Upcoming Electric Car ಅತೀ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಬರುತ್ತಿದೆ ನಿಸಾನ್ ಎಲೆಕ್ಟ್ರಿಕ್ ಕಾರು!

By Suvarna News  |  First Published Jan 29, 2022, 6:54 PM IST
  • ನಿಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ
  • ಭಾರತದಲ್ಲಿ ಕಡಿಮೆ ಬೆಲೆಗೆ ಇವಿ ಬಿಡುಗಡೆ, ಪೈಪೋಟಿ ಬಲು ಜೋರು
  • ಮ್ಯಾಗ್ನೈಟ್ ಯಶಸ್ಸಿನ ಬಳಿಕ ಮೈಕೊಡವಿ ನಿಂತ ನಿಸಾನ್

ನವದೆಹಲಿ(ಜ.29): ಭಾರತದಲ್ಲಿ ನಿಸಾನ್(Nissan) ಆಟೋ ಕಂಪನಿ ಹೊಸ ಅಧ್ಯಾಯ ಆರಂಭಿಸಿದೆ. ನಿಸಾನ್ ಮ್ಯಾಗ್ನೈಟ್(Nissan Magnite) ಕಾರಿನ ಮೂಲಕ ಅತ್ಯುತ್ತಮ ಮಾರಾಟ ದಾಖಲೆಯನ್ನು(Car sales) ಬರೆದಿದೆ. ಈ ಮೂಲಕ ನಿಸಾನ್ ಉತ್ತಮ ಆದಾಯಗಳಿಸಿದೆ. ನಿಸಾನ್ ಮ್ಯಾಗ್ನೈಟ್ SUV ಕಾರಿನ ಬಳಿಕ ಭಾರತದ ಮಾರುಕಟ್ಟೆಯಲ್ಲಿ ನಿಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಮ್ಯಾಗ್ನೈಟ್ ರೀತಿಯಲ್ಲೇ ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರು(Nissan Electric Car) ನೀಡಲು ನಿಸಾನ್ ಮುಂದಾಗಿದೆ.

ಭಾರತದಲ್ಲಿ ನಿಸಾನ್ ಮಾರುಕಟ್ಟೆ ಮಾರುತಿ ಸುಜುಕಿ(Maruti Suzuki), ಹ್ಯುಂಡೈ(Hyundai), ಟಾಟಾ ಮೋಟಾರ್ಸ್‌ಗೆ(Tata Motors) ಹೋಲಿಸಿದರೆ ಕಡಿಮೆ ಇದೆ. ಆದರೆ ವಿಶ್ವದಲ್ಲಿ ಅತೀ ದೊಡ್ಡ ಕಾರು ಉತ್ಪಾದಕ ಕಂಪನಿಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರು ಖರೀದಿಯಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ಮಧ್ಯಮ ವರ್ಗ, ಜನಸಾಮಾನ್ಯರಿಗೆ ಎಲೆಕ್ಟ್ರಿಕ್ ಕಾರುಗಳು ಕೈಗೆಸಿಗುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಸಾನ್ ಇದೀಗ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ.

Latest Videos

undefined

 2.30 ಲಕ್ಷ ರೂ MINI ಎಲೆಕ್ಟ್ರಿಕ್ ಕಾರಿಗೆ ಬಾರಿ ಬೇಡಿಕೆ, ಸ್ವಿಫ್ಟ್, ಬಲೆನೋ, ಟೆಸ್ಲಾ ಹಿಂದಿಕ್ಕಿ ನಂ.1 ಸ್ಥಾನ

ನಿಸಾನ್ ಆಟೋ ಕಂಪನಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ನಿಸಾನ್ ಲೀಫ್(Nissan leaf Electric Car) ಅತೀ ಹೆಚ್ಚು ಮನ್ನಣೆ ಗಳಿಸಿರುವ ಎಲೆಕ್ಟ್ರಿಕ್ ಕಾರಾಗಿದೆ. ಇದೀಗ ಇದೇ ಕಾರನ್ನು ಸ್ಥಳೀಯವಾಗಿ ಉತ್ಪಾದಿಸಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ನಿಸಾನ್ ಮುಂದಾಗಿದೆ. 

ನಿಸಾನ್ ಲೀಫ್ ಹ್ಯಾಚ್‌ಬ್ಯಾಕ್ ಎಲೆಕ್ಟ್ಕಿಕ್ ಕಾರು ಹೊಸ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಲೀಫ್ ಕಾರು ಭಾರತದಲ್ಲೇ ಉತ್ಪಾದನೆಯಾಗಲಿದೆ. ಕಾರಿನ ಬ್ಯಾಟರಿ ಕೂಡ ಭಾರತದಲ್ಲಿ ಉತ್ಪಾದನೆಯಾಗಲಿದೆ. ಈ ಮೂಲಕ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮತ್ತೊಂದು ಅತ್ಯುತ್ತಮ ಆಯ್ಕೆ ನೀಡಲು ನಿಸಾನ್ ಮುಂದಾಗಿದೆ.

ಕಳೆದ ಕೆಲ ವರ್ಷಗಳಿಂದ ನಿಸಾನ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಮಾಡಿತ್ತು. ಆದರೆ ಭಾರತದ ಮಾರುಕಟ್ಟೆ ತೆರೆದುಕೊಳ್ಳದ ಕಾರಣ ಹಿಂದೇಟು ಹಾಕಿತ್ತು. ಸದ್ಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಒತ್ತು ನೀಡುತ್ತಿರುವ ಕಾರಣ ನಿಸಾನ್ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. 

Tata Electric Car ವರ್ಷದಲ್ಲಿ 50,000 ಎಲೆಕ್ಟ್ರಿಕ್ ಕಾರು ಮಾರಾಟ ಗುರಿ, ಆಟೋ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಟಾ ನಿರ್ಧಾರ!

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಅಧಿಪತ್ಯ ಸಾಧಿಸಿದೆ. ಕಾರಣ ಕೈಗೆಟುಕುವ ದರದಲ್ಲಿ ಟಾಟಾ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡುತ್ತಿದೆ. ಇದೀಗ ಟಾಟಾಗೆ ಪೈಪೋಟಿ ನೀಡಲು ಎಂಜಿ ಮೋಟಾರ್ಸ್ ಜೊತೆಗೆ ನಿಸಾನ್ ಕೂಡ ಅಖಾಡಕ್ಕೆ ಇಳಿಯುತ್ತಿದೆ. ಟಾಟಾ ಭಾರತದಲ್ಲಿ ಟಾಟಾ ನೆಕ್ಸಾನ್ ಇವಿ(Tata Nexon Ev) ಹಾಗೂ ಟಾಟಾ ಟಿಗೋರ್ ಇವಿ(Tata Tigor EV) ಕಾರನ್ನು ಬಿಡುಗಡೆ ಮಾಡಿದೆ. 

ಇದರ ಜೊತೆಗೆ ಎಂಜಿ ಮೋಟಾರ್ಸ್(MG Motors) ಕಂಪಪನಿಯ ZS ಎಲೆಕ್ಟ್ರಿಕ್ ಕಾರು, ಹ್ಯುಂಡೈ ಕೋನಾ ಎಲೆಕ್ಟ್ರಿಕ್(hyundai Kona) ಕಾರು ಲಭ್ಯವಿದೆ. ಆದರೆ ZS ಎಲೆಕ್ಟ್ರಿಕ್ ಕಾರಿನ ಬೆಲೆ 21 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದ್ದರೆ, ಕೋನಾ 25 ಲಕ್ಷ ರೂಪಾಯಿ ಆರಂಭಿಕ ಬೆಲೆ. ಆದರೆ ಟಾಟಾ ನೆಕ್ಸಾನ್ ಇವಿ ಬೆಲೆ  ಸರಿಸುಮಾರು 15 ಲಕ್ಷ ರೂಪಾಯಿ, ಇನ್ನು ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆ 12 ರಿಂದ 14 ಲಕ್ಷ ರೂಪಾಯಿ. 

ನಿಸಾನ್ ಭಾರತದಲ್ಲಿ ಕಾರು ಬಿಡುಗಡೆ ಮಾಡುವುದರಿಂದ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರಿನ ಆಯ್ಕೆಗಳು ಹೆಚ್ಚಾಗಲಿದೆ. ಈಗಾಗಲೇ ಟಾಟಾ ಮೋಟಾರ್ಸ್ 10 ಲಕ್ಷ ರೂಪಾಯಿ ಒಳಗಿನ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
 

click me!