
ನವದೆಹಲಿ (ಮಾ.29) ಜೊಮ್ಯಾಟೋ ಸೇರಿದಂತೆ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳು ಜನರ ಜೀವನದ ಭಾಗವಾಗಿದೆ. ಬಹುತೇಕರು ಈ ಆ್ಯಪ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಹಲವು ಕಂಪನಿಗಳು ಉತ್ಪನ್ನಗಳ ಬೆಲೆ, ಸರ್ವೀಸ್ ಚಾರ್ಜ್ ಏರಿಕೆ ಮಾಡಿ ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಜೊಮ್ಯಾಟೋ ತನ್ನ ಗ್ರಾಹಕರ ಸಂಖ್ಯೆ ಹೆಚ್ಚಿಸಿದ್ದು ಮಾತ್ರವಲ್ಲ ವಹಿವಾಟು ಹೆಚ್ಚಾಗಿದೆ. ಇದರ ಹಿಂದೆ ಯಶಸ್ವಿ ಉದ್ಯಮದ ಸೂತ್ರ ಒಂದು ಅಡಗಿದೆ. ಹಲವರು ಪ್ಲಾಟ‌್‌ಫಾರ್ಮ್ ಫೀ ಬಗ್ಗೆ ಕೇಳಿರುತ್ತೀರಿ. ಇದು ಜೊಮ್ಯಾಟೋದಲ್ಲಿ 2 ರೂಪಾಯಿಯಿಂದ ಇದೀಗ 14.90 ರೂಪಾಯಿಗೆ ಏರಿಕೆಯಾಗಿದೆ. ಇಷ್ಟೊಂದು ದುಬಾರಿಯಾಗಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಇದರಿಂದ ಜೊಮ್ಯಾಟೋ ವಾರ್ಷಿಕವಾಗಿ 1000 ಕೋಟಿ ರೂಪಾಯಿಗೂ ಹೆಚ್ಚು ಆದಾಯಗಳಿಸುತ್ತಿದೆ.
ಜೊಮ್ಯಾಟೋ ಫ್ಲಾಟ್‌ಫಾರ್ಮ‌್ ಫೀಯನ್ನು ಒಂದೇ ಬಾರಿಗೆ ಏರಿಕೆ ಮಾಡಿಲ್ಲ. ಆರಂಭದಲ್ಲಿ 2 ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು. ಬಳಿಕಕ 1 ರೂಪಾಯಿ, 2 ರೂಪಾಯಿ, 3 ರೂಪಾಯಿಂತೆ ಹೆಚ್ಚಳ ಮಾಡುತ್ತಾ ಹೋಗಿದ್ದಾರೆ. ಸಣ್ಣ ಏರಿಕೆಯನ್ನು ಗ್ರಾಹಕರು ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ಒಂದೆರೆಡು ರೂಪಾಯಿ ಗ್ರಾಹಕರಿಗೆ ಹೊರೆಯಾಗಲಿಲ್ಲ. ಆದರೆ ನಿಗದಿತ ಸಮಯದಲ್ಲಿ ಫ್ಲಾಟ್‌ಫಾರ್ಮ‌್ ಫೀ ಸರಿಸುಮಾರು 15 ರೂಪಾಯಿ ಆಗಿದೆ.
ಜೊಮ್ಯಾಟೋ ಫ್ಲಾಟ್‌ಫಾರ್ಮ‌್ ಫೀ ಒಂದರಿಂದಲೇ ಪ್ರತಿ ದಿನ ಸರಿಸುಮಾರು 3 ಕೋಟಿ ಪೂಪಾಯಿ ಆದಾಯಗಳಿಸುತ್ತಿದೆ. ವಾರ್ಷಿಕವಾಗಿ 1000 ಕೋಟಿ ರೂಪಾಯಿಗೂ ಅಧಿಕ. ಈ ಚಾಣಾಕ್ಷತನದಿಂದ ಜೊಮ್ಯಾಟೋ ಇದೀಗ ಆದಾಯ ಏಣಿಸುತ್ತಿದೆ. ಬೆಲೆ ಏರಿಕೆ ಎಲ್ಲೂ ಗಂಭೀರವಾಗಿ ಚರ್ಚೆಯಾಗಲಿಲ್ಲ. ಕಾರಣ ಇದರ ಏರಿಕೆ ವಿಧಾನವೇ ಭಿನ್ನವಾಗಿತ್ತು.
ಇಂದು ಸಣ್ಣ ಏರಿಕೆ ಜನರ ಗಮನಕ್ಕೆ ಬರದೇ ಇರಬಹುದು, ಅಥವಾ ದುಬಾರಿ ಅಲ್ಲ ಎಂದು ಗ್ರಾಹಕ ಸುಮ್ಮನಾಗಬಹುದು. ಇದೇ ಏರಿಕೆ ನಾಳೆ ಸಾಮಾನ್ಯವಾಗಬಹುದು. ಮುಂದೆ ದುಬಾರಿಯಾಗಿ ಅಪಾಯ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.