ಕೈಗೆಟುಕವ ದರಲ್ಲಿ ಬಂತು ಹೊಸ ಮಾರುತಿ ಸ್ವಿಫ್ಟ್ ಕಾರು, 26ಕಿ.ಮೀ ಬಂಪರ್ ಮೈಲೇಜ್ !

By Suvarna NewsFirst Published May 9, 2024, 3:35 PM IST
Highlights

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಹೊಸ ವಿನ್ಯಾಸ, ಹೆಚ್ಚುವರಿ ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಿದೆ. ಹೊಸ ಸ್ಪಿಫ್ಟ್ ಕಾರಿನಲ್ಲಿ ಹಲವು ಮಹತ್ತರ ಬದಲಾವಣೆಗಳಿವೆ. ಹೆಚ್ಚುವರಿ ಸುರಕ್ಷತೆ, ತಂತ್ರಜ್ಞಾನ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.
 

ನವದೆಹಲಿ(ಮೇ.09) ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಗಣ್ಯನಾಗಿರುವ ಮಾರುತಿ ಸುಜುಕಿ ಇದೀಗ ತನ್ನ ಜನಪ್ರಿಯ ಸ್ವಿಫ್ಟ್ ಕಾರನ್ನು ಹೊಸ ಅವತಾರದಲ್ಲಿ ಬಿಡಗುಡೆ ಮಾಡಿದೆ. ಮುಂಭಾಗ ಗ್ರಿಲ್, ಹೆಡ್‍ಲ್ಯಾಂಪ್, ಟೈಲ್ ಲೈಟ್ಸ್ ಸೇರಿದಂತೆ ವಿನ್ಯಾಸದಲ್ಲೂ ಹಲವು ಬದಲಾವಣೆ ಮಾಡಲಾಗಿದೆ.ಈ ಮೂಲಕ ನೂತನ ಸ್ವಿಫ್ಟ್ ಮತ್ತಷ್ಟು ಆಕರ್ಷವಾಗಿದೆ. 2005ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸ್ವಿಫ್ಟ್ ಕಾರು ಬಿಡುಗಡೆಯಾಯಿತು. ಬಳಿಕ ಹಲವು ಬದಲಾವಣೆ, ಫೇಸ್‌ಲಿಫ್ಟ್, ಸ್ಪೆಷಲ್ ಎಡಿಶನ್ ಸೇರಿದಂತೆ ಹಲವು ಕಾರುಗಳು ಬಿಡುಗಡೆಯಾಗಿದೆ. ಇದೀಗ 2024ರ ಹೊಸ ಮಾಡೆಲ್ ಸ್ವಿಫ್ಟ್ ಮಾರುಕಟ್ಟೆ ಪ್ರವೇಶಿಸಿದೆ. ಇದರ ಬೆಲೆ 6.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

ಸ್ವಿಫ್ಟ್ ಮ್ಯಾನ್ಯುಯೆಲ್ ಕಾರಿನ ಬೆಲೆ (ಎಕ್ಸ್ ಶೋ ರೂಂ)
ಮಾರುತಿ ಸುಜುಕಿ ಸ್ವಿಫ್ಟ್ LXI : 6.49 ಲಕ್ಷ ರೂ 
ಮಾರುತಿ ಸುಜುಕಿ ಸ್ವಿಫ್ಟ್ VXI : 7.29 ಲಕ್ಷ ರೂ
ಮಾರುತಿ ಸುಜುಕಿ ಸ್ವಿಫ್ಟ್ VXI(O) : 7.56 ಲಕ್ಷ ರೂ 
ಮಾರುತಿ ಸುಜುಕಿ ಸ್ವಿಫ್ಟ್ ZXI : 8.29 ಲಕ್ಷ ರೂ
ಮಾರುತಿ ಸುಜುಕಿ ಸ್ವಿಫ್ಟ್ ZXI + : 8.99 ಲಕ್ಷ ರೂ
ಮಾರುತಿ ಸುಜುಕಿ ಸ್ವಿಫ್ಟ್ ZXI + ಡ್ಯುಯೆಲ್ ಟೋನ್  : 9.14 ಲಕ್ಷ ರೂ

ಬ್ರೆಜ್ಜಾ, ನೆಕ್ಸಾನ್, ವ್ಯಾಗನರ್ ಅಲ್ಲ, ಎಪ್ರಿಲ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರು ಇದು!

ಸ್ವಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನ ಬೆಲೆ(ಎಕ್ಸ್ ಶೋ ರೂಂ)
ಮಾರುತಿ ಸುಜುಕಿ ಸ್ವಿಫ್ಟ್ VXI : 7.79 ಲಕ್ಷ ರೂಪಾಯಿ
ಮಾರುತಿ ಸುಜುಕಿ ಸ್ವಿಫ್ಟ್ VXI(O) : 8.06 ಲಕ್ಷ ರೂಪಾಯಿ 
ಮಾರುತಿ ಸುಜುಕಿ ಸ್ವಿಫ್ಟ್ ZXI : 8.79 ಲಕ್ಷ ರೂಪಾಯಿ
ಮಾರುತಿ ಸುಜುಕಿ ಸ್ವಿಫ್ಟ್ ZXI + : 9.49 ಲಕ್ಷ ರೂಪಾಯಿ
ಮಾರುತಿ ಸುಜುಕಿ ಸ್ವಿಫ್ಟ್ ZXI + ಡ್ಯುಯೆಲ್ ಟೋನ್  : 9.64 ಲಕ್ಷ ರೂಪಾಯಿ

ಹೊಸ ಸ್ವಿಫ್ಟ್ ಕಾರಿನ ಮೈಲೇಜ್ ಹಾಗೂ ಎಂಜಿನ್
ಹೊಚ್ಚ ಹೊಸ ಮಾರುತಿ ಸ್ವಿಫ್ಟ್ ಕಾರು 1.2 ಲೀಟರ್ , 3 ಸಿಲಿಂಡರ್ ಎಂಜಿನ್ ಹೊಂದಿದೆ. 80 BHP ಪವರ್ 111.7 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 5 ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಎಎಂಟಿ ಟ್ರಾನ್ಸ್‌ಮಿಶನ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 25.75 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಮಾನ್ಯುಯೆಲ್ ಕಾರು ಪ್ರತಿ ಲೀಟರ್‌ಗೆ 24.8 ಕಿ.ಮೀ ಮೈಲೇಜ್ ನೀಡಲಿದೆ.

ಸುರಕ್ಷತಾ ಟೆಸ್ಟ್‌ನಲ್ಲಿ 4 ಸ್ಟಾರ್ ಪಡೆದ 2024ರ ಹೊಸ ಮಾರುತಿ ಸ್ವಿಫ್ಟ್, 11,000 ರೂಗೆ ಬುಕಿಂಗ್ ಆರಂಭ!

ನೂತನ ಸ್ವಿಫ್ಟ್ ಕಾರಿನ ಸುರಕ್ಷತಾ ಫೀಚರ್ಸ್
ಹೊಸ ಸ್ವಿಫ್ಟ್ ಕಾರು 6 ಏರ್‌ಬ್ಯಾಗ್ ಹೊಂದಿದೆ. ಹಿಲ್ ಹೋಲ್ಡ್ ಅಸಿಸ್ಟ್, ಕ್ರ್ಯೂಸ್ ಕಂಟ್ರೋಲ್, ರೇರ್ ಡಿಫಾಗರ್, ಸೀಟ್ ಬೆಲ್ಟ್ ರಿಮೈಂಡರ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್‌ಲ್ಯಾಂಪ್ಸ್, ಎಡ್ಜಸ್ಟೇಬಲ್ OVRM, ಸುಜುಕಿ ಕನೆಕ್ಟ್, ವಾಯ್ಸ್ ಅಸಿಸ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರು ಹೊಂದಿದೆ.

click me!