆ. 15 ರಿಂದ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕೂಡ ಮುಂದುವರಿಯಲಿದೆ. 312 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ನೆಕ್ಸಾನ್ ಎಂಟ್ರಿಲೆವೆಲ್ ಎಲೆಕ್ಟ್ರಿಕ್ SUV ಕಾರಾಗಲಿದೆ.
ಟಾಟಾ ಎಲೆಕ್ಟ್ರಿಕ್ ಕಾರು:
ನೆಕ್ಸಾನ್ ಇವಿ ಅಪ್‌ಗ್ರೇಡ್ ವರ್ಶನ್ ಬಿಡುಗಡೆ ಜೊತೆಗೆ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟಾಟಾ ತಯಾರಿ ಮಾಡಿಕೊಳ್ಳುತ್ತಿದೆ. ಅಲ್ಟ್ರೋಜ್ ಕಾರು ಕೂಡ 400 ಪ್ಲಸ್ ಮೈಲೇಜ್ ರೇಂಜ್ ಸಾಮರ್ಥ್ಯ ಹೊಂದಿರಲಿದೆ ಎಂದು ಟಾಟಾ ಹೇಳಿದೆ. ವಿಶೇಷ ಅಂದರೆ ಬಿಡುಗಡೆಯಾಗಲಿರುವ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು 10 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಟಾಟಾ ಹೇಳಿದೆ. ಈ ಮೂಲಕ ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡುವ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಲಿದೆ.