ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಗಳಿಸಬೇಕೆಂಬ ಆಸೆಯ ಬೆನ್ನು ಬಿದ್ದ ನವ ತರುಣರು ಈಗ ಮಸಣ ಸೇರಿದ್ದಾರೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಮಾರುತಿ ಸುಝುಕಿ ಬ್ರಿಜಾ ಗಾಡಿಯಲ್ಲಿ ಮುಂಬೈಗೆ ನಡು ರಾತ್ರಿ ಲಾಂಗ್ ಡ್ರೈವ್ ಹೊರಟ ಐವರಲ್ಲಿ ಇಬ್ಬರು ಮಸಣ ಸೇರಿದ್ದಾರೆ.
ಕಚ್: ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಗಳಿಸಬೇಕೆಂಬ ಆಸೆಯ ಬೆನ್ನು ಬಿದ್ದ ನವ ತರುಣರು ಈಗ ಮಸಣ ಸೇರಿದ್ದಾರೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಮಾರುತಿ ಸುಝುಕಿ ಬ್ರಿಜಾ ಗಾಡಿಯಲ್ಲಿ ಮುಂಬೈಗೆ ನಡು ರಾತ್ರಿ ಲಾಂಗ್ ಡ್ರೈವ್ ಹೊರಟ ಐವರಲ್ಲಿ ಇಬ್ಬರು ಮಸಣ ಸೇರಿದ್ದಾರೆ. ಇವರೆಲ್ಲಾ, 22 ರಿಂದ 27ರ ನಡುವಣ ಪ್ರಾಯದ ಯುವಕರಾಗಿದ್ದು, ತಮ್ಮ ಈ ಲಾಂಗ್ ಡ್ರೈವ್ ಅನ್ನು ಸ್ಮರಣಿಯವಾಗಿಸಲು ಬಯಸಿದ್ದಾರೆ. ಇದಕ್ಕಾಗಿ ಪ್ರಯಾಣದ ಮಧ್ಯೆ ಇನ್ಸ್ಟಾಗ್ರಾಮ್ ಲೈವ್ ಹೋಗಿದ್ದಾರೆ. ಬರೀ ಇಷ್ಟೇ ಆಗಿದ್ದರೆ ಇಷ್ಟೊಂದು ದೊಡ್ಡ ಅನಾಹುತವಾಗುತ್ತಿರಲಿಲ್ಲವೇನೋ, ಗಾಡಿಯ ವೇಗವನ್ನು ಗಂಟೆಗೆ 160 ಕಿಲೋ ಮೀಟರ್‌ಗೆ ಹೆಚ್ಚಿಸಿದ ಇವರು ದಾರಿಯುದ್ಧಕ್ಕೂ ಸಿಕ್ಕ ಸಿಕ್ಕ ವಾಹನಗಳನ್ನು ಓವರ್‌ಟೇಕ್ ಮಾಡುತ್ತಾ ಬಂದಿದ್ದು, ಕಡೆಗೆ ಮರಕ್ಕೆ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ತರುಣರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನು ಮೂವರು ಗೆಳೆಯರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರಾದೃಷ್ಟಕಾರಿ ಘಟನೆಯ ಮೇ 2 ರಂದು ನಸುಕಿನ ಜಾವ 3.30 ರಿಂದ 4.30ರ ಸಮಯದಲ್ಲಿ ನಡೆದಿದ್ದು, ವೀಡಿಯೋ ಇನ್ಸ್ಟಾ ಲೈವ್‌ನಲ್ಲಿ ಸೆರೆ ಆಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ದೊಡ್ಡದಾಗಿ ಸಂಗೀತದ ಸದ್ದು ಕೇಳುತ್ತಿದ್ದು, ವೀಡಿಯೋದ ಆರಂಭದಲ್ಲಿ ಇಬ್ಬರು ಯುವಕರು ತಮ್ಮ ಇನ್ಸ್ಟಾ ಫ್ಯಾನ್ಸ್‌ಗೆ ಹೆಲೋ ಎಂದು ಹೇಳುತ್ತಾರೆ. ಕತ್ತಲೆಯಲ್ಲಿ ಈ ದೃಶ್ಯ ಚಿತ್ರಿಕರಿಸಿರುವುದರಿಂದ ಮೊಬೈಲ್ ದೃಶ್ಯ ಚೆನ್ನಾಗಿ ಕಾಣಲು ತರುಣರು ಮೊಬೈಲ್ ಲೈಟ್ ಆನ್ ಮಾಡ್ತಾರೆ. ಬಳಿಕ ಕಾರಿನ ಇತರ ಭಾಗಗಳನ್ನು ತೋರಿಸುತ್ತಾ ಮ್ಯೂಸಿಕ್ ಎಂಜಾಯ್ ಮಾಡುತ್ತಾ ಯುವಕರು ಜೋಶ್‌ನಲ್ಲಿದ್ದಾರೆ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ನಡೆದಿದೆ.
undefined
ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ: 6 ಸಾವು, ಮಕ್ಕಳ ಉಳಿಸಿ ಪೋಷಕರ ಹೊತ್ತೊಯ್ದ ಜವರಾಯ
ಆದರೆ ಯಾವಾಗ ಗೆಳೆಯರು ಎಸ್‌ಯುವಿ ಗಾಡಿಯ ಮೀಟರ್ ಬೋರ್ಡ್ ಮೇಲೆ ಕ್ಯಾಮರಾ ಯಾವಾಗ ಪೋಕಸ್ ಮಾಡ್ತಿದ್ರೋ ಅದಾಗಿ ಸ್ವಲ್ಪ ಹೊತ್ತಿನಲ್ಲಿ ಎಲ್ಲವೂ ಬದಲಾಗಿದೆ. ಕಾರಿನ ಸ್ಪೀಡೋ ಮೀಟರ್ ಗಂಟೆಗೆ 160 ಕಿಲೋ ಮೀಟರ್ ತೋರಿಸುತ್ತಿದ್ದು, ಇದರ ಜೊತೆಗೆ ಈ ಯುವಕರು ರಸ್ತೆಯಲ್ಲಿ ಬಂದ ಇತರ ವಾಹನಗಳನ್ನು ಗುರಿಯಾಗಿಸಿಕೊಂಡು ಓವರ್ ಟೇಕ್ ಮಾಡಲು ಶುರು ಮಾಡಿದ್ದಾರೆ. ಎಡ ಬಲ ಎಂಬುದನ್ನು ಕೂಡ ನೊಡದೇ ಜೋಶ್‌ನಲ್ಲಿ ತರುಣರು ವಾಹನಗಳನ್ನು ಓವರ್ ಟೇಕ್ ಮಾಡುತ್ತಾ ಸಾಗುತ್ತಿದ್ದರೆ, ಜೊತೆಯಲ್ಲಿರುವ ಗೆಳೆಯರು ಇನ್ನೊಮ್ಮೆ ಮತ್ತೊಮ್ಮೆ ಎಂದು ಚಾಲಕನ್ನು ಹುರಿದುಂಬಿಸಿದ್ದಾರೆ. ಪರಿಣಾಮ ಕಾರು ಸೀದಾ ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಕಗ್ಗತ್ತಲೆಯೊಂದಿಗೆ ವೀಡಿಯೋ ಎಂಡ್ ಆಗಿದೆ.
ಪರಿಣಾಮ ಈ ದುರಂತದಲ್ಲಿ ಅಹ್ಮದಾಬಾದ್ ಮೂಲದ ಅಮನ್ ಮೆಹಾಬೂಬ್ ಬೈ ಶೇಖ್, ಚಿರಾಗ್ ಕುಮಾರ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಹ್ಮದಾಬಾದ್‌ನವರೇ ಆದ ಇನ್ನು ಮೂವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾವು ಪ್ರಯಾಣಿಸುತ್ತಿದ್ದ ಎಸ್‌ಯುವಿ ಗಾಡಿ ಅಹ್ಮದಾಬಾದ್‌ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಗುಜರಾತ್ ಅಡಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ದುರಂತದಲ್ಲಿ ಬದುಕುಳಿದ ತರುಣರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಮುಸ್ತಫಾ ಅಲಿಯಾಸ್ ಶಹ್ಬಾದ್ ಖಾನ್ ಪಠಾಣ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ,ಪ್ಲೈ ಓವರ್‌ನಿಂದ ಬಿದ್ದು ಚಾಲಕ ಸಾವು!