Zomato ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಪ್ರತಿ ಆಹಾರದ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧಾರ

By BK Ashwin  |  First Published Aug 7, 2023, 7:20 PM IST

ಸದ್ಯ, ಝೊಮ್ಯಾಟೋ ಪ್ರತಿ ಆರ್ಡರ್‌ಗೆ 2 ರೂಪಾಯಿಗಳ ಸಣ್ಣ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದೆ. ಲಾಭದಾಯಕತೆಗಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸುವುದು ಈ ಸಣ್ಣ ಶುಲ್ಕದ ಗುರಿಯಾಗಿದೆ ಎಂದು ತಿಳಿದುಬಂದಿದೆ.


ನವದೆಹಲಿ (ಆಗಸ್ಟ್‌ 7, 2023): ಜನಪ್ರಿಯ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ ಝೊಮ್ಯಾಟೋ ಇತ್ತೀಚೆಗಷ್ಟೇ 2 ಕೋಟಿ ರೂ. ಲಾಭ ಮಾಡಿದ ವರದಿಯಾಗಿತ್ತು. ಈ ಬೆನ್ನಲ್ಲೇ Zomato ತನ್ನ ಆಹಾರ ವಿತರಣಾ ಅಪ್ಲಿಕೇಶನ್‌ನಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದೆ. ಈ ಶುಲ್ಕವನ್ನು ಕೆಲವು ಮಾರುಕಟ್ಟೆಗಳಲ್ಲಿ ಪ್ರಾಯೋಗಿಕ ಹಂತವಾಗಿ ಪರೀಕ್ಷಿಸಲಾಗುತ್ತಿದೆ. ಇದು ಆರ್ಡರ್‌ನ ಮೌಲ್ಯವನ್ನು ಲೆಕ್ಕಿಸದೆಯೇ ಪ್ರತಿ ಆರ್ಡರ್‌ಗೆ ಅನ್ವಯಿಸುತ್ತದೆ ಮತ್ತು ಝಪಮ್ಯಾಟೋ ಗೋಲ್ಡ್‌ ಲಾಯಲ್ಟಿ ಪ್ರೋಗ್ರಾಂ ಸದಸ್ಯರು ಸೇರಿದಂತೆ ಎಲ್ಲಾ ಬಳಕೆದಾರರಿಗೆ ಅನ್ವಯಿಸುತ್ತದೆ ಎಂದೂ ತಿಳಿದುಬಂದಿದೆ. 

ಸದ್ಯ, ಝೊಮ್ಯಾಟೋ ಪ್ರತಿ ಆರ್ಡರ್‌ಗೆ 2 ರೂಪಾಯಿಗಳ ಸಣ್ಣ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದೆ. ಲಾಭದಾಯಕತೆಗಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸುವುದು ಈ ಸಣ್ಣ ಶುಲ್ಕದ ಗುರಿಯಾಗಿದೆ ಎಂದು ತಿಳಿದುಬಂದಿದೆ. ಈ ಶುಲ್ಕ ರಚನೆಯ ದೀರ್ಘಾವಧಿಯ ಅನುಷ್ಠಾನವು ಪ್ರಯೋಗದ ಫಲಿತಾಂಶಗಳು ಮತ್ತು ಬಳಕೆದಾರರ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಅದನ್ನು ಮತ್ತಷ್ಟು ಕಡಿಮೆ ಮಾಡುವ ಮೊದಲು ಅದರ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಅವರು ಬಯಸುತ್ತಾರೆ ಎಂದೂ ವರದಿಯಾಗಿದೆ.

Tap to resize

Latest Videos

ಇದನ್ನು ಓದಿ: ಸ್ವಂತ ಉದ್ಯಮ ಮಾಡೋರು ಇಲ್ನೋಡಿ: 9 ವಿಫಲ ಉದ್ಯಮ, ಖಿನ್ನತೆ ಬಳಿಕ ಈಗ ಇವರು 1,48,729 ಕೋಟಿ ಮೌಲ್ಯದ ಕಂಪನಿ ಒಡೆಯ

ಇನ್ನು, ಈ ಕ್ರಮ ಹೊದೇನಲ್ಲ. ಈಗಾಗಲೇ ಝೊಮ್ಯಾಟೋ ಪ್ರತಿಸ್ಪರ್ಧಿ ಸ್ವಿಗ್ಗಿ ಈ ಕ್ರಮವನ್ನು ಈ ವರ್ಷದಲ್ಲೇ ಜಾರಿಗೆ ತಂದಿತ್ತು. ಇದೇ ರೀತಿಯ 2 ರೂ. ಪ್ಲಾಟ್‌ಫಾರ್ಮ್‌ ಶುಲ್ಕವನ್ನೇ ಜಾರಿಗೆ ತಂದಿತ್ತು. ಆದರೆ, ಝೊಮ್ಯಾಟೋ, ಗಳಿಕೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಈ ಶುಲ್ಕ ಎಂದು ತಿಳಿದುಬಂದಿದೆ. 

ಇನ್ನೊಂದೆಡೆ, ಪ್ಲಾಟ್‌ಫಾರ್ಮ್ ಶುಲ್ಕಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಂಪನಿಯು ಇತ್ತೀಚಿನ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಝೊಮ್ಯಾಟೋದ ಮುಖ್ಯ ಹಣಕಾಸು ಅಧಿಕಾರಿ ಅಕ್ಷಾಂತ್ ಗೋಯಲ್ ವಿಶ್ಲೇಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆಹಾರ ವಿತರಣಾ ವೇದಿಕೆಯು ಈಗ ಪ್ರಯೋಗದ ಆಧಾರದ ಮೇಲೆ ಬಳಕೆದಾರರಿಗೆ ಕನಿಷ್ಠ ಶುಲ್ಕವನ್ನು ವಿಧಿಸಲು ಪ್ರಾರಂಭಿಸುತ್ತದೆ ಎಂದು ಮಾಧ್ಯಮವೊಂದು ಬಹಿರಂಗಪಡಿಸಿದ ವಿವರಗಳ ಪ್ರಕಾರ ಕಂಡುಬರುತ್ತದೆ.

ಇದನ್ನೂ ಓದಿ: BENGALURU TRAFFIC ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ

ಝೊಮ್ಯಾಟೋ ಇದೇ ಮೊದಲ ಬಾರಿಗೆ ಲಾಭದಾಯಕ ತ್ರೈಮಾಸಿಕವನ್ನು ಪೋಸ್ಟ್ ಮಾಡಿ ಗಮನಾರ್ಹವಾದ ಮೈಲಿಗಲ್ಲನ್ನು ಸಾಧಿಸಿದ್ದು, ಇತ್ತೀಚೆಗೆ ಸುದ್ದಿಯಾಗಿತ್ತು. ಆರ್ಥಿಕ ವರ್ಷ FY24 ರ ಮೊದಲ ತ್ರೈಮಾಸಿಕದಲ್ಲಿ 2 ಕೋಟಿ ರೂಪಾಯಿಗಳ ಲಾಭವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 186 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತ್ತು. ಇನ್ನು, ಕಂಪನಿಯ ಆದಾಯ ಸಹ ಬರೋಬ್ಬರಿ 64 ರಷ್ಟು ಏರಿಕೆಯಾಗಿದ್ದು, 2,597 ಕೋಟಿ ರೂ. ಗೆ ತಲುಪಿದ್ದು, ಗಮನಾರ್ಹ ಪ್ರಗತಿಯನ್ನು ತೋರಿಸುತ್ತದೆ.

ಮುಂದಿನ ತ್ರೈಮಾಸಿಕದಲ್ಲಿ ಈ ಮೈಲಿಗಲ್ಲನ್ನು ಆರಂಭದಲ್ಲಿ ನಿರೀಕ್ಷಿಸುತ್ತಿದ್ದೆವು. ಆದರೆ, ಅದಕ್ಕೆ ಮೊದಲೇ ಲಾಭ ಬಂದಿರುವುದರಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ ಎಂದು Zomatoನ ಮುಖ್ಯ ಹಣಕಾಸು ಅಧಿಕಾರಿ ಅಕ್ಷಾಂತ್ ಗೋಯಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಂಪನಿಯ ಬೆಳವಣಿಗೆ ಮತ್ತು ಉಪಕ್ರಮಗಳು ಅವರ ನಿರೀಕ್ಷೆಗಳನ್ನು ಮೀರಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!
.
"ವಾಸ್ತವವಾಗಿ ಹೇಳುವುದಾದರೆ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ (Q2FY24) ನಾವು ಈ ಮೈಲಿಗಲ್ಲನ್ನು ಮುಟ್ಟುವ ನಿರೀಕ್ಷೆಯಲ್ಲಿದ್ದೆವು. ಆದರೆ, ನಮ್ಮ ವ್ಯವಹಾರಗಳಾದ್ಯಂತ ತಂಡದ ಕೆಲವು ನಿರ್ಣಾಯಕ ಭಾಗಗಳು ನಮ್ಮ ನಿರೀಕ್ಷೆಗಳು/ಯೋಜನೆಗಳನ್ನು ಕಾರ್ಯಗತಗೊಳಿಸಿವೆ ಮತ್ತು ನಮ್ಮ ಕೆಲವು ಉಪಕ್ರಮಗಳು ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಫಲಿತಾಂಶಗಳನ್ನು ನೀಡಿವೆ ಎಂದು ಅಕ್ಷಾಂತ್ ಗೋಯಲ್ ಹೇಳಿದ್ದಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಸ್ವಿಗ್ಗಿ ಮತ್ತು ಝೊಮ್ಯಾಟೋ ಎರಡೂ ಕಂಪನಿಗಳು ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ವರದಿಯಾಗಿದೆ. ಕಂಪನಿಗಳು ಆದಾಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಮತ್ತು ದೀರ್ಘಾವಧಿಯಲ್ಲಿ ವ್ಯವಹಾರವನ್ನು ಲಾಭದಾಯಕವಾಗಿಸಲು ಇವರನ್ನು ವಜಾಗೊಳಿಸಬೇಕಾಗಿತ್ತು ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಭೂಮಿ ತಾಯಿಗಿಲ್ಲಿ ಬಂಗಾರಕ್ಕೂ ಅಧಿಕ ಬೆಲೆ: ಎಕರೆಗೆ 100 ಕೋಟಿ ರೂ. ಗೆ ಮಾರಾಟ!

click me!