ಉಜ್ಜೈನ್(ಜ.29): ವಾಹನ ಕಳ್ಳತನ ಮಾಡಲು ಖದೀಮರು ಕಾಲಕ್ಕೆ ತಕ್ಕಂತೆ ತಮ್ಮ ಪ್ಲಾನ್ ಬದಲಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಟೆಸ್ಟ್ ಡ್ರೈವ್(Test Drive) ನೆಪದಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಹೊಸ ತಂತ್ರಜ್ಞಾನ, ಆ್ಯಂಟಿ ಥೆಫ್ಟ್ ಫೀಚರ್ಸ್ ಸೇರಿದಂತೆ ಹಲವು ಕಾರಣಗಳಿಂದ ಹೊಸ ಕಾರುಗಳ ಕಳ್ಳತನ ಅಷ್ಟು ಸುಲಭವಲ್ಲ. ಹೀಗೆ ಟಾಟಾ ಅಲ್ಟ್ರೋಜ್(Tata Altroz) ಕಾರು ಕಳ್ಳತನ(Stolen) ಮಾಡಿದ ಖದೀಮರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶದ(Madhya Pradesh) ಉಜ್ಜೈನಿಯಲ್ಲಿ ನಡೆದಿದೆ. ಟಾಟಾ ಅಲ್ಟ್ರೋಜ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಗ್ರಾಹಕರು ಟಾಟಾ ಶೋ ರೂಂಗಳಿಗೆ ಆಗಮಿಸಿ ಅಲ್ಟ್ರೋಜ್ ಕಾರಿನ ಕುರಿತು ವಿಚಾರಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗೆ ಉಜ್ಜೈನಿಯಲ್ಲಿನ ಟಾಟಾ ಮೋಟಾರ್ಸ್ ಡೀಲರ್‌ಶಿಪ್ ಬಳಿ ತೆರಳಿದ ಇಬ್ಬರು ಕಳ್ಳರು, ಅಲ್ಟ್ರೋಜ್ ಕಾರು ಖರೀದಿಸುವಂತೆ ನಟೆಸಿದ್ದಾರೆ.
undefined
Car Delivery ಕಾರು ಡೆಲಿವರಿ ವೇಳೆ ಎಡವಟ್ಟು, ಶೋ ರೂಂನಲ್ಲಿ ನಿಂತಿದ್ದ ಮಹಿಳೆ, ಕೂತಿದ್ದ ವ್ಯಕ್ತಿಗೆ ಡಿಕ್ಕಿ!
ಶೋ ರೂಂ ಸಿಬ್ಬಂದಿ ಜೊತೆ ಮಾತನಾಡಿದ ಕಳ್ಳರು, ಟೆಸ್ಟ್ ಡ್ರೈವ್‌ಗೆ ಮನವಿ ಮಾಡಿದ್ದಾರೆ. ಸಿಬ್ಬಂದಿಗೆ ನಕಲಿ ದಾಖಲೆಗಳನ್ನು(Fake Document) ನೀಡಿ, ಟೆಸ್ಟ್ ಡ್ರೈವ್‌ಗೆ ಅಲ್ಟ್ರೋಜ್ ಕಾರು ಪಡೆದಿದ್ದಾರೆ. ನಿಯಮದ ಪ್ರಕಾರ ಗ್ರಾಹಕರ ಟೆಸ್ಟ್ ಡ್ರೈವ್ ವೇಳೆ ಶೋ ರೂಂ ಸಿಬ್ಬಂದಿಯೂ ಜೊತೆಗೆ ತೆರಳುತ್ತಾರೆ. ಹೀಗೆ ಸಿಬ್ಬಂದಿ ಜೊತೆ ಇಬ್ಬರು ಕಳ್ಳರು ಅಲ್ಟ್ರೋಜ್ ಕಾರು ಹಿಡಿದು ಟೆಸ್ಟ್ ಡ್ರೈವ್‌ಗೆ ತೆರಳಿದ್ದಾರೆ.
ಉಜ್ಜೈನಿಯಿಂದ ಹೈವೇಯತ್ತ ತಿರುಗಿದ ಕಾರು ವೇಗವಾಗಿ ಚಲಿಸತೊಡಗಿದೆ. ಈ ವೇಳೆ ಕಳ್ಳರು ಕಾರಿನಲ್ಲಿ ಸಮಸ್ಯೆ ಇದೆ, ಕಾರಿನ ವ್ಹೀಲ್ ಸಮಸ್ಯೆ ಇದೆ ಎಂದು ಸಿಬ್ಬಂದಿಗೆ ಹೇಳಿದ್ದಾರೆ. ಕಾರು ನಿಲ್ಲಿಸಿ ಕಾರಿನ ಚಕ್ರ, ಎಂಜಿನ್ ಪರಿಶೀಲಿಸಿದ್ದಾರೆ. ಈ ವೇಳೆ ಸಿಬ್ಬಂದಿಗೆ ಯಾವುದೇ ದೋಷ ಕಂಡುಬಂದಿಲ್ಲ. ಈ ವೇಳೆ ಕಳ್ಳರು ಕಾರನ್ನು ಸ್ವಲ್ಪ ಮುಂದೆ ಚಲಾಯಿಸುತ್ತೇನೆ. ಈ ವೇಳೆ ನಿಮಗೆ ಕಾರಿನ ಚಕ್ರದಲ್ಲಿ ಏನಾದರೂ ಸಮಸ್ಯೆ ಕಾಣುತ್ತಿದೆಯಾ ಎಂದು ಗಮನಿಸಿ ಎಂದು ಸಿಬ್ಬಂದಿಗೆ ಹೇಳಿದ್ದಾರೆ. ಹೀಗಾಗಿ ಸಿಬ್ಬಂದಿ ಕಾರು ಚಲಿಸುವಾಗ ಸಮಸ್ಯೆ ಪರಿಶೀಲಿಸಲು ರಸ್ತೆಯಲ್ಲೇ ನಿಂತಿದ್ದಾರೆ.
500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!
ಕಳ್ಳರು ಕಾರು ಸ್ಟಾರ್ಟ್ ಮಾಡಿ ಅತೀ ವೇಗವಾಗಿ ಮುಂದೆ ಸಾಗಿದ್ದಾರೆ. ನಡು ದಾರಿಯಲ್ಲಿ ಸಿಬ್ಬಂದಿಗೆ ಕಾರು ಇಲ್ಲ, ಇತ್ತ ಆಸರೆಯೂ ಇಲ್ಲದಾಗಿದೆ. ತಕ್ಷಣವೇ ಶೋ ರೂಂಗೆ ಕರೆ ಮಾಡಿದ ಸಿಬ್ಬಂದಿ ಕಳ್ಳತನ ವಿಚಾರ ಹೇಳಿದ್ದಾನೆ. ಇತ್ತ ಶೋ ರೂಂ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಬ್ಬಂದಿ ಕಾರಿನ ಇಳಿಯುವಾಗ ಕಾರಿ ಕೀ ಹಿಡಿದು ಇಳಿದಿದ್ದಾರೆ. ಈಗಿನ ಎಲ್ಲಾ ಕಾರುಗಳಲ್ಲಿ ಕೀ ಲೆಸ್ ಎಂಟ್ರಿ ತಂತ್ರಜ್ಞಾನವಿದೆ. ಪುಶ್ ಬಟನ್ ಮೂಲಕ ಕಾರು ಸ್ಟಾರ್ಟ್ ಹಾಗೂ ಆಫ್ ಮಾಡಬಹುದು. ಈ ತಂತ್ರಜ್ಞಾನದ ಕುರಿತ ಸಣ್ಣ ಸುಳಿವು ಖದೀಮ ಕಳ್ಳರಿಗೆ ಇರಲಿಲ್ಲ. ಕೀ ಲೆಸ್ ಎಂಟ್ರಿ ಕಾರಿನ ವಿಶೇಷತೆ ಎಂದರೆ ಕಾರು ಕಿ ಮೂಲಕ ಅನ್‌ಲಾಕ್ ಮಾಡಿ ಕಾರಿನ ಡೂರ್ ಓಪನ್ ಮಾಡಿದರೆ ಮತ್ತೆ ಪುಶ್ ಬಟನ್ ಮೂಲಕ ಕಾರು ಸ್ಟಾರ್ಟ್ ಮಾಡಲಾಗುತ್ತದೆ. ಆದರೆ ಕಾರು ನಿಲ್ಲಿಸಿ ಆಫ್ ಮಾಡಿದರೆ ಕಾರು ತನ್ನಷ್ಟಕ್ಕೆ ಲಾಕ್ ಆಗಲಿದೆ. ಬಳಿಕ ಅನ್ ಲಾಕ್ ಮಾಡಲು ಕಿ ಅವಶ್ಯಕತೆ ಇದೆ.
ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!
ಕಳ್ಳರು ಬಹುದೂರ ಸಾಗಿ ಅಲ್ಟ್ರೋಜ್ ಕಾರು ನಿಲ್ಲಿಸಿ ಮುಂದಿನ ಕಾರ್ಯಯೋಜನೆ ರೂಪಿಸಿದ್ದಾರೆ. ಕೆಲ ಹೊತ್ತು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಕಾರನ್ನು ಬೇರೆ ರಾಜ್ಯಕ್ಕೆ ಕೊಂಡೊಯ್ಡು ಬಿಡಿ ಭಾಗಗಳನ್ನು ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಕಾರು ಲಾಕ್ ಆಗಿದೆ. ಕಾರಿನ ಕೀ ಇಲ್ಲ. ಅದೆಷ್ಟೇ ಪ್ರಯತ್ನ ಪಟ್ಟರೂ ಕಾರು ಅನ್‌ಲಾಕ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಹೆಚ್ಚು ಹೊತ್ತು ಇಲ್ಲಿ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತ ಕಳ್ಳರು ಕಾರನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಹೆದ್ದಾರಿ ಸೇರಿದಂತೆ ಹಲವು ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಿದ್ದಾರೆ. ಗಸ್ತು ವಾಹನ ಕೂಡ ಪರಿಶೀಲನೆಗೆ ಇಳಿದಿದೆ. ಈ ವೇಳೆ ಕಾರು ದೂರದ ಹೆದ್ದಾರಿ ಬಳಿ ನಿಂತಿರುವುದಾಗಿ ಪೊಲೀಸ್ ಠಾಣೆಗೆ ಬಂದ ಮಾಹಿತಿ ಬಂದಿದೆ. ಇದನ್ನು ಆಧರಿಸಿದ ಪೊಲೀಸರು ಶೋ ರೂಂಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್ ಹಾಗೂ ಶೋ ರೂಂ ಸಿಬ್ಬಂದಿ ತೆರಳಿ ಕಾರನ್ನು ಮರಳಿ ತಂದಿದ್ದಾರೆ. ಇತ್ತ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.