ಎಫ್ ಡಿ ಬ್ರೇಕ್ ಮಾಡೋದಾ ಅಥವಾ ಸಾಲ ತೆಗೆಯೋದಾ? ಆರ್ಥಿಕ ಸಂಕಷ್ಟದಲ್ಲಿ ಯಾವ ಆಯ್ಕೆ ಬೆಸ್ಟ್?

By Suvarna News  |  First Published Aug 7, 2023, 6:15 PM IST

ಹಣದ ತುರ್ತು ಅಗತ್ಯ ಎದುರಾದಾಗ ಅನೇಕರು ಎಫ್ ಡಿ ಬ್ರೇಕ್ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ.ಇನ್ನೂ ಕೆಲವರು ಎಫ್ ಡಿ ಮೇಲೆ ಸಾಲ ಪಡೆಯುತ್ತಾರೆ? ಇವೆರಡರಲ್ಲಿ ಯಾವ ಆಯ್ಕೆ ಉತ್ತಮ? 


Business Desk: ಹಣಕಾಸಿನ ಮುಗ್ಗಟ್ಟು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಎದುರಾಗುತ್ತದೆ ಎಂದು ಹೇಳೋದು ಕಷ್ಟ. ಹೀಗಿರುವಾಗ ಹಣದ ಅಗತ್ಯ ಉಂಟಾದಾಗ ತಕ್ಷಣಕ್ಕೆ ನಮ್ಮ ಮುಂದಿರುವ ಆಯ್ಕೆಗಳನ್ನು ನೋಡುತ್ತೇವೆ. ಕೆಲವೊಮ್ಮೆ ಈ ಆಯ್ಕೆಗಳಲ್ಲೂ ಯಾವುದನ್ನು ಆರಿಸಿಕೊಳ್ಳುವುದು ಎಂಬ ಗೊಂದಲ ಮೂಡುತ್ತದೆ. ಹೀಗಿರುವಾಗ ಮ್ಮ ಬಳಿ ಸ್ಥಿರ ಠೇವಣಿ ಅಥವಾ ಎಫ್ ಡಿ ಇದ್ದರೆ ಅದನ್ನು ಬ್ರೇಕ್ ಮಾಡುವ ಅಂದರೆ ಅವಧಿಗೂ ಮುನ್ನ ವಿತ್ ಡ್ರಾ ಮಾಡುವ ಆಲೋಚನೆ ಮೂಡುತ್ತದೆ. ಆದರೆ, ಈ ರೀತಿ ಅವಧಿಗೂ ಮುನ್ನ ಎಫ್ ಡಿ ವಿತ್ ಡ್ರಾ ಮಾಡೋದ್ರಿಂದ ಏನೆಲ್ಲ ನಷ್ಟವಾಗುತ್ತದೆ ಎಂಬ ಮಾಹಿತಿ ಹೊಂದಿರೋದು ಕೂಡ ಅಗತ್ಯ. ಇಂಥ ಸಮಯದಲ್ಲಿ ವೈಯಕ್ತಿಕ ಸಾಲಗಳು ಕೂಡ ದುಬಾರಿಯಾಗಬಲ್ಲವು. ಹೀಗಿರುವಾಗ ಎಫ್ ಡಿ ಮೇಲೆ ಸಾಲ ಪಡೆಯುವ ಬಗ್ಗೆ ನೀವು ಯೋಚಿಸಬಹುದು. ಬ್ಯಾಂಕ್ ನಲ್ಲಿ ನೀವು ಎಫ್ ಡಿ ಹೊಂದಿದ್ದರೆ ಅದರ ಮೇಲೆ ಸಾಲ ಪಡೆಯಬಹುದು. ಹೀಗಾಗಿ ಎಫ್ ಡಿಯನ್ನು ಯಾವ ಸಂದರ್ಭದಲ್ಲಿ ಬ್ರೇಕ್ ಮಾಡೋದು ಉತ್ತಮ ಹಾಗೂ ಎಫ್ ಡಿ ಮೇಲೆ ಯಾವಾಗ ಸಾಲ ಪಡೆಯಬಹುದು ಎಂಬುದನ್ನು ತಿಳಿದಿರೋದು ಅಗತ್ಯ.

ಎಫ್ ಡಿ ಬ್ರೇಕ್ ಮಾಡೋದ್ರಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ?
ಅವಧಿಪೂರ್ಣ ಎಫ್ ಡಿ ವಿತ್ ಡ್ರಾ ಮಾಡೋದ್ರಿಂದ ಅಂದಾಜು ಶೇ.1ರಷ್ಟು ದಂಡ ಹಾಗೂ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದು ಎಫ್ ಡಿ ಮೇಲಿನ ಬಡ್ಡಿ ಗಳಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸುತ್ತದೆ ಕೂಡ. ಉದಾಹರಣೆಗೆ 2 ವರ್ಷದ ಎಫ್ ಡಿ ಮೇಲಿನ ಬಡ್ಡಿದರ ಶೇ.7ರಷ್ಟಿದ್ದರೆ, ಅದನ್ನು ಅವಧಿಗೂ ಮುನ್ನ ವಿತ್ ಡ್ರಾ ಮಾಡಿದ್ರೆ ಶೇ.5.5ರಷ್ಟು ಬಡ್ಡಿ ಮಾತ್ರ ಸಿಗುತ್ತದೆ. ಹೀಗಾಗಿ ಎಫ್ ಡಿ ಬ್ರೇಕ್ ಮಾಡಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಬದಲು ಅದಕ್ಕೆ ಪರ್ಯಾಯವಾಗಿ ಎಫ್ ಡಿ ಮೇಲೆ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸೋದು ಉತ್ತಮ.

Tap to resize

Latest Videos

Personal Finance: ಬೇಗ ಗೃಹ ಸಾಲದ ಹೊಣೆ ಇಳಿಸ್ಬೇಕಂದ್ರೆ ಹಿಂಗ್ ಮಾಡಿ!

ಎಫ್ ಡಿ ಬ್ರೇಕ್ ಮಾಡೋದಾ ಅಥವಾ ಬೇಡ್ವಾ, ನಿರ್ಧರಿಸೋದು ಹೇಗೆ?
ನಿಮ್ಮ ಹಣಕಾಸಿನ ಸ್ಥಿತಿಯ ಸಂರಕ್ಷಣೆ ದೃಷ್ಟಿಯಿಂದ ಎಫ್ ಡಿ ಒಟ್ಟು ಮೊತ್ತದ ಶೇ.20-30ರಷ್ಟು ಭಾಗ ಮಾತ್ರ ನಿಮಗೆ ಅಗತ್ಯವಿದ್ದರೆ ಅದನ್ನು ಬ್ರೇಕ್ ಮಾಡದಿರೋದೆ ಉತ್ತಮ. ಇನ್ನು ನಿಮ್ಮ ಎಫ್ ಡಿ ಮೆಚ್ಯುರ್ ಆಗಲು ಕೇವಲ 6 ತಿಂಗಳಷ್ಟೇ ಬಾಕಿ ಉಳಿದಿದ್ದರೆ ನೀವು ಎಫ್ ಡಿ ಬ್ರೇಕ್ ಮಾಡೋ ಯೋಚನೆಯನ್ನು ಕೈಬಿಡೋದು ಉತ್ತಮ.  ಇದರ ಬದಲು ನಿಮ್ಮ ಎಫ್ ಡಿ ಮೇಲೆ ಸಾಲ ಪಡೆಯೋದು ಉತ್ತಮ ಮಾರ್ಗವಾಗಿದೆ. ಒಂದು ವೇಳೆ ಹಣಕಾಸಿನ ತುರ್ತು ಅಗತ್ಯವಿದ್ದು, ಬೇರೆ ಯಾವುದೇ ಮಾರ್ಗಗಳು ಲಭ್ಯವಿರದ ಸಂದರ್ಭದಲ್ಲಿ ಮಾತ್ರ ಎಫ್ ಡಿಯನ್ನು ಬ್ರೇಕ್ ಮಾಡುವ ನಿರ್ಧಾರ ಕೈಗೊಳ್ಳಿ. ಸರಳವಾಗಿ ಹೇಳಬೇಕೆಂದರೆ ಎಫ್ ಡಿ ಬ್ರೇಕ್ ಮಾಡೋದು ನಿಮ್ಮ ಕೊನೆಯ ಆಯ್ಕೆಯಾಗಿರಲಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ 10 ತಪ್ಪುಗಳನ್ನು ಮಾಡ್ಬೇಡಿ!

ಎಫ್ ಡಿ ಮೇಲಿನ ಸಾಲ
ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಎಫ್ ಡಿ ಮೇಲೆ ಸಾಲ ಪಡೆಯೋದು ಹೆಚ್ಚು ಪರಿಣಾಮಕಾರಿ. ಎಫ್ ಡಿ ಮೇಲೆ ಶೇ.7ರಷ್ಟು ಬಡ್ಡಿ ಇದ್ದರೂ ಸಾಲದ ಮೇಲಿನ ಬಡ್ಡಿದರ ಅದಕ್ಕಿಂತ ಶೇ.1.5ರಿಂದ ಶೇ.2ರಷ್ಟು ಹೆಚ್ಚಿರಬಹುದು. ಇದು ಪ್ರಾರಂಭದಲ್ಲಿ ಸ್ವಲ್ಪ ಅಧಿಕ ಅನ್ನಿಸಿದರೂ ಈ ವಿಧಾನ ನಿಮ್ಮ ಉಳಿತಾಯವನ್ನು ಸಂರಕ್ಷಿಸುತ್ತದೆ. ಅಲ್ಲದೆ, ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಎಫ್ ಡಿ ಮೆಚ್ಯುರ್ ಆಗಲು ನೆರವು ನೀಡುತ್ತದೆ. ಮುಂದೆ ನೀವು ಸಾಲವನ್ನು ತೀರಿಸುವ ಮೂಲಕ ನಿಮ್ಮ ಎಫ್ ಡಿ ಹಣವನ್ನು ಕೂಡ ಉಳಿಸಿಕೊಳ್ಳಬಹುದು. 
 

click me!